RCBಗಿಲ್ಲ ಬೌಲಿಂಗ್ ಬ್ರಹ್ಮಾಸ್ತ್ರ – ಜೋಶ್ ಕಿತ್ತುಕೊಳ್ಳುತ್ತಾ ಇಂಜುರಿ?        
ಹೇಜಲ್ ವುಡ್ HazleGod ಆಗಿದ್ದೇಗೆ?

RCBಗಿಲ್ಲ ಬೌಲಿಂಗ್ ಬ್ರಹ್ಮಾಸ್ತ್ರ – ಜೋಶ್ ಕಿತ್ತುಕೊಳ್ಳುತ್ತಾ ಇಂಜುರಿ?        ಹೇಜಲ್ ವುಡ್ HazleGod ಆಗಿದ್ದೇಗೆ?

ಆರೆಂಜ್ ಆರ್ಮಿ ಎಸ್​ಆರ್​ಹೆಚ್​ ವಿರುದ್ಧ ಫಸ್ಟ್ ಮ್ಯಾಚ್ ಆಡೋಕೆ ರೆಡಿಯಾಗಿರೋ ಬೆಂಗಳೂರು ತಂಡಕ್ಕೆ ಒಂದು ಟೆನ್ಷನ್ ಸ್ಟಾರ್ಟ್ ಆಗಿದೆ. ಲಾಸ್ಟ್ ಸೀಸನ್​ನಲ್ಲಿ ಹೇಜಲ್​ಗಾಡ್ ಆಗಿದ್ದ ಹೇಜಲ್​ವುಡ್ ಈ ಸಲ ಆರಂಭದ ಪಂದ್ಯಗಳಲ್ಲಿ ಆಡಲ್ಲ.2026ರ ಐಪಿಎಲ್​ ಸೀಸನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿ​ಗೆ ತುಂಬಾನೇ ಸ್ಪೆಷಲ್. ಚಾಂಪಿಯನ್​ಗಳಾಗಿ ಗೋಲ್ಡನ್ ಲೋಗೋ ಗೌರವದೊಂದಿಗೆ ಆರ್​ಸಿಬಿ ಟೀಂ ಈ ಸಲ ಅಖಾಡಕ್ಕಿಳಿಯಲಿದೆ. ಅದೂ ಕೂಡ ನಮ್ಮ ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ಇನ್ಯಾಗುರಲ್ ಮ್ಯಾಚ್ ಇರೋದು ಇನ್ನೂ ವಿಶೇಷ. ಬ್ಯಾಟಿಂಗ್​ನಲ್ಲಿ ಸುನಾಮಿ ಎಬ್ಬಿಸೋ ಹೈದ್ರಾಬಾದ್ ವಿರುದ್ಧ ನಮ್ಮ ಬೌಲಿಂಗ್ ವೀಕ್ ಆಗುತ್ತಾ ಅನ್ನೋ ಟೆನ್ಷನ್ ಸ್ಟಾರ್ಟ್ ಆಗಿದೆ. ಅದಕ್ಕೆ ಕಾರಣ ಜೋಶ್ ಹೇಜಲ್​ವುಡ್ ಇಂಜುರಿ.

ಇದನ್ನೂ ಓದಿ : Jokers of Cricket ಪಾಕಿಸ್ತಾನ! – ಟ್ರಾಫಿಕ್ ಪೊಲೀಸರಿಂದಲೂ ಟ್ರೋಲ್

ಹೇಜಲ್ ವುಡ್ ಗೆ ಇನ್ನೂ ಸಿಕ್ಕಿಲ್ಲ ಆಸೀಸ್ ನಿಂದ ಎನ್ ಒಸಿ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಪೇಸ್ ಬೌಲರ್ ಜೋಶ್ ಹ್ಯಾಜಲ್‌ವುಡ್ ಈ ಬಾರಿಯ ಐಪಿಎಲ್​ನಲ್ಲಿ ಕೆಲ ಪಂದ್ಯಗಳನ್ನ ಮಿಸ್ ಮಾಡಿಕೊಳ್ಳೋ ಚಾನ್ಸಸ್ ಇದೆ. 2025 ರಲ್ಲಿ RCB ಯ ಚೊಚ್ಚಲ ಪ್ರಶಸ್ತಿ ಗೆಲುವಿನಲ್ಲಿ ಮೇನ್ ಬೌಲರ್ ಆಗಿದ್ದ ಆಸ್ಟ್ರೇಲಿಯಾದ ವೇಗಿ ಇನ್ನೂ ಕೂಡ ಗಾಯದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. 35 ವರ್ಷದ ಸೀಮರ್‌ಗೆ ಕ್ರಿಕೆಟ್ ಆಸ್ಟ್ರೇಲಿಯಾದಿಂದ ಇನ್ನೂ ವೈದ್ಯಕೀಯ ಅನುಮತಿ ಸಿಕ್ಕಿಲ್ಲ. ಹ್ಯಾಜಲ್‌ವುಡ್ ಪ್ರಸ್ತುತ ಮಂಡಿರಜ್ಜು ಮತ್ತು ಅಕಿಲ್ಸ್ ಸ್ನಾಯುರಜ್ಜು ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ಸಮಸ್ಯೆಗಳು ಅವರನ್ನು 2025-26 ರ ಸಂಪೂರ್ಣ ಆಶಸ್ ಅಭಿಯಾನ ಮತ್ತು 2026 ರ ಟಿ 20 ವಿಶ್ವಕಪ್‌ನಿಂದಲೂ ಹೊರಗುಳಿಯುವಂತೆ ಮಾಡಿತ್ತು. ಸಿಡ್ನಿಯಲ್ಲಿ ಫಿಸಿಯೋ ತಜ್ಞರ ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲಿದ್ದಾರೆ. ಪಂದ್ಯಾವಳಿಯ ನಂತರ ಅವರು ತಂಡವನ್ನು ಸೇರುವ ನಿರೀಕ್ಷೆಯಿದ್ದರೂ, ಮಾರ್ಚ್ 28 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಮೊದಲ ಪಂದ್ಯದಿಂದ ಅವರನ್ನು ಅಧಿಕೃತವಾಗಿ ಹೊರಗಿಡಲಾಗಿದೆ. ಕಳೆದ ವರ್ಷ ಚಾಂಪಿಯನ್‌ಶಿಪ್‌ನಲ್ಲಿ ಆರ್‌ಸಿಬಿ ಬೌಲಿಂಗ್ ದಾಳಿಯ ಬೆನ್ನೆಲುಬಾಗಿದ್ದರು.

ಚಾಂಪಿಯನ್ ತಂಡದ ಪ್ರಮುಖ ಬೌಲರ್ ಜೋಶ್!

2025ರಲ್ಲಿ ಆರ್​ಸಿಬಿ ಟ್ರೋಫಿ ಗೆಲುವಿನಲ್ಲಿ ಜೋಶ್ ಹೇಜಲ್​ವುಡ್ ಅದ್ಭುತ ಪ್ರದರ್ಶನ ನೀಡಿದ್ರು. ಕೇವಲ 12 ಪಂದ್ಯಗಳಲ್ಲಿ 22 ವಿಕೆಟ್‌ಗಳನ್ನು ಕಬಳಿಸಿದರು, ಪವರ್‌ಪ್ಲೇ ಮತ್ತು ಡೆತ್ ಓವರ್‌ಗಳಲ್ಲಿ ಬ್ರೇಕ್ ಥ್ರ್ಯೂಗಳನ್ನ ತಂದುಕೊಟ್ಟಿದ್ರು. ಹೀಗಾಗಿ ಹೇಜಲ್​ವುಡ್​ರನ್ನ ಅಭಿಮಾನಿಗಳು ಹೇಜಲ್​ಗಾಡ್ ಅಂತಾನೇ ಕರೆದಿದ್ದಾರೆ. ಹೀಗಾಗಿ ಈ ಸಲ ಆರಂಭದ ಪಂದ್ಯಗಳನ್ನ ಆಡಿಲ್ಲ ಅಂದ್ರೆ ತಂಡಕ್ಕೆ ಸೆಟ್​ಬ್ಯಾಕ್ ಆಗಬಹುದು. ರಜತ್ ಪಾಟಿದಾರ್ ನೇತೃತ್ವದ ಬೆಂಗಳೂರು ತಂಡವು ಬೇರೆ ಬೌಲರ್ ಮೇಲೆ ಡಿಪೆಂಡ್ ಆಗ್ಬೇಕಾಗುತ್ತೆ. ಭಾರತದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಪವರ್‌ಪ್ಲೇ ಜವಾಬ್ದಾರಿ ತಗೊಳ್ಬೋದು. ಌಂಡ್ ಫಾರಿನ್ ಪ್ಲೇಯರ್ ರಿಪ್ಲೇಸ್​ಮೆಂಟ್​ನಲ್ಲಿ ಶ್ರೀಲಂಕಾದ ಸ್ಲಿಂಗರ್ ನುವಾನ್ ತುಷಾರ, ನ್ಯೂಜಿಲೆಂಡ್ ತಂಡದ ಪೇಸರ್ ಜಾಕೋಬ್ ಡಫಿ ಇಬ್ರಲ್ಲಿ ಒಬ್ರು ಅವಕಾಶ ಪಡೀಬೋದು.ಹಾಗೇನಾದ್ರೂ ಹೇಜಲ್​ವುಡ್ ಕಂಪ್ಲೀಟ್ ಟೂರ್ನಿ ಮಿಸ್ ಮಾಡಿಕೊಳ್ತಾರೆ ಅಂದ್ರೆ ಬದಲಿ ಆಟಗಾರರಾಗಿ ಸೀನ್ ಅಬಾಟ್, ಜೆರಾಲ್ಡ್ ಕೋಟ್ಜೀ ಅಥವಾ ಜೈ ರಿಚರ್ಡ್‌ಸನ್ ಅವ್ರನ್ನ ಖರೀದಿ ಮಾಡಬಹುದು. ಌಂಡ್ ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಹರಾಜಿನಲ್ಲಿ ಮಾರಾಟವಾಗದೆ ಉಳಿದವರು ಇವ್ರು. ಇವ್ರನ್ನ ಗಾಯದ ಬದಲಿ ಆಟಗಾರರೆಂದು ಪರಿಗಣಿಸಬಹುದು.

Shantha Kumari