RCBಯಲ್ಲಿ ಬೆಥೆಲ್ ಟೈಂ ವೇಸ್ಟ್? – ಲೀಗ್ ಅರ್ಧದಲ್ಲೇ ಬಿಟ್ಟು ಹೋಗ್ತಾರಾ?
ಕೌಂಟಿ ಕ್ರಿಕೆಟ್ ಆಡಿ ಎಂದಿದ್ಯಾರು?

ವರ್ಲ್ಡ್ ಕ್ಲಾಸ್ ಪ್ಲೇಯರ್ಗಳೆಲ್ಲಾ ಒಗ್ಗೂಡಿ ಆಡುವ ಐಪಿಎಲ್ ಜಗತ್ತಿನಲ್ಲೇ ನಂಬರ್ 1 ಕ್ರಿಕೆಟ್ ಲೀಗ್. ಪ್ರತೀ ಟೀಮ್ನಲ್ಲಿ ಪ್ಲೇಯಿಂಗ್ 11 ಬಿಟ್ರೂ ಇನ್ನೊಂದು ಟೀಂ ಕಟ್ಟುವಷ್ಟು ಇಕ್ಸ್ಟ್ರಾ ಪ್ಲೇಯರ್ಸ್ ಇದ್ದೇ ಇರ್ತಾರೆ. ಌಂಡ್ ಕೆಲ ಕಂಡೀಷನ್ಸ್ ಕೂಡ ಇರೋದ್ರಿಂದ ಎಲ್ರನ್ನೂ ಆಡಿಸೋಕೂ ಆಗಲ್ಲ. ಸೋ ಕ್ವಾಲಿಟಿ ಪ್ಲೇಯರ್ಸ್ ಕೂಡ ಸಮ್ ಟೈಮ್ಸ್ ಬೆಂಚ್ ಕಾಯ್ಬೇಕಾಗುತ್ತೆ. ಆದ್ರೆ ಆರ್ಸಿಬಿಯಲ್ಲಿ ಜೇಕಬ್ ಬೆಥೆಲ್ ಬೆಂಚ್ ಕಾಯ್ತಿರೋದ್ರಿಂದ ಮಾಜಿ ಕ್ರಿಕೆಟಿಗರೊಬ್ರು ಬಿಟ್ಟಿ ಸಜೇಷನ್ ಕೊಟ್ಟಿದ್ದಾರೆ. ನೀವು ಐಪಿಎಲ್ ಬಿಟ್ಟು ವಾಪಸ್ ಹೋಗಿ ಅಂದಿದ್ದಾರೆ.
ಇದನ್ನೂ ಓದಿ : CSKಗೆ ಹೋಗ್ತಾರಾ RCB ಆಟಗಾರ? – ಬೆಂಗಳೂರು ಹತ್ತಿರ ಚೆನ್ನೈ ಸಾಲ
ಜೇಕಬ್ ಬೆಥೆಲ್. ಇಂಗ್ಲೆಂಡ್ ಮೂಲದ ಟ್ಯಾಲೆಂಟೆಡ್ ಪ್ಲೇಯರ್. 22 ವರ್ಷದ ಬೆಥೆಲ್ ಕಳೆದ ವಿಶ್ವಕಪ್ನಲ್ಲಿ ಫಾಸ್ಟೆಸ್ಟ್ ಶತಕ ಬಾರಿಸಿದ್ರು. ಌಂಡ್ ಇಂಗ್ಲೆಂಡ್ ಪರ ಎಲ್ಲ ಮಾದರಿಗಳಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್. 2024ರ ಮೆಗಾ ಆಕ್ಷನ್ನಲ್ಲಿ ಬೆಂಗಳೂರು ತಂಡ ಬೆಥೆಲ್ರನ್ನ ₹2.60 ಕೋಟಿಗೆ ಖರೀದಿಸಿತ್ತು. 2025ರ ಐಪಿಎಲ್ನಲ್ಲಿ ಎರಡು ಪಂದ್ಯಗಳನ್ನು ಆಡಿದ್ದರು. ಚೊಚ್ಚಲ ಮ್ಯಾಚಲ್ಲೇ ಅರ್ಧಶತಕ ಬಾರಿಸಿದ್ರು. ಬಟ್ ಆ ನಂತ್ರ ಮತ್ತೆ ಅವಕಾಶ ಸಿಕ್ಕಿಲ್ಲ. ಅದಕ್ಕೆ ಸಾಕಷ್ಟು ಕಾರಣಗಳು ಇವೆ. ಆದ್ರೆ ಇಂಗ್ಲೆಂಡ್ನ ಮಾಜಿ ಆಟಗಾರ ಅಲಸ್ಟೇರ್ ಕುಕ್ ಉಚಿತ ಸಲಹೆ ಕೊಟ್ಟಿದ್ದಾರೆ.
ಐಪಿಎಲ್ ಬಿಟ್ಟು ಕೌಂಟಿ ಕ್ರಿಕೆಟ್ ಆಡುವಂತೆ ಬೆಥೆಲ್ ಗೆ ಬಿಟ್ಟಿ ಸಲಹೆ!
ಜೇಬಲ್ ಬೆಥೆಲ್ ಯಂಗ್ ಕ್ರಿಕೆಟರ್. ಈ ಸೀಸನ್ನಲ್ಲಿ ಆರ್ಸಿಬಿ ಪರ ಇನ್ನೂ ಒಂದು ಮ್ಯಾಚಲ್ಲಿ ಬ್ಯಾಟ್ ಬೀಸಿಲ್ಲ. ಮತ್ತೊಂದೆಡೆ ಇಂಗ್ಲೆಂಡ್ನಲ್ಲಿ ಕೌಂಟಿ ಚಾಂಪಿಯನ್ಶಿಪ್ ಆರಂಭವಾಗಿದೆ. ಅವರ ತಂಡ ವಾರ್ವಿಕ್ಷೈರ್ 3 ಪಂದ್ಯಗಳನ್ನು ಆಡಿದೆ. ಸದ್ಯ ಡಿವಿಷನ್ ಒನ್ನಲ್ಲಿ ಎರಡನೇ ಸ್ಥಾನದಲ್ಲಿದೆ. ಆದ್ರೆ ಇಂಗ್ಲೆಂಡ್ನ ಟೆಸ್ಟ್ ತಂಡದ ಮಾಜಿ ನಾಯಕ ಅಲಸ್ಟೇರ್ ಕುಕ್ ಬೆಥೆಲ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಡ್ನಿಯಲ್ಲಿ ಬಲವಾದ ಬೌಲಿಂಗ್ ದಾಳಿ ಮತ್ತು ಕ್ರೂಶಿಯಲ್ ಟೈಮಲ್ಲಿ ಬೆಥೆಲ್ ಬ್ಯಾಟಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು. ಆದ್ರೀಗ ಐಪಿಎಲ್ನಲ್ಲಿ ಏನನ್ನೂ ಮಾಡದೆ ಬೆಂಚ್ನಲ್ಲಿ ಕುಳಿತಿದ್ದಾರೆ. ಬಹುಶಃ ಲೀಗ್ ಅರ್ಧದ ಬಳಿಕ ಇಂಗ್ಲೆಂಡ್ಗೆ ತೆರಳಿ ವಾರ್ವಿಕ್ಷೈರ್ಗಾಗಿ ಆಡ್ಬೋದಿತ್ತು ಎಂದಿದ್ದಾರೆ. ಌಕ್ಚುಲಿ ಇಲ್ಲಿ ಅಲಸ್ಟರ್ ಕುಕ್ ಹೇಳಿರೋದ್ರ ಹಿಂದೆ ಯಾವ ಅರ್ಥನೂ ಇಲ್ಲ. ಲಾಜಿಕ್ ಇಲ್ದೇ ಬಿಟ್ಟಿ ಸಜೇಷನ್ ಕೊಟ್ಟಿದ್ದಾರೆ ಅಷ್ಟೇ.
ಬೆಥೆಲ್ ಗೆ ನಷ್ಟ ಆಗಿಲ್ಲ!
ಜೇಕಬ್ ಬೆಥೆಲ್ ತಂಡದಲ್ಲಿ ಸುಖಾಸುಮ್ಮನೆ ಬೆಂಚ್ ಕಾಯಿಸ್ತಿಲ್ಲ
ಬೆಥೆಲ್ ಗಿಂತ ಬಿಗ್, ಸ್ಟಾರ್ ಪ್ಲೇಯರ್ ಎನಿಸಿಕೊಂಡವ್ರೂ ಬೆಂಚ್
ತಂಡವೊಂದರ ಪರ ನಾಲ್ವರು ವಿದೇಶಿ ಆಟಗಾರರನ್ನ ಮಾತ್ರ ಅವಕಾಶ
7 ಜನ ಸ್ವದೇಶಿ ಹಾಗೇ ನಾಲ್ವರು ವಿದೇಶಿಗರು ಅಂತಾನೇ ರೂಲ್ಸ್
ಫೀಲ್ಡಿಂಗ್ ಟೈಮಲ್ಲಿ ಅವಕಾಶ , ನೆಟ್ಸ್ ನಲ್ಲಿ ರೆಗ್ಯೂಲರ್ ಪ್ರಾಕ್ಟೀಸ್
ಓಪನಿಂಗ್ ಬ್ಯಾಟರ್, ಅನುಭವಿ ಬ್ಯಾಟರ್, ಜೊತೆಗೆ ಒಳ್ಳೆ ಪ್ರದರ್ಶನ
ಟಿಮ್ ಡೇವಿಡ್ ಚೆನ್ನೈ ವಿರುದ್ಧದ ಮ್ಯಾಚಲ್ಲೇ 25 ಬಾಲಲ್ಲೇ 70 ರನ್ಸ್
ರೊಮ್ಯಾರಿಯೋ ಶೆಫರ್ಡ್ ದೈತ್ಯ ಬೆಂಚ್ ಕಾಯಿಸೋಕೆ ಆಗಲ್ಲ
ಫಾಸ್ಟ್ ಬೌಲರ್ ಜೋಶ್ ಹೇಜಲ್ ವುಡ್ ಭುವನೇಶ್ವರ್ ಗೆ ಸಾಥ್
ಇನ್ನು ಎಂಡ್ ಆಫ್ ದಿ ಡೇ ಯಾರೇ ಸಿಕ್ಸ್ ಹೊಡೆದ್ರೂ ಅದನ್ನು 6 ರನ್ಸ್ ಅಂತಾನೇ ಕನ್ಸಿಡರ್ ಮಾಡೋದು. ಯಾರಿಗೂ ಜಾಸ್ತಿ ಅಂತೂ ಕೊಡಲ್ಲ. ಯಾರ್ ಆಡಿದ್ರೇನು ಗೆಲ್ತೀವಿ ಅನ್ನೋದಷ್ಟೇ ಮುಖ್ಯ ಆಗುತ್ತೆ. ಟೀಮ್ ಬ್ಯಾಲೆನ್ಸ್ ಇರುವಾಗ ಬೆಥೆಲ್ ಅಂಥವ್ರು ಬೆಂಚ್ ಕಾಯ್ತಾರೆ. ತಂಡಕ್ಕೆ ಇದು ಪಾಸಿಟಿವ್. ಅದೂ ಅಲ್ದೇ ಆರ್ಸಿಬಿಯ ಓಪನರ್ ಅಂತಾ ಬೆಥೆಲ್ನ ಖರೀದಿ ಮಾಡಿಲ್ಲ. ಬ್ಯಾಕಪ್ ಪ್ಲೇಯರ್ ಅಂತಾನೇ ಕನ್ಸಿಡರ್ ಮಾಡಿರೋದು. ಯಾರಾದ್ರೂ ಇಂಜುರಿಯಾದ್ರೆ ಆಬಿಯಸ್ಲಿ ಒಳಗಡೆ ಬರ್ತಾರೆ. ಇದನ್ನೆಲ್ಲಾ ತಿಳ್ಕೊಂಡು ಸ್ಟೇಟ್ಮೆಂಟ್ಸ್ ಕೊಡ್ಬೇಕು. ಇದೇ ಕಾರಣಕ್ಕೆ ಬೆಥೆಲ್ ಕೂಡ ಕುಕ್ಗೆ ಸರಿಯಾಗೇ ತಿರುಗೇಟು ಕೊಟ್ಟಿದ್ದಾರೆ. ಐಪಿಎಲ್ನಲ್ಲಿ ಇರೋದ್ರಿಂದ ಬೆಂಚ್ನಲ್ಲಿದ್ದಾಗಲೂ ಸಹ ತನ್ನನ್ನು ತಾನು ಉತ್ತಮವಾಗಿ ಮಾಡಿಕೊಳ್ಳಲು ಸಹಾಯ ಮಾಡುತ್ತೆ ಎಂದಿದ್ದಾರೆ. ವಿಶ್ವಕಪ್ ನಂತರ ಈಗ ನಾನು ಉತ್ತಮವಾಗಿದ್ದೇನೆ, ಇಲ್ಲಿನ ಹುಡುಗರೊಂದಿಗೆ ಮತ್ತು ಭಾರತದಲ್ಲಿನ ಶುದ್ಧ ಗುಣಮಟ್ಟದ ಕ್ರಿಕೆಟ್ ಮತ್ತು ಐಪಿಎಲ್ನೊಂದಿಗೆ ಸಮಯ ಕಳೆಯುವುದರಿಂದ ನನಗೆ ಒಳ್ಳೆಯದೇ ಆಗುತ್ತಿದೆ ಎಂದಿದ್ದಾರೆ. ಇನ್ನು ಕುಕ್ ಹೇಳಿಕೆಗೆ ಕೆವಿನ್ ಪೀಟರ್ಸನ್ ಕೂಡ ರಿಯಾಕ್ಟ್ ಮಾಡಿದ್ದಾರೆ. ಬೆಥೆಲ್ ಬಗ್ಗೆ ಕುಕ್ ಹೇಳಿರೋ ಮಾತುಗಳು ಅಪ್ರಸ್ತುತ. ಐಪಿಎಲ್ನಲ್ಲಿ ಹೇಗಿರಬೇಕು ಎಂಬುದರ ಬಗ್ಗೆ ಅಲಸ್ಟೇರ್ ಕುಕ್ಗೆ ಯಾವುದೇ ಕಲ್ಪನೆ ಇಲ್ಲ. ಬೆಥೆಲ್ ಅವ್ರೇ ನೀವು ಭಾರತದಲ್ಲಿಯೇ ಇರಿ. ನೀವು ಆಡುತ್ತಿಲ್ಲದಿದ್ದರೂ, ನೀವು ಕಲಿಯುತ್ತಿದ್ದೀರಿ ಮತ್ತು ನೀವು ಉತ್ತಮ ಆಟಗಾರರಾಗುತ್ತೀರಿ ಎಂದು ನನಗೆ ತಿಳಿದಿದೆ ಎಂದು ಪೀಟರ್ಸನ್ ಬೆಥೆಲ್ಗೆ ಬೆಂಬಲ ಕೊಟ್ಟಿದ್ದಾರೆ.

ನೋಡಿರಿ

