84 ದಿನ ಮೌನ.. RCB ನ್ಯೂ ಪೋಸ್ಟ್ – ಫ್ಯಾನ್ಸ್ ಗಾಗಿ RCB CARES ಯೋಜನೆ
ಚಿನ್ನಸ್ವಾಮಿಯಲ್ಲಿ ಪಂದ್ಯಗಳಿಗೆ ಸಿಗುತ್ತಾ ಚಾನ್ಸ್?

18 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದ ದಿನ ಅದು. ಜೂನ್ 3ರ ರಾತ್ರಿ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಣರೋಚಕ ರೀತಿಯಲ್ಲಿ ಗೆದ್ದು ಮೊದಲ ಬಾರಿಗೆ ಐಪಿಎಲ್ ಕಪ್ ಎತ್ತಿ ಹಿಡಿದಿದ್ರು. ವಿರಾಟ್ ಕೊಹ್ಲಿ ಕಣ್ಣೀರಿಟ್ರೆ ಕೋಟ್ಯಂತರ ಅಭಿಮಾನಿಗಳ ಕಣ್ಣಾಲೆಗಳು ಒದ್ದೆಯಾಗಿದ್ವು. ಈ ಗೆಲುವಿನ ವಿಜಯೋತ್ಸವಕ್ಕಾಗಿ ಬೆಂಗಳೂರಿನಲ್ಲಿ ಜೂನ್ ನಾಲ್ಕರಂದು ಪರೇಡ್ ಹಮ್ಮಿಕೊಳ್ಳಲಾಗಿತ್ತು. ಲಕ್ಷಾಂತರ ಮಂದಿ ಬೆಂಗಳೂರಿಗೆ ದಾಂಗುಡಿ ಇಟ್ಟಿದ್ರು. ವಿಧಾನಸೌಧ, ಚಿನ್ನಸ್ವಾಮಿ ಮೈದಾನದ ಸುತ್ತಮುತ್ತ ಜನಜಾತ್ರೆಯೇ ಸೇರಿತ್ತು. ಆದ್ರೆ ಈ ಖುಷಿಯ ನಡುವೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಸಂಭವಿಸಿ 11 ಮಂದಿ ಪ್ರಾಣ ಬಿಟ್ಟಿದ್ರು. ಈ ಘೋರ ದುರಂತದ ಬಗ್ಗೆ ಪೋಸ್ಟ್ ಶೇರ್ ಮಾಡಿದ್ದ ಆರ್ಸಿಬಿ ಫ್ರಾಂಚೈಸಿ ಅಂದಿನಿಂದ ಕಂಪ್ಲೀಟ್ ಡಿ ಌಕ್ಟಿವೇಟ್ ಆಗಿತ್ತು. ಕೊನೆಗೂ ಈ ಮೌನಕ್ಕೆ ಬ್ರೇಕ್ ಬಿದ್ದಿದೆ.
ಇದನ್ನೂ ಓದಿ : ಕೆಎಲ್ ರಾಹುಲ್ KKR ಸೇರೋದು ಫಿಕ್ಸ್?- KKR ಕ್ಯಾಪ್ಟನ್ ಆಗ್ತಾರಾ ಕನ್ನಡಿಗ?
ಆರ್ ಸಿಬಿ ಸೋಶಿಯಲ್ ಮೀಡಿಯಾದಲ್ಲಿ ಹೊಸ ಪೋಸ್ಟ್!
ಐಪಿಎಲ್ ಬಳಿಕ ಎಲ್ಲಾ ಫ್ರಾಂಚೈಸಿಗಳು ಬೇರೆ ಬೇರೆ ಸರಣಿ, ಕ್ರೀಡೆಗಳು, ವಿನ್ನರ್ಸ್, ಚಾಂಪಿಯನ್ಸ್, ಆಟಗಾರರ ಬರ್ತಡೇ, ರಿಟೈರ್ಮೆಂಟ್ಸ್ ಅಂತಾ ಹೊಸ ಹೊಸ ಡವಲಪ್ಮೆಂಟ್ಸ್ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಪೋಸ್ಟ್ ಹಾಕ್ತಿದ್ರೆ ಆರ್ಸಿಬಿ ಮಾತ್ರ ಒಂದೇ ಒಂದು ಪೋಸ್ಟ್ ಶೇರ್ ಮಾಡಿರಲಿಲ್ಲ. ಜೂನ್ ನಾಲ್ಕರ ಬಳಿಕ ಇದೇ ಮೊದಲ ಬಾರಿಗೆ ಟೆಕ್ಸ್ಟ್ ಪೋಸ್ಟ್ ಹಾಕಿದೆ. ಹಾಗೇ ಅಭಿಮಾನಿಗಳಿಗೆ ಸಂದೇಶವೊಂದನ್ನ ನೀಡಿದೆ. 84 ದಿನಗಳ ಬಳಿಕ ಅಭಿಮಾನಿಗಳಿಗಾಗಿ ಹೊಸ ಭರವಸೆಯನ್ನು ನೀಡುವ ಮೂಲಕ ಕಮ್ ಬ್ಯಾಕ್ ಮಾಡಿದೆ. ಕನ್ನಡ ಮತ್ತು ಇಂಗ್ಲಿಷ್ ಎರಡದಲ್ಲೂ ಮಾಹಿತಿ ನೀಡಿದೆ. ಡಿಯರ್ ಟ್ವೆಲ್ತ್ ಮ್ಯಾನ್ ಆರ್ಮಿ, ಇದು ನಿಮಗೆ ನಮ್ಮ ಹೃದಯಪೂರ್ವಕ ಪತ್ರ!’ ಎಂದು ಶುರು ಮಾಡಿ ಅನೇಕ ವಿಚಾರಗಳನ್ನು ಹಂಚಿಕೊಂಡಿದೆ.
ಆರ್ ಸಿಬಿ ಕೇರ್ಸ್ ಭರವಸೆ!
ನಾವು ಪೋಸ್ಟ್ ಮಾಡಿ ಸುಮಾರು ಮೂರು ತಿಂಗಳಕಾಲ ಕಳೆದಿದೆ. ನಮ್ಮ ಮೌನ, ಖಾಲಿತನದಿಂದಷ್ಟೇ ಅಲ್ಲ, ದುಃಖದಿಂದ ತುಂಬಿದ ತೀವ್ರವಾದ ಮೌನ. ಈ ಮಾಧ್ಯಮದ ಮುಖಾಂತರ ನೀವೆಲ್ಲಾ ಸಂತೋಷದಿಂದ ಸಂಭ್ರಮಿಸುವ ವಿಷಯಗಳನ್ನು ಮತ್ತು ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದೆವು. ಆದರೆ ಜೂನ್ 4ರ ಘಟನೆ ಎಲ್ಲವನ್ನೂ ಬದಲಾಯಿಸಿತು. ಆ ದಿನ ನಮ್ಮ ಹೃದಯ ಒಡೆಯಿತು. ನಂತರದ ಮೌನವು ಕೇವಲ ನಿಶ್ಯಬ್ದವಲ್ಲ, ಅದು ಶ್ರದ್ಧೆಯಿಂದ ತುಂಬಿದ ಶಾಂತ ಶ್ರದ್ಧಾಂಜಲಿ. ಈ ಮೌನದೊಳಗೆ ನೋವನ್ನು ಅನುಭವಿಸುತ್ತಾ ನಾವು ಆಳವಾಗಿ ಯೋಚಿಸಿದ್ದೆವು ಮತ್ತು ಅನೇಕ ವಿಷಯಗಳನ್ನು ಕಲಿತೆವು. ನೋವನ್ನೇ ಶ್ರದ್ಧೆಯಾಗಿ, ನಂಬಿಕೆಯಾಗಿ ರೂಪಿಸಬೇಕೆಂದು ತೀರ್ಮಾನಿಸಿದ್ದೆವು. ಅದರ ಫಲವೇ ಆರ್ಸಿಬಿ ಕೇರ್ಸ್. ನಮ್ಮ ಅಭಿಮಾನಿಗಳು ಮತ್ತು ಸಮುದಾಯಕ್ಕಾಗಿ ನಿಷ್ಠೆಯಿಂದ ರೂಪಿಸಿದ ಒಂದು ಯೋಜನೆ. ಇಂದು ನಾವು ಮರಳಿದ್ದೇವೆ. ನಿಮ್ಮೊಂದಿಗೆ ನಿಲ್ಲುವ ಭರವಸೆಯನ್ನು ನೀಡುತ್ತಾ, ಕರ್ನಾಟಕದ ಹೆಮ್ಮೆಯಾಗಿ ಮುಂದೆ ಸಾಗುತ್ತೇವೆ. ಇದು ನಮ್ಮ ಕಾಳಜಿ, ನಮ್ಮ ಪ್ರತಿಜ್ಞೆ.
ಆರ್ ಸಿಬಿ ಕೇರ್ಸ್: ನಾವು ಸದಾ ನಿಮ್ಮೊಂದಿಗಿದ್ದೇವೆ.
ಹೀಗೆ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಪೋಸ್ಟ್ ಹಂಚಿಕೊಂಡಿರೋ ಫ್ರಾಂಚೈಸಿ ಆರ್ ಸಿಬಿ ಕೇರ್ಸ್ ಭರವಸೆ ನೀಡಿದೆ. ಅಂದ್ರೆ ಅಭಿಮಾನಿಗಳಿಗಾಗಿ ವಿಶೇಷ ಕಾಳಜಿವಹಿಸಲು ನಿರ್ಧರಿಸಿದೆ. ಇದಕ್ಕಾಗಿ ಟ್ರಸ್ಟ್ವೊಂದನ್ನು ರೂಪಿಸುವ ಸಾಧ್ಯತೆಯಿದ್ದು, ಈ ಮೂಲಕ ಕಾಲ್ತುಳಿತದಿಂದ ಮೃತಪಟ್ಟಿರುವ ಅಭಿಮಾನಿಗಳ ಕುಟುಂಬಕ್ಕೆ ನೆರವಾಗುವ ಯೋಜನೆ ರೂಪಿಸಲಾಗಿದೆ ಎನ್ನಲಾಗ್ತಿದೆ. ಒಂದ್ಕಡೆ ಫ್ರಾಂಚೈಸಿ ಏನೋ ಕಮ್ ಬ್ಯಾಕ್ ಮಾಡೋಕೆ ರೆಡಿಯಾಗಿದೆ. ಹೊಸತನದೊಂದಿಗೆ ಶುರು ಮಾಡಿದೆ. ಆದ್ರೆ ಚಿನ್ನಸ್ವಾಮಿ ಮೈದಾನ ಮಾತ್ರ ಪಂದ್ಯಗಳನ್ನ ಕಳೆದುಕೊಳ್ಳುತ್ತಲೇ ಇದೆ.

ನೋಡಿರಿ

