ಅಂಪೈರ್ ಸತಾಯಿಸಿ, ಸತಾಯಿಸಿ ಚೆಂಡಾಟ – RCB ಟಿಮ್ ಡೇವಿಡ್‌ಗೆ ಬಿತ್ತು ಭಾರಿ ದಂಡ

ಅಂಪೈರ್ ಸತಾಯಿಸಿ, ಸತಾಯಿಸಿ ಚೆಂಡಾಟ – RCB ಟಿಮ್ ಡೇವಿಡ್‌ಗೆ ಬಿತ್ತು ಭಾರಿ ದಂಡ

ಆರ್‌ಸಿಬಿ ಮತ್ತು ಮುಂಬೈ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಆಟಗಾರ ಟಿಮ್ ಡೇವಿಡ್ ಅಂಪೈರ್‌ಗಳನ್ನು ಸಿಕ್ಕಾಪಟ್ಟೆ ಸತಾಯಿಸಿದರು. ಡೇವಿಡ್ ಬಾಲ್ ಕೊಡೋ ಅಂದರೂ ಕೊಟ್ಟಿರಲಿಲ್ಲ. ಕೈಚಾಚಿ ಅಂಪೈರ್ ಬಾಲ್ ತೆಗೆದುಕೊಳ್ಳಲು ಪ್ರಯತ್ವಿಸಿದರು ಕೂಡಾ ಕೊಡಲಿಲ್ಲ. ಕೊನೆಗೂ ಅಂಪೈರ್ ಗಳಿಗೆ ಚಮಕ್ ಕೊಟ್ಟ ಟಿಮ್ ಡೇವಿಡ್‌ಗೆ ದಂಡ ಕಟ್ಟುವ ಶಿಕ್ಷೆಯಾಗಿದೆ.

ಇದನ್ನೂ ಓದಿ:ಪ್ರಫುಲ್‌- ಸಾಕಿಬ್‌ ಬೆಂಕಿ ಬೌಲಿಂಗ್ – ರಾಜಸ್ಥಾನ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ SRH

ಮುಂಬೈ ಇಂಡಿಯನ್ಸ್ ಹಾಗೂ ಆರ್​ಸಿಬಿ ಪಂದ್ಯದಲ್ಲಿ ಆರ್​ಸಿಬಿ ಇನ್ನಿಂಗ್ಸ್ ವೇಳೆ ಟಿಮ್ ಡೇವಿಡ್ ಕ್ರೀಸ್‌ನಲ್ಲಿದ್ದರು.  ಆರ್‌ಸಿಬಿಯ ಇನ್ನಿಂಗ್ಸ್​ನ 18 ನೇ ಓವರ್‌ ಅನ್ನು ಹಾರ್ದಿಕ್ ಪಾಂಡ್ಯ ಬೌಲ್ ಮಾಡಿದರು. ಈ ಓವರ್​ನ ಮೊದಲ ಎಸೆತವನ್ನು ಟಿಮ್ ಡೇವಿಡ್ ಬೌಂಡರಿ ಗಟ್ಟಿದರು. ಹಾರ್ದಿಕ್ ಮುಂದಿನ ಎಸೆತವನ್ನು ನೋಬಾಲ್ ಮಾಡಿದರು. ಹೀಗಾಗಿ ಫ್ರಿ ಹಿಟ್ ಲಾಭವನ್ನು ಸಂಪೂರ್ಣವಾಗಿ ಬಳಸಿಕೊಂಡ ಟಿಮ್ ಡೇವಿಡ್ ಭರ್ಜರಿ ಸಿಕ್ಸರ್ ಹೊಡೆದರು. ನಂತರದ ಎಸೆತಕ್ಕೂ ಮುನ್ನ ಅಂಪೈರ್​ಗಳು ಚೆಂಡನ್ನು ಪರಿಶೀಲಿಸಿದಾಗ ಚೆಂಡು ಒದ್ದೆಯಾಗಿತ್ತು ಮತ್ತು ಅದರ ಆಕಾರವೂ ಸ್ವಲ್ಪ ಬದಲಾಗಿತ್ತು. ಆದ್ದರಿಂದ ಅಂಪೈರ್‌ಗಳು ಚೆಂಡನ್ನು ಬದಲಾಯಿಸಲು ನಿರ್ಧರಿಸಿದರು. ಚೆಂಡುಗಳ ಪೆಟ್ಟಿಗೆ ಮೈದಾನಕ್ಕೆ ಬಂದಾಗ, ಟಿಮ್ ಡೇವಿಡ್ ಅದರಲ್ಲಿ ಒಂದು ಚೆಂಡನ್ನು ಎತ್ತಿಕೊಂಡು ಅದರೊಂದಿಗೆ ಆಟವಾಡಲು ಪ್ರಾರಂಭಿಸಿದರು. ಅಂಪೈರ್ ಪದೇ ಪದೇ ಚೆಂಡನ್ನು ಕೇಳುತ್ತಲೇ ಇದ್ದರೂ ಡೇವಿಡ್ ಮಾತ್ರ ಅದನ್ನು ಹಿಂತಿರುಗಿಸುವ ಬದಲು, ಆಟ ಮುಂದುವರೆಸಿದರು. ಡೇವಿಡ್‌ನ ಈ ಕ್ರಿಯೆಯಿಂದ ಅಂಪೈರ್ ಸ್ವಲ್ಪ ಸಿಟ್ಟಾದಂತೆ ತೋರುತ್ತಿತ್ತು. ಟಿಮ್ ಡೇವಿಡ್ ಪದೇ ಪದೇ ಚೆಂಡನ್ನು ಪರಿಶೀಲಿಸುತ್ತಿದ್ದರು. ನಂತರ 20 ಓವರ್‌ನಲ್ಲಿ ಜಿತೇಶ್ ಅವರ ವಿಕೆಟ್ ಬಿದ್ದ ನಂತರ ಮತ್ತೆ ಚೆಂಡನ್ನು ತೆಗೆದುಕೊಂಡ ಡೇವಿಡ್, ಅಂಪೈರ್ ಪದೇ ಪದೇ ಚೆಂಡನ್ನು ಹಿಂದಿರುಗಿಸುವಂತೆ ಕೇಳಿದರು ಚೆಂಡನ್ನು ಹಿಂದಿರುಗಿಸಲಿಲ್ಲ. ಅಂಪೈರ್ ಸೂಚನೆಗಳನ್ನು ಅಥವಾ ನಿರ್ದೇಶನಗಳನ್ನು ಅನುಸರಿಸಲು ಡೇವಿಡ್ ನಿರಾಕರಿಸಿದರು.  ಇದೀಗ ಅಂಪೈರ್ ಸತಾಯಿಸಿದ ಡೇವಿಡ್​ಗೆ ದಂಡ ವಿಧಿಸಲಾಗಿದೆ. ಡೇವಿಡ್ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ.

ಅಂಪೈರ್ ಆದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪಂದ್ಯ ಶುಲ್ಕದ ಶೇಕಡಾ 25ರಷ್ಟು ದಂಡ ಹಾಗೂ ಒಂದು ಡಿಮೆರಿಟ್ ಪಾಯಿಂಟ್ ದಂಡ ವಿಧಿಸಲಾಗಿದೆ. ಚೆಂಡು ಹಿಂದಿರುಗಿಸಲು ಪದೇ ಪದೇ ನಿರಾಕರಿಸಿದ ಅವರ ಈ ಕೃತ್ಯ ಐಪಿಎಲ್ ನೀತಿ ಸಂಹಿತೆಯ ಸೆಕ್ಷನ್ 2.4 ಅನ್ನು ಉಲ್ಲಂಘಿಸಿದೆ. ಈ ಸೆಕ್ಷನ್ ಪ್ರಕಾರ, ಪಂದ್ಯದ ಸಮಯದಲ್ಲಿ ಅಂಪೈರ್‌ಗಳ ಸೂಚನೆಗಳನ್ನು ಪಾಲಿಸದ ಆಟಗಾರನಿಗೆ ಪಂದ್ಯ ಶುಲ್ಕದ ಶೇಕಡಾ 25 ರಷ್ಟು ದಂಡವನ್ನು ವಿಧಿಸಲಾಗುತ್ತದೆ. ಹಾಗೆಯೇ ಒಂದು ಡಿಮೆರಿಟ್ ಪಾಯಿಂಟ್ ಕೂಡ ನೀಡಲಾಗುತ್ತದೆ. ಆ ಪ್ರಕಾರ ಡೇವಿಡ್​ಗೆ ಈ ಎರಡೂ ಶಿಕ್ಷೆಯನ್ನು ವಿಧಿಸಲಾಗಿದೆ.

Sulekha