RCB Vs CSK.. ಟಿವಿ ಒಡೆದ ಧೋನಿ – ಪ್ಲೇಆಫ್ ಗೇರದಿದ್ದಕ್ಕೆ ತಾಳ್ಮೆ ಕಳ್ಕೊಂಡ್ರಾ?
ಡ್ರೆಸ್ಸಿಂಗ್ ರೂಮ್ ನಲ್ಲಿ ಮಹಿ ರಂಪಾಟ 

RCB Vs CSK.. ಟಿವಿ ಒಡೆದ ಧೋನಿ – ಪ್ಲೇಆಫ್ ಗೇರದಿದ್ದಕ್ಕೆ ತಾಳ್ಮೆ ಕಳ್ಕೊಂಡ್ರಾ?ಡ್ರೆಸ್ಸಿಂಗ್ ರೂಮ್ ನಲ್ಲಿ ಮಹಿ ರಂಪಾಟ 

2024ರ ಐಪಿಎಲ್​ನಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಫೈನಲ್ ಮ್ಯಾಚ್ ನೆನಪಿದ್ಯೋ ಇಲ್ವೋ. ಬಟ್ ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಎಲಿಮಿನೇಟರ್ ಮ್ಯಾಚ್ ಮರೆಯೋಕೆ ಚಾನ್ಸೇ ಇಲ್ಲ. ಫಿನಾಲೆ ಪಂದ್ಯಕ್ಕಿಂತ ಹೆಚ್ಚಿನ ಥ್ರಿಲ್ ಸಿಕ್ಕಿದ್ದೇ ಇಲ್ಲಿ. 18 ರನ್ ಗಳ ಅಂತರ, 18 ಓವರ್ ಗಳ ವಿಕ್ಟರಿ ಲಾಜಿಕ್​ನಲ್ಲಿ ಕಣಕ್ಕಿಳಿದಿದ್ದ ಬೆಂಗಳೂರು ಬಾಯ್ಸ್ ರಣರೋಚಕ ರೀತಿಯಲ್ಲಿ ಗೆದ್ದು ಚೆನ್ನೈ ಪಡೆಯನ್ನ ಮನೆಗೆ ಕಳಿಸಿದ್ರು. ಬಟ್ ಪಂದ್ಯ ಮುಗಿದ ಮೇಲೆ ಮಹೇಂದ್ರ ಸಿಂಗ್ ಧೋನಿ ನಡೆ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಮೈದಾನಕ್ಕೂ ಬಂದಿರಲಿಲ್ಲ. ಯಾರಿಗೂ ಕೈ ಕುಲುಕಿರಲಿಲ್ಲ. ಆದ್ರೆ ಡ್ರೆಸ್ಸಿಂಗ್ ರೂಮ್​ಗೆ ಹೋದ ಮೇಲೆ ಧೋನಿ ಅಕ್ಷರಶಃ ತಾಳ್ಮೆ ಕಳ್ಕೊಂಡಿದ್ರು ಅನ್ನೋ ಸ್ಫೋಟಕ ವಿಚಾರ ಈಗ ರಿವೀಲ್ ಆಗಿದೆ. ಅಷ್ಟಕ್ಕೂ ಆರ್​ಸಿಬಿ ವಿರುದ್ಧ ಸೋತ ಮೇಲೆ ಮಾಹಿ ಮಾಡಿದ್ದೇನು? ಕೂಲ್ ಕ್ಯಾಪ್ಟನ್ ಅಂತಾನೇ ಕರೆಸಿಕೊಳ್ಳೋ ಧೋನಿ ಈ ರೀತಿ ವರ್ತಿಸಿದ್ರಾ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಗೋಲ್ಡ್‌ ಸುರೇಶ್‌ ಗೆ ಚೈನ್‌ ಕಳ್ಳಿ ಭಯ – ಚೈತ್ರಾ ಕುಂದಾಪುರ ಟಾರ್ಗೆಟ್‌!

ಟೀಂ ಇಂಡಿಯಾ ಮಾತ್ರವಲ್ಲದೇ ಇಡೀ ಕ್ರಿಕೆಟ್ ಜಗತ್ತಿನಲ್ಲೇ ಮಹೇಂದ್ರ ಸಿಂಗ್ ಧೋನಿ ತಮ್ಮ ತಾಳ್ಮೆಯ ಸ್ವಭಾವದಿಂದಲೇ ಹೆಸರುವಾಸಿ. ಹೀಗಾಗಿ ಭಾರತ ತಂಡದ ಮಾಜಿ ನಾಯಕನನ್ನ ‘ಕ್ಯಾಪ್ಟನ್ ಕೂಲ್’ ಎಂದೇ ಕರೆಯುತ್ತಾರೆ. ಧೋನಿ ಪೇಷನ್ಸ್ ಕಳ್ಕೊಳ್ಳೋದು, ಆನ್​ಫೀಲ್ಡ್​ನಲ್ಲಿ ರೇಗಾಡೋದು, ಟೀಂ ಸೋತಾಗ ಅಥವಾ ಗೆದ್ದಾಗ ಅತಿರೇಖದ ವರ್ತನೆ ಮಾಡಿದ್ದು ತೀರಾ ಕಡಿಮೆ. ಅವ್ರ ಕ್ರಿಕೆಟ್​ ಕರಿಯರ್​ನ ಒಂದೆರಡು ಸಿಚುಯೇಷನ್​ನಲ್ಲಿ ಮಾತ್ರ ಚೂರು ಸಿಟ್ಟಾಗಿದ್ದನ್ನ ನೋಡಿರ್ಬೋದು. ಬಟ್ ಮಹೇಂದ್ರ ಸಿಂಗ್ ಧೋನಿಯ ಉಗ್ರ ರೂಪವನ್ನು  ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ನೋಡಿದ್ದಾರೆ. ಅದೂ ಕೂಡ 2024ರ ಮೇ 18 ರಂದು ಬೆಂಗಳೂರಿನಲ್ಲಿ ನಡೆದಿದ್ದ ಬೆಂಗಳೂರು ವರ್ಸಸ್ ಚೆನ್ನೈ ನಡುವಿನ ಎಲಿಮಿನೇಟರ್ ಪಂದ್ಯದ ಬಳಿಕ. ಇದೀಗ ಅದೇ ಭಜ್ಜಿ ಧೋನಿ ಅಭಿಮಾನಿಗಳೇ ಶಾಕ್ ಆಗುವಂಥ ಸೀಕ್ರೆಟ್ ಒಂದನ್ನ ರಿವೀಲ್ ಮಾಡಿದ್ದಾರೆ.

ಪ್ಲೇ ಆಫ್ ಗೇರಲು ನಡೆದಿತ್ತು ಮಾಡು ಇಲ್ಲವೇ ಮಡಿ ಪಂದ್ಯ!

17ನೇ ಸೀಸನ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇಆಫ್​ಗೆ ಹೋಗುತ್ತೆ ಅಂತಾ ಯಾರೊಬ್ರೂ ಇಮ್ಯಾಜಿನ್ ಮಾಡಿರಲಿಲ್ಲ. ಮಾರ್ಚ್ 22ರಂದು ಐಪಿಎಲ್ ಸೀಸನ್ 17ರ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲೇ ಚೆನ್ನೈ ವಿರುದ್ಧ ಸೋಲಿನ ಅಭಿಯಾನ ಆರಂಭಿಸಿದ್ದ ಬೆಂಗಳೂರು ತಂಡ ಫಸ್ಟ್ ಆಫ್​ನಲ್ಲಿ ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನ ಸೋತಿತ್ತು. ಬಟ್ ಸೆಕೆಂಡ್ ಆಫ್ ನಲ್ಲಿ ಫಿನಿಕ್ಸ್​ನಲ್ಲಿ ಎದ್ದು ಪ್ಲೇಆಫ್​ಗೇರುವ ಚಾನ್ಸ್ ಗಿಟ್ಟಿಸಿಕೊಂಡಿತ್ತು. ಅತ್ತ ಚೆನ್ನೈ ತಂಡ ಕೂಡ ಸೋಲು ಗೆಲುವಿನ ಯಾನದೊಂದಿಗೇ ಪ್ಲೇಆಫ್ ಆಸೆಯನ್ನ  ಜೀವಂತವಾಗಿರಿಸಿಕೊಂಡಿತ್ತು. ಅದ್ರಂತೆ ಮೇ 18ರಂದು ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಹೈವೋಲ್ಟೇಜ್ ಪಂದ್ಯ ನಡೆದಿತ್ತು. ಇದು ಲೀಗ್ ಹಂತದಲ್ಲಿ ಎರಡೂ ತಂಡಗಳ ಕೊನೆಯ ಪಂದ್ಯವಾಗಿತ್ತು. ಅದೆಲ್ಲಕ್ಕಿಂತ ಇಂಪಾರ್ಟೆಂಟ್ ಅಂದ್ರೆ ಪ್ಲೇಆಫ್‌ಗೇರುವ ಅವಕಾಶ ಗೆದ್ದವ್ರಿಗೆ ಇದ್ದಿದ್ರಿಂದ ಉಭಯ ತಂಡಗಳ ಆಟಗಾರರೂ ಇದನ್ನ ಪ್ರತಿಷ್ಠೆಯಾಗಿ ತಗೊಂಡಿದ್ರು.  ಆದ್ರೆ ಅಂತಿಮವಾಗಿ ಆ ಪಂದ್ಯದಲ್ಲಿ ಚೆನ್ನೈ 27 ರನ್‌ಗಳ ಬೃಹತ್ ಅಂತರದಿಂದ ಸೋತಿತ್ತು. ಈ ಮೂಲಕ ಟೂರ್ನಿಯಿಂದಲೇ ಹೊರಬಿದ್ದಿತ್ತು. ಅಚ್ಚರಿಯ ರೀತಿಯಲ್ಲಿ ಬೆಂಗಳೂರು ಬಾಯ್ಸ್ ಪ್ಲೇಆಫ್​ಗೇರಿದ್ರು.

ಹಸ್ತಲಾಘವ ನೀಡದೇ ಡ್ರೆಸ್ಸಿಂಗ್ ರೂಮ್ ಗೆ ತೆರಳಿದ್ದ ಧೋನಿ!

ಬೆಂಗಳೂರು ಮತ್ತು ಚೆನ್ನೈ ನಡುವೆ ಆವತ್ತು ನಡೆದಿದ್ದು ಎಲಿಮಿನೇಟರ್ ಪಂದ್ಯವೇ ಆಗಿದ್ರೂ ಕೂಡ ಫೈನಲ್ ಮ್ಯಾಚ್​ಗಿಂತ ಹೆಚ್ಚಿನ ಬಿಸಿ ಇತ್ತು. ಸಿಎಸ್​ಕೆ ಲೀಗ್​ನಿಂದ ಔಟಾದ್ರೆ, ಆರ್​ಸಿಬಿ ಪ್ಲೇ ಆಫ್ ಸುತ್ತಿಗೆ ಎಂಟ್ರಿ ಕೊಟ್ಟು ಭರ್ಜರಿ ಸೆಲೆಬ್ರೇಷನ್​ನಲ್ಲಿ ಇತ್ತು. ಇನ್ನು ಪಂದ್ಯ ಮುಗಿದ್ಮೇಲೆ ಸಾಮಾನ್ಯವಾಗಿ ಉಭಯ ತಂಡಗಳ ಆಟಗಾರರು ಹಸ್ತಲಾಘವ ಮಾಡೋದು ವಾಡಿಕೆ. ಆದ್ರೆ ಆರ್​ಸಿಬಿ ವಿರುದ್ಧ ಸೋತ ಬೆನ್ನಲ್ಲೇ ಧೋನಿ ಹಸ್ತಲಾಘವ ಮಾಡದೆ ಡ್ರೆಸ್ಸಿಂಗ್ ರೂಮ್‌ಗೆ ಮರಳಿದರು. ನಾಯಕನಾಗಿ, ಆಟಗಾರನಾಗಿ ನೂರಾರು ಪಂದ್ಯಗಳಲ್ಲಿ ನಿಂತು ಆಡಿದ್ದ ಧೋನಿ ಆವತ್ತು ದಿಢೀರ್ ಡ್ರೆಸ್ಸಿಂಗ್ ರೂಮ್ ಗೆ ತೆರಳಿದ್ದು ಎಲ್ಲರ ಅಚ್ಚರಿಗೂ ಕಾರಣವಾಗಿತ್ತು.

ಸಿಟ್ಟಿನಿಂದ ಡ್ರೆಸ್ಸಿಂಗ್ ರೂಮ್ ನಲ್ಲಿ ಟಿವಿ ಒಡೆದಿದ್ದ ಧೋನಿ!

ಸೋಲಿನ ಬಳಿಕ ಕೋಪದಿಂದಲೇ ಡ್ರೆಸ್ಸಿಂಗ್ ರೂಮ್​ಗೆ ತೆರಳಿದ್ದ ಮಹೇಂದ್ರ ಸಿಂಗ್ ಧೋನಿ ತಾಳ್ಮೆ ಕಳ್ಕೊಂಡಿದ್ರು. ಅಲ್ಲಿದ್ದ ಟಿವಿಯನ್ನ ಒಡೆದು ಹಾಕಿದ್ರು. ಹೀಗಂತ ಸ್ವತಃ ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ಹೇಳ್ಕೊಂಡಿದ್ದಾರೆ. ಆರ್‌ಸಿಬಿ ಗೆಲುವಿನ ನಂತರ ಎಂಎಸ್ ಧೋನಿ ಕೋಪ ಪೀಕ್​ಗೆ ಏರಿತ್ತು. ಧೋನಿ ತಮ್ಮ ಕೋಪದಿಂದ ಬೆಂಗಳೂರು ಆಟಗಾರರಿಗೆ ಕೈಕುಲುಕದೆ ಮೈದಾನದಿಂದ ನಿರ್ಗಮಿಸಿದ್ರು. ಅದೇ ಸಿಟ್ಟಿನಲ್ಲೇ ಟಿವಿ ಕೂಡ ಒಡೆದು ಹಾಕಿದ್ದರು ಎಂದು ಹರ್ಭಜನ್ ಹೇಳಿದ್ದಾರೆಂದು ಪತ್ರಕರ್ತರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.

ಗೆಲುವಿನ ಮೂಲಕ ಐಪಿಎಲ್ ನಿವೃತ್ತಿಗೆ ಮುಂದಾಗಿದ್ದ ಧೋನಿ!

ಕ್ರಿಕೆಟ್ ಕರಿಯರ್​ನಲ್ಲಿ ಸಾಕಷ್ಟು ಸೋಲು ಗೆಲುವುಗಳನ್ನ ಕಂಡಿರೋ ಧೋನಿ ಆವತ್ತು ಮಾತ್ರ ಆ ರೀತಿ ವರ್ತಿಸೋಕೆ ಕಾರಣವೂ ಇದೆ. ಎಲಿಮಿನೇಷನ್ ಮ್ಯಾಚ್​ನಲ್ಲಿ ಫಸ್ಟ್ ಬ್ಯಾಟ್ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು 218 ರನ್ ಕಲೆ ಹಾಕಿತ್ತು. ಒಂದು ವೇಳೆ ಚೆನ್ನೈ ಸೋತರೂ ಕನಿಷ್ಠ 18 ರನ್​ ಅಥವಾ ಇದಕ್ಕಿಂತ ಹೆಚ್ಚಿನ ರನ್​ಗಳ ಅಂತರದಿಂದ ಬೆಂಗಳೂರಿಗೆ ಗೆಲ್ಲಲು ಅವಕಾಶ ನೀಡಬಾರದಿತ್ತು. ಆಗ ಸಿಎಸ್​ಕೆ ಪ್ಲೇ ಆಫ್‌ ಪ್ರವೇಶಿಸಬಹುದು ಎಂಬ ಲೆಕ್ಕಚಾರವಿತ್ತು. ಕೊನೆಯ ಓವರ್‌ನಲ್ಲಿ ಚೆನ್ನೈ ಗೆಲುವಿಗೆ 35 ರನ್‌ಗಳ ಅಗತ್ಯವಿತ್ತು, ಪ್ಲೇಆಫ್‌ಗೆ ಹೋಗಲು 16 ರನ್‌ಗಳ ಅಗತ್ಯವಿತ್ತು. ಆದರೆ ಕೊನೆಯ ಓವರ್‌ನಲ್ಲಿ ಚೆನ್ನೈ 7 ರನ್ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಪ್ಲೇಆಫ್ ಕನಸು ಸ್ವಲ್ಪದಲ್ಲೇ ಮಿಸ್ ಆಯ್ತು ಅನ್ನೋ ಬೇಸರ ಧೋನಿಗೆ ಕಾಡಿತ್ತು. ಅದೆಲ್ಲಕ್ಕಿಂತ ಹೆಚ್ಚಾಗಿ 2024ರ ಟೂರ್ನಿಗೆ ರುತುರಾಜ್ ಗಾಯಕ್ವಾಡ್​ಗೆ ಕ್ಯಾಪ್ಟನ್ಸಿ ಹಸ್ತಾಂತರ ಮಾಡಿದ್ದ ಧೋನಿ ಈ ವರ್ಷವೇ ನಿವೃತ್ತಿ ಪಡೆಯೋ ಮನಸ್ಥಿತಿಯಲ್ಲಿದ್ರು. ಆದ್ರೆ ಆರ್​ಸಿಬಿ ವಿರುದ್ಧದ ಆ ಸೋಲನ್ನ ನಿರೀಕ್ಷೆ ಮಾಡಿರದ ಧೋನಿ ಆ ರೀತಿಯಾಗಿ ವರ್ತಿಸಿದ್ರು.

ಈವರೆಗೂ ಐಪಿಎಲ್​ನಿಂದ ನಿವೃತ್ತಿ ಪಡೆಯದ ಧೋನಿ 2025ರ ಐಪಿಎಲ್​ನಲ್ಲೂ ಸಿಎಸ್​ಕೆ ಪರ ಆಡೋದು ಪಕ್ಕಾ ಆಗಿದೆ. ಅಲ್ದೇ ಮೆಗಾ ಆಕ್ಷನ್​ಗೂ ಮುನ್ನ ಒಂದು ತಂಡ ಒಟ್ಟು ಆರು ಆಟಗಾರರನ್ನು ರಿಟೈನ್ ಮಾಡಿಕೊಳ್ಳಬಹುದು ಎಂದು ಬಿಸಿಸಿಐ ಹೇಳಿದೆ. ಇದರಲ್ಲಿ ಇಬ್ಬರು ಅನ್​ಕ್ಯಾಪ್ಡ್ ಆಟಗಾರರಿಗೂ ಅವಕಾಶ ನೀಡಿದೆ. ಓರ್ವ ಆಟಗಾರ ಅಂತರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿಯಾದ 5 ವರ್ಷಗಳ ಬಳಿಕ ಆತನನ್ನು ಅನ್​ಕ್ಯಾಪ್ಡ್ ಪ್ಲೇಯರ್ಸ್ ಪಟ್ಟಿಗೆ ಸೇರಿಸಲಾಗುತ್ತದೆ. ಈ ನಿಯಮ ಸಿಎಸ್​ಕೆ ಮತ್ತು ಧೋನಿಗೆ ಪ್ಲಸ್ ಆಗಿದೆ. ಯಾಕೆಂದರೆ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿ 5 ವರ್ಷ ಆಗಿದೆ. ಅನ್ ಕ್ಯಾಪ್ಡ್ ಆಟಗಾರನಾಗಿ ಧೋನಿ 18ನೇ ಸೀಸನ್ ಐಪಿಎಲ್​ ಆಡೋಕೂ ರೆಡಿಯಾಗಿದ್ದಾರೆ.

Shwetha M

Leave a Reply

Your email address will not be published. Required fields are marked *