RCBಯಲ್ಲಿ ವೆಂಕಿಗೆ ₹7 ಕೋಟಿ ವೇಸ್ಟ್ – ನಂ.3ನಲ್ಲಿ ಪಡಿಕ್ಕಲ್ ಆಡೋದೇ ಬೆಸ್ಟ್
ಗ್ರೀನ್ ನಂಬಿ ಕಲ್ಲು ಹಾಕಿಕೊಳ್ತಾ KKR?

2026ರ ಐಪಿಎಲ್ಗಾಗಿ ನಡೆದ ಮಿನಿ ಆಕ್ಷನ್ನಲ್ಲಿ ಆರ್ಸಿಬಿ ವೆಂಕಟೇಶ್ ಅಯ್ಯರ್ಗೆ 7 ಕೋಟಿ ಕೊಟ್ಟು ಖರೀದಿ ಮಾಡಿದೆ. ಲಾಸ್ಟ್ ಸೀಸನ್ನಲ್ಲಿ 23 ಕೋಟಿವರೆಗೂ ಬಿಡ್ ಮಾಡಿ ಕೈಬಿಟ್ಟಿದ್ದ ಮ್ಯಾನೇಜ್ಮೆಂಟ್ ಈ ಸಲ 7 ಕೋಟಿಗೆ ಖರೀದಿಸಿದ್ದಕ್ಕೆ ಸ್ಮಾರ್ಟ್ ಮೂವ್ ಅಂತೆಲ್ಲಾ ಕೆಲವ್ರು ಅಪ್ರಿಶಿಯೇಟ್ ಮಾಡಿದ್ರು. ಌಂಡ್ ನೆಕ್ಸ್ಟ್ ಸೀಸನ್ನಲ್ಲಿ ನಂಬರ್ 3ನಲ್ಲಿ ಬ್ಯಾಟಿಂಗ್ ಮಾಡಿಸ್ಬೋದು ಅನ್ನೋ ಲೆಕ್ಕಾಚಾರವೂ ಇದೆ. ಆದ್ರೆ ವೆಂಕಿ ಫಾರ್ಮ್ ನೋಡ್ತಿದ್ರೆ ಅವ್ರಿಗೆ 7 ಕೋಟಿ ಕೊಟ್ಟಿದ್ದೇ ವೇಸ್ಟ್ ಅನ್ನಿಸ್ತಿದೆ. ಌಂಡ್ ನಂಬರ್ 3ನಲ್ಲಿ ದೇವದತ್ ಪಡಿಕ್ಕಲ್ ಬೆಸ್ಟ್ ಬ್ಯಾಟರ್ ಆಗ್ತಾರೆ. ಇನ್ನು ಕ್ಯಾಮೆರಾನ್ ಗ್ರೀನ್ಗೆ 25 ಕೋಟಿ ಕೊಟ್ಟಿರೋ ಕೆಕೆಆರ್ ಕೂಡ ಕೈಕೈ ಹಿಸುಕಿಕೊಳ್ತಿದೆ.
ಇದನ್ನೂ ಓದಿ : NZ ವಿರುದ್ಧ ಯಾರು ಕ್ಯಾಪ್ಟನ್? – ಗೆಲ್ಲೋ KL ಸಾಕಾ.. ಸೋಲೋ ಗಿಲ್ ಬೇಕಾ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಿಗೆ ಬೆಸ್ಟ್ ಪಿಕ್ ಎನಿಸಿಕೊಳ್ತಿರೋ ವೆಂಕಟೇಶ್ ಅಯ್ಯರ್ ಡೊಮೆಸ್ಟಿಕ್ ಕ್ರಿಕೆಟ್ ನಲ್ಲೂ ಒದ್ದಾಡ್ತಿದ್ದಾರೆ. ಪ್ರಸ್ತುತ ನಡೆಯುತ್ತಿರೋ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲೂ ಬಿಗ್ ಇನ್ನಿಂಗ್ಸ್ ಬಂದಿಲ್ಲ. ಪ್ರತಿಷ್ಠಿತ 50 ಓವರ್ಗಳ ದೇಶೀಯ ಪಂದ್ಯಾವಳಿಗಳ ಮೇಲೆ ಬಿಸಿಸಿಐ ಜೊತೆಗೆ ಐಪಿಎಲ್ ಫ್ರಾಂಚೈಸಿಗಳು ತಮ್ಮ ಆಟಗಾರರ ಪ್ರದರ್ಶನದ ಮೇಲೆ ಕಣ್ಣಿಟ್ಟಿದ್ದಾರೆ. ಈ ಪೈಕಿ ಕೆಲವ್ರು ಅದ್ಭುತ ಪ್ರದರ್ಶನ ನೀಡ್ತಿದ್ರೆ ಇನ್ನೂ ಕೆಲವ್ರು ಫೇಲ್ಯೂರ್ ಆಗ್ತಿದ್ದಾರೆ.
ವೆಂಕಿಗೆ ಆರ್ ಸಿಬಿ 7 ಕೋಟಿ ಕೊಟ್ಟಿದ್ದು ವೇಸ್ಟ್ ಆಯ್ತಾ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ವೆಂಕಟೇಶ್ ಅಯ್ಯರ್ ಮೇಲೆ ಸಾಕಷ್ಟು ಭರವಸೆ ಇಟ್ಟಿದೆ. ಆದ್ರೆ ಅಯ್ಯರ್ ಮಾತ್ರ ರನ್ ಗಳಿಸೋಕೆ ಒದ್ದಾಡ್ತಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಇದುವರೆಗೆ 3 ಪಂದ್ಯಗಳು ನಡೆದಿವೆ. ಮಧ್ಯಪ್ರದೇಶ ತಂಡದ ಕ್ಯಾಪ್ಟನ್ ಆಗಿರೋ ಅಯ್ಯರ್ ಪ್ರದರ್ಶನ ಹೇಳಿಕೊಳ್ಳುವಂತಿಲ್ಲ. ಕೇರಳ ವಿರುದ್ಧದ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಅಯ್ಯರ್ ಯಾವುದೇ ಬೌಂಡರಿಗಳಿಲ್ಲದ 8 (16) ರನ್ ಗಳಿಸಿದ್ರು. ಮೂರು ಇನ್ನಿಂಗ್ಸ್ಗಳಲ್ಲಿ 24.67ರ ಸರಾಸರಿಯಲ್ಲಿ ಕೇವಲ 74 ರನ್ಗಳನ್ನು ಗಳಿಸಿದ್ದಾರೆ. ಐಪಿಎಲ್ 2026 ಕ್ಕೆ ದೇವದತ್ ಪಡಿಕ್ಕಲ್ ಬದಲಿಗೆ ಅಯ್ಯರ್ ಅವರನ್ನು ನಂ. 3 ಸ್ಥಾನದಲ್ಲಿ ಆಡಿಸುವ ಬಗ್ಗೆ ಚರ್ಚೆಗಳು ಆಗ್ತಿರುವಾಗ್ಲೇ ಅಯ್ಯರ್ ಫ್ಲ್ಯಾಪ್ ಶೋ ತಲೆಬಿಸಿ ತಂದಿಟ್ಟಿದೆ.
ಕರ್ನಾಟಕ ಪರ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿದ ಪಡಿಕ್ಕಲ್!
ಇನ್ನು ಕನ್ನಡಿಗ ದೇವದತ್ ಪಡಿಕ್ಕಲ್ ಅದ್ಭುತ ಫಾರ್ಮ್ನಲ್ಲಿದ್ದಾರೆ. ವಿಜಯ್ ಹಜಾರೆ ಟೂರ್ನಿಯ ಮೊದಲ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧದ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ ಪಡಿಕ್ಕಲ್, ಕೇರಳ ವಿರುದ್ಧವೂ ಶತಕ ಸಿಡಿಸಿ ಮಿಂಚಿದ್ರು. ಹಾಗೇ ಮೂರನೇ ಪಂದ್ಯದಲ್ಲಿ ತಮಿಳುನಾಡು ವಿರುದ್ಧ 22 ರನ್ಸ್ ಕಲೆ ಹಾಕಿದ್ರು. ವೈಟ್ಬಾಲ್ ಕ್ರಿಕೆಟ್ನಲ್ಲಿ ಪಡಿಕ್ಕಲ್ ಪವರ್ ಶೋ ತೋರಿಸ್ತಿದ್ದಾರೆ. ಇದುವರೆಗೆ 35 ಲಿಸ್ಟ್ ಎ ಪಂದ್ಯಗಳಲ್ಲಿ ಪಡಿಕ್ಕಲ್, 11 ಶತಕ ಮತ್ತು 12 ಅರ್ಧಶತಕಗಳನ್ನ ಸಿಡಿಸಿದ್ದಾರೆ. ಪಡಿಕ್ಕಲ್ ಬ್ಯಾಟಿಂಗ್ ಸರಾಸರಿ ಬರೋಬ್ಬರಿ 84 ಇದೆ. ಕಳೆದ ಬಾರಿ 23.75 ರು.ಗೆ ಕೆಕೆಆರ್ ತಂಡದ ಪಾಲಾಗಿದ್ದ ವೆಂಕಟೇಶ್ ಅಯ್ಯರ್ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ನ ಎರಡನೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ಆದರೆ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಎಡವಿದ ಅವರು ಟೂರ್ನಿಯಲ್ಲಿ ಆಡಿದ್ದ 11 ಪಂದ್ಯಗಳಿಂದ ಕೇವಲ 142 ರನ್ಗಳನ್ನು ಕಲೆ ಹಾಕಿದ್ದರು. 2021ರಲ್ಲಿ ಐಪಿಎಲ್ಗೆ ಪದಾರ್ಪಣೆ ಮಾಡಿರುವ ಅಯ್ಯರ್ ಒಟ್ಟು 62 ಪಂದ್ಯಗಳಿಂದ 137.32 ಸ್ಟ್ರೈಕ್ ರೇಟ್ನಲ್ಲಿ 1,468 ರನ್ ಹೊಡೆದಿದ್ದಾರೆ. ಇದರಲ್ಲಿ 1 ಶತಕ ಮತ್ತು 12 ಅರ್ಧ ಶತಕ ಸೇರಿದೆ. ಹೀಗಾಗಿ ನೆಕ್ಸ್ಟ್ ಸೀಸನ್ಗೂ ಆರ್ಸಿಬಿ ಪರ 3ನೇ ಕ್ರಮಾಂಕದಲ್ಲಿ ಪಡಿಕ್ಕಲ್ ಕಂಟಿನ್ಯೂ ಆಗೋದೇ ಬೆಸ್ಟ್ ಅನ್ಸುತ್ತೆ. ಇದು ಆರ್ಸಿಬಿ ಕಥೆಯಾದ್ರೆ ಅತ್ತ ಕೆಕೆಆರ್ಗೂ ಮತ್ತೊಂಥರಾ ತಲೆ ನೋಡು ಸ್ಟಾರ್ಟ್ ಆಗಿದೆ.
ಮಿನಿ ಆಕ್ಷನ್ ಬಳಿಕ ಗ್ರೀನ್ ಕೂಡ ಮೈದಾನದಲ್ಲಿ ಸೈಲೆಂಟ್!
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಮೊತ್ತಕ್ಕೆ ಹರಾಜಾದ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಗೆ ಆಸ್ಟ್ರೇಲಿಯಾದ ಕ್ಯಾಮರೋನ್ ಗ್ರೀನ್ ಪಾಲಾಗಿದ್ರು. ಮಿನಿ ಹರಾಜಿನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಬರೋಬ್ಬರಿ 25.20 ಕೋಟಿ ರೂ.ಗೆ ಕ್ಯಾಮರೋನ್ ಗ್ರೀನ್ ಅವರನ್ನು ಖರೀದಿಸಿದೆ. ಬ್ಯಾಟಿಂಗ್ ಹಾಗೇ ಬೌಲಿಂಗ್ ಎರಡರಲ್ಲೂ ಇಂಪ್ಯಾಕ್ಟ್ ಮಾಡ್ತಾರೆ ಅನ್ನೋ ನಿರೀಕ್ಷೆಯಿಂದ. ಆದ್ರೆ ಬಿಡ್ಡಿಂಗ್ ಆದ್ಮೇಲೆ ಗ್ರೀನ್ ಕೂಡ ಸದ್ದು ಮಾಡ್ತಿಲ್ಲ. ಌಷಸ್ ಸರಣಿಯಲ್ಲಿ ಕಂಪ್ಲೀಟ್ ಡಲ್ ಆಗಿದ್ದಾರೆ. 26 ವರ್ಷದ ಆಟಗಾರ 6 ಇನ್ನಿಂಗ್ಸ್ಗಳಲ್ಲಿ ಕೇವಲ 112 ರನ್ಗಳನ್ನು ಗಳಿಸಿದ್ದಾರೆ, ಸರಾಸರಿ 18.67 ಇದೆ. ಇನ್ನು ಬೌಲಿಂಗ್ನಲ್ಲೂ ಇಂಪ್ಯಾಕ್ಟ್ ಮಾಡಿಲ್ಲ. ಏಳು ಇನ್ನಿಂಗ್ಸ್ಗಳಲ್ಲಿ ಕೇವಲ ಮೂರು ವಿಕೆಟ್ಗಳನ್ನು ಮಾತ್ರ ಪಡೆದಿದ್ದಾರೆ. ಹೀಗಾಗಿ ಗ್ರೀನ್ಗೆ ಅಷ್ಟೊಂದು ಹಣ ಕೊಟ್ಟು ಕೆಕೆಆರ್ ತಾನೇ ಕಲ್ಲು ಹಾಕಿಕೊಳ್ತಾ ಅನ್ನೋ ಚರ್ಚೆ ನಡೀತಿದೆ. ಒಟ್ನಲ್ಲಿ ದುಬಾರಿ ಪ್ಲೇಯರ್ಸ್ ಎನಿಸಿಕೊಂಡವ್ರು ಮೈದಾನದಲ್ಲಿ ಕಳಪೆ ಪ್ರದರ್ಶನ ನೀಡ್ತಿದ್ದಾರೆ. ಹೀಗಾಗಿ ಮುಂದಿನ ಆವೃತ್ತಿಗೂ ಮುನ್ನವೇ ಆರ್ಸಿಬಿ ಮತ್ತು ಕೆಕೆಆರ್ ಗೆ ತಲೆಬಿಸಿ ಹೆಚ್ಚಾಗಿದೆ.

ನೋಡಿರಿ

