1 ಓವರ್.. 18 ರನ್.. ಮ್ಯಾಜಿಕ್.. ಕ್ಲರ್ಕ್ ಕಿಚ್ಚಿಗೆ ನೆಲ ಕಚ್ಚಿದ MI! – WPL ಗೆಲುವಿನ ಬೆಲ್ ಬಾರಿಸಿದ RCB

ವಾಟ್ ಎ ವಿಕ್ಟರಿ ಫಾರ್ ಆರ್ ಸಿಬಿ.. ಲಾಸ್ಟ್ ಬಾಲ್ವರೆಗೂ ಅವ್ರ್ ಗೆಲ್ತಾರಾ ಇಲ್ಲ ಇವ್ರ್ ಗೆಲ್ತಾರಾ ಅನ್ನೋ ಕ್ಯೂರಿಯಸಿಟಿ. ಕೊನೇ ಓವರ್ ಅಂತೂ ಗ್ಯಾಲರಿಯಲ್ಲಿ ಯಾರೂ ಕೂರೋಕೂ ಆಗಿಲ್ಲ. ಬಟ್ ಫೈನಲ್ಲಿ ನಮ್ಮ ಆರ್ಸಿಬಿಯ ಸಿಂಹಿಣಿಯರೇ ಗೆದ್ದು 2026 ವುಮೆನ್ಸ್ ಪ್ರೀಮಿಯರ್ ಶುಭಾರಂಭ ಮಾಡಿದ್ದಾರೆ.
ಇದನ್ನೂ ಓದಿ: ಚಾರ್ಮಾಡಿ ಘಾಟ್‌ನಲ್ಲಿ ಭೋಜನ ವಿರಾಮ ತೆಗೆದುಕೊಂಡ ಗಜರಾಜ! – ಒಂಟಿ ಸಲಗ ಕಿತಾಪತಿಗೆ ವಾಹನ ಸವಾರರು ಸುಸ್ತೋ ಸುಸ್ತು!
ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಣರೋಚಕ ರೀತಿಯಲ್ಲಿ ಗೆದ್ದು ಬೀಗಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಬಗ್ಗುಬಡಿದು ಟೂರ್ನಿಗೆ ಭರ್ಜರಿಯಾಗಿ ಶುರು ಮಾಡಿದೆ. ಟಾಸ್ ಗೆದ್ದ ಆರ್ಸಿಬಿಗೆ ಆರಂಭದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡ್ರಲ್ಲೂ ಕಂಪ್ಲೀಟ್ ಒನ್ಸೈಡೆಡ್ ಆಗಿ ಪರ್ಫಾಮ್ ಮಾಡಿತ್ತು. ಬಟ್ ಆ ನಂತ್ರದಲ್ಲಿ ಎರಡೂ ಕಡೆಗೂ ಅಂದುಕೊಂಡಂತ ಕಂಟ್ರೋಲ್ ಸಿಗ್ಲಿಲ್ಲ. ಆದ್ರೆ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡ್ರಲ್ಲೂ ಬೆಂಗಳೂರನ್ನ ಗೆಲ್ಲಿಸಿದ್ದೇ ನಾಡೆನ್ ಡಿ ಕ್ಲರ್ಕ್.
ಡೆಬ್ಯೂನಲ್ಲೇ ಬೆಲ್ ಬೆಂಕಿ ಬೌಲಿಂಗ್.. ಪವರ್ ಪ್ಲೇ ಬ್ಯಾಟಿಂಗ್ ಸೂಪರ್!
ಟಾಸ್ ಗೆದ್ದು ಬೌಲಿಂಗ್ ಚೂಸ್ ಮಾಡಿಕೊಂಡ ಬೆಂಗಳೂರು ಪರ ಇಂಗ್ಲಿಷ್ ಸುಂದರಿ ಲಾರೆನ್ ಬೆಲ್ ಫಸ್ಟ್ ಓವರ್ನಲ್ಲೇ ಮುಂಬೈಗೆ ಶಾಕ್ ಕೊಟ್ರು. ಒಂದೇ ಒಂದು ರನ್ಸ್ ಕೊಡದೆ ಮೇಡನ್ ಓವರ್ ಮಾಡಿದ್ರು. ಹಾಗೇ ಪವರ್ ಪ್ಲೇನಲ್ಲಿ ಕಂಪ್ಲೀಟ್ ಕಂಟ್ರೋಲ್ ಮಾಡಿದ ಆರ್ಸಿಬಿ 34 ರನ್ಸ್ ಅಷ್ಟೇ ಕೊಟ್ಟಿದ್ರು. 1 ವಿಕೆಟ್ ಕೂಡ ಬಿದ್ದಿತ್ತು. ಆ ನಂತ್ರ ನಿಕೋಲಾ ಕ್ಯಾರಿ ಮತ್ತು ಸಜೀವನ್ ಸಜನ ಸ್ವಲ್ಪ ಫೈಟ್ ಕೊಟ್ರು. ಕ್ಯಾರಿ 40 ರನ್ ಹಾಗೇ ಸಜನ 25 ರನ್ ಸ್ಕೋರ್ ಮಾಡಿದ್ರು. 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಮುಂಬೈ 154 ರನ್ಗಳಿನ್ನ ಕಲೆ ಹಾಕಿತು. 155 ರನ್ಗಳ ಟಾಗೆಟ್ ಬೆನ್ನತ್ತಿದ ಆರ್ಸಿಬಿಗೆ ಓಪನಿಂಗ್ ಭರ್ಜರಿಯಾಗಿತ್ತು. ಸ್ಮೃತಿ ಮಂದಾನ ಹಾಗೇ ಗ್ರೇಸ್ ಹ್ಯಾರಿಸ್ ಸ್ಫೋಟಕ ಬ್ಯಾಟಿಂಗ್ ಮೂಲಕ 3 ಓವರ್ಗಳಲ್ಲೇ 40 ರನ್ ಬಾರಿಸಿದ್ರು. ಬಟ್ ಯಾವಾಗ 18 ರನ್ ಗಳಿಸಿ ಸ್ಮೃತಿ ವಿಕೆಟ್ ಒಪ್ಪಿಸಿದ್ರೆ ಹ್ಯಾರಿಸ್ 25 ರನ್ಗಳಿಗೆ ಔಟಾದ್ರು. ಆ ನಂತ್ರ ಹೇಮಲತಾ, ರಿಚಾ ಘೋಷ್, ರಾಧಾ ಯಾದವ್ ಸಿಂಗಲ್ ಡಿಜಿಟ್ಗೆ ಪೆವಿಲಿಯನ್ ಸೇರ್ಕೊಂಡ್ರು. ಇಂಥಾ ಟೈಮಲ್ಲಿ ಒನ್ ಮ್ಯಾನ್ ಶೋ ಥರ ನಿಂತು ಆರ್ಸಿಬಿಯನ್ನ ಕಾಪಾಡಿದ್ದೇ ಸೌತ್ ಆಫ್ರಿಕಾ ಆಟಗಾರ್ತಿ ನಾಡಿನ್ ಡಿ ಕ್ಲರ್ಕ್. ಅರುಂಧತಿ ರೆಡ್ಡಿ ಜೊತೆ ಪಾರ್ಟ್ನರ್ ಶಿಪ್ ವರ್ಕ್ ಆಗುವಾಗ್ಲೇ ಅರುಂಧತಿ 20 ರನ್ ಗಳಿಸಿ ಪೆವಿಲಿಯನ್ ಸೇರ್ಕೊಂಡ್ರು. ಇನ್ನು ಶ್ರೇಯಾಂಕ ಪಾಟೀಲ್ ಒಂದು ರನ್ಗೆ ಬೌಲ್ಡ್ ಆದ್ರು. ನೆಕ್ಸ್ಟ್ ಪ್ರೇಮಾ ರಾವತ್ ಕಡೆಯಿಂದಲೂ ಸಪೋರ್ಟ್ ಸಿಕ್ತು. ಕೊನೇ 2 ಓವರ್ಗಳಲ್ಲಿ ಆರ್ಸಿಬಿಗೆ 29 ರನ್ಸ್ ಬೇಕಿತ್ತು. 19ನೇ ಓವರ್‌ನಲ್ಲಿ ಕ್ಲರ್ಕ್ಗೆ ಅದೃಷ್ಟ ಕೈ ಹಿಡಿದಿತ್ತು. ಒಂದು ಕ್ಯಾಚ್ ಮಿಸ್ ಆಗುತ್ತೆ. ಌಂಡ್ ರನ್ಔಟ್ ಕೂಡ ತಪ್ಪಿಸಿಕೊಳ್ತಾರೆ. ಮುಂಬೈ ವಿಕೆಟ್ ಕೀಪರ್ ಕಮಲಿನಿ ಬಾಲ್ ಬಿಟ್ಮೇಲೆ ಸ್ಟಂಮ್ಸ್ ಟಚ್ ಮಾಡಿದ್ರು. ಸೋ 2 ಜೀವದಾನ ಸಿಗ್ತು. 19ನೇ ಓವರ್‌ನಲ್ಲಿ 11 ರನ್ಗಳು ಬಂದವು. ಇನ್ನು ಕೊನೇ ಓವರ್‌ನಲ್ಲಿ 18 ರನ್ಸ್ ಬೇಕಿತ್ತು. ಸ್ಟ್ರೈಕ್ನಲ್ಲಿದ್ದ ಕ್ಲರ್ಕ್ ಫಸ್ಟ್ 2 ಬಾಲ್ ಡಾಟ್ ಮಾಡಿದ್ರೂ ನೆಕ್ಸ್ಟ್ 2 ಸಿಕ್ಸ್, 2 ಫೋರ್ ಬಾರಿಸಿ ಆರ್ಸಿಬಿಗೆ ಮೊದಲ ವಿಕ್ಟರಿ ತಂದುಕೊಂಡ್ರು. ಅನ್ಬಿಲೀವಬಲ್ ಎನ್ನುವಂತೆ ಆರ್ಸಿಬಿ ವಿನ್ ಆಗಿತ್ತು.
ಬ್ಯಾಟ್ ಮತ್ತು ಬಾಲ್ ಎರಡ್ರಲ್ಲೂ ಮಿಂಚಿದ ಕ್ಲರ್ಕ್!
ಮುಂಬೈ ವಿರುದ್ಧದ ಆರ್ಸಿಬಿ ಗೆಲುವಿನ ಕಂಪ್ಲೀಟ್ ಕ್ರೆಡಿಟ್ ಡಿ ಕ್ಲರ್ಕ್ಗೇ ಸಲ್ಲಬೇಕು. ಯಾಕಂದ್ರೆ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡ್ರಲ್ಲೂ ಅವ್ರ ಪಾತ್ರ ದೊಡ್ಡದಿದೆ. ಈ ಪಂದ್ಯದಲ್ಲಿ 4 ಓವರ್ ಬೌಲ್ ಮಾಡಿದ್ದ ನಡಿನ್ ಡಿ ಕ್ಲರ್ಕ್ ಕೇವಲ 26 ರನ್ ನೀಡಿ 4 ವಿಕೆಟ್ ಪಡೆದಿದ್ದರು. ಈ ಮೂಲಕ ಮುಂಬೈ ಇಂಡಿಯನ್ಸ್ ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಇವ್ರ ಪಾತ್ರವೂ ದೊಡ್ಡದಿತ್ತು. ಇನ್ನು ಬ್ಯಾಟಿಂಗ್ನಲ್ಲೂ ಏಕಾಂಗಿಯಾಗಿ ನಿಂತು ಹೋರಾಡಿದ್ರು. 44 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 7 ಫೋರ್ ಗಳೊಂದಿಗೆ ಅಜೇಯ 63 ರನ್ ಬಾರಿಸಿದರು. ಅದರಲ್ಲೂ ಕೊನೆಯ ಓವರ್‌ನಲ್ಲಿ 2 ಸಿಕ್ಸ್ ಹಾಗೂ 2 ಫೋರ್ ಬಾರಿಸುವ ಮೂಲಕ RCB ತಂಡಕ್ಕೆ 3 ವಿಕೆಟ್‌ಗಳ ರೋಚಕ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ತಂಡವೊಂದರ ಪರ ಪಾದಾರ್ಪಣೆ ಪಂದ್ಯದಲ್ಲೇ ಅರ್ಧಶತಕ ಹಾಗೂ 4 ವಿಕೆಟ್ ಕಬಳಿಸಿದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಈ ಮೂಲಕ ಆರ್ ಸಿಬಿ ಪರ ಕಣಕ್ಕಿಳಿದ ಚೊಚ್ಚಲ ಪಂದ್ಯದಲ್ಲೇ ನಡಿನ್ ಭರ್ಜರಿ ದಾಖಲೆ ಬರೆದಿದ್ದಾರೆ.
ಚೊಚ್ಚಲ ಪಂದ್ಯದಲ್ಲೇ ಲಾರೆನ್ ಬೆಲ್ ಬಿರುಗಾಳಿ!
ಇನ್ನು ಆರ್ಸಿಬಿ ಪರ ಚೊಚ್ಚಲ ಪಂದ್ಯನ್ನಾಡಿದ ಲಾರೆನ್ ಬೆಲ್ ಅಭಿಮಾನಿಗಳ ಫೇವರೆಟ್ ಆಗಿದ್ದಾರೆ. ಮೊದಲ ಓವರ್ ಮೇಡನ್. 2ನೇ ಓವರ್‌ನಲ್ಲಿ ನೀಡಿದ್ದು ಕೇವಲ ಒಂದು ರನ್ ಮಾತ್ರ. ಮೂರನೇ ಓವರ್‌ನಲ್ಲಿ 6 ರನ್ ನೀಡಿದ್ದರು. ಹಾಗೆಯೇ ಕೊನೆಯ ಓವರ್‌ನಲ್ಲಿ ಕೇವಲ 7 ರನ್ ಮಾತ್ರ ಬಿಟ್ಟು ಕೊಟ್ಟಿದ್ದರು. ಈ ಮೂಲಕ 4 ಓವರ್ಗಳಲ್ಲಿ ಕೇವಲ 14 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಇಂಟ್ರೆಸ್ಟಿಂಗ್ ಅಂದ್ರೆ ಅವ್ರು ಎಸೆದ 24 ಎಸೆತಗಳಲ್ಲಿ 19 ಎಸೆತಗಳನ್ನು ಡಾಟ್ ಮಾಡಿದ್ದರು. ಅಂದ್ರೆ ಯಾವುದೇ ರನ್ ನೀಡಿರಲಿಲ್ಲ. ಈ ಮೂಲಕ ಆರ್ಸಿಬಿ ಪರ ಒಂದು ಪಂದ್ಯದಲ್ಲಿ ಅತ್ಯಧಿಕ ಡಾಟ್ ಬಾಲ್ ಎಸೆದ ಬೌಲರ್ ಎನಿಸಿಕೊಂಡಿದ್ದಾರೆ. ಒಟ್ನಲ್ಲಿ ಆರ್ಸಿಬಿ ಫಸ್ಟ್ ಮ್ಯಾಚ್ ಫೆಂಟಾಸ್ಟಿಕ್ ಆಗಿ ಗೆದ್ದಿದೆ. ಹಾಲಿ ಚಾಂಪಿಯನ್ಸ್ಗೆ ಸೋಲಿನ ಆಘಾತ ನೀಡಿದೆ. ಇನ್ನು ನಾಳೆ ಯುಪಿ ವಾರಿಯರ್ಸ್ ವಿರುದ್ಧ ಎರಡನೇ ಪಂದ್ಯ ಆಡಲಿದೆ.

ನೋಡಿರಿ

