ಸಾಲಿಡ್ ಸಾಲ್ಟ್.. ಡೆವಿಲ್ ಡೇವಿಡ್ – RCB ಗೆಲುವಿನಲ್ಲಿ ಫಾರಿನರ್ಸ್ MAGIC
4 ಪಂದ್ಯ.. 4 ಪಂದ್ಯಶ್ರೇಷ್ಠ.. ಹೇಗಿದೆ ಅಬ್ಬರ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಸೀಸನ್ನಲ್ಲಿ ತಮ್ಮ 6ನೇ ಪಂದ್ಯಕ್ಕೆ ರೆಡಿಯಾಗಿದ್ದಾರೆ. ಮಧ್ಯಾಹ್ನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮ್ಯಾಚ್ ಇದೆ. ಈಗಾಗ್ಲೇ 5 ಪಂದ್ಯ ಆಡಿರೋ ಬೆಂಗಳೂರು ನಾಲ್ಕರಲ್ಲಿ ಗೆದ್ದು 8 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಸೆಕೆಂಡ್ ಪ್ಲೇಸ್ನಲ್ಲಿದೆ. ಸೋ ಈ ಮ್ಯಾಚ್ನೂ ಗೆದ್ರೆ 10 ಅಂಕಗಳೊಂದಿಗೆ ಮತ್ತೆ ನಂಬರ್ 1 ಸ್ಥಾನಕ್ಕೆ ಹೋಗ್ತಾರೆ. ಆರ್ಸಿಬಿಯ ಈ ಗೆಲುವಿನ ಜರ್ನಿಯಲ್ಲಿ ವಿದೇಶಿ ಪ್ಲೇಯರ್ಗಳೇ ಪಾರುಪತ್ಯ ಮೆರೆದಿದ್ದಾರೆ. ಕಳೆದ ನಾಲ್ಕೂ ಮ್ಯಾಚ್ಗಳಲ್ಲೂ ಇದು ಪ್ರೂವ್ ಆಗಿದೆ.
ಇದನ್ನೂ ಓದಿ : ಇಂದು RCB VS DC ಬಿಗ್ ಫೈಟ್ – ಚಿನ್ನಸ್ವಾಮಿ ಕಡೆ ಹೋಗುವ ವಾಹನ ಸವಾರರೇ ಎಚ್ಚರ!
ಆರ್ಸಿಬಿ ಈ ಸೀಸನ್ನಲ್ಲಿ ಗೆದ್ದಿರೋ ನಾಲ್ಕಕ್ಕೆ ನಾಲ್ಕೂ ಪಂದ್ಯಗಳಲ್ಲೂ ಒನ್ ಸೈಡೆಡ್ ವಿಕ್ಟರಿ. ಎಲ್ಲಿಯೂ ಕೂಡ ಕ್ಲೋಸ್ ಗೇಮ್ ಆಗಿದೆ. ಲಾಸ್ಟ್ ಓವರ್, ಲಾಸ್ಟ್ ಬಾಲ್ ಡ್ರಾ ಇದೆ. ಅವ್ರು ಗೆಲ್ತಾರಾ ಇವ್ರು ಗೆಲ್ತಾರಾ ಅನ್ನೋ ಟೆನ್ಷನ್ ಕೊಟ್ಟೇ ಇಲ್ಲ. ಚೇಸಿಂಗ್ ಇರ್ಲಿ ಡಿಫೆನ್ಸ್ ಇರ್ಲಿ ಡಾಮಿನೇಟ್ ಮಾಡಿಯೇ ಗೆದ್ದಿರೋದು. ಌಂಡ್ ಗೆದ್ದರೋ ನಾಲ್ಕಕ್ಕೆ ನಾಲ್ಕೂ ಪಂದ್ಯಗಳಲ್ಲೂ ವಿದೇಶಿ ಪ್ಲೇಯರ್ಗಳೇ ಮ್ಯಾಚ್ ವಿನ್ನರ್ಸ್ ಆಗಿದ್ದಾರೆ. ಅವ್ರೇ ಪಂದ್ಯ ಶ್ರೇಷ್ಠ ಪ್ರಶಸ್ತಿಗಳನ್ನ ಗೆದ್ದಿದ್ದಾರೆ.
ಹೈದ್ರಾಬಾದ್ ಬ್ಯಾಟರ್ ಗಳನ್ನ ಬೆಂಡೆತ್ತಿದ್ದ ಜೇಕಬ್ ಡಫಿ!
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದಿದ್ದ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ತಂಡ ಭರ್ಜರಿ ಪ್ರದರ್ಶನ ನೀಡಿ 6 ವಿಕೆಟ್ ಗಳಿಂದ ಗೆದ್ದು ಬೀಗಿತ್ತು. ಈ ಮ್ಯಾಚಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ್ದ ಹೈದ್ರಾಬಾದ್ 9 ವಿಕೆಟ್ ನಷ್ಟಕ್ಕೆ 201ರನ್ಸ್ ಸ್ಕೋರ್ ಮಾಡಿತ್ತು. ಈ ಟಾರ್ಗೆಟ್ ಬೆನ್ನತ್ತಿದ್ದ ಆರ್ಸಿಬಿ 15.4 ಓವರ್ಗಳಲ್ಲೇ ಟಾರ್ಗೆಟ್ ರೀಚ್ ಆಗಿತ್ತು. ಈ ಮ್ಯಾಚಲ್ಲಿ ಆರ್ಸಿಬಿ ಪರ ಬೌಲಿಂಗ್ನಲ್ಲಿ ದಿ ಬೆಸ್ಟ್ ಪರ್ಪಾಮೆನ್ಸ್ ಬಂದಿದ್ದು ಜೇಕಬ್ ಡಫಿಯಿಂದ. 4 ಓವರ್ಗಳಲ್ಲಿ 22 ರನ್ಗಳನ್ನು ನೀಡಿ 3 ವಿಕೆಟ್ ಪಡೆದುಕೊಂಡಿದ್ದರು. ಇದರೊಂದಿಗೆ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಪಡೆದರು.
ಚೆನ್ನೈ ಬೌಲರ್ ಗಳನ್ನ ಚೆಂಡಾಡಿದ್ದ ಟಿಮ್ ಡೇವಿಡ್!
ಈ ಮ್ಯಾಚ್ ಅಂತೂ ಆರ್ಸಿಬಿ ಫ್ಯಾನ್ಸ್ ಮರೆಯೋಕೆ ಚಾನ್ಸೇ ಇಲ್ಲ ಬಿಡಿ. ಏಪ್ರಿಲ್ 5 ರಂದು ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಸೋತ ಆರ್ಸಿಬಿ ಬ್ಯಾಟಿಂಗ್ನಲ್ಲಿ ಸುನಾಮಿಯನ್ನೇ ಎಬ್ಬಿಸಿತ್ತು. ಚಿನ್ನಸ್ವಾಮಿ ಮೈದಾನದಲ್ಲಿ 3 ವಿಕೆಟ್ ನಷ್ಟಕ್ಕೆ 250 ರನ್ಗಳನ್ನ ಕಲೆ ಹಾಕಿತ್ತು. ಈ ಟಾರ್ಗೆಟ್ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ 207ರನ್ಗಳಿ್ಗೆ ಆಲೌಟ್ ಆಗಿತ್ತು. ಈ ಮ್ಯಾಚಲ್ಲಿ ಆರ್ಸಿಬಿ ಹೈ ಸ್ಕೋರ್ ಕಲೆ ಹಾಕೋಕೆ ಮುಖ್ಯ ಕಾರಣನೇ ಟಿಮ್ ಡೇವಿಡ್. ಅಕ್ಷರಶಃ ಚೆನ್ನೈ ಪಾಲಿಗೆ ಡೆವಿಲ್ ಅವತಾರ ತಾಳಿದ್ದ ಡೇವಿಡ್ 25 ಎಸೆತಗಳಲ್ಲಿ ಅಜೇಯವಾಗಿ 70 ರನ್ ಬಾರಿಸಿ ತಂಡದ ಸ್ಕೋರ್ 250 ಆಗುವಂತೆ ಮಾಡಿದ್ರು. ಹಾಗೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ರು.
ಮುಂಬೈ ಬೌಲರ್ ಗಳಿಗೆ ನೀರು ಕುಡಿಸಿದ್ದ ಫಿಲ್ ಸಾಲ್ಟ್!
ಇನ್ನು ಮುಂಬೈನ ವಾಂಖೆಡೆಯಲ್ಲಿ ಮತ್ತೆ ಆರ್ಸಿಬಿ ಬ್ಯಾಟರ್ಗಳು ಅಬ್ಬರಿಸಿದ್ರು. ರಾಜಸ್ಥಾನ ವಿರುದ್ಧದ ಪಂದ್ಯ ಸೋತು ಮುಂಬೈಗೆ ಹಾರಿದ್ದ ರೆಡ್ ಆರ್ಮಿ ಮತ್ತೆ ಗ್ರೇಟ್ ಕಂ ಬ್ಯಾಕ್ ಮಾಡಿತ್ತು. ಎಂಐ ವಿರುದ್ಧದ ತಮ್ಮ ನಾಲ್ಕನೇ ಪಂದ್ಯದಲ್ಲಿ ಟಾಸ್ ಸೋತ ಆರ್ಸಿಬಿ ಬ್ಯಾಟಿಂಗ್ನಲ್ಲಿ ಅಬ್ಬರಿಸಿ 4 ವಿಕೆಟ್ ನಷ್ಟಕ್ಕೆ 240 ರನ್ಸ್ ಸ್ಕೋರ್ ಮಾಡಿತ್ತು. ಈ ಗುರಿ ಬೆನ್ನಟ್ಟಿದ ಮುಂಬೈ ಪಡೆ 222 ರನ್ ಗಳಿಸಲಷ್ಟೇ ಸಾಧ್ಯ ಆಯ್ತು. 18 ರನ್ಗಳಿಂದ ಸೋತ್ರು. ಈ ಮ್ಯಾಚಲ್ಲಿ ಆರ್ಸಿಬಿಯ ಹೈಸ್ಕೋರ್ಗೆ ಸಾಥ್ ನೀಡಿದ್ದೇ ಫಿಲ್ ಸಾಲ್ಟ್. 36 ಎಸೆತಗಳಲ್ಲಿ 78 ರನ್ ಬಾರಿಸುವ ಮೂಲಕ ಆರ್ಸಿಬಿ ಗೆಲುವಿನ ಹೀರೋ ಆಗಿದ್ರು. ಹಾಗೇ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಲಕ್ನೋ ಬ್ಯಾಟರ್ ಗಳನ್ನ ಕಾಡಿದ ಜೋಶ್ ಹೇಜಲ್ ವುಡ್!
ಇನ್ನು ಆರ್ಸಿಬಿ ಫ್ಯಾನ್ಸ್ ಪಾಲಿಗೆ ಹೇಜಲ್ ಗಾಡ್ ಆಗಿರೋ ಜೋಶ್ ಹೇಜಲ್ವುಡ್ ಲಕ್ನೋ ವಿರುದ್ಧದ ಮ್ಯಾಚಲ್ಲಿ ಬಿಗ್ ಇಂಪ್ಯಾಕ್ಟ್ ಮಾಡಿದ್ರು. ಏಪ್ರಿಲ್ 15ರಂದು ನಡೆದಿದ್ದ ಈ ಮ್ಯಾಚಲ್ಲಿ ಟಾಸ್ ಗೆದ್ದ ಬೆಂಗಳೂರು ಬೌಲಿಂಗ್ ಚೂಸ್ ಮಾಡಿಕೊಂಡಿತ್ತು. ಅದ್ರಂತೆ ಲಕ್ನೋ ಪ್ಲೇಯರ್ಸ್ ಫಸ್ಟ್ ಬ್ಯಾಟಿಂಗ್ ಮಾಡಿದ್ದು ಈ ವೇಳೆ 20 ಓವರ್ಗಳಲ್ಲಿ 146 ರನ್ಗಳಿಗೆ ಆಲೌಟ್ ಮಾಡುವಲ್ಲಿ ಬೆಂಗಳೂರು ಬೌಲರ್ಸ್ ಯಶಸ್ವಿಯಾಗಿದ್ರು. ಆ ನಂತ್ರ ಬೆಂಗಳೂರು ತಂಡ 15.1 ಓವರ್ನಲ್ಲೇ ಚೇಸಿಂಗ್ ಕಂಪ್ಲೀಟ್ ಮಾಡಿತ್ತು. ಪಂದ್ಯವನ್ನ ಗೆದ್ದು ಬೀಗಿತ್ತು. ಈ ಮ್ಯಾಚಲ್ಲಿ 4 ಓವರ್ಗಳಲ್ಲಿ ಕೇವಲ 20 ರನ್ ನೀಡಿ 1 ವಿಕೆಟ್ ಪಡೆದಿದ್ದ ಜೋಶ್ ಹೇಜಲ್ವುಡ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ರು.

ನೋಡಿರಿ

