RCB ಕೈಯಲ್ಲಿ PBKS ಪ್ಲೇಆಫ್ಸ್ ಭವಿಷ್ಯ – 49ರ ಗೇಲಿಗೆ ಗೇಟ್ ಪಾಸ್ ಕೊಡ್ತಾರಾ?
ಟಾಪ್-2ಗೆ ಲಗ್ಗೆ ಇಡುತ್ತಾ ಬೆಂಗಳೂರು?

ಬೆಂಗಳೂರು ವರ್ಸಸ್ ಪಂಜಾಬ್ ನಡುವಿನ ಹೈವೋಲ್ಟೇಜ್ ಮ್ಯಾಚ್ಗೆ ಕೌಂಟ್ಡೌನ್ ಸ್ಟಾರ್ಟ್ ಆಗಿದೆ. ಧರ್ಮಶಾಲಾದಲ್ಲಿ ನಡೆಯಲಿರೋ ಈ ಪಂದ್ಯ ಪ್ಲೇ ಆಫ್ ರೇಸ್ನಲ್ಲಿ ಬಿಗ್ ಇಂಪ್ಯಾಕ್ಟ್ ಮಾಡಲಿದೆ. ಌಂಡ್ ಇಲ್ಲಿ ಯಾರೇ ಗೆದ್ರೂ ಅಡ್ವಾಂಟೇಜಸ್ ಅಂತೂ ಇದೆ. ಸೋತವ್ರಿಗೆ ಸೆಟ್ಬ್ಯಾಕ್ ಆಗಲಿದೆ. ಆರ್ಸಿಬಿ ಪ್ಲೇ ಆಫ್ಸ್ ಟಿಕೆಟ್ ಕೊಟ್ರೆ ಪಂಜಾಬ್ಗೆ ಪ್ಲೇ ಆಫ್ಸ್ ರೇಸ್ನಲ್ಲಿ ಇರ್ತಾರೋ ಇಲ್ವೋ ಅನ್ನೋದು ಡಿಸೈಡ್ ಆಗುತ್ತೆ.
ಇದನ್ನೂ ಓದಿ : LSG ಏಟಿಗೆ ಹಾದಿ ತಪ್ಪಿದ ಚೆನ್ನೈ – ಆಕಾಶ್ ಚೀಟಿ, ಮಾರ್ಷ್ ಏಟಿಗೆ ಪಲ್ಟಿ
19ನೇ ಸೀಸನ್ ಐಪಿಎಲ್ ಇನ್ನೇನು ಕ್ಲೈಮ್ಯಾಕ್ಸ್ನತ್ತ ಕಾಲಿಡ್ತಿದೆ. ಟಾಪ್ 4 ಟಿಕೆಟ್ ಫೈಟ್ನಲ್ಲಿರೋ ಬೆಂಗಳೂರು ಹಾಗೇ ಪಂಜಾಬ್ ತಂಡಗಳು ಇವತ್ತು ಮುಖಾಮುಖಿ ಆಗಲಿವೆ. ಈ ಸೀಸನ್ನಲ್ಲಿ ಉಭಯ ತಂಡಗಳಿಗೆ ಇದು ಮೊದಲ ಮ್ಯಾಚ್. ಬಟ್ ಲಾಸ್ಟ್ ಸೀಸನ್ನಲ್ಲಿ ಒಟ್ಟು ನಾಲ್ಕು ಸಲ ಮುಖಾಮುಖಿಯಾಗಿದ್ದನ್ನ ಮರೆಯೋಕಾಗಲ್ಲ. 2025ನೇ ಆವೃತ್ತಿಯ ಫೈನಲಿಸ್ಟ್ಗಳಾಗಿ ಬೆಂಗಳೂರು ಚಾಂಪಿಯನ್ಸ್ ಆದ್ರೆ ಪಂಜಾಬ್ ರನ್ನರ್ ಅಪ್ ಆಗಿತ್ತು. ಹೀಗಾಗಿ ಈ ಬ್ಯಾಟಲ್ ಕೂಡ ಸಿಕ್ಕಾಪಟ್ಟೆ ಮಜಾ ಇರುತ್ತೆ. ಹಾಗೇ ಪಂಜಾಬ್ ತಂಡಕ್ಕೆ ಇದು ಅಳಿವು ಉಳಿವಿನ ಪ್ರಶ್ನೆಯಾಗಿದೆ.
ಪಂಜಾಬ್ ವಿರುದ್ಧ ಗೆದ್ದು ಪ್ಲೇ ಆಫ್ಸ್ ಟಿಕೆಟ್ ಪಡೆಯುತ್ತಾ ಬೆಂಗಳೂರು?
ಪಂಜಾಬ್ ಮತ್ತು ಬೆಂಗಳೂರು ನಡುವಿನ ಈ ಪಂದ್ಯ ರಣರೋಚಕವಾಗಿ ಇರೋದ್ರಲ್ಲಿ ಅನುಮಾನವೇ ಇಲ್ಲ. ಯಾಕಂದ್ರೆ ಇಬ್ಬರೂ ಕೂಡ ಕಳೆದ ಸೀಸನ್ನ ಫೈನಲಿಸ್ಟ್. ಈ ಸೀಸನ್ನ ಟಫ್ ಕಾಂಪಿಟೇಟರ್ಸ್. ವಿಷ್ಯ ಅಂದ್ರೆ ಲಾಸ್ಟ್ ಸೀಸನ್ನಲ್ಲಿ ಆರ್ಸಿಬಿ ಪಂಜಾಬ್ ವಿರುದ್ಧ ಕಂಪ್ಲೀಟ್ ಡಾಮಿನೇಟ್ ಮಾಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಮೊದಲ ಬಾರಿಗೆ ಮುಖಾಮುಖಿ ಆಗಿದ್ರು. ಆ ಮ್ಯಾಚಲ್ಲಿ ಮಳೆ ಬಂದು 14 ಓವರ್ಗಳಿಗೆ ಪಂದ್ಯ ಸೀಮಿತವಾಗಿತ್ತು. ಬ್ಯಾಡ್ ಲಕ್ ಫಸ್ಟ್ ಬ್ಯಾಟ್ ಮಾಡಿದ್ದ ಆರ್ಸಿಬಿ 95 ರನ್ಸ್ ಅಷ್ಟೇ ಗಳಿಸಿದ್ದು. ಹೀಗಾಗಿ ಪಂಜಾಬ್ ಆ ಪಂದ್ಯವನ್ನ ಗೆದ್ದಿತ್ತು. ಆದ್ರೆ ನೆಕ್ಸ್ಟ್ ರಿವೇಂಜ್ ಬ್ಯಾಟಲ್ನಲ್ಲಿ ಗೆದ್ದು ಆರ್ಸಿಬಿ ಸೇಡು ತೀರಿಸಿಕೊಂಡಿತ್ತು. ಅದಾದ ಬಳಿಕ ಎರಡೂ ತಂಡಗಳು ಟಾಪ್-1 ಮತ್ತು ಟಾಪ್-2ನಲ್ಲಿ ಲೀಗ್ ಹಂತ ಮುಗಿಸಿ ಕ್ವಾಲಿಫೈಯರ್ 1ನಲ್ಲಿ ಮುಖಾಮುಖಿ ಆಗಿದ್ರು. ಇಂಟ್ರೆಸ್ಟಿಂಗ್ ಅಂದ್ರೆ ಇಲ್ಲಿಯೂ ಬೆಂಗಳೂರೇ ಗೆದ್ದಿತ್ತು. ನೆಕ್ಸ್ಟ್ ಸೀನ್ ಕಟ್ ಮಾಡಿದ್ರೆ ಇದೇ ಪಂಜಾಬ್ ಮತ್ತೆ ಕ್ವಾಲಿಫೈಯರ್ 2ಗೆದ್ದು ಫೈನಲ್ಗೆ ಲಗ್ಗೆ ಇಟ್ಟಿತ್ತು. ಫೈನಲ್ನಲ್ಲೂ ಕೂಡ ಪಂಜಾಬ್ ತಂಡವನ್ನ 6 ರನ್ಗಳಿಂದ ಸೋಲಿಸಿ ಬೆಂಗಳೂರು ಟ್ರೋಫಿಗೆ ಮುತ್ತಿಟ್ಟಿದ್ರು. ಹೀಗಾಗಿ ಕಳೆದ 4 ಪಂದ್ಯಗಳಲ್ಲಿ ಆರ್ಸಿಬಿ ಮೂರು ಮ್ಯಾಚ್ ಗೆದ್ದು ಮೇಲುಗೈ ಸಾಧಿಸಿರೋದು ಇಲ್ಲಿ ಕ್ಲಿಯರ್ ಆಗಿ ಗೊತ್ತಾಗ್ತಿದೆ.
ಬೆಂಗಳೂರಿಗೆ ಅಡ್ವಾಂಟೇಜ್!
ಮುಂಬೈ ಹಾಗೇ ಕೊಲ್ಕತ್ತಾ ವಿರುದ್ಧ ಗೆದ್ದು ಬರ್ತಿರೋ ಬೆಂಗಳೂರು
2026ರ ಸೀಸನ್ ನಲ್ಲಿ ಕನ್ಸಿಸ್ಟೆನ್ಸಿ ಪ್ರದರ್ಶನ, ಪ್ಲೇ ಆಫ್ಸ್ ಗೆ ಹತ್ತಿರ
ಬ್ಯಾಟಿಂಗ್ ಹಾಗೂ ಬೌಲಿಂಗ್ ಬ್ಯಾಲೆನ್ಸ್ ಇದ್ದು ಟಫ್ ಫೈಟ್
ಕಳೆದ ನಾಲ್ಕು ಪಂದ್ಯಗಳಲ್ಲಿ ಪಂಜಾಬ್ ವಿರುದ್ಧ 3ರಲ್ಲಿ ಗೆಲುವು
ಫಸ್ಟ್ ಆಫ್ಸ್ ನಲ್ಲಿ ಇದ್ದ ಸಕ್ಸಸ್ ಪಂಜಾಬ್ ಗೆ ಈಗ ಇಲ್ಲ
ಸೆಕೆಂಡ್ ಆಫ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಸ್ವಲ್ಪ ಹಿನ್ನಡೆ
ಸತತ 6 ಪಂದ್ಯ ಗೆದ್ದಿದ್ದ ಪಂಜಾಬ್ ಸತತ 5 ಪಂದ್ಯಗಳಲ್ಲಿ ಸೋಲು
ವಿನ್ನಿಂಗ್ ಟ್ರ್ಯಾಕ್ ನಲ್ಲಿ ಸ್ವಲ್ಪ ಹಿನ್ನಡೆಯಿಂದ ಪಂಜಾಬ್ ಪ್ರೆಶರ್
ಬೆಂಗಳೂರು ವರ್ಸಸ್ ಪಂಜಾಬ್ ನಡುವಿನ ಮ್ಯಾಚ್ ಅಂದಾಗ ಬೆಂಗಳೂರೇ ಗೆಲ್ಲುವಂಥ ಫೇವರೆಟ್ ಟೀಂ ಆಗಿ ಕಾಣ್ತಿದೆ. ಪಂಜಾಬ್ ತಂಡಕ್ಕೆ ಇದು ಹೋಂ ಗೇಮ್ ಆಗಿರೋದ್ರಿಂದ ಅವ್ರೂ ಕೂಡ ಮಸ್ಟ್ ಌಂಡ್ ಶುಡ್ ಗೆಲ್ಲಲೇಬೇಕು ಅನ್ನೋ ಪ್ರೆಶರ್ನಲ್ಲಿ ಇರ್ತಾರೆ. ಯಾಕಂದ್ರೆ ಪ್ಲೇ ಆಫ್ಸ್ ರೇಸ್ನಲ್ಲಿ ಇರ್ತಾರೋ ಇಲ್ವೋ ಅನ್ನೋದು ಇವತ್ತಿನ ಪಂದ್ಯದಲ್ಲಿ ಗೊತ್ತಾಗುತ್ತೆ. ಸೋ ಶ್ರೇಯಸ್ ಪಡೆಯ ಮುಂದಿನ ಜರ್ನಿ ಆರ್ಸಿಬಿ ಕೈಯಲ್ಲಿದೆ.

ನೋಡಿರಿ

