2026ರ IPLಗಿಲ್ಲ ಚಿನ್ನಸ್ವಾಮಿ – RCB ಪಂದ್ಯಗಳಿಗೆ ಸರ್ಕಾರ ಬ್ಯಾನ್
ಕಪ್ ಗೆದ್ದಿದ್ದೇ ಕಪ್ಪು ಚುಕ್ಕೆ ಆಯ್ತಾ?

ಪ್ರತೀ ಐಪಿಎಲ್ ಸೀಸನ್ ಸ್ಟಾರ್ಟ್ ಆದಾಗ್ಲೂ ಕೋಟ್ಯಂತರ ಅಭಿಮಾನಿಗಳು ಈ ಸಲ ಕಪ್ ನಮ್ದೇ ಈ ಸಲ ಕಪ್ ನಮ್ದೇ ಅಂತಿದ್ರು. 2025ರ ಸೀಸನ್ನಲ್ಲಿ ಅದು ನಿಜನೂ ಆಯ್ತು. ಆದ್ರೆ 18 ವರ್ಷಗಳ ಕನಸಿನ ಕೂಸಾಗಿದ್ದ ಟ್ರೋಫಿ ಚಿನ್ನಸ್ವಾಮಿ ಮೈದಾನ ತಲುಪೋ ಮುನ್ನವೇ 11 ಜನ ಪ್ರಾಣ ಕಳ್ಕೊಂಡ್ರು. 50ಕ್ಕೂ ಹೆಚ್ಚು ಮಂದಿ ಆಸ್ಪತ್ರೆಪಾಲಾದ್ರು. ಈ ದುರಂತ ಐಪಿಎಲ್ ಅಷ್ಟೇ ಅಲ್ಲ ಕ್ರಿಕೆಟ್ ಪಾಲಿಗೇ ಕಪ್ಪು ಚುಕ್ಕೆಯಾಗಿದೆ. ಈ ಕರಾಳ ನೆನಪಿನಲ್ಲೇ ಇರೋ ಬೆಂಗಳೂರು ತಂಡದ ಫ್ಯಾನ್ಸ್ಗೆ ಮತ್ತೊಂದು ಶಾಕಿಂಗ್ ಸುದ್ದಿ ಬಂದಿದೆ. ಕರ್ನಾಟಕ ಕ್ರಿಕೆಟಿಗರ ಪಾಲಿಗೆ ಪವಿತ್ರ ಮೈದಾನವಾಗಿರೋ ಚಿನ್ನಸ್ವಾಮಿಯಲ್ಲಿ ಇನ್ಮುಂದೆ ಆರ್ಸಿಬಿ ಪಂದ್ಯಗಳು ನಡೆಯೋದೇ ಡೌಟಿದೆ.
ಇದನ್ನೂ ಓದಿ : ಇಂಗ್ಲೆಂಡ್ ಪರ ಬ್ಯಾಟರ್ ಗಳ ಭರ್ಜರಿ ಪ್ರದರ್ಶನ -10 ವರ್ಷಗಳ ಬಳಿಕ ಭಾರತ ಕೆಟ್ಟ ದಾಖಲೆ
ಚಿನ್ನಸ್ವಾಮಿ ಒನ್ ಆಫ್ ದಿ ಐಕಾನಿಕ್ ಸ್ಟೇಡಿಯಂ ಇನ್ ಕ್ರಿಕೆಟ್. ಆದ್ರೆ 2026ರ ಐಪಿಎಲ್ಗೆ ಈ ಮೈದಾನದಲ್ಲಿ ಪಂದ್ಯಗಳನ್ನು ಆಯೋಜಿಸದಂತೆ ನಿಷೇಧಿಸೋ ಸಾಧ್ಯತೆ ಇದೆ. ಈ ಕ್ರೀಡಾಂಗಣ ದೊಡ್ಡ ದೊಡ್ಡ ಕಾರ್ಯಕ್ರಮಗಳು ಅಥವಾ ಹೈ-ಆಕ್ಟೇನ್ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲು ಯೋಗ್ಯವಲ್ಲ ಎಂದು ಘೋಷಿಸಲಾಗಿದೆ. ಕರ್ನಾಟಕ ಸರ್ಕಾರವು ಕ್ರೀಡಾಂಗಣವನ್ನು ಉನ್ನತ ಮಟ್ಟದ ಕ್ರಿಕೆಟ್ ಪಂದ್ಯಗಳು ಸೇರಿದಂತೆ ಪ್ರಮುಖ ಕಾರ್ಯಕ್ರಮಗಳನ್ನು ಆಯೋಜಿಸಲು ಅನರ್ಹವೆಂದು ಘೋಷಿಸಿದೆ. ಹೀಗಾಗಿ ನೆಕ್ಸ್ಟ್ ಸೀಸನ್ಗೆ ಆರ್ಸಿಬಿ ಪಂದ್ಯಗಳನ್ನ ಅವೇ ಪಿಚ್ನಲ್ಲಿ ಆಯೋಜನೆ ಮಾಡಬಹುದು.
ಆರ್ಸಿಬಿಯ ವಿಜಯೋತ್ಸವದ ಪರೇಡ್ನಲ್ಲಿ ಕಾಲ್ತುಳಿತ ದುರಂತ ಸಂಭವಿಸೋಕೆ ಕಾರಣ ಚಿನ್ನಸ್ವಾಮಿ ಮೈದಾನದ ಸಾಮರ್ಥ್ಯ ಚಿಕ್ಕದಿರೋದು. ಆರ್ಸಿಬಿ ಪರೇಡ್ಗೆ 3 ಲಕ್ಷಕ್ಕೂ ಹೆಚ್ಚು ಮಂದಿ ಸೇರಿದ್ರು. ಆದ್ರೆ ಕ್ರೀಡಾಂಗಣದ ಸಾಮರ್ಥ್ಯ ಇರೋದೇ 35,000.. ಸ್ಟೇಡಿಯಂ ಸಾಮರ್ಥ್ಯಕ್ಕೂ 10 ಪಟ್ಟು ಹೆಚ್ಚು ಜನ ಸೇರಿದ್ರು. ಹೀಗಾಗೇ ದುರಂತ ಸಂಭವಿಸೋಕೆ ಒಂದು ಕಾರಣ ಆಯ್ತು. ಅಲ್ದೇ ಬೆಂಗಳೂರಿನ ಹೃದಯ ಭಾಗದಂತಿರೋ ಎಮ್ ಜಿ ರಸ್ತೆ ಪಕ್ಕದಲ್ಲೇ ಮೈದಾನ ಇರೋದ್ರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದ್ರೆ ನಿಯಂತ್ರಿಸೋದು ಕಷ್ಟವಾಗ್ತಿದೆ. ಟ್ರಾಫಿಕ್ ಜಾಮ್ ಸೇರಿದಂತೆ ಸಾಕಷ್ಟು ಸಮಸ್ಯೆಗಳಾಗ್ತಿವೆ. ಹೀಗಾಗಿ ಮೈದಾನವನ್ನ ಬೇರೆ ಕಡೆ ಶಿಫ್ಟ್ ಮಾಡುವಂತೆಯೂ ಒತ್ತಾಯಗಳು ಕೇಳಿ ಬಂದಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ಕೂಡ ಈ ಬಗ್ಗೆ ಪ್ರಸ್ತಾಪ ಮಾಡಿದ್ರು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಡಿಯಲ್ಲಿ ಬರುವ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಆಡಳಿತದಲ್ಲಿ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಇದೆ. ಈಗಾಗ್ಲೇ ಪ್ರಕರಣ ಸಂಬಂಧ ಆರ್ಸಿಬಿ ಮತ್ತು ಡಿಎನ್ಎ ವಿರುದ್ಧ ಕ್ರಿಮಿನಲ್ ಕೇಸ್ ಕೂಡ ದಾಖಲಾಗಿದೆ.
ಚಿನ್ನಸ್ವಾಮಿ ಮೈದಾನ ಹಲವು ಅವಿಸ್ಮರಣೀಯ ಇನ್ನಿಂಗ್ಸ್ಗಳಿಗೆ ಸಾಕ್ಷಿಯಾಗಿದೆ. ಚಿನ್ನಸ್ವಾಮಿ ಮೈದಾನದಲ್ಲಿ ಹಲವು ಬ್ಯಾಟರ್ಸ್ ಸೆಂಚುರಿಗಳನ್ನ ಸಿಡಿಸಿ ಸಂಭ್ರಮಿಸಿದ್ದಾರೆ. ಸಚಿನ್ ತೆಂಡೂಲ್ಕರ್‌ನಿಂದ ಹಿಡಿದು ರಿಕಿ ಪಾಂಟಿಂಗ್‌ವರೆಗೆ ಅನೇಕ ಹೆಸರಾಂತ ಆಟಗಾರರು ಸ್ಮರಣೀಯ ಶತಕಗಳನ್ನು ಬಾರಿಸಿದ್ದಾರೆ. ಅದ್ರಲ್ಲೂ ಐಪಿಎಲ್ ಅಂತಾ ಬಂದ್ರೆ ಆರ್ಸಿಬಿ ಫ್ಯಾನ್ಸ್ ಪಾಲಿಗೆ ಫೇವರೆಟ್ ಮೈದಾನ. ಆದ್ರೆ 2026ರ ಐಪಿಎಲ್ಗೆ ಈ ಮೈದಾನದಲ್ಲಿ ಪಂದ್ಯಗಳನ್ನೇ ನಿಷೇಧ ಮಾಡ್ತಾರೆ ಅನ್ನೋ ಸುದ್ದಿ ನಿಜಕ್ಕೂ ಬೇಸರ ತರಿಸಿದೆ.

ನೋಡಿರಿ

