18ನೇ ಸೀಸನ್ RCBಗೆ ಸ್ಪೆಷಲ್ – ಕೊಹ್ಲಿ, ಶೆಫರ್ಡ್, ಡೇವಿಡ್ ಸುನಾಮಿ
KKR To CSK ಜರ್ನಿ ಸೂಪರ್

17 ಸೀಸನ್ಗಳದ್ದೇ ಒಂದು ಲೆಕ್ಕ. 18ನೇ ಸೀಸನ್ ಮತ್ತೊಂದು ಲೆಕ್ಕ ಅನ್ನುವಂತೆ ಪರ್ಫಾಮ್ ಮಾಡಿದ್ದು ಆರ್ಸಿಬಿ ಬಾಯ್ಸ್. 2024ರ ನವೆಂಬರ್ನಲ್ಲಿ ನಡೆದ ಮೆಗಾ ಹರಾಜಿನಲ್ಲಿ ಆಟಗಾರರನ್ನ ಖರೀದಿ ಮಾಡಿದಾಗ ಸಾಕಷ್ಟು ಮಂದಿ ಗೇಲಿ ಮಾಡಿದ್ರು. ಇವ್ರನ್ನೆಲ್ಲಾ ಇಟ್ಕೊಂಡು ಈ ಸಲನೂ ಕಪ್ ಗೆದ್ದಂಗೆ ಅಂತಾ ಟ್ರೋಲ್ ಮಾಡಿದ್ರು. ಅದರಲ್ಲೂ ಬರೀ ಇಂಗ್ಲೆಂಡ್ ಪ್ಲೇಯರ್ಸ್ ಮೇಲೇ ಬಿಡ್ ಮಾಡಿದ್ದಾರೆ. ಕಪ್ ಗೆಲ್ಲಲ್ಲ ಅಂತಿದ್ರು. ಆದ್ರೆ ಎಲ್ಲರ ಲೆಕ್ಕಾಚಾರಗಳನ್ನ ಉಲ್ಟಾ ಮಾಡುವಂತೆ ರಜತ್ ಬಳಕ ಪರ್ಫಾಮ್ ಮಾಡ್ತಿದೆ. ಉದ್ಘಾಟನಾ ಪಂದ್ಯ ಕೆಕೆಆರ್ ನಿಂದ ಹಿಡಿದು ಆರ್ಸಿಬಿಯ ಕೊನೇದಾಗಿ ಆಡಿದ ಸಿಎಸ್ಕೆ ವಿರುದ್ಧದ ಪಂದ್ಯದವರೆಗೂ ಒಂದಿಲ್ಲೊಂದು ರೆಕಾರ್ಡ್ಸ್ ಕ್ರಿಯೇಟ್ ಮಾಡಿದೆ.
ಇದನ್ನೂ ಓದಿ : RCB ಫಾರ್ಮ್ ಕಳೆದುಕೊಳ್ಳುತ್ತಾ? – ನಾಲ್ವರು ಫಾರಿನ್ ಪ್ಲೇಯರ್ಸ್ ವಾಪಸ್?
ಆರ್ ಸಿಬಿ ಗ್ರೇಟ್ ಜರ್ನಿ!
ಉದ್ಘಾಟನಾ ಪಂದ್ಯದ ದಿನವೇ ಕೆಕೆಆರ್ ವಿರುದ್ಧ ಆರ್ ಸಿಬಿ ಗೆಲುವು
2023, 24ರಲ್ಲಿ ಒಟ್ಟು ನಾಲ್ಕು ಪಂದ್ಯಗಳಲ್ಲೂ ಕೊಲ್ಕತ್ತಾವೇ ಗೆದ್ದಿತ್ತು
ಸಿಎಸ್ ಕೆ ವಿರುದ್ಧದ ಮ್ಯಾಚ್ ನಲ್ಲಿ 17 ವರ್ಷಗಳ ಬಳಿಕದ ಗೆಲುವು
ಗುಜರಾತ್ ವಿರುದ್ಧ ಸೋತ್ರೂ ಮುಂಬೈ ವಿರುದ್ಧ ಗ್ರೇಟ್ ಕಮ್ ಬ್ಯಾಕ್
ವಾಂಖೆಡೆಯಲ್ಲಿ ಗೆಲುವು ಸಾಧಿಸೋ ಮೂಲಕ 2015ರ ಬಳಿಕ ವಿಕ್ಟರಿ
ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಗೆದ್ದು ಮತ್ತೆ ಗೆಲುವಿನ ಲಯಕ್ಕೆ ಕಮ್ ಬ್ಯಾಕ್
ಪಂಜಾಬ್ ವಿರುದ್ಧ ಫಸ್ಟ್ ಬ್ಯಾಟಿಂಗ್ ಮಾಡಿದ ಆರ್ ಸಿಬಿ 95 ರನ್ ಅಷ್ಟೇ
50 ರನ್ ಬಾರಿಸಿ ಎಲ್ಲಾ ಪ್ರಶಸ್ತಿಗಳನ್ನ ಬಾಚಿಕೊಂಡಿದ್ದ ಟಿಮ್ ಡೇವಿಡ್
ಪಂಜಾಬ್ ವಿರುದ್ಧ ಪಂಜಾಬ್ ನಲ್ಲೇ ಸೇಡು ತೀರಿಸಿಕೊಂಡಿದ್ದ ಆರ್ ಸಿಬಿ
ರಾಜಸ್ಥಾನವನ್ನ ಸೋಲಿಸೋ ಮೂಲಕ ಹೋಂ ಗ್ರೌಂಡ್ನಲ್ಲಿ ಮೊದಲ ಗೆಲುವು
ಡೆಲ್ಲಿಯಲ್ಲಿ ಡಿಸಿ ವಿರುದ್ಧವೂ ಗೆದ್ದು ಬೆಂಗಳೂರಿನ ಸೋಲಿಗೆ ಸೇಡು ತೀರಿಸಿಕೊಂಡಿತ್ತು
ಬೆಂಗಳೂರಿನಲ್ಲಿ ಸಿಎಸ್ ಕೆ ವಿರುದ್ಧ ಆಡಿದ್ದ ಆರ್ ಸಿಬಿ ಚೆನ್ನೈ ತಂಡಕ್ಕೆ ಸೋಲು
ರೊಮಾರಿಯೊ ಶೆಫರ್ಡ್ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ದಾಖಲೆ
ವಿರಾಟ್ ಕೊಹ್ಲಿ 505 ರನ್ ಸಿಡಿಸಿದ್ದು ಒಟ್ಟು 7 ಅರ್ಧಶತಕ ಬಾರಿಸಿದ್ದಾರೆ
ಹೊರಗಿನ ಪಿಚ್ ನಲ್ಲಿ 6 ಪಂದ್ಯಗಳನ್ನ ಗೆದ್ದಿದ್ದು ಲಕ್ನೋ ವಿರುದ್ಧದ ಪಂದ್ಯ ಬಾಕಿ
ಲಕ್ನೋವನ್ನೂ ಮಣಿಸಿದ್ರೆ ಹೊರಗಿನ ಎಲ್ಲಾ ಪಂದ್ಯಗಳನ್ನ ಗೆದ್ದ ತಂಡ ದಾಖಲೆ
ಈ ಸೀಸನ್ನಲ್ಲಿ ಆರ್ಸಿಬಿ ಮುಯ್ಯುಗೆ ಮುಯ್ಯಿ ಎನ್ನುವಂತೆ ಸೋಲಿಸಿದವರ ವಿರುದ್ಧ ಗೆದ್ದು ಸೇಡು ತೀರಿಸಿಕೊಂಡಿದೆ. ಬಟ್ ಗುಜರಾತ್ ವಿರುದ್ಧ ಒಂದೇ ಪಂದ್ಯ ಬಾಕಿ ಇದ್ದಿದ್ರಿಂದ ಅವ್ರ ಲೆಕ್ಕವನ್ನ ಮಾತ್ರ ಚುಕ್ತಾ ಮಾಡೋಕೆ ಸಾಧ್ಯವಾಗ್ಲಿಲ್ಲ. ಹೀಗೆ ಆರ್ ಸಿಬಿ ಸಕ್ಸಸ್ ಜರ್ನಿ ಪ್ಲೇಆಫ್ ಹಂತಕ್ಕೆ ಬಂದಿರುವಾಗ್ಲೇ ದೇವದತ್ ಪಡಿಕ್ಕಲ್ ಇಂಜುರಿಗೊಂಡು ಮಯಾಂಕ್ ಅಗರ್ವಾಲ್ರನ್ನ ಆರ್ಸಿಬಿ ರಿಪ್ಲೇಸ್ ಮಾಡಿದೆ. ಮಯಾಂಕ್ ಕೂಡ ಅದ್ಭುತ ಪ್ರದರ್ಶನ ನೀಡುವ ನಿರೀಕ್ಷೆ ಇದೆ.