ಮಳೆಯಿಂದ ಪಂದ್ಯ ರದ್ದಾದ್ರೆ RCBಗೆ ಫೈನಲ್ ಟಿಕೆಟ್ – ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಬೆಂಗಳೂರಿಗೆ ಚಾನ್ಸ್

ಐಪಿಎಲ್ 2026ರ ಹೈವೋಲ್ಟೇಜ್ ಕದನಕ್ಕೆ ಕೌಂಟ್ಡೌನ್ ಶುರುವಾಗಿದೆ. ಫೈನಲ್ಗೆ ನೇರ ಎಂಟ್ರಿ ಕೊಡಲು ಆರ್ಸಿಬಿ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಪಂದ್ಯ ನಡೆಯಲಿದೆ. ಧರ್ಮಶಾಲಾದ ವೇಗದ ಪಿಚ್ನಲ್ಲಿ ಬ್ಯಾಟರ್ಗಳನ್ನು ಕಟ್ಟಿಹಾಕುವುದು ಆರ್ಸಿಬಿಗೆ ಸುಲಭವಾಗುತ್ತದೆ.
ಇದನ್ನೂ ಓದಿ:ಸಾಲ್ಟ್ ಬಂದ್ರೆ ವೆಂಕಿಗಿಲ್ವಾ SLOT? – ಜಿತೇಶ್ ಕೀಪಿಂಗ್ ಮಾಡಿದ್ರಷ್ಟೇ ಸಾಕಾ?
ಆರ್ಸಿಬಿ ಮತ್ತು ಗುಜರಾತ್ ಟೈಟಾನ್ಸ್ ನಡುವೆ ರೋಚಕ ಕಾದಾಟಕ್ಕೆ ಕ್ಷಣಗಣನೆ ಶುರುವಾಗಿದೆ. ಎರಡೂ ತಂಡಗಳು ಲೀಗ್ ಹಂತದಲ್ಲಿ 18 ಅಂಕಗಳೊಂದಿಗೆ ಸಮಬಲ ಸಾಧಿಸಿದ್ದರೂ, ಆರ್ಸಿಬಿ ನೆಟ್ ರನ್ ರೇಟ್ ನಿಂದ ಟೇಬಲ್ ಟಾಪರ್ ಆಗಿದೆ. ಈ ಪಂದ್ಯ ಗೆಲ್ಲುವ ತಂಡ ನೇರವಾಗಿ ಅಹಮದಾಬಾದ್ನಲ್ಲಿ ನಡೆಯಲಿರುವ ಫೈನಲ್ಗೆ ಎಂಟ್ರಿ ಕೊಡಲಿದೆ. ಈ ಪಂದ್ಯ ಧರ್ಮಶಾಲಾದ ಮಂಜಿನ ಅಂಗಳದಲ್ಲಿ ನಡೆಯಲಿದೆ. ಧರ್ಮಶಾಲಾದಲ್ಲಿ ಹಗಲು ಮಳೆಯಾಗುವ ಸಾಧ್ಯತೆಯಿದ್ದರೂ ಕೂಡಾ ಸಂಜೆಯಾಗುತ್ತಿದ್ದಂತೆ ಹವಾಮಾನ ಬದಲಾಗುತ್ತದೆ. ಪಂದ್ಯದ ಸಮಯದಲ್ಲಿ ಮಳೆ ಬರುವ ಸಾಧ್ಯತೆ ಕಡಿಮೆಯಿದೆ. ಒಂದು ವೇಳೆ ಮಳೆ ಬಂದರೂ ಆರ್ಸಿಬಿ ಅಭಿಮಾನಿಗಳು ಆತಂಕಪಡುವ ಅಗತ್ಯವಿಲ್ಲ. ಈ ಪಂದ್ಯಕ್ಕೆ ಮೀಸಲು ದಿನವಿಲ್ಲದ ಕಾರಣ, ಒಂದು ವೇಳೆ ಮಳೆಯಿಂದ ಆಟ ರದ್ದಾದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್ಸಿಬಿ ತಂಡವು ನೇರವಾಗಿ ಫೈನಲ್ಗೆ ಅರ್ಹತೆ ಪಡೆಯಲಿದೆ. ಐಪಿಎಲ್ ನಿಯಮದ ಪ್ರಕಾರ, ಅಂಕಪಟ್ಟಿಯಲ್ಲಿ ಮೇಲಿರುವ ತಂಡಕ್ಕೆ ಇಂತಹ ಸಂದರ್ಭದಲ್ಲಿ ದೊಡ್ಡ ಅಡ್ವಾಂಟೇಜ್ ಸಿಗಲಿದೆ.
1,457 ಮೀಟರ್ ಎತ್ತರದಲ್ಲಿರುವ ಧರ್ಮಶಾಲಾದ ಈ ಪಿಚ್ನಲ್ಲಿ ಚೆಂಡು ಅತಿ ವೇಗವಾಗಿ ಚಲಿಸುತ್ತದೆ. 21°C ತಾಪಮಾನವಿರುವುದರಿಂದ ವೇಗಿಗಳಿಗೆ ಹೆಚ್ಚಿನ ಬೌನ್ಸ್ ಮತ್ತು ಸ್ವಿಂಗ್ ಸಿಗಲಿದೆ. ಇಲ್ಲಿನ ಪಿಚ್ ಬ್ಯಾಟರ್ಗಳಿಗಿಂತ ವೇಗದ ಬೌಲರ್ಗಳಿಗೆ ಹೆಚ್ಚು ಸಹಾಯಕಾರಿ. ಕ್ರಿಕೆಟ್ ವಿಶ್ಲೇಷಕರ ಪ್ರಕಾರ, ಆರ್ಸಿಬಿ ಇಂದು ತನ್ನ ಬೌಲಿಂಗ್ ವಿಭಾಗದಲ್ಲಿ ಪ್ರಮುಖ ಬದಲಾವಣೆ ಮಾಡಿಕೊಳ್ಳಬೇಕು. ತಂಡದಲ್ಲಿ ಕೃನಾಲ್ ಪಾಂಡ್ಯ ಈಗಾಗಲೇ ಸ್ಪಿನ್ ಬೌಲರ್ ಆಗಿರುವುದರಿಂದ, ಸುಯೇಶ್ ಶರ್ಮಾ ಬದಲಿಗೆ ಜೇಕಬ್ ಡಫಿ ಅವರನ್ನು ಆಡಿಸುವುದು ಸೂಕ್ತ. ಹೆಚ್ಚುವರಿ ವೇಗಿ ತಂಡದಲ್ಲಿದ್ದರೆ ಧರ್ಮಶಾಲಾದ ವೇಗದ ಪಿಚ್ನಲ್ಲಿ ಬ್ಯಾಟರ್ಗಳನ್ನು ಕಟ್ಟಿಹಾಕುವುದು ಆರ್ಸಿಬಿಗೆ ಸುಲಭವಾಗುತ್ತದೆ.
ಮತ್ತೊಂದೆಡೆ ಗುಜರಾತ್ ಟೈಟಾನ್ಸ್ ತಂಡವು ಭರ್ಜರಿ ಫಾರ್ಮ್ನಲ್ಲಿದೆ. ಕಳೆದ ಪಂದ್ಯದಲ್ಲಿ ಸಿಎಸ್ಕೆ ತಂಡವನ್ನು 89 ರನ್ಗಳಿಂದ ಸೋಲಿಸಿ ಬೀಗುತ್ತಿರುವ ಜಿಟಿ ತಂಡದ ಬ್ಯಾಟಿಂಗ್ ಲೈನ್ಅಪ್ ಆರ್ಸಿಬಿಗೆ ದೊಡ್ಡ ಸವಾಲಾಗಿದೆ. ರಶೀದ್ ಖಾನ್ ಮತ್ತು ಕಗಿಸೊ ರಬಾಡ ಅವರಂತಹ ಬೌಲರ್ಗಳು ಜಿಟಿಯ ಪ್ರಬಲ ಅಸ್ತ್ರ. ಧರ್ಮಶಾಲಾದ ಹವಾಮಾನವು ಈ ಹೈವೋಲ್ಟೇಜ್ ಪಂದ್ಯದ ಮೇಲೆ ದೊಡ್ಡ ಪ್ರಭಾವ ಬೀರಲಿದೆ.

ನೋಡಿರಿ

