RCB ಬಿಟ್ಟು ENGಗೆ ಸೆರ್ತಾರಾ ಕೋಚ್?- ಆ್ಯಂಡಿ ಮೇಲೆ ಇಂಗ್ಲೆಂಡ್‌ಗೆ ಯಾಕೆ ಕಣ್ಣು

RCB ಬಿಟ್ಟು ENGಗೆ ಸೆರ್ತಾರಾ ಕೋಚ್?- ಆ್ಯಂಡಿ ಮೇಲೆ ಇಂಗ್ಲೆಂಡ್‌ಗೆ ಯಾಕೆ ಕಣ್ಣು

ಇಂಗ್ಲೆಂಡ್‌ಗೆ ಟೆಸ್ಟ್ ಕೋಚ್ ಬೇಕು. ಆದ್ರೆ ಯಾರ್ ಆಗ್ತಾರೆ ಅನ್ನೋದೇ ಈಗ ದೊಡ್ಡ ಯಕ್ಷ ಪ್ರಶ್ನೆ. ಈ ರೇಸ್‌ನಲ್ಲಿ ನಮ್ಮ ರಾಹುಲ್ ದ್ರಾವಿಡ್‌, ರವಿಶಾಸ್ತ್ರಿ ಹೆಸರು ಕೇಳಿ ಬರ್ತಿದೆ. ಆದ್ರೆ ಈ ರೇಸ್‌ನಲ್ಲಿ ಎಲ್ಲದ್ದಕ್ಕಿಂತ ದೊಡ್ಡ ಹೆಸರು ಸೌಂಡ್ ಮಾಡ್ತಾ ಇರೋದು ಆ್ಯಂಡಿ ಪ್ಲವರ್ ಹೆಸರು.. ನೆಕ್ಸ್ಟ್ ಇಂಗ್ಲೆಂಡ್ ಕೋಚ್ ಇವರೇ ಅನ್ನೋ ಮಾತಿದೆ. ಇಂಗ್ಲೆಂಡ್‌ ಕೂಡ ಇವರ ಬರುವಿಕೆಗಾಗಿ ಕಾಯ್ತಿದೆ. ಇವರಿಗೊಸ್ಕರನೇ ತನ್ನ ರೂಲ್ಸ್ ಕೂಡ ಚೇಂಜ್ ಮಾಡಿದೆ. ಯಾಕೆ ಇವರಿಗೆ ಅಷ್ಟು ಡಿಮ್ಯಾಂಡ್‌ ಅನ್ನೋದ್ದನ್ನ ನೋಡೋಣ.

ಮೆಕಲಂ ಇಂಗ್ಲೆಂಡ್ ಟೆಸ್ಟ್ ಕೋಚ್ ಹುದ್ದೆಯಿಂದ ಕೆಳಗಿಳಿಯುತ್ತಿದ್ದು, ಹೊಸ ಕೋಚ್ ಹುಡುಕಾಟದಲ್ಲಿ  ಇಸಿಬಿ ಇದೆ. ಈ ರೇಸ್‌ನಲ್ಲಿ ಕೇಳ್ತಾ ಇರೋದು ಆರ್‌ಸಿಬಿ ಕೋಚ್ ಆ್ಯಂಡಿ ಫ್ಲವರ್‌ ಹೆಸರು.  RCB  ತಂಡ ಎರಡು ಸಲ ಕಪ್ ಎತ್ತಿ ಹಿಡಿಯುವುದರ ಹಿಂದೆ ಇದಿದ್ದು  ಕೋಚ್ ಆ್ಯಂಡಿ ಅನ್ನೋ ಪವರ್‌. ಝಿಂಬಾಬ್ವೆಯ ಮಾಜಿ ಕ್ರಿಕೆಟಿಗರಾಗಿರುವ ಫ್ಲವರ್, ವಿಶ್ವ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಕೋಚ್‌ಗಳಲ್ಲಿ ಒಬ್ಬರು. ತರಬೇತಿ ನೀಡಿದ ಬಹುತೇಕ ತಂಡಗಳು ಚಾಂಪಿಯನ್ ಪಟ್ಟ ಅಲಂಕರಿಸಿರುವುದು ವಿಶೇಷ.

ಫ್ಲವರ್ ಅವರ ಕೋಚಿಂಗ್ ಪಯಣ 2007ರಲ್ಲಿ ಇಂಗ್ಲೆಂಡ್ ತಂಡದ ಸಹಾಯಕ ಕೋಚ್ ಆಗಿ ಆರಂಭವಾಯಿತು. ಅವರ ಮಾರ್ಗದರ್ಶನದಲ್ಲಿ ಇಂಗ್ಲೆಂಡ್ 2010ರಲ್ಲಿ ಮೊದಲ ಬಾರಿಗೆ ಐಸಿಸಿ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತು. ನಂತರ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವ ನಂ.1 ಸ್ಥಾನಕ್ಕೇರಿದಾಗಲೂ ಫ್ಲವರ್ ಪ್ರಮುಖ ಪಾತ್ರವಹಿಸಿದ್ದರು. 2009, 2011 ಮತ್ತು 2013ರ ಆ್ಯಶಸ್ ಸರಣಿಗಳಲ್ಲಿ ಇಂಗ್ಲೆಂಡ್ ಸತತ ಜಯ ಸಾಧಿಸಿದಾಗ ತಂಡದ ಕೋಚ್ ಆಗಿದ್ದವರೂ ಅವರೇ. ಫ್ರಾಂಚೈಸಿ ಕ್ರಿಕೆಟ್‌ನಲ್ಲಿಯೂ ಫ್ಲವರ್ ಅವರ ಯಶೋಗಾಥೆ ಮುಂದುವರಿದಿದೆ. 2020ರಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ತಂಡವನ್ನ ಎರಡು ಬಾರಿ ಫೈನಲ್‌ಗೆ ಕೊಂಡೊಯ್ದರು. 2021ರಲ್ಲಿ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಮುಲ್ತಾನ್ ಸುಲ್ತಾನ್ಸ್ ತಂಡವನ್ನ ಚಾಂಪಿಯನ್ ಮಾಡಿದರು. 2022ರಲ್ಲಿ ದಿ ಹಂಡ್ರೆಡ್ ಟೂರ್ನಿಯಲ್ಲಿ ಟ್ರೆಂಟ್ ರಾಕೆಟ್ಸ್ ತಂಡ ಪ್ರಶಸ್ತಿ ಗೆದ್ದಾಗ ಅದರ ಹಿಂದಿನ ತಂತ್ರಗಾರ ಫ್ಲವರ್ ಆಗಿದ್ದರು. 2023ರಲ್ಲಿ ಇಂಟರ್‌ನ್ಯಾಷನಲ್ ಲೀಗ್ ಟಿ-20 ಟೂರ್ನಿಯಲ್ಲಿ ಗಲ್ಫ್ ಜೈಂಟ್ಸ್ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿದ ಅವರು, ಲಕ್ನೋ ಸೂಪರ್ ಜೈಂಟ್ಸ್ ತಂಡದ ಕೋಚ್ ಆಗಿ ಸತತ ಎರಡು ಸೀಸನ್‌ಗಳಲ್ಲಿ ಪ್ಲೇಆಫ್ ಪ್ರವೇಶಿಸಲು ನೆರವಾಗಿದ್ದರು. ಈಗ ಆರ್‌ಸಿಬಿಯೊಂದಿಗೆ ಬ್ಯಾಕ್-ಟು-ಬ್ಯಾಕ್ ಐಪಿಎಲ್ ಟ್ರೋಫಿ ಗೆಲ್ಲುವ ಮೂಲಕ ಆ್ಯಂಡಿ ಫ್ಲವರ್ ಮತ್ತೊಮ್ಮೆ ತಮ್ಮ ತಂತ್ರಗಾರಿಕೆ ಮತ್ತು ನಾಯಕತ್ವದ ಸಾಮರ್ಥ್ಯವನ್ನ ಸಾಬೀತುಪಡಿಸಿದ್ದಾರೆ.

ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸರ್ ಹುಸೇನ್ ಸೇರಿದಂತೆ ಹಲವು ದಿಗ್ಗಜರು ಆ್ಯಂಡಿ ಫ್ಲವರ್  ಮರಳುವಿಕೆಗೆ ತೀವ್ರ ಬೆಂಬಲ ವ್ಯಕ್ತಪಡಿಸಿದ್ದಾರೆ. 2009 ರಿಂದ 2014ರ ನಡುವೆ ಇಂಗ್ಲೆಂಡ್ ತಂಡಕ್ಕೆ ಮೂರು ಆ್ಯಶಸ್ ಸರಣಿ ಗೆದ್ದುಕೊಟ್ಟು, ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿಸಿದ ಕೀರ್ತಿ ಫ್ಲವರ್‌ಗೆ ಸಲ್ಲುತ್ತದೆ. ಇಸಿಬಿ ಕೂಡ ಐಪಿಎಲ್‌ನಲ್ಲಿ ಕೋಚ್‌ ಆದವರು ಕೂಡ ಇಂಗ್ಲಂಡ್ ಕ್ರಿಕೆಟ್‌ಗೆ ಕೋಚ್ ಆಗಬಹುದು ಅಂತ ಹೇಳಿದೆ. ಈ ಮೂಲಕ ಆ್ಯಂಡಿ ಫ್ಲವರ್‌ಗಾಗಿ ತನ್ನ ರೂಲ್ಸ್ ಕೂಡ ಚೇಂಜ್ ಮಾಡಿಕೊಂಡಿದೆ ಇಸಿಬಿ.

RCBಗಾಗಿ ಆ್ಯಂಡಿ ಫ್ಲವರ್‌ ಇಂಗ್ಲೆಂಡ್‌ ತ್ಯಾಗ 

ಆ್ಯಂಡಿ ಫ್ಲವರ್ ಇಂಗ್ಲೆಂಡ್ ತಂಡದ ಟೆಸ್ಟ್‌ ಕೋಚ್‌ ಹುದ್ದೆಗೆ ಅತ್ಯುತ್ತಮ ಆಯ್ಕೆಯಾಗಿದ್ದರೂ, ಐಪಿಎಲ್  ಕಾರಣದಿಂದಾಗಿ ಅವರು ಆರ್‌ಸಿಬಿ ತೊರೆದು ಇಂಗ್ಲೆಂಡ್ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ತುಂಬಾ ಕಡಿಮೆ.   ಇಂಗ್ಲೆಂಡ್ ಕ್ರಿಕೆಟ್ ತಂಡದ ಪ್ರಸ್ತುತ ಸ್ಥಿತಿ ಮತ್ತು ಫ್ಲವರ್ ಅವರ ಬಿಡುವಿಲ್ಲದ ವೇಳಾಪಟ್ಟಿಯನ್ನು ಗಮನಿಸಿದರೆ, ಅವರು ಈ ಹುದ್ದೆಯನ್ನು ಒಪ್ಪಿಕೊಳ್ಳುವುದು ಬಹುತೇಕ ಅಸಾಧ್ಯ ಎನ್ನಲಾಗಿದೆ. ಫ್ಲವರ್ ಅವರು ಕಳೆದ ಕೆಲವು ವರ್ಷಗಳಿಂದ ಫ್ರಾಂಚೈಸಿ ಕ್ರಿಕೆಟ್ನಲ್ಲೇ ತಮ್ಮ ವೃತ್ತಿಜೀವನವನ್ನು ಯಶಸ್ವಿಯಾಗಿ ಕಟ್ಟಿಕೊಂಡಿದ್ದಾರೆ. ಹೀಗಿರುವಾಗ ಅಂತರರಾಷ್ಟ್ರೀಯ ಕ್ಯಾಲೆಂಡರ್‌ಗೆ, ಅದರಲ್ಲೂ ವಿಶೇಷವಾಗಿ ಐಪಿಎಲ್ ಸಮಯಕ್ಕೆ ಹೊಂದಿಕೆಯಾಗುವಂತೆ ಅವರು ಇಂಗ್ಲೆಂಡ್ ತಂಡದೊಂದಿಗೆ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುವುದು ಕಷ್ಟಸಾಧ್ಯ ಅನ್ನೋ ಮಾತು ಕೇಳಿ ಬರ್ತಿದೆ.

ಮುಂಬರುವ ದಿನಗಳಲ್ಲಿ ಇಂಗ್ಲೆಂಡ್ ತಂಡವು ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲಿದೆ. ಆ ಸಮಯದಲ್ಲಿ ಐಪಿಎಲ್ ಟೂರ್ನಿ ಕೂಡ ನಡೆಯುತ್ತಿರುತ್ತದೆ. ಆರ್ಸಿಬಿ ಫ್ರಾಂಚೈಸಿಯ ಜೊತೆಗಾಗಲೇ ಒಪ್ಪಂದ ಮಾಡಿಕೊಂಡಿರುವ ಆ್ಯಂಡಿ ಫ್ಲವರ್, ಐಪಿಎಲ್ ಜವಾಬ್ದಾರಿ ಬಿಟ್ಟು ಟೆಸ್ಟ್ ಪಂದ್ಯಗಳಿಗೆ ಹಾಜರಾಗುವುದು ದೊಡ್ಡ ಸವಾಲಿನ ಕೆಲಸ. ಆ್ಯಶಸ್ ಸರಣಿಯಂತಹ ಮಹತ್ವದ ಟೂರ್ನಿಗೆ ಸಿದ್ಧತೆ ನಡೆಸುವಾಗ ಇಂಗ್ಲೆಂಡ್ ತಂಡಕ್ಕೆ ಕೋಚ್ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಬಹುದು.  ಸ್ವತಃ ಕೋಚ್ ಇಲ್ಲದಿದ್ರೆ ಇಂಗ್ಲೆಂಡ್ ತಂಡಕ್ಕೆ ಕಷ್ಟ ಆಗಲಿದೆ. ಹೀಗಾಗಿ ಇಂಗ್ಲೆಂಡ್ ಟೆಸ್ಟ್‌ಗೆ ಆ್ಯಂಡಿ ಕೋಚ್ ಆಗ್ತಾರಾ? ಅಥವಾ ಆರ್‌ಸಿಬಿಗಾಗಿ ಅದ್ದನ್ನ ತ್ಯಾಗ ಮಾಡ್ತಾರಾ ಅನ್ನೋದ್ದನ್ನ ಕಾದು ನೋಡಬೇಕಿದೆ.

 

Kishor KV

Leave a Reply

Your email address will not be published. Required fields are marked *