ಲಕ್ನೋಗೆ ಲಗಾಮು ಹಾಕುತ್ತಾ RCB – ನೋಟ್ ಬುಕ್ ಸಹಿ ಮಾಡ್ತಾರಾ ದಿಗ್ವೇಶ್?
ಪವರ್ ಇಲ್ಲದ ಪಂತ್ ಗೆ ಚಾಲೆಂಜ್!

ಮುಂಬೈ ಇಂಡಿಯನ್ಸ್ ವಿರುದ್ಧ ವಾಂಖೆಡೆ ಸ್ಟೇಡಿಯಮ್ನಲ್ಲಿ ಭರ್ಜರಿಯಾಗಿ ಗೆದ್ದು ಬಂದಿರೋ ಬೆಂಗಳೂರು ಟೀಂ ಈಗ ಚಿನ್ನಸ್ವಾಮಿಯಲ್ಲಿ ಲಕ್ನೋ ಸೂಪರ್ ಜೇಂಟ್ಸ್ ವಿರುದ್ಧ ಅಖಾಡಕ್ಕಿಳಿಯಲಿದೆ. ಈ ಸೀಸನ್ನಲ್ಲಿ ಆರ್ಸಿಬಿ ಒಂದು ಮ್ಯಾಚ್ ಸೋತಿದ್ರೂ ಸೂಪರ್ ಸಾಲಿಡ್ ಆಗೇ ಇದೆ. ಬಟ್ ಲಕ್ನೋ ತಂಡ 2 ಪಂದ್ಯಗಳನ್ನ ಗೆದ್ದಿದ್ರೂ ಅವ್ರ ಪರ್ಫಾಮೆನ್ಸ್ ಏನೂ ಕನ್ವಿನ್ಸಿಂಗ್ ಆಗಿಲ್ಲ. ಸೋ ಈ ಬ್ಯಾಟಲ್ನಲ್ಲೇ ಬೆಂಗಳೂರು ತಂಡವೇ ಗೆಲ್ಲುವಂಥ ಫೇವರೆಟ್ ಟೀಂ.
ಇದನ್ನೂ ಓದಿ : IPLಗೆ ಡ್ರೀಮ್ ಎಂಟ್ರಿ ಕೊಟ್ಟ ಪ್ರಫುಲ್ ಹಿಂಗೆ – SRH ಪರ ಇತಿಹಾಸ ಬರೆದ ಈ ಹುಡುಗನ ಹಿಸ್ಟರಿ ಏನು?
ಹಾಲಿ ಚಾಂಪಿಯನ್ ಬೆಂಗಳೂರು ಹಾಗೇ ಚೊಚ್ಚಲ ಟ್ರೋಫಿ ನಿರೀಕ್ಷೆಯಲ್ಲಿರೋ ಲಕ್ನೋ ತಂಡಗಳು ಬುಧವಾರ ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ಮುಖಾಮುಖಿ ಆಗ್ತಾರೆ. ಎರಡೂ ತಂಡಗಳಲ್ಲೂ ಒಳ್ಳೊಳ್ಳೆ ಪ್ಳೇಯರ್ಗಳೇ ಇದ್ದು ಆರ್ಸಿಬಿ ಆಟಗಾರರು ಅಬ್ಬರಿಸ್ತಾ ಇದ್ದಾರೆ ಬಟ್ ಎಲ್ಎಸ್ಜಿ ಟೀಮ್ನಲ್ಲಿ ನಿರೀಕ್ಷಿತ ಪ್ರದರ್ಶನ ಬರ್ತಿಲ್ಲ. ಅದೆಲ್ಲಕ್ಕಿಂತ ಮೋಸ್ಟ್ ಇಂಪಾರ್ಟೆಂಟ್ ಅಂದ್ರೆ ಬೆಂಗಳೂರು ಕ್ಯಾಪ್ಟನ್ ರಜತ್ ಪಾಟಿದಾರ್ ಬ್ಯಾಟಿಂಗ್ನಲ್ಲಿ ಬೌಲರ್ಗಳನ್ನ ಬೆಂಡೆತ್ತುತ್ತಾ ಕ್ಯಾಪ್ಟನ್ಸಿಯಲ್ಲಿ ಸಕ್ಸಸ್ ಕಾಣ್ತಿದ್ರೆ ಅತ್ತ ರಿಷಬ್ ಪಂತ್ ಬಂದ ಪುಟ್ಟ ಹೋದ ಪುಟ್ಟ ಎನ್ನುವಂತಾಗಿದ್ದಾರೆ.
ಬೆಂಗಳೂರು Vs ಲಕ್ನೋ ಜರ್ನಿ!
ಮಾದರಿ ಬೆಂಗಳೂರು ಲಕ್ನೋ
200+ ಸ್ಕೋರ್ 4 ಬಾರಿ 0
ಹೈಯೆಸ್ಟ್ ರನ್ಸ್ 250 182
ಬೃಹತ್ ಗೆಲುವು 43 ರನ್ಸ್ 5 ವಿಕೆಟ್ಸ್
ಗೆಲುವು 3 2
ಹೆಚ್ಚು ರನ್ಸ್ ಪಾಟಿದಾರ್(195) ಮಾರ್ಕ್ರಂ (108)
ಹೆಚ್ಚು ವಿಕೆಟ್ಸ್ ಜೇಕಬ್ ಡಫಿ(6) ಪ್ರಿನ್ ಯಾದವ್(6)
ಪಾಯಿಂಟ್ಸ್ ಪಟ್ಟಿ 3ನೇ ಸ್ಥಾನ 7ನೇ ಸ್ಥಾನ
ಈ ನಂಬರ್ಸ್ ಎಲ್ಲಾ ನೋಡ್ದಾಗ ಬೆಂಗಳೂರು ಎಲ್ಲದ್ರಲ್ಲೂ ಡಾಮಿನೇಟಿಂಗ್ ಪರ್ಫಾಮೆನ್ಸ್ ಕೊಟ್ಟಿದೆ. ಬಟ್ ಲಕ್ನೋ ತಂಡ ಗೆದ್ದಿರೋ ಎರಡು ಪಂದ್ಯಗಳು ಜಸ್ಟ್ ಪಾಸ್ ಆಗಿರೋದು ಅಷ್ಟೇ. ಅಲ್ದೇ ರಿಷಭ್ ಪಂತ್ ಕಡೆಯಿಂದ ಬರೀ ನಿರಾಸೆಯೇ ಆಗ್ತಿದೆ.
ಪಂತ್ ಗೆ ₹27 ಕೋಟಿ ಸಂಭಾವನೆಯೇ ಮುಳುವಾಯ್ತಾ?
ಇನ್ನು ಈ ಪಂದ್ಯದಲ್ಲಿ ಎಲ್ಲರ ಕಣ್ಣು ರಿಷಭ್ ಪಂತ್ ಮೇಲೆ ಇರುತ್ತೆ. 27 ಕೋಟಿ ಕೊಟ್ಟು ಖರೀದಿ ಮಾಡಿದ್ದ ಪಂತ್ ಲಾಸ್ಟ್ ಸೀಸನ್ ಅಟ್ಟರ್ ಫ್ಲ್ಯಾಪ್ ಆಗಿದ್ರು. ಬಟ್ ಆರ್ಸಿಬಿ ವಿರುದ್ಧ ಸೆಂಚುರಿ ಹೊಡ್ದು ಸೀಸನ್ ಮುಗಿಸಿದ್ರು. ಈ ಸೀಸನ್ ಮತ್ತದೇ ಸ್ಟ್ರಗಲ್ಸ್. ಮ್ಯಾಚ್ ವಿನ್ನಿಂಗ್ ರನ್ಸ್ ಬರ್ತಾ ಇಲ್ಲ. ಹೈದ್ರಾಬಾದ್ ವಿರುದ್ಧದ ಮ್ಯಾಚಲ್ಲಿ 68 ರನ್ಸ್ ಬಂತಾದ್ರೂ ಕೂಡ ಅದು 50 ಬಾಲ್ಗಳಲ್ಲಿ ಬಂದಿರೋದು. ಓವರ್ ಆಲ್ 4 ಮ್ಯಾಚ್ಗಳಲ್ಲಿ 103 ರನ್ಸ್ ಬಂದಿದೆ. ಅದೂ ಕೂಡ 130ರ ಸ್ಟ್ರೈಕ್ ರೇಟ್ನಲ್ಲಿ. ಸೋ ಲಕ್ನೋ ತಂಡಕ್ಕೆ ಪಂತ್ ಈವರೆಗೂ ವರ ಆಗೋದಕ್ಕಿಂತ ಜಾಸ್ತಿ ಭಾರ ಆಗ್ತಿದ್ದಾರೆ. ತಾವೂ ಆಡ್ತಿಲ್ಲ ನಾಯಕನಾಗಿಯೂ ಗೆಲ್ಲಿಸಿಕೊಳ್ತಿಲ್ಲ. ಗುಜರಾತ್ ವಿರುದ್ಧದ ಪಂದ್ಯ ಸೋತ ಮೇಲಂತೂ ಸಾಕಷ್ಟು ಟ್ರೋಲ್ ಆಗಿದ್ದಾರೆ. ಒಂದ್ಕಡೆ ಕ್ಯಾಪ್ಟನ್ ಪಂತ್ ಕಂ ಬ್ಯಾಕ್ಗೆ ಕಾಯ್ತಾ ಇದ್ರೆ ಆರ್ಸಿಬಿ ಫ್ಯಾನ್ಸ್ ಕಣ್ಣು ಲಕ್ನೋ ತಂಡದ ಬೌಲರ್ ದಿಗ್ವೇಶ್ ರಾಥಿ ಮೇಲಿದೆ.
ಚಿನ್ನಸ್ವಾಮಿಯಲ್ಲೂ ನೋಟ್ ಬುಕ್ ಸೆಲೆಬ್ರೇಷನ್ ಮಾಡ್ತಾರಾ ದಿಗ್ವೇಶ್?
ಇನ್ನು ಐಪಿಎಲ್ನಲ್ಲಿ ಲಾಸ್ಟ್ ಸೀಸನ್ನಲ್ಲಿ ಪರ್ಫಾಮೆನ್ಸ್ಗಿಂತ ಜಾಸ್ತಿ ಸೆಲೆಬ್ರೇಷನ್ನಿಂದಲೇ ಸಾಕಷ್ಟು ಸುದ್ದಿ ಮಾಡಿದ್ದ ಬೌಲರ್ ಅಂದ್ರೆ ಅದು ದಿಗ್ವೇಶ್ ರಾಥಿ. ನೋಟ್ ಬುಕ್ ಸೆಲೆಬ್ರೇಷನ್ ಮೂಲಕವೇ ಕಾಂಟ್ರವರ್ಸಿ ಕಿಂಗ್ ಆಗಿದ್ರು. ರೈಟ್ ಆರ್ಮ್ ಮಿಸ್ಟ್ರಿ ಲೆಗ್ ಸ್ಪಿನ್ನರ್ ಆಗಿರೋ ರಾಥಿ ವಿಕೆಟ್ ತೆಗೆದಾಗ ಎಡಗೈ ಮೇಲೆ ನೋಟ್ ಬುಕ್ನಲ್ಲಿ ಸಹಿ ಹಾಕೋ ಥರ ಬ್ಯಾಟರ್ಗಳಿಗೆ ಸೆಂಡ್ ಆಫ್ ಕೊಡ್ತಾರೆ. ಈ ಸೀಸನ್ನಲ್ಲೂ ಆಲ್ರೆಡಿ ಗುಜರಾತ್ ವಿರುದ್ಧದ ಮ್ಯಾಚಲ್ಲಿ ಅದೇ ಥರ ಮಿಮಿಕ್ ಮಾಡಿದ್ದಾರೆ. ಕಳೆದ ಭಾನುವಾರ ನಡೆದ ಮ್ಯಾಚಲ್ಲಿ ಗುಜರಾತ್ ಬ್ಯಾಟರ್ ಸಾಯಿ ಸುದರ್ಶನ್ ವಿಕೆಟ್ ತೆಗೆದ ರಾಥಿ ಮೈದಾನದ ಮೇಲೆ ಸಹಿ ಹಾಕಿ ಸೆಲೆಬ್ರೇಟ್ ಮಾಡಿದ್ರು. ಬಟ್ ಈ ಸಲ ಅಗ್ರೆಸ್ಸಿವ್ ಇಂಟೆಂಟ್ ಕಾಣಿಸಲಿಲ್ಲ. ಯಾಕಂದ್ರೆ ಲಾಸ್ಟ್ ಸೀಸನ್ನಲ್ಲೇ ಬೇಜಾನ್ ಹೊಡೆತ ತಿಂದಿದ್ದಾರೆ. ಕಳೆದ ಸೀಸನ್ನಲ್ಲಿ ನೋಟ್ ಬುಕ್ ಸೆಲೆಬ್ರೇಷನ್ ಕಾರಣದಿಂದಲೇ ರಾಥಿಗೆ ಮೂರು ಸಲ ಫೈನ್ ಹಾಕಿದ್ರು. ಮೊದಲ ಬಾರಿ ಪಂದ್ಯ ಶುಲ್ಕದ ಶೇಕಡಾ 25 ರಷ್ಟು ನಂತ್ರ ಶೇಕಡಾ 50ರಷ್ಟು ಹಾಗೇ ಮೂರನೇ ಬಾರಿ ಮತ್ತೆ 50ರಷ್ಟು ದಂಡ ಹಾಕಿದ್ರು. ಹಾಗೇ ಒಂದು ಪಂದ್ಯದಿಂದ ಸಸ್ಪೆಂಡ್ ಮಾಡಲಾಗಿತ್ತು. ಲಾಸ್ಟ್ ಸೀಸನ್ನಲ್ಲಿ 5 ಡಿಮೆರಿಟ್ ಅಂಕಗಳಲ್ಲೂ ನೀಡಲಾಗಿತ್ತು. ಈ ಡಿಮೆರಿಟ್ ಪಾಯಿಂಟ್ಸ್ 36 ತಿಂಗಳವರೆಗೆ ಇರುತ್ವೆ. ಒಟ್ಟು ಎಂಟು ಡಿಮೆರಿಟ್ ಪಾಯಿಂಟ್‌ಗಳು ಬಂದ್ರೆ 2 ಪಂದ್ಯದಿಂದ ಅಮಾನತು ಮಾಡ್ತಾರೆ. ಹಾಗೇ 11 ಅಂಕ ಆದ್ರೆ 3 ಪಂದ್ಯಗಳಿಂದ ಹೊರಗಿಡಬೇಕಾಗುತ್ತೆ.
ಇನ್ನು ದಿಗ್ವೇಶ್ ರಾಥಿ ಕಳೆದ ಸೀಸನ್ನಲ್ಲಿ ಆರ್ಸಿಬಿ ವಿರುದ್ಧದ ಮ್ಯಾಚಲ್ಲಿ ಅದೇ ಥರ ನೋಟ್ ಬುಕ್ ಸೆಲೆಬ್ರೇಷನ್ ಮಾಡಿ ಫ್ಲ್ಯಾಪ್ ಆಗಿದ್ರು. ಲೀಗ್ ಹಂತದ ಕೊನೇ ಮ್ಯಾಚಲ್ಲಿ ಮುಖಾಮುಖಿ ಆಗಿದ್ದ ಲಕ್ನೋ ಮತ್ತು ಬೆಂಗಳೂರು ನಡುವಿನ ಪಂದ್ಯದಲ್ಲಿ ಜಿತೇಶ್ ಶರ್ಮಾರನ್ನ ಔಟ್ ಮಾಡಿ ನೋಟ್ ಬುಕ್ ಸೆಲೆಬ್ರೇಷನ್ ಮಾಡಿದ್ರು. ಬಟ್ ಅದು ನೋ ಬಾಲ್ ಆಗಿ ಫ್ರೀ ಹಿಟ್ ಸಿಕ್ಕಿತ್ತು. ಹಾಗೇ ಮಂಕಡ್ ರನ್ ಔಟ್ ಮಾಡಿ ಕೊನೆಗೆ ಅದೂ ಫ್ಲ್ಯಾಪ್ ಆಗಿತ್ತು. ರಿಷಭ್ ಪಂತ್ ವಿಕೆಟ್ ಅಪೀಲ್ ವಾಪಸ್ ತಗೊಂಡಿದ್ರು. ಜೊತೆಗೆ ರಾಥಿ ಬೌಲಿಂಗ್ ರನ್ ಅಪ್ ತಗೊಂಡು ಬೌಲಿಂಗ್ ಌಕ್ಷನ್ ಕಂಪ್ಲೀಟ್ ಮಾಡಿ ಮಂಕಡ್ ರನ್ ಔಟ್ ಮಾಡಿದ್ರಿಂದ ಕೊಟ್ಟಿರಲಿಲ್ಲ. ಹೀಗಾಗಿ ಈ ಸೀಸನ್ನಲ್ಲಿ ಮತ್ತೆ ದಿಗ್ವೇಶ್ ಸ್ಟೈಲ್ ನೋಡೋದು ಮಜಾ ಇರುತ್ತೆ. ಒಟ್ನಲ್ಲಿ ಆರ್ಸಿಬಿ ಇರೋ ಫಾರ್ಮ್ ಹಾಗೇ ಲಕ್ನೋ ಇರೋ ಸಿಚುಯೇಷನ್ ನೋಡಿದ್ರೆ ಬೆಂಗಳೂರಲ್ಲಿ ಮತ್ತೊಮ್ಮೆ ರಜತ್ ಪಾಟಿದಾರ್ ಪಡೆ ಗೆದ್ದು ಬೀಗೋದ್ರಲ್ಲಿ ಅನುಮಾನವೇ ಇಲ್ಲ.

ನೋಡಿರಿ

