ಸ್ಟೈಲ್ ಕಿಂಗ್ ಬರ್ತ್ ಡೇಗೆ ಸ್ಪೆಷಲ್ ಗಿಫ್ಟ್ – ರಜನಿಕಾಂತ್ ನಟನೆಯ ‘ಬಾಬಾ’ ಮರು ಬಿಡುಗಡೆ
20 ವರ್ಷಗಳ ಹಿಂದೆ ತೆರೆಕಂಡಿದ್ದ ರಜನಿಕಾಂತ್ ಅಭಿನಯಮದ ಬಾಬಾ ಸಿನಿಮಾ ಈಗ ಮತ್ತೆ ಬಿಡುಗಡೆಯಾಗಲಿದೆ. ಡಿಸೆಂಬರ್ 12ರಂದು ಸ್ಟೈಲ್‌ಕಿಂಗ್ ರಜನಿಕಾಂತ್ ಅವರ ಹುಟ್ಟುಹಬ್ಬ. 72ನೇ ವರ್ಷಕ್ಕೆ ಕಾಲಿಟ್ಟ ರಜನಿಕಾಂತ್ ಅವ್ರಿಗೆ ಬರ್ತ್‌ಡೇ ದಿನವೇ ಬಾಬಾ ಸಿನಿಮಾ ರಿ ರಿಲೀಸ್ ಮಾಡುವ ಮೂಲಕ ಗಿಫ್ಟ್ ನೀಡಲು ತಯಾರಿ ನಡೆಯುತ್ತಿದೆ. ಚಿತ್ರ ಮರು ಬಿಡುಗಡೆಗೂ ಸಾಕಷ್ಟು ವರ್ಕೌಟ್ ಮಾಡಲಾಗಿದೆ . ಹೊಸದಾಗಿ ಡಬ್ಬಿಂಗ್ ಕೆಲಸ ನಡೆದಿದೆ. ಅಲ್ಲದೆ, ಹೊಸ ರೂಪದಲ್ಲಿ ಟ್ರೇಲರ್ ಕೂಡ ರಿಲೀಸ್ ಆಗಿದ್ದು, 20 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. 2002ರಲ್ಲಿ ತೆರೆಕಂಡಿದ್ದ ಬಾಬಾ ಸಿನಿಮಾ ಸೋತಿದ್ದರೂ, ಮತ್ತೆ ಹೊಸ ತಂತ್ರಜ್ಞಾನಗಳನ್ನ ಅಳವಡಿಸಿಕೊಂಡು ರಿ ರಿಲೀಸ್ ಮಾಡೋದಕ್ಕೆ ಕಾರಣವೂ ಇದೆ.
ಇದನ್ನೂ ಓದಿ : ‘ಏಕಪಾತ್ರ’ ಸಿನಿಮಾದಲ್ಲಿ ಚಿನ್ನಾರಿಮುತ್ತ – ‘ಸೋಲೋ’ ನಟನಾಗಿ ವಿಜಯ್ ರಾಘವೇಂದ್ರ
ಬಾಬಾ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದು ರಜನಿಕಾಂತ್. ಚಿತ್ರ ನಿರ್ಮಾಣದ ಜವಾಬ್ದಾರಿ ಕೂಡ ರಜನಿಕಾಂತ್ ಅವರದ್ದೇ ಆಗಿತ್ತು. ಆದರೆ, ಬಾಬಾ ಅಂದುಕೊಂಡಷ್ಟು ಸಕ್ಸಸ್ ಕಾಣಲೇ ಇಲ್ಲ. ವಿತರಕರಿಗೂ ಕೂಡಾ ನಷ್ಟ ಆಗಿತ್ತು. ಇದರಿಂದಾಗಿ ರಜನಿಕಾಂತ್ ತಮ್ಮ ಸ್ವಂತ ಹಣ ನೀಡಿ ನಷ್ಟ ಭರಿಸಿದ್ದರು ಅನ್ನೋ ಮಾತು ಕೂಡಾ ಕೇಳಿಬರುತ್ತಿತ್ತು. ‘ಫ್ಯಾಂಟಸಿ ಕಥಾಹಂದರದ ಬಗ್ಗೆ ಜನರಿಗೆ ಇತ್ತೀಚಿನ ದಿನಗಳಲ್ಲಿ ಆಸಕ್ತಿ ಹೆಚ್ಚಿದೆ. ಬಾಬಾ ಚಿತ್ರ ಅಂದಿನ ಕಾಲಕ್ಕಿಂತಲೂ ಮುಂದಿತ್ತು ಎಂದು ಬಾಬಾ ಸಿನಿಮಾ ನಿರ್ದೇಶನ ಮಾಡಿದ ಶೇಖರ್ ಕೃಷ್ಣ ಹೇಳಿದ್ದಾರೆ. ಶೇಖರ್ ಕೃಷ್ಣ ಈ ಮಾತನ್ನು ಕನ್ನಡದ ಸೂಪರ್ ಹಿಟ್ ಚಿತ್ರ ಕಾಂತಾರವನ್ನು ಗಮನದಲ್ಲಿಟ್ಟುಕೊಂಡೇ ಹೇಳಿರಬಹುದು ಎನ್ನಲಾಗ್ತಿದೆ. ಬಾಬಾ ಚಿತ್ರದ ಆರಂಭದಲ್ಲಿ ಹೀರೋಗೆ ದೇವರ ಮೇಲೆ ನಂಬಿಕೆ ಇರುವುದಿಲ್ಲ. ಆದರೆ ಯೋಗಿಯೊಬ್ಬರನ್ನು ಭೇಟಿ ಆದ ಬಳಿಕ ಅವನಿಗೆ ದೇವರ ಮೇಲೆ ನಂಬಿಕೆ ಬರುತ್ತದೆ. ಯೋಗಿ ನೀಡಿದ ವರದಿಂದ ಹೀರೋಗೆ ಸೂಪರ್ ಪವರ್ ಬರುತ್ತದೆ. ಅದರಿಂದ ಏನೆಲ್ಲ ಆಗುತ್ತದೆ ಎಂಬುದು ಈ ಸಿನಿಮಾದ ಕಥೆ. ಕಾಂತಾರ ಕೂಡಾ ಮಾನವ ಮತ್ತು ಧರ್ಮ ಸಂಘರ್ಷದ ಸಿನಿಮಾ. ಹೀಗಾಗಿ ಕಾಂತಾರ ಸಿನಿಮಾ ಗೆಲುವು ಕಂಡಿದ್ದರಿಂದಲೇ ಸ್ಪೂರ್ತಿ ಪಡೆದು ಬಾಬಾ ಚಿತ್ರ ಮರು ಬಿಡುಗಡೆ ಮಾಡಲಾಗುತ್ತದೆ ಎನ್ನಲಾಗ್ತಿದೆ. ಆದರೆ, ಚಿತ್ರತಂಡ ಮಾತ್ರ ರಜನಿಕಾಂತ್ ಅವರ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಉಡುಗೊರೆಯೇ ಈ ಚಿತ್ರದ ಮರು ಬಿಡುಗಡೆ ಎಂದು ಹೇಳುತ್ತಿದೆ.