IPL ರೂಲ್ಸ್.. RCB ಲಿಸ್ಟ್ ರೆಡಿ! – 5+1 ನಿಯಮದಲ್ಲಿ ಕೊಹ್ಲಿ ಸೇಫ್
ಫ್ರಾಂಚೈಸಿ ಉಳಿಸಿಕೊಳ್ಳೋದು ಇವ್ರನ್ನೇ!

IPL ರೂಲ್ಸ್.. RCB ಲಿಸ್ಟ್ ರೆಡಿ! – 5+1 ನಿಯಮದಲ್ಲಿ ಕೊಹ್ಲಿ ಸೇಫ್ಫ್ರಾಂಚೈಸಿ ಉಳಿಸಿಕೊಳ್ಳೋದು ಇವ್ರನ್ನೇ!

2025ರ ಐಪಿಎಲ್​ಗೆ ಅಸಲಿ ಆಟ ಈಗ ಶುರುವಾಗಿದೆ. ಕ್ರಿಕೆಟ್ ಜಗತ್ತೇ ಕಾತರದಿಂದ ಕಾಯ್ತಿದ್ದ ಐಪಿಎಲ್ ರಿಟೆನ್ಷನ್​ ರೂಲ್ಸ್ ಕೊನೆಗೂ ರಿಲೀಸ್ ಆಗಿದ್ದು ಫ್ರಾಂಚೈಸಿಗಳಲ್ಲಿ ಲೆಕ್ಕಾಚಾರ ಶುರುವಾಗಿದೆ.  ಹಿಂದಿನ ಮೆಗಾ ಹರಾಜಿಗಿಂತ ಡಿಫ್ರೆಂಟ್ ಆಗಿ ಬಿಸಿಸಿಐ ಈ ಸಲ ನಿಯಮಗಳನ್ನು ರೂಪಿಸಿದೆ. 2022ರಲ್ಲಿ ತೆಗೆದಿದ್ದ ಆರ್​ಟಿಎಂ ಕಾರ್ಡ್ ಬಳಕೆ ರೂಲ್ಸ್​ನ ಮರಳಿ ಜಾರಿಗೆ ತರಲಾಗಿದೆ. ಅಲ್ಲದೆ, ಐದು ವರ್ಷಗಳ ಕಾಲ ನಿವೃತ್ತಿ ಘೋಷಿಸಿದ ಆಟಗಾರನನ್ನು ಅನ್‌ಕ್ಯಾಪ್ಡ್ ಆಟಗಾರ ಎಂದು ಪರಿಗಣಿಸಲಾಗುತ್ತೆ. ಹೊಸ ರಿಟೈನ್ ನಿಯಮದ ಪ್ರಕಾರ ಗರಿಷ್ಠ ಆರು ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ಬಟ್ ಕಹಾನಿ ಮೇ ಟ್ವಿಸ್ಟ್ ಅನ್ನೋ ಹಾಗೇ ಇಲ್ಲೂ ಕೂಡ ಕೆಲವೊಂದು ಬದಲಾವಣೆಗಳನ್ನ ಮಾಡಿದೆ. ಬಟ್ ಇಲ್ಲಿ ಕನ್ನಡಿಗರನ್ನ ಕಾಡ್ತಿರೋ ಪ್ರಶ್ನೆ ಅಂದ್ರೆ ಹೊಸ ರೂಲ್ಸ್ ಪ್ರಕಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಯಾರ್ಯಾರು ಉಳೀತಾರೆ ಅನ್ನೋದು. ಈ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸೂಪರ್ ಸ್ಟಾರ್ ರಜನಿಕಾಂತ್ ಆಸ್ಪತ್ರೆಗೆ ದಾಖಲು- ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ

18ನೇ ಸೀಸನ್ ಐಪಿಎಲ್​ಗೆ ಫ್ರಾಂಚೈಸಿಗಳು 6 ಆಟಗಾರರನ್ನ ಉಳಿಸಿಕೊಳ್ಳೋಕೆ ಬಿಸಿಸಿಐ ಅವಕಾಶ ನೀಡಿದೆ.   ಈ ಆಟಗಾರರನ್ನ ರಿಟೈನ್ ಮೂಲಕವಾದರೂ ಉಳಿಸಿಕೊಳ್ಳಬಹುದು ಅಥವಾ ಹರಾಜಿಗೆ ಬಿಟ್ಟು ಆರ್​ಟಿಎಂ ಬಳಕೆ ಮಾಡಿಕೊಂಡು ಮತ್ತೆ ಖರೀದಿ ಮಾಡ್ಬಹುದು. 6 ಆಟಗಾರರನ್ನ ಯಾವ ರೀತಿ ಬಳಕೆ ಮಾಡಿಕೊಳ್ಳಬೇಕೆಂಬುದು ಆಯಾ ಫ್ರಾಂಚೈಸಿಗೆ ಬಿಟ್ಟ ವಿಚಾರ. ರಿಟೈನ್ ಮಾಡಿಕೊಳ್ಳುವ ಆಟಗಾರರ ಪಟ್ಟಿಯಲ್ಲಿ 6 ಆಟಗಾರರಲ್ಲಿ ಹೆಚ್ಚೆಂದರೆ 5 ಅಂತಾರಾಷ್ಟ್ರೀಯ ಕ್ರಿಕೆಟ್​ ಆಡಿರುವ ಆಟಗಾರರನ್ನ ಮಾತ್ರ ಉಳಿಸಿಕೊಳ್ಳಬಹುದು. ಅಲ್ದೇ ಈ ಬಾರಿ ಫ್ರಾಂಚೈಸಿಗಳ ಪರ್ಸ್ ಮೌಲ್ಯವನ್ನು 90 ಕೋಟಿಯಿಂದ ರೂಪಾಯಿಯಿಂದ 120 ಕೋಟಿಗೆ ಹೆಚ್ಚಿಸಲಾಗಿದೆ.  ಈ ಸಲ ರೂಲ್ಸ್ ಜೊತೆ ಹಣವೂ ಹೆಚ್ಚಾಗಿದ್ದು, ಆರ್​ಸಿಬಿಗೂ ಪ್ಲಸ್ ಆಗಲಿದೆ.

ಐಪಿಎಲ್ ರೂಲ್ಸ್ ರಿಲೀಸ್!

2008ರ ಚೊಚ್ಚಲ ಆವೃತ್ತಿ ಆರಂಭಿಸಿದ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ 2024ರವರೆಗೆ 17 ಸೀಸನ್​ಗಳು ಮುಗಿದಿವೆ. ಆದ್ರೆ ಬೆಂಗಳೂರು ತಂಡ ಒಮ್ಮೆಯೂ ಟ್ರೋಫಿ ಎತ್ತಿ ಹಿಡಿದಿಲ್ಲ. ಇದೀಗ 2025 ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಲೇಬೇಕು ಅನ್ನೋ ಇಂಟೆನ್ಷನ್​ನೊಂದಿಗೆ ಟೀಂ ಕಟ್ಟೋಕೆ ರೆಡಿಯಾಗಿದೆ. ಅದ್ರಂತೆ ಫ್ರಾಂಚೈಸಿ ಉಳಿಸಿಕೊಳ್ಳೋ ಮೊದಲ ಆಟಗಾರ ಕಿಂಗ್ ವಿರಾಟ್ ಕೊಹ್ಲಿ. ವಿರಾಟ್ ಕೊಹ್ಲಿ ಐಪಿಎಲ್ ಮೊದಲ ಸೀಸನ್‌ನಿಂದಲೂ ಆರ್‌ಸಿಬಿ ಪರ ಆಡುತ್ತಿದ್ದಾರೆ. ತಂಡದ ಐಕಾನ್ ಪ್ಲೇಯರ್ ಆಗಿದ್ದು, ಸ್ಟಾರ್​ಡಮ್ ವಿಚಾರಕ್ಕೆ ಬಂದ್ರೂ ಕೊಹ್ಲಿಯನ್ನ ಮೀರಿಸೋಕೆ ಯಾರಿಂದಲೂ ಸಾಧ್ಯನೇ ಇಲ್ಲ. ಇಡೀ ತಂಡದ ಗತ್ತು ಒಂದು ಕಡೆಯಾದ್ರೆ ವಿರಾಟ್ ಕೊಹ್ಲಿ ಗತ್ತೇ ಇನ್ನೊಂದು ಲೆವೆಲ್. ಹೀಗಾಗಿ ಕೊಹ್ಲಿ ಬಿಟ್ಟುಕೊಡೋ ಮಾತೇ ಇಲ್ಲ. ಹಾಗೇ ಎರಡನೇ ಆಟಗಾರ ಮೊಹಮ್ಮದ್ ಸಿರಾಜ್. ಟೀಂ ಇಂಡಿಯಾದ ಪ್ರಮುಖ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ಆರ್​ಸಿಬಿ ಉಳಿಸಿಕೊಳ್ಳುವುದು ಬಹುತೇಕ ಖಚಿತ. ಸಿರಾಜ್ ಎಲ್ಲಾ ಮೂರು ಮಾದರಿಗಳಲ್ಲಿ ಭಾರತ ತಂಡದ ಭಾಗವಾಗಿದ್ದಾರೆ. ಹೊಸ ಚೆಂಡು ಹಾಗೂ ಡೆತ್ ಓವರ್‌ಗಳಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಬಲ್ಲರು.  ಹಾಗೇ ಇಂಗ್ಲೆಂಡ್​ನ ಸ್ಫೋಟಕ ಬ್ಯಾಟ್ಸ್‌ಮನ್ ವಿಲ್ ಜಾಕ್ಸ್ ಕಳೆದ ಐಪಿಎಲ್​ನಲ್ಲಿ ಸಿಡಿಲಬ್ಬರದ ಶತಕ ಬಾರಿಸಿದ್ದರು. ಇದಲ್ಲದೇ ಬೌಲಿಂಗ್​ನಲ್ಲೂ ಎರಡು ವಿಕೆಟ್ ಪಡೆದಿದ್ದರು. ಜಾಕ್ಸ್ ತನ್ನ ಸ್ಫೋಟಕ ಬ್ಯಾಟಿಂಗ್​ನಿಂದ ಪಂದ್ಯದ ದಿಕ್ಕು ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಇದೇ ಕಾರಣಕ್ಕೆ ಆರ್‌ಸಿಬಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಬಹುದು. ಇನ್ನು ಆಸ್ಟ್ರೇಲಿಯಾದ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಉಳಿಯಬಹುದು. ಬೆಂಗಳೂರು ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್​ನಲ್ಲಿ ಶಕ್ತಿಯಾಗಿರುವ ರಜತ್ ಪಾಟಿದಾರ್ ಕೂಡ ಉಳಿಯಬಹುದು. ಸ್ಪಿನ್ ಹಾಗೂ ಪೇಸ್ ಬೌಲಿಂಗ್ ವಿರುದ್ಧ ಉತ್ತಮವಾಗಿ ಬ್ಯಾಟ್ ಮಾಡುವ ತಾಕತ್ತು ಅವ್ರಲ್ಲಿದೆ. ಇನ್ನು ಆರ್​ಟಿಎಂ ಕಾರ್ಡ್ ಬಳಕೆಗೂ ಅವಕಾಶ ಇರೋದ್ರಿಂದ ಗ್ಲೆನ್ ಮ್ಯಾಕ್ಸ್​ವೆಲ್​ರನ್ನ ಉಳಿಸಿಕೊಳ್ಳಬಹುದು. ಕಳೆದ ಬಾರಿ ಕಳಪೆ ಪ್ರದರ್ಶನ ನೀಡಿದ್ರೂ ಕೂಡ ಮ್ಯಾಕ್ಸಿ ಯಾವುದೇ ಟೈಮಲ್ಲೂ ಸಿಡಿಯಬಲ್ಲ ಪ್ಲೇಯರ್. ಸೋ ಫ್ರಾಂಚೈಸಿ ಮತ್ತೊಂದು ಬಾರಿಗೆ ಚಾನ್ಸ್ ನೀಡೋ ಸಾಧ್ಯತೆ ಇದೆ.

ಐಪಿಎಲ್​ ನಿಯಮಗಳನ್ನ ರೂಪಿಸೋದ್ರ ಜೊತೆಗೆ ಪ್ರತೀ ಫ್ರಾಂಚೈಸಿಗಳು ಉಳಿಸಿಕೊಳ್ಳುವ ಆಟಗಾರರಿಗೆ ನಿರ್ದಿಷ್ಟ ಮೊತ್ತವನ್ನು ನಿಗದಿ ಮಾಡಿದೆ. ಫ್ರಾಂಚೈಸಿಯೊಂದು ಐವರು ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಮುಂದಾದರೆ ಮೊದಲ ಆಟಗಾರನಿಗೆ 18 ಕೋಟಿ, ಎರಡನೇ ಆಟಗಾರನಿಗೆ 14 ಕೋಟಿ, ಮೂರನೇ ಆಟಗಾರನಿಗೆ 11 ಕೋಟಿ, ನಾಲ್ಕನೇ ಆಟಗಾರನಿಗೆ 18 ಕೋಟಿ, ಐದನೇ ಆಟಗಾರನಿಗೆ 14 ಕೋಟಿ ರೂ. ನೀಡಬೇಕಾಗುತ್ತದೆ. ಅಂದರೆ ಒಟ್ಟು ಹರಾಜು ಮೊತ್ತದಿಂದ 75 ಕೋಟಿ ರೂಪಾಯಿ ಅನ್ನು ರಿಟೈನ್ ಮಾಡಿದ ಆಟಗಾರರಿಗೆ ನೀಡಬೇಕಾಗುತ್ತದೆ. ಐವರಿಗೆ 75 ಕೋಟಿ ರೂ. ನೀಡಿದರೆ ಪ್ರತಿ ಫ್ರಾಂಚೈಸಿಗಳ ಬಳಿ ಉಳಿಯಳಿರುವುದು ಕೇವಲ 45 ಕೋಟಿ ರೂ. ಮಾತ್ರ. ಈ ಉಳಿದ 45 ಕೋಟಿ ರೂ. ನಲ್ಲಿ ಉಳಿದ 13 ರಿಂದ 20 ಆಟಗಾರರನ್ನು ಖರೀದಿಸಬೇಕಾಗುತ್ತದೆ. ಹೀಗಾಗಿ ಬೆಂಗಳೂರು ಫ್ರಾಂಚೈಸಿ ಕೂಡ ಅಳೆದು ತೂಗಿ ಲೆಕ್ಕಾಚಾರದೊಂದಿಗೆ ರೀಟೆನ್ಷನ್ ರೂಲ್ಸ್ ಅಪ್ಲೈಗೆ ಮುಂದಾಗಿದೆ.

Shwetha M

Leave a Reply

Your email address will not be published. Required fields are marked *