17 ಸೀಸನ್ ಗಳ ರಿಸಲ್ಟ್ ನಲ್ಲಿ ರಹಸ್ಯ.. RCBಗೆ ಕಪ್ ಕೊಡಿಸುತ್ತಾ ರೆಕಾರ್ಡ್ಸ್? – ಗಿಲ್ Vs ಪಾಂಡ್ಯ.. ಯಾರು ಎಲಿಮಿನೇಟ್?

17 ಸೀಸನ್ ಗಳ ರಿಸಲ್ಟ್ ನಲ್ಲಿ ರಹಸ್ಯ.. RCBಗೆ ಕಪ್ ಕೊಡಿಸುತ್ತಾ ರೆಕಾರ್ಡ್ಸ್? – ಗಿಲ್ Vs ಪಾಂಡ್ಯ.. ಯಾರು ಎಲಿಮಿನೇಟ್?

ಪಂಜಾಬ್ ತಂಡವನ್ನ ಮಣಿಸಿ ಫಿನಾಲೆಗೆ ಲಗ್ಗೆ ಇಟ್ಟಿರೋ ಆರ್​ಸಿಬಿಗೆ ಟ್ರೋಫಿ ಎತ್ತಿ ಹಿಡಿಯೋಕೆ ಇನ್ನೊಂದೇ ಹೆಜ್ಜೆ ಬಾಕಿ. ಜೂನ್ 3ರಂದು ನಡೆಯಲಿರೋ ಹೈವೋಲ್ಟೇಜ್ ಫೈಟ್​​ನಲ್ಲಿ ಗೆದ್ರೆ ಈ ಸಲ ಕಪ್ ನಮ್ದು. ಅಹಮದಾಬಾದ್​ನ ನರೇಂದ್ರಮೋದಿ ಸ್ಟೇಡಿಯಮ್​ನಲ್ಲಿ ನಡೆಯಲಿರೋ ಈ ರಣರೋಚಕ ಪಂದ್ಯದಲ್ಲಿ ಬೆಂಗಳೂರು ತಂಡವೇ ಚಾಂಪಿಯನ್ ಪಟ್ಟಕ್ಕೇರೋ ಫೇವರೆಟ್ ಟೀಂ ಎನಿಸಿಕೊಳ್ತಿದೆ. ಹಾಗೇ ಇವತ್ತಿನ ಎಲಿಮಿನೇಟರ್ ಮ್ಯಾಚ್ ಕೂಡ ಅಷ್ಟೇ ಇಂಟ್ರೆಸ್ಟಿಂಗ್ ಆಗಿದೆ.

ಇದನ್ನೂ ಓದಿ: ಫೈನಲ್ ನಲ್ಲಿ ಆರ್ ಸಿಬಿ ಎದುರಾಳಿ ಯಾರು? – 18ರ ನಂಟು.. ಈ ಸಲ ಕಪ್ ನಮ್ದು?

ಲಕ್ನೋ ವಿರುದ್ಧದ ಮ್ಯಾಚಲ್ಲಿ ನಮ್ಮ ಬ್ಯಾಟಿಂಗ್ ಸ್ಟ್ರೆಂಥ್ ಹೇಗಿದೆ ಅನ್ನೋದನ್ನ ತೋರಿಸಿದ್ದ ಆರ್​ಸಿಬಿ ಬಾಯ್ಸ್ ಪಂಜಾಬ್ ವಿರುದ್ಧದ ಫೈಟಲ್ಲಿ ಬೌಲಿಂಗ್ ಬಲವನ್ನ ಬಿಚ್ಚಿಟ್ಟಿದ್ರು. 9 ವರ್ಷಗಳ ಬಳಿಕ ಫೈನಲ್​ ಪ್ರವೇಶ ಪಡೆದು ಕೋಟ್ಯಂತರ ಅಭಿಮಾನಿಗಳ ಕನಸನ್ನ ನನಸು ಮಾಡೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಅದ್ರಲ್ಲೂ ಈ ಹಿಂದಿನ ಸೀಸನ್​ಗಳ ಒಂದಷ್ಟು ಅಂಕಿ ಅಂಶಗಳು ಆರ್​ಸಿಬಿ ಪರವೇ ಇರೋದು ಮತ್ತಷ್ಟು ಕಾನ್ಫಿಡೆನ್ಸ್ ಜಾಸ್ತಿ ಮಾಡ್ತಿದೆ. ಅಲ್ದೇ ಫೈನಲ್ ಪಂದ್ಯಕ್ಕೆ ಬ್ರಹ್ರಾಸ್ತ್ರವೇ ರೆಡಿಯಾಗ್ತಿದೆ.

ಫೈನಲ್ ಪಂದ್ಯಕ್ಕೆ ಕಣಕ್ಕಿಳೀತಾರಾ ಟಿಮ್ ಡೇವಿಡ್?

ಹೈದ್ರಾಬಾದ್ ವಿರುದ್ಧದ ಮ್ಯಾಚಲ್ಲಿ ಗಾಯಗೊಂಡಿದ್ದ ಟಿಮ್ ಡೇವಿಡ್ ಆ ಬಳಿಕ ಲಕ್ನೋ ಮತ್ತು ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಇದೀಗ ಜೂನ್ 3ಕ್ಕೆ ನಡೆಯಲಿರೋ ಫೈನಲ್ ಪಂದ್ಯದಲ್ಲಾದ್ರೂ ಆಡ್ತಾರಾ ಅಥವಾ ಇಲ್ವಾ ಎನ್ನುವಂಥ ಕನ್ಫ್ಯೂಷನ್ಸ್ ಇದೆ. ಬಟ್ ಫ್ರಾಂಚೈಸಿಯಿಂದ ಬಂದಿರೋ ಮೂಲಗಳ ಪ್ರಕಾರ ಟಿಮ್ ಡೇವಿಡ್ ಚೇತರಿಸಿಕೊಂಡಿದ್ದು, ಅಹಮದಾಬಾದ್​ನಲ್ಲಿ ಅಭ್ಯಾಸ ನಡೆಸಲಿದ್ದಾರೆ. ಈ ವೇಳೆ  ಕಾಲಿನಲ್ಲಿ ಯಾವುದೇ ಸಮಸ್ಯೆ ಇಲ್ಲ ಅಂದ್ರೆ ಡೆಫಿನೇಟ್ಲಿ ಫೈನಲ್​ ಪಂದ್ಯಕ್ಕೆ ಎಂಟ್ರಿ ಕೊಡ್ತಾರೆ. ಟಿಮ್ ಡೇವಿಡ್ ಬಂದ್ರೆ ಟೀಂ ಮತ್ತಷ್ಟು ಬಲಿಷ್ಠವಾಗೋದ್ರಲ್ಲಿ ಅನುಮಾನನೇ ಇಲ್ಲ.

ಟ್ರೋಫಿ ಗೆಲ್ಲುವ ಫೇವರೆಟ್ ಟೀಂ ಬೆಂಗಳೂರು!

ಐಪಿಎಲ್ ಇತಿಹಾಸದಲ್ಲೇ ಯಾವುದೇ ತಂಡ 10 ಓವರ್​ಗಳಲ್ಲಿ ಪ್ಲೇಆಫ್ ಪಂದ್ಯ ಮುಗಿಸಿ ಫೈನಲ್​ಗೇರಿದ ಇತಿಹಾಸವೇ ಇಲ್ಲ. ಆದರೆ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ಚರಿತ್ರೆ ಬರೆದು ಫಿನಾಲೆ ಟಿಕೆಟ್ ಗಿಟ್ಟಿಸಿಕೊಂಡಿದೆ. ಅಲ್ದೇ ಬೆಂಗಳೂರು ತಂಡದ ಜರ್ನಿ ಹಾಗೇ ಈ ಹಿಂದಿನ ಚಾಂಪಿಯನ್ ಟೀಮ್​ಗಳ ರೆಕಾರ್ಡ್ಸ್ ನೋಡಿದ್ರೆ ಆರ್​​ಸಿಬಿಯೇ ಟ್ರೋಫಿ ಗೆಲ್ಲುವ ಚಾನ್ಸಸ್ ಜಾಸ್ತಿ ಇದೆ. ಪಾಯಿಂಟ್ಸ್ ಟೇಬಲ್​ನಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ ತಂಡ ಬಹುತೇಕ ಬಾರಿ ಕಪ್ ಗೆದ್ದಿದೆ. ಅಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದ ತಂಡವು ಐಪಿಎಲ್​ನಲ್ಲಿ ಕಪ್ ಗೆಲ್ಲುವ ಸಾಧ್ಯತೆ 57 ರಷ್ಟು. ಅದೇ ಮೊದಲ ಸ್ಥಾನದಲ್ಲಿದ್ದ ತಂಡದ ಚಾನ್ಸ್ ಶೇ.35 ರಷ್ಟು ಮತ್ತು ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡ ತಂಡದ ಚಾನ್ಸ್ ಶೇ. 7 ರಷ್ಟಿದೆ. ಅಂದರೆ ಇಲ್ಲಿ ದ್ವಿತೀಯ ಸ್ಥಾನದಲ್ಲಿದ್ದ ತಂಡಗಳೇ ಹೆಚ್ಚಿನ ಬಾರಿ ಟ್ರೋಫಿ ಗೆದ್ದಿದೆ. ಹಾಗೇ ಐಪಿಎಲ್ ಇತಿಹಾಸದಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದ ತಂಡವು 11 ಬಾರಿ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಈ ಬಾರಿ ಮೊದಲ ಕ್ವಾಲಿಫೈಯರ್ ಪಂದ್ಯ ಗೆದ್ದ ತಂಡ ಆರ್​ಸಿಬಿ. ಕಳೆದ 7 ವರ್ಷಗಳಿಂದ ಮೊದಲ ಕ್ವಾಲಿಫೈಯರ್ ಪಂದ್ಯವನ್ನು ಗೆದ್ದ ತಂಡ ಫೈನಲ್​ನಲ್ಲಿ ಸೋತೇ ಇಲ್ಲ. ಹೀಗಾಗಿ ಈ ಬಾರಿ ಆರ್​ಸಿಬಿ ತಂಡ ಗೆಲ್ಲುವ ಸಾಧ್ಯತೆ ಹೆಚ್ಚಿದೆ.

ಮಾಡು ಇಲ್ಲವೇ ಮಡಿ ಮ್ಯಾಚ್ ನಲ್ಲಿ ಗುಜರಾತ್ & ಮುಂಬೈ!

ಒಂದ್ಕಡೆ ಆರ್​ಸಿಬಿ ಮೊದಲ ಫೈನಲಿಸ್ಟ್ ಆಗಿ ಲಗ್ಗೆ ಇಟ್ಟಿದ್ರೆ ಮತ್ತೊಂದು ಟೀಂ ಯಾವ್ದು ಅನ್ನೋ ಕುತೂಹಲವೂ ಇದೆ. ಪ್ಲೇಆಫ್ಸ್​ನಲ್ಲಿರೋ ಮೂರೂ ತಂಡಗಳಿಗೂ ಅವಕಾಶ ಇದೆ. ಅದ್ರಲ್ಲೂ ಇವತ್ತು ನಡೆಯಲಿರುವ ಎಲಿಮಿನೇಟರ್ ಮ್ಯಾಚ್ ಮೋಸ್ಟ್ ಇಂಪಾರ್ಟೆಂಟ್ ಆಗುತ್ತೆ. ಉಭಯ ತಂಡಗಳೂ ಸೂಪರ್ ಸ್ಟ್ರಾಂಗ್ ಆಗಿವೆ. ಗುಜರಾತ್ ಟೈಟನ್ಸ್‌ ಕಳೆದ ನಾಲ್ಕು ಆವೃತ್ತಿಗಳಲ್ಲಿ ಮೂರನೇ ಬಾರಿ ಪ್ಲೇಆಫ್​ಗೆ ಬಂದಿದೆ. 22ರಲ್ಲಿ ಚಾಂಪಿಯನ್ ಪಟ್ಟಕ್ಕೂ ಏರಿದೆ. ಇನ್ನು ಮುಂಬೈ ಇಂಡಿಯನ್ಸ್‌ ಇದುವರೆಗೂ ಐದು ಬಾರಿ ಚಾಂಪಿಯನ್‌ ಆಗಿದ್ದು ಕಳೆದ ನಾಲ್ಕು ಆವೃತ್ತಿಗಳಲ್ಲಿ ಮೂರರಲ್ಲಿ ಪ್ಲೇಆಫ್‌ ಪ್ರವೇಶಿಸಿದೆ. ಟೈಟನ್ಸ್‌ ಕ್ಯಾಪ್ಟನ್ ಶುಭ್​ಮನ್‌ ಗಿಲ್‌ ಮತ್ತು ಮುಂಬೈ ನಾಯಕ ಹಾರ್ದಿಕ್‌ ಪಾಂಡ್ಯ ಇಬ್ಬರಿಗೂ ತಮ್ಮ ಸಾಮರ್ಥ್ಯವನ್ನ ಪ್ರೂವ್ ಮಾಡ್ಬೇಕಿದೆ. ಸೋ ಈ ಪಂದ್ಯದಲ್ಲಿ ಗೆದ್ದವ್ರು ಪಂಜಾಬ್ ವಿರುದ್ಧ ಮತ್ತೆ ಕಣಕ್ಕಿಳಿಯಬೇಕಿದೆ. ಕ್ವಾಲಿಫೈಯರ್ 2ನಲ್ಲಿ ಗೆದ್ದವ್ರು ಫಿನಾಲೆಯಲ್ಲಿ ಮುಖಾಮುಖಿ ಆಗ್ತಾರೆ.

ಒಟ್ನಲ್ಲಿ ಆರ್​ಸಿಬಿ ಫ್ಯಾನ್ಸ್ ಅಂತೂ ಕಂಪ್ಲೀಟ್ ರಿಲೀಫ್ ಆಗಿದ್ದಾರೆ. 2009, 2011 ಮತ್ತು 2016ರಲ್ಲಿ ಫೈನಲ್ ತಲುಪಿದ್ರು. 2016ರ ನಂತರ ಇದೇ ಮೊದಲ ಬಾರಿಗೆ ಫೈನಲ್ ಗೆ ಬಂದಿದ್ದಾರೆ. ಸೋ 9 ವರ್ಷಗಳ ನಂತ್ರ ಫೈನಲ್​ಗೆ ಬಂದಿರೋದೇ ಖುಷಿ. ಅದ್ರಲ್ಲೂ ಈ ಸೀಸನ್​ನಲ್ಲಿ ಆರ್​ಸಿಬಿಯ ಪರ್ಫಾಮೆನ್ಸ್, ಜರ್ನಿ, ಟೀಂ ಎಲ್ಲಾ ನೋಡ್ದಾಗ ಈ ಸಲ ಕಪ್ ನಮ್ದೇ ಅನ್ನೋ ನಂಬಿಕೆ ಮತ್ತಷ್ಟು ಗಟ್ಟಿಯಾಗ್ತಿದೆ.

Shwetha M

Leave a Reply

Your email address will not be published. Required fields are marked *