RCBಗೆ ಕೊಹ್ಲಿ ದಿಢೀರ್ ಗುಡ್ ಬೈ? – ನಿವೃತ್ತಿ ಕೇಳೋ ಮೊದ್ಲೇ ತೆರೆಮರೆಗೆ ಕಿಂಗ್?
ಟೀಂ.. ಬ್ರ್ಯಾಂಡ್.. ಫೈನಾನ್ಸ್.. ಅದೆಷ್ಟು ಲಾಸ್?

ಕಳೆದ ಒಂದೂವರೆ ದಶಕದಲ್ಲಿ ಇಡೀ ಕ್ರಿಕೆಟ್ ಜಗತ್ತು ಕಂಡು ಶ್ರೇಷ್ಠ ಆಟಗಾರ ವಿರಾಟ್ ಕೊಹ್ಲಿ. ಈಗ್ಲೂ ಕೂಡ ಮೈದಾನಕ್ಕಿಳಿದೆ ಹಸಿದ ಹೆಬ್ಬುಲಿಯೇ. ಬ್ಯಾಟಿಂಗ್ ಆದ್ರೂ ಅಷ್ಟೇ ಫೀಲ್ಡಿಂಗ್ ಅಂದ್ರೂ ಅಷ್ಟೇ. ಆದ್ರೆ ಕ್ರಿಕೆಟ್ಗೆ ಇನ್ನೂ ವಿರಾಟ್ ಬೇಕಿತ್ತು ಅನ್ನಿಸುವಾಗ್ಲೇ ಮೈದಾನದಿಂದ ಹೊರಗೆ ನಡೆದುಬಿಡುವಂಥ ವ್ಯಕ್ತಿತ್ವ ಅವ್ರದ್ದು. ಈಗಾಗ್ಲೇ ಟಿ-20ಐ ಹಾಗೇ ಟೆಸ್ಟ್ ಮಾದರಿಯಿಂದ ಹೊರ ಬಂದಿದ್ದಾರೆ. ಭಾರತದ ಪರ ಏಕದಿನದಲ್ಲಿ ಮಾತ್ರ ಕಣಕ್ಕಿಳಿತಾರೆ. ಹಾಗಂತ ಈ ಪಯಣವೂ ತುಂಬಾ ದೂರ ಇಲ್ಲ. ಇನ್ನು ಐಪಿಎಲ್ ಕಥೆ ಏನು? ಆರ್ಸಿಬಿ ಪರ ಡೇ ಒನ್ನಿಂದ ಆಡ್ತಿರೋ ವಿರಾಟ್ ಕರ್ನಾಟಕದ ಮನೆ ಮಗನೇ ಆಗಿದ್ದಾರೆ. ಹಾಗಂತ ಇನ್ನೆಷ್ಟು ವರ್ಷ ಈ ಜರ್ನಿ ಅಂದ್ರೆ ಅದಕ್ಕೆ ಉತ್ತರ ಇಲ್ಲ.
ಇದನ್ನೂ ಓದಿ : ಏಷ್ಯಾಕಪ್ ನಲ್ಲಿ ಭಾರತ Vs ಪಾಕ್ ಫೈಟ್ ನಡೆದಿಲ್ಲ – ಈ 5 ಪಂದ್ಯಗಳ ಕ್ಲೈಮ್ಯಾಕ್ಸ್ ಸೂಪರ್
ಟೀಂ ಇಂಡಿಯಾದಲ್ಲಿ ಏಕದಿನ ಮಾದರಿಯಲ್ಲಿ ಮಾತ್ರ ಕಣಕ್ಕಿಳಿಯುತ್ತಿರೋ ಕೊಹ್ಲಿ 2027 ರ ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ಅಂತಿಮ ಟಾರ್ಗೆಟ್ 2027 ರ ಏಕದಿನ ವಿಶ್ವಕಪ್ ಎತ್ತಿಹಿಡಿಯುವುದು. ಅದೂ ಅಲ್ದೇ ಇಂಗ್ಲೆಂಡ್ ನಲ್ಲೇ ಕಂಪ್ಲೀಟ್ ಆಗಿ ಸೆಟಲ್ ಆಗೋಕೆ ನೋಡ್ತಿದ್ದಾರೆ. ಇಂಗ್ಲೆಂಡ್ನಲ್ಲೇ ಸೆಟಲ್ ಆಗ್ತಾರೆ ಅನ್ನೋ ಟಾಕ್ ಇದೆ. ಮಕ್ಕಳ ಭವಿಷ್ಯದ ದೃಷ್ಟಿ ಹಾಗೇ ನಾರ್ಮಲ್ ಲೈಫ್ ಸ್ಟೈಲ್ಗಾಗಿ ಅಲ್ಲಿಯೇ ವಾಸವಾಗ್ತಾರೆ ಅನ್ನೋ ಮಾತುಗಳಿವೆ. ಆಗ್ಗಾಗ್ಗೆ ಈ ಜೋಡಿ ಲಂಡನ್ನ ಸ್ಟ್ರೀಟ್ಗಳಲ್ಲಿ ಸುತ್ತಾಡೋ ಫೋಟೋಗಳನ್ನ ನೀವೂ ಕೂಡ ನೋಡಿರಬಹುದು. ಹೀಗಾಗಿ ಬಹುಶಃ ಏಕದಿನ ಮಾದರಿಯಿಂದ ಹೊರ ಬಂದ್ರೆ ಐಪಿಎಲ್ನಿಂದಲೂ ದೂರ ಸರಿಯೋ ಸಾಧ್ಯತೆಗಳಿವೆ.
18 ವರ್ಷಗಳ ಜರ್ನಿ.. ಕೊನೆಗೂ ಕಪ್ ಗೆ ಮುತ್ತಿಟ್ಟ ಕೊಹ್ಲಿ!
ಕಳೆದ 18 ವರ್ಷಗಳಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿಯುತ್ತಿರೋ ವಿರಾಟ್ ಕೊಹ್ಲಿ ತಂಡದ ಐಕಾನಿಕ್ ಪ್ಲೇಯರ್ ಆಗಿದ್ದಾರೆ. ಬರೀ ಆರ್ಸಿಬಿ ಅಷ್ಟೇ ಅಲ್ಲದೆ ಬೇರೆಲ್ಲಾ ಫ್ರಾಂಚೈಸಿಗಳಲ್ಲೂ ಕೊಹ್ಲಿ ಫ್ಯಾನ್ಸ್ ಇದ್ದಾರೆ. 2008 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆ ತಮ್ಮ ಐಪಿಎಲ್ ಕರಿಯರ್ ಶುರು ಮಾಡಿದ ಕೊಹ್ಲಿ ಒಂದೇ ತಂಡದ ಪರ ಸತತ 18 ಸೀಸನ್ಗಳನ್ನ ಆಡಿದ ಏಕೈಕ ಆಟಗಾರ ಆಗಿದ್ದಾರೆ. 2013ರಿಂದ 2023ರವರೆಗೆ ನಾಯಕನಾಗಿಯೂ ಮುನ್ನಡೆಸಿದ್ದಾರೆ. 2025ರ ಐಪಿಎಲ್ ನಲ್ಲಿ ಕೊನೆಗೆ ಐಪಿಎಲ್ ಕಪ್ ಗೆದ್ದು ಕಣ್ಣೀರಿನ ಮೂಲಕ ಸಂಭ್ರಮಿಸಿದ್ರು. 36 ವರ್ಷದ ವಿರಾಟ್ ಐಪಿಎಲ್ನಲ್ಲಿ ಬರೆದಿರೋ ಅಪರೂಪದ ದಾಖಲೆಗಳನ್ನ ಬಗ್ಗೆಯೂ ಹೇಳ್ತೇನೆ ನೋಡಿ.
ಐಪಿಎಲ್ ಸುಲ್ತಾನ ಕೊಹ್ಲಿ
ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ಗಳು – 8661
ಆವೃತ್ತಿಯೊಂದರಲ್ಲಿ ಹೈಯೆಸ್ಟ್ ಸ್ಕೋರ್ – 973
ಐಪಿಎಲ್ ನಲ್ಲಿ ಅತೀ ಹೆಚ್ಚು ಶತಕ – 8
ಅತಿ ಹೆಚ್ಚು ಅರ್ಧಶತಕಗಳು – 63
ಲೀಗ್ ನಲ್ಲಿ ಅತಿ ಹೆಚ್ಚು ಬೌಂಡರಿಗಳು – 771
ಅಷ್ಟೇ ಅಲ್ದೇ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ಗೆ ಮತ್ತೊಂದು ಹೆಸರೇ ವಿರಾಟ್ ಕೊಹ್ಲಿ. 2015 ರಿಂದ ಬಹುತೇಕ ಎಲ್ಲಾ ಸೀಸನ್ಗಳಲ್ಲೂ 400+ ರನ್ಸ್ ಕಲೆ ಹಾಕಿದ್ದಾರೆ. ಬಟ್ 2017 ಮತ್ತು 2022ರ ಆವೃತ್ತಿಗಳನ್ನ ಹೊರತುಪಡಿಸಿ. 2025 ರಲ್ಲಿಯೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ವಿರಾಟ್ 50 ಕ್ಕಿಂತ ಹೆಚ್ಚು ಸರಾಸರಿ ಮತ್ತು 144.71 ಸ್ಟ್ರೈಕ್ ರೇಟ್‌ನಲ್ಲಿ 657 ರನ್ ಗಳಿಸಿದರು. ರನ್ ಚೇಸಿಂಗ್ ಅಂತಾ ಬಂದ್ರೆ ಕೊಹ್ಲಿ ಸರಿಸಾಟಿ ಯಾರೂ ಇಲ್ಲ. ಹೀಗಾಗಿ ವಿರಾಟ್ಗೆ ಐಪಿಎಲ್ ಬೇಡ ಎನ್ನುವಂತಾಗಬಹುದು.
ಕೊಹ್ಲಿ ಸ್ಥಾನ ತುಂಬೋದು ಕಷ್ಟ!
ಆರ್ ಸಿಬಿಗೆ ಮೈದಾನದಲ್ಲಿ ಮತ್ತು ಆರ್ಥಿಕವಾಗಿಯೂ ದೊಡ್ಡ ಹೊಡೆತ
ಕೊಹ್ಲಿ ಹೆಸರಿನಲ್ಲಿ ಟಿಕೆಟ್‌ಗಳು ಮತ್ತು ಜೆರ್ಸಿಗಳು ಲಕ್ಷಗಟ್ಟಲೆ ಮಾರಾಟ
ಕೊಹ್ಲಿ ಪಂದ್ಯದಲ್ಲಿ ಇದ್ದಷ್ಟೂ ಪ್ರಾಯೋಜಕರು ಫ್ರಾಂಚೈಸಿಯತ್ತ ಆಕರ್ಷಿತ
ಎಂಎಸ್ ಧೋನಿಯಂತೆಯೇ ತಂಡಕ್ಕೆ ಅತಿ ಹೆಚ್ಚು ಅಭಿಮಾನಿಗಳ ಬಳಗ
ನಾಯಕನಲ್ಲದಿದ್ದರೂ ಸಹ, ಕೊಹ್ಲಿ ಒಬ್ಬ ಫೀಲ್ಡ್ ಲೀಡರ್, ಆಟಗಾರರಿಗೆ ಸ್ಫೂರ್ತಿ
ವಿರಾಟ್ ಗೆ 21 ಕೋಟಿ ರೂಪಾಯಿ ಸಂಭಾವನೆ ನೀಡಿ ಫ್ರಾಂಚೈಸಿ ಉಳಿಸಿಕೊಂಡಿದೆ
ಬಟ್ ಕೊಹ್ಲಿಯಷ್ಟು ಸ್ಥಿರತೆ, ಇನ್ನಿಂಗ್ಸ್ ಬಿಲ್ಡ್ ಮಾಡೋ ಎಬಿಲಿಟಿ ಇರುತ್ತಾ?
ವಿರಾಟ್ ಕೊಹ್ಲಿ ಟಾಪ್ ಆರ್ಡರ್ನಲ್ಲಿ ಸ್ಥಿರವಾಗಿ ಸ್ಕೋರ್ ಮಾಡ್ತಾರೆ
ವಿರಾಟ್ ಕೊಹ್ಲಿ ಐಪಿಎಲ್ ನಿಂದ ಕೇವಲ ಸಂಭಾವನೆ ಮೂಲಕವೇ ₹200 ಕೋಟಿಗೂ ಹೆಚ್ಚು ಗಳಿಸಿದ್ದಾರೆ, ಜಾಹೀರಾತುಗಳನ್ನು ಹೊರತುಪಡಿಸಿ. ಹಾಗಂತ ಹಣದಾಸೆಗೆ ಬಿದ್ದು ಬೇರೆ ಫ್ರಾಂಚೈಸಿಗಳನ್ನ ಸೇರಿದ್ರೆ ಹಣದ ಹೊಳೆಯೇ ಹರಿಯುತ್ತಿತ್ತು. ಬಟ್ ನಿಷ್ಠಾವಂತನಾಗಿದ್ದಾರೆ. ಬಟ್ ಕೊಹ್ಲಿ ವ್ಯಕ್ತಿತ್ವವನ್ನ ನೋಡಿದ್ರೆ ಅವಶ್ಯಕತೆ ಇದ್ದಾಗಲೇ ಹೊರನಡೆದುಬಿಡಬೇಕು ಅನ್ನೋ ಪಾಲಿಸಿ ಅವ್ರದ್ದು.

ನೋಡಿರಿ

