2026ಕ್ಕೂ RCB ಡೇಂಜರಸ್ ಟೀಂ – ಕೊಹ್ಲಿ, ಟಿಮ್, ಜೋಶ್ ಸ್ಟ್ರೆಂಥ್ ಮಸ್ತ್
ಟ್ರೋಫಿ ಗೆಲ್ಲಿಸ್ತಾರಾ Retention ಸ್ಟಾರ್ಸ್?

2026ರ ಐಪಿಎಲ್ಗೂ ಮುನ್ನ 17 ಆಟಗಾರರನ್ನ ಉಳಿಸಿಕೊಂಡು 8 ಆಟಗಾರರನ್ನ ರಿಲೀಸ್ ಮಾಡಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ಮಾರ್ಟ್ ಆಗಿ ಹೆಜ್ಜೆ ಇಟ್ಟಿದೆ. 2025ರ ಐಪಿಎಲ್ಗೂ ಮುನ್ನ ಮೆಗಾ ಹರಾಜಿನಲ್ಲಿ ತುಂಬಾನೇ ಕ್ಯಾಲ್ಕುಲೇಟಿವ್ ಆಗಿ ಟೀಂ ಕಟ್ಟಿದ್ದ ಫ್ರಾಂಚೈಸಿ ಈಗ ಮಿನಿ ಆಕ್ಷನ್ನಲ್ಲೂ ಅಂಥದ್ದೇ ಸ್ಟ್ರಾಟರ್ಜಿ ಬಳಸಿದೆ. ಬ್ಯಾಟಿಂಗ್, ಬೌಲಿಂಗ್, ಆಲ್ರೌಂಡರ್ಸ್ ಹೀಗೆ ಟಾಪ್ ಟು ಬಾಟಂ ಕಂಪ್ಲೀಟ್ ಬ್ಯಾಲೆನ್ಸ್ ಆಗಿದೆ. ಇಂಟ್ರೆಸ್ಟಿಂಗ್ ಅಂದ್ರೆ 8 ಆಟಗಾರರನ್ನ ರಿಲೀಸ್ ಮಾಡಿದ್ರೂ ತಂಡಕ್ಕೆ ಏನೂ ಎಫೆಕ್ಟ್ ಆಗಿಲ್ಲ. ಌಂಡ್ 2026ರ ಐಪಿಎಲ್ನಲ್ಲೂ ಕಪ್ ಗೆಲ್ಲೋ ಫೇವರೆಟ್ ಟೀಂ ಎನಿಸಿಕೊಳ್ತಿದೆ.
ಇದನ್ನೂ ಓದಿ :
2025ರ ಐಪಿಎಲ್ನಲ್ಲಿ ಆರ್‌ಸಿಬಿ ತಂಡ ಕಪ್ ಗೆಲ್ಲೋಕೆ ಮುಖ್ಯ ಕಾರಣನೇ ಆಲ್ರೌಂಡ್ ಪ್ರದರ್ಶನ. ಅದ್ಭುತ ಬ್ಯಾಟಿಂಗ್ ಜೊತೆ ಬೌಲಿಂಗ್ ಕೂಡ ಸೂಪರ್ ಸ್ಟ್ರಾಂಗ್ ಆಗಿತ್ತು. ನ್ಯೂ ಬಾಲ್ನಲ್ಲೇ ಬ್ರೇಕ್ ಥ್ರ್ಯೂ ತಂದುಕೊಡೋ ಬೌಲರ್ಸ್ ಇದ್ರು. ಸೋ ಕಳೆದ ಸೀಸನ್ನಲ್ಲಿ ಇದ್ದ ತಂಡವೇ ನೆಕ್ಸ್ಟ್ ಸೀಸನ್ನಲ್ಲೂ ಟ್ರೋಫಿ ಗೆಲ್ಲೋಕೆ ಪಣ ತೊಟ್ಟಿದೆ.
ಬ್ಯಾಟಿಂಗ್ ಬಲ!
ವಿರಾಟ್ ಕೊಹ್ಲಿ 54.75 ಸರಾಸರಿ, 144.71 ಸ್ಟ್ರೈಕ್ ರೇಟ್, 657 ರನ್
ಫಿಲ್ ಸಾಲ್ಟ್ 175.98 ಸ್ಟ್ರೈಕ್ ರೇಟ್‌ನಲ್ಲಿ 403 ರನ್, ಪವರ್ ಪ್ಲೇ ಹೀರೋ
ಟಿಮ್ ಡೇವಿಡ್, ಜಿತೇಶ್ ಶರ್ಮಾ ಮತ್ತು ರೊಮಾರಿಯೊ ಶೆಫರ್ಡ್ ಫಿನಿಶರ್ಸ್
ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ ಬಿಗ್ ಸ್ಕೋರ್ ನತ್ತ ಪ್ರದರ್ಶನ
ಬೌಲಿಂಗ್ ಬಲ!
ಜೋಶ್ ಹ್ಯಾಜಲ್‌ವುಡ್ 17.54 ಸರಾಸರಿಯಲ್ಲಿ 22 ವಿಕೆಟ್
ಕೃನಾಲ್ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ ಬೌಲಿಂಗ್ ಕಂಟ್ರೋಲ್
ಯಶ್ ದಯಾಳ್, ಮತ್ತು ಸುಯಾಶ್ ಶರ್ಮಾ ಶೈನಿಂಗ್
ಇಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಸ್ಟ್ರಾಂಗ್ ಇದ್ದಿದ್ರಿಂದಲೇ ಆರ್‌ಸಿಬಿ ಕಪ್ ಗೆಲ್ಲೋಕೆ ಸಾಧ್ಯ ಆಯ್ತು. ಕಳೆದ ಸೀಸನ್ನಲ್ಲಿ ಆರ್‌ಸಿಬಿ ಕಪ್ ಗೆಲ್ಲೋಕೆ ಕಾರಣ ಆಗಿರೋ ಆಟಗಾರರೇ ಮುಂದಿನ ಆವೃತ್ತಿಗೂ ತಂಡದಲ್ಲಿ ಉಳಿದಿದ್ದಾರೆ. ಸೋ ಯಾವ ಕಾರಣಕ್ಕೆ ಫ್ರಾಂಚೈಸಿ ಅವ್ರನ್ನೆಲ್ಲಾ ಉಳಿಸ್ಕೊಂಡಿದೆ. 10 ಔಟ್ ಆಫ್ ಎಷ್ಟು ಮಾರ್ಕ್ಸ್ ಕೊಡ್ಬೋದು ಅನ್ನೋದನ್ನೂ ನೋಡೋಣ. ಮೊದಲನೇದಾಗಿ ವಿರಾಟ್ ಕೊಹ್ಲಿ.
ಆಟಗಾರರ ಸಾಮರ್ಥ್ಯ!
ವಿರಾಟ್ ಕೊಹ್ಲಿ (10/10) – ತಂಡದ ಐಕಾನಿಕ್ ಪ್ಲೇಯರ್, ಕನ್ಸಿಸ್ಟೆನ್ಸಿ, ಅನುಭವ
ಟಿಮ್ ಡೇವಿಡ್ (9/10): 185 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್, ಪವರ್ ಹಿಟ್ಟರ್ ಫಿನಿಶರ್
ಫಿಲ್ ಸಾಲ್ಟ್ (8.5/10) : ವಿಕೆಟ್ ಕೀಪರ್ ಬ್ಯಾಟರ್, ಪವರ್ ಪ್ಲೇ ಹೀರೋ
ರಜತ್ ಪಾಟಿದಾರ್ (8/10): ಸಮರ್ಥವಾಗಿ ಸ್ಪಿನ್-ಆಡುವ ಬ್ಯಾಟ್ಸ್ ಮನ್, ನಾಯಕ
ದೇವದತ್ ಪಡಿಕ್ಕಲ್ (7/10): ಬಲಗೈ ಬೌಲರ್ ಅಗ್ರ ಕ್ರಮಾಂಕದಲ್ಲಿ ಸಮತೋಲನ
ಕೃನಾಲ್ ಪಾಂಡ್ಯ (8/10): ಎಡಗೈ ಸ್ಪಿನ್, ಬ್ಯಾಟಿಂಗ್ ಡೆಪ್ತ್ & ಅನುಭವ
ರೊಮಾರಿಯೊ ಶೆಫರ್ಡ್ (7.5/10): ಸ್ಫೋಟಕ ಹಿಟ್ಟರ್, ಸೀಮ್-ಬೌಲಿಂಗ್ ಆಯ್ಕೆ
ಸುಯಾಶ್ ಶರ್ಮಾ ( 8/10 ) ಸ್ಪಿನ್ ವೇರಿಯೇಷನ್ ಮತ್ತು ಬೌಲಿಂಗ್ ಡೆಪ್ತ್
ಜೋಶ್ ಹ್ಯಾಜಲ್‌ವುಡ್ (9.5/10): ತಂಡದ ಪ್ರಮುಖ ಬೌಲಿಂಗ್ ಅಸ್ತ್ರ
ಭುವನೇಶ್ವರ್ ಕುಮಾರ್ (7.5/10) : ಹೊಸ ಚೆಂಡಿನಲ್ಲಿ ಮತ್ತು ಡೆತ್ ಓವರ್ ನಂಬಿಕಸ್ಥ
ಇನ್ನು ಇವ್ರಿಷ್ಟೇ ಅಲ್ಲದೇ ತಂಡದಲ್ಲಿ ರಿಟೇನ್ ಆಗಿರೋ ನುವಾನ್ ತುಷಾರ, ಯಶ್ ದಯಾಳ್ ಮತ್ತು ರಸಿಕ್ ಸಲಾಂ ದಾರ್ ಕೂಡ ಬೌಲಿಂಗ್ನ ಸ್ಟ್ರೆಂತ್ ಹೆಚ್ಚಿಸಿದ್ದಾರೆ. ಒಟ್ಟಾರೆಯಾಗಿ, ಆರ್‌ಸಿಬಿ ತಂಡ ಉಳಿಸಿಕೊಂಡಿರೋ ಆಟಗಾರರೆಲ್ಲಾ ಚಾಂಪಿಯನ್ ಪ್ಲೇಯರ್ಗಳೇ ಆಗಿದ್ದಾರೆ. 16.4 ಕೋಟಿ ಪರ್ಸ್ ಬ್ಯಾಲೆನ್ಸ್ನಲ್ಲಿ ಮಿನಿ ಆಖ್ಷನ್ನಲ್ಲಿ ಮತ್ತೆ ಸಮರ್ಥ ಆಟಗಾರರನ್ನ ಖರೀದಿ ಮಾಡೋಕೆ ಫ್ರಾಂಚೈಸಿ ಮುಂದಾಗಿದೆ. ಹೀಗಾಗಿ ಮುಂದಿನ ಆವೃತ್ತಿಯಲ್ಲೂ ಬೆಂಗಳೂರು ಟೀಂ ಐಪಿಎಲ್ನ ಮೋಸ್ಟ್ ಡೇಂಜರಸ್ ಟೀಂ ಆಗೋದ್ರಲ್ಲಿ ಡೌಟೇ ಇಲ್ಲ.

ನೋಡಿರಿ

