ಕನ್ನಡಿಗ ರಾಹುಲ್ ಗೆ RCB ಆಫರ್ – KL ಕ್ಯಾಪ್ಟನ್ ಕಂ ವಿಕೆಟ್ ಕೀಪರ್?
DK & FAF.. 1 ಕಲ್ಲಿನಲ್ಲಿ 2 ಹಕ್ಕಿ!

ಕನ್ನಡಿಗ ರಾಹುಲ್ ಗೆ RCB ಆಫರ್ – KL ಕ್ಯಾಪ್ಟನ್ ಕಂ ವಿಕೆಟ್ ಕೀಪರ್?DK & FAF.. 1 ಕಲ್ಲಿನಲ್ಲಿ 2 ಹಕ್ಕಿ!

ಕ್ರಿಕೆಟ್ ಜಗತ್ತಿನಲ್ಲೀಗ ಟಿ20 ವಿಶ್ವಕಪ್​ ಫೀವರ್ ಜೋರಾಗಿದೆ. ಟೀಂ ಇಂಡಿಯಾ ಕೂಡ ಐರ್ಲೆಂಡ್ ವಿರುದ್ಧ ಗೆದ್ದು ಶುಭಾರಂಭ ಮಾಡಿದೆ. ದಶಕಗಳಿಂದಲೂ ಮರೀಚಿಕೆಯಾಗಿರೋ ಐಸಿಸಿ ಟ್ರೋಫಿಯನ್ನ ಎತ್ತಿ ಹಿಡಿಯೋಕೆ ಭಾರತೀಯ ಆಟಗಾರರು ಭರ್ಜರಿ ಪ್ರದರ್ಶನ ನೀಡ್ತಿದ್ದಾರೆ. ಹೀಗೆ ಐಪಿಎಲ್​ ಬಳಿಕ ಒಂದಷ್ಟು ಆಟಗಾರರು ವಿಶ್ವಕಪ್​ನಲ್ಲಿ ಬ್ಯುಸಿಯಾಗಿದ್ರೆ ಸೆಲೆಕ್ಟ್ ಆಗದೇ ಇರೋ ಪ್ಲೇಯರ್ಸ್​ ರಿಲ್ಯಾಕ್ಸ್ ಮೋಡ್​ಗೆ ಜಾರಿದ್ದಾರೆ. ಈ ಪೈಕಿ ಕನ್ನಡಿಗ ಕೆ.ಎಲ್ ರಾಹುಲ್ ಕೂಡ ಒಬ್ರು. ಐಪಿಎಲ್ ಬಳಿಕ ರಾಹುಲ್ ವಿದೇಶದಲ್ಲಿ ರೌಂಡ್ಸ್ ಹಾಕ್ತಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನ ಶೇರ್ ಮಾಡ್ತಿದ್ದಾರೆ. ರಾಹುಲ್​ರ ಫೋಟೋಗಳನ್ನ ನೋಡಿದ ಅವ್ರ ಫ್ಯಾನ್ಸ್ ಹಾಗೇ ಕನ್ನಡಿಗರು ರಾಹುಲ್​ಗೆ ಒಂದು ಆಫರ್ ನೀಡಿದ್ದಾರೆ.

ಕೆ.ಎಲ್ ರಾಹುಲ್. ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್. ಕ್ರೀಸ್ ಕಚ್ಚಿ ನಿಂತ್ರು ಅಂದ್ರೆ ಎದುರಾಳಿ ಬೌಲರ್​ಗಳ ಬೆವರಿಳಿಸೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಎಷ್ಟೋ ಪಂದ್ಯಗಳಲ್ಲಿ ಏಕಾಂಗಿಯಾಗಿ ನಿಂತು ಟೀಂ ಇಂಡಿಯಾವನ್ನ ಗೆಲ್ಲಿಸಿದ್ದಾರೆ. ಟೆಸ್ಟ್ ಕ್ರಿಕೆಟ್​ನಲ್ಲಂತೂ ರಾಹುಲ್ ಬೆಸ್ಟ್ ಆಪ್ಶನ್. ಬಟ್ ಈ ಸಲ ಮಾತ್ರ ಟಿ-20 ವಿಶ್ವಕಪ್​ಗೆ ಕೆ.ಎಲ್ ರಾಹುಲ್ ಸೆಲೆಕ್ಟ್ ಆಗಲಿಲ್ಲ. ಇದು ಬರೀ ಅಭಿಮಾನಿಗಳಷ್ಟೇ ಅಲ್ಲ ಸಾಕಷ್ಟು ಕ್ರಿಕೆಟರ್ಸ್​ಗೂ ಶಾಕ್ ನೀಡಿತ್ತು. ಕೆಎಲ್ ಬದ್ಲಿಗೆ ವಿಕೆಟ್ ಕೀಪರ್​ಗಳಾಗಿ ರಿಷಭ್ ಪಂತ್ ಹಾಗೂ ಸಂಜು ಸ್ಯಾಮ್ಸನ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಪಂತ್ ಎಂಟ್ರಿಯಿಂದ ಕನ್ನಡಿಗ ಅವಕಾಶ ವಂಚಿತರಾದ್ರು ಅನ್ನಿಸ್ಬೋದು. ಬಟ್ ರಾಹುಲ್​ರನ್ನ ಆಯ್ಕೆಗೆ ಪರಿಗಣಿಸಿಯೇ ಇಲ್ಲ ಎಂಬುದೇ ಸತ್ಯ. ಯಾಕಂದ್ರೆ ಕಳೆದ ಒಂದು ವರ್ಷದಿಂದ ರಾಹುಲ್ ಅವರನ್ನು ಟಿ20 ತಂಡದಿಂದ ಹೊರಗಿಡಲಾಗಿದೆ. ಅಂದ್ರೆ ರಾಹುಲ್ ಕೊನೆಯ ಬಾರಿ ಭಾರತದ ಪರ ಟಿ20 ಪಂದ್ಯವಾಡಿರುವುದು 2022ರ ಟಿ20 ವಿಶ್ವಕಪ್​ನಲ್ಲಿ ಅನ್ನೋದನ್ನ ನಂಬಲೇಬೇಕು. ಇದರ ನಡುವೆ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದ ಅವರು ಅದ್ಭುತ ಪ್ರದರ್ಶನವನ್ನೇ ನೀಡಿದ್ದರು. ಏಕದಿನ ವಿಶ್ವಕಪ್ 2023 ರಲ್ಲಿ 10 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ದ ರಾಹುಲ್ 1 ಭರ್ಜರಿ ಶತಕ ಹಾಗೂ 2 ಅರ್ಧಶತಕಗಳೊಂದಿಗೆ 452 ರನ್ ಕಲೆಹಾಕಿದ್ದರು. ಈ ಮೂಲಕ ಭಾರತ ತಂಡವು ಫೈನಲ್​ಗೆ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.  ಈ ಅತ್ಯುತ್ತಮ ಪ್ರದರ್ಶನದ ಹೊರತಾಗಿಯೂ ಆ ಬಳಿಕ ನಡೆದ ಟಿ20 ಸರಣಿಗಳಲ್ಲಿ ರಾಹುಲ್​ರನ್ನ ಸೆಲೆಕ್ಟ್ ಮಾಡಿರಲಿಲ್ಲ.

ಕೆಎಲ್ ರಾಹುಲ್​ರನ್ನ ಡ್ರಾಪ್ ಮಾಡೋಕೆ ಮೇನ್ ರೀಸನ್ ಇನ್ನೊಂದಿದೆ. ಅದುವೇ ಆಲ್​ರೌಂಡರ್ ಅಗತ್ಯತೆ. ಕೆ.ಎಲ್. ರಾಹುಲ್ ಕೇವಲ ಬ್ಯಾಟಿಂಗ್ ಕಡೆಗೆ ಮಾತ್ರ ಗಮನ ಹರಿಸುತ್ತಾರೆ. ಆದ್ರೆ ಟಿ20 ಮ್ಯಾಚ್​ಗಳಲ್ಲಿ ಆಲ್‌ರೌಂಡರ್ ಅಗತ್ಯತೆ ತುಂಬಾ ಇರುತ್ತದೆ. ಬ್ಯಾಟಿಂಗ್ ಜೊತೆ ಬೌಲಿಂಗ್ ಮಾಡುವ ಪ್ರತಿ ಆಟಗಾರನಿಗೆ ಅವಕಾಶ ಹೆಚ್ಚಾಗಿ ಸಿಗುತ್ತದೆ. ಇಲ್ಲಿ ರಿಷಬ್ ಮತ್ತೆ ಸಂಜು ಬೌಲಿಂಗ್ ಮಾಡದಿದ್ರೂ ಚಾನ್ಸ್ ಸಿಕ್ಕಿದ್ಯಲ್ಲ ಅಂತಾ ನೀವು ಕೇಳ್ಬೋದು. ಅದಕ್ಕೆ ಕಾರಣವೂ ಇದೆ. ವಿಕೆಟ್‌ ಕೀಪರ್ & ಬ್ಯಾಟ್ಸ್‌ಮನ್ ಆಗಿ ಈ ಇಬ್ಬರು ಆಟಗಾರರು ಅತ್ಯುತ್ತಮವಾಗಿ ಪ್ರದರ್ಶನ ನೀಡಿದ್ದಾರೆ. ಆದ್ರೆ ಐಪಿಎಲ್​ನಲ್ಲಿ ಕೆ.ಎಲ್. ರಾಹುಲ್ ಅವರು ಸ್ಥಿರ ಪ್ರದರ್ಶನ ನೀಡದೇ ಇರುವುದು ದೊಡ್ಡ ಸಮಸ್ಯೆ ಆಗಿತ್ತು. ಗಾಯದಿಂದ ಬಳಲುತ್ತಿರುವುದು ಕೂಡ ಕೆ.ಎಲ್. ರಾಹುಲ್ ಆಯ್ಕೆಗೆ ಅಡ್ಡಿ ಉಂಟುಮಾಡಿದೆ ಎನ್ನಲಾಗಿದೆ.

ಇನ್ನು ಐಪಿಎಲ್ ವೇಳೆಯೂ ಕೆಎಲ್ ರಾಹುಲ್ ಹಾಟ್ ಟಾಪಿಕ್ ಆಗಿದ್ದರು.  ಎಲ್​ಎಸ್​ಜಿ ತಂಡದ ಓನರ್ ಸಂಜೀವ್ ಗೋಯೆಂಕಾ ಅವ್ರು ತಮ್ಮ ತಂಡದ ಕ್ಯಾಪ್ಟನ್ ಕೆ.ಎಲ್ ರಾಹುಲ್ ಜೊತೆ ನಡೆದುಕೊಂಡ ರೀತಿ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಲಕ್ನೋ ಸೂಪರ್ ಜೇಂಟ್ಸ್ ತಂಡದ ಸೋಲಿನ ಬಳಿಕ ಗೋಯೆಂಕಾ ಮೈದಾನದಲ್ಲೇ ರಾಹುಲ್​ ವಿರುದ್ಧ ಕೂಗಾಡಿದ್ದರು. ಗೋಯೆಂಕಾ ನಡೆಗೆ ಕ್ರಿಕೆಟರ್ಸ್ ಕೂಡ ಕಿಡಿ ಕಾರಿದ್ದರು. ಫ್ಯಾನ್ಸ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು. ಮಾಲೀಕರ ವರ್ತನೆಯಿಂದ ರಾಹುಲ್​ ಕೂಡ ತೀವ್ರ ಮುಜುಗರಕ್ಕೀಡಾಗಿದ್ದರು. ಇದ್ರ ಬೆನ್ನಲ್ಲೇ ಲಖನೌ ತಂಡವನ್ನ ರಾಹುಲ್ ತೊರೆಯುತ್ತಾರೆ ಎನ್ನಲಾಗಿತ್ತು. ಬಳಿಕ ಎಲ್ಲವೂ ತಿಳಿಯಾದಂತೆ ಕಂಡ್ರೂ ಕೂಡ 2025ರ ಐಪಿಎಲ್​ಗೆ ರಾಹುಲ್ ಲಕ್ನೋ ತಂಡವನ್ನ ತೊರೆಯೋದು ಫಿಕ್ಸ್ ಎನ್ನಲಾಗ್ತಿದೆ. 2022ರ ಹರಾಜಿಗೂ ಮುನ್ನ ರಾಹುಲ್ ರನ್ನು 17 ಕೋಟಿ ರೂಪಾಯಿ ನೀಡಿ ಲಖನೌ ಫ್ರಾಂಚೈಸಿ ತಂಡಕ್ಕೆ ಸೇರಿಸಿಕೊಂಡಿತ್ತು. ಆದರೆ 2024ರ ಟೂರ್ನಿಯಲ್ಲಿ ರಾಹುಲ್ ಪ್ರದರ್ಶನದ ಬಗ್ಗೆ ಮಾಲೀಕ ಸಂಜೀವ್ ಗೋಯೆಂಕಾ ಅತೃಪ್ತಿ ಹೊಂದಿದ್ದಾರೆ. ಇದೇ ಕಾರಣಕ್ಕೆ ತಂಡದಿಂದ ರಾಹುಲ್​ರನ್ನ ಕೈ ಬಿಡೋ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಆದ್ರೆ ರಾಹುಲ್ ಎಂತಹ ಆಟಗಾರ ಅನ್ನೋದು ಕ್ರಿಕೆಟ್ ಜಗತ್ತಿಗೆ ಗೊತ್ತಿದೆ. ಇದೇ ಕಾರಣಕ್ಕೆ ರಾಹುಲ್​ರಂತ ಗುಣಮಟ್ಟದ ಭಾರತೀಯ ಆಟಗಾರನನ್ನು ಪಡೆಯೋಕೆ ನಿಮಗೆ ಸಾಧ್ಯ ಇಲ್ಲ.  ಐಪಿಎಲ್ 2025 ರ ಮೆಗಾ-ಹರಾಜಿಗೂ ಮೊದಲು ಕೆಎಲ್ ರಾಹುಲ್ ಅನ್ನು ಉಳಿಸಿಕೊಳ್ಳಿ ಅಂತಾ ಎಲ್​ಎಸ್​ಜಿಗೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಸಲಹೆ ನೀಡಿದ್ರು.  ಆದ್ರೆ ಲಕ್ನೋ ಫ್ರಾಂಚೈಸಿಯಲ್ಲಿ ಮುಂದುವರಿಯೋದು ರಾಹುಲ್​ಗೇ ಇಷ್ಟ ಇಲ್ಲ ಎನ್ನಲಾಗ್ತಿದೆ.. ಇದೇ ಕಾರಣಕ್ಕೆ 2025ರ ಟೂರ್ನಿಗೆ ಬೇರೆ ತಂಡದಲ್ಲಿ ಆಡೋಕೆ ಚಿಂತನೆ ನಡೆಸಿದ್ದಾರೆ.

ಅಷ್ಟಕ್ಕೂ ಎಲ್​ಎಸ್​ಜಿ ತಂಡದ ನಾಯಕನಾಗಿ 2 ಸಲ ತಂಡವನ್ನ ಪ್ಲೇಆಫ್​ಗೆ ಕೊಂಡೊಯ್ದಿದ್ದ ರಾಹುಲ್​ ಈ ಸಲ ಕೂಡ ಚೆನ್ನಾಗೇ ಆಡಿದ್ರು. ಒಂದೆರಡು ಮ್ಯಾಚ್ ಗಳಲ್ಲಿ ಡಲ್ ಆಗಿದ್ದು ಬಿಟ್ರೆ ಉಳಿದಂತೆ ಚೆನ್ನಾಗೇ ಬ್ಯಾಟ್ ಬೀಸಿದ್ರು. 14 ಪಂದ್ಯಗಳಿಂದ 37ರ ಸರಾಸರಿಯಲ್ಲಿ 520 ರನ್ ಗಳಿಸಿದ್ರು. ಈ ಪೈಕಿ 4 ಅರ್ಧ ಶತಕಗಳೂ ಸೇರಿದ್ವು. ಆದ್ರೆ ಈ ಬಾರಿಯ ಐಪಿಎಲ್​ನಲ್ಲಿ ಎಲ್​ಎಸ್​ಜಿ ತಂಡ ಪ್ಲೇಆಫ್​ಗೂ ಕೂಡ ಪ್ರವೇಶ ಪಡೆದಿರಲಿಲ್ಲ. 14 ಪಂದ್ಯಗಳಲ್ಲಿ 7 ಪಂದ್ಯ ಗೆದ್ದು 14 ಅಂಕ ಗಳಿಸಿದ್ರೂ ಕೂಡ ಉತ್ತಮ ನೆಟ್ ರೇಟ್ ಇಲ್ಲದ ಕಾರಣ ಪಾಯಿಂಟ್ಸ್ ಟೇಬಲ್​ನಲ್ಲಿ 7ನೇ ಸ್ಥಾನದೊಂದಿಗೆ ಟೂರ್ನಿಯಿಂದ ಹೊರಬಿದ್ದಿತ್ತು. ತಂಡ ಹೊರಬಿದ್ದ ಬಳಿಕ ರಿಲ್ಯಾಕ್ಸ್ ಮೋಡ್​ಗೆ ಜಾರಿದ್ದ ಕೆ.ಎಲ್ ರಾಹುಲ್ ಸಾರ್ವಜನಿಕವಾಗಿ ಅಷ್ಟೇನು ಕಾಣಿಸಿಕೊಂಡಿರಲಿಲ್ಲ. ಇದೀಗ ಫಾರಿನ್​ನಲ್ಲಿ ರೌಂಡ್ಸ್ ಹೊಡೀತಿದ್ದು ರಿಲೀಫ್ ಆಗ್ತಿದ್ದಾರೆ. 2 ತಿಂಗಳು ಐಪಿಎಲ್​ನಲ್ಲಿ ಬ್ಯುಸಿ ಇದ್ದ ಕೆಎಲ್ ಇದೀಗ ಸಮಯ ಕಳೆಯುತ್ತಿದ್ದಾರೆ. ತಮ್ಮ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ರಾಹುಲ್ ಆಟದ ಹೊರತಾಗಿಯೂ ಅವ್ರ ಬಿಹೇವಿಯರ್ ಕೂಡ ಸಾಕಷ್ಟು ಜನ್ರಿಗೆ ಇಷ್ಟ ಆಗುತ್ತೆ. ಕ್ರೀಡಾಂಗಣದಲ್ಲಿ ಅವ್ರು ನಡೆದುಕೊಳ್ಳೋ ರೀತಿ, ಎಂಥ ಸಿಚುಯೇಶನ್ ಅನ್ನೂ ಕೂಲ್ ಆಗಿ ಹ್ಯಾಂಡಲ್ ಮಾಡೋ ಸ್ಟೈಲ್ ಅದೆಲ್ಲಕ್ಕಿಂತ ಹೆಚ್ಚಾಗಿ ಬೇರೆಯವ್ರನ್ನ ಹೇಗೆ ಗೌರವಿಸಬೇಕು ಅನ್ನೋದನ್ನ ಕನ್ನಡಿಗ ಕೆ.ಎಲ್ ರಾಹುಲ್ ಅವ್ರನ್ನ ನೋಡಿ ಕಲೀಬೇಕು. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಏಪ್ರಿಲ್ 19ರಂದು ಉತ್ತರ ಪ್ರದೇಶದ ಅಟಲ್‌ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ಚೆನ್ನೈ ವಿರುದ್ಧ ಲಕ್ನೋ ಪಂದ್ಯ ನಡೆದಿತ್ತು. ಲಕ್ನೋ ತಂಡವನ್ನ ಕೆ.ಎಲ್ ರಾಹುಲ್ ಲೀಡ್ ಮಾಡಿದ್ರು. ತಂಡ ಕೂಡ ಗೆದ್ದಿತ್ತು. ಪಂದ್ಯ ಮುಗಿದ ಬಳಿಕ ಎರಡೂ ತಂಡಗಳ ಆಟಗಾರರು ಪರಸ್ಪರ ಹಸ್ತಲಾಘವ ಮಾಡಿಕೊಂಡರು. ಈ ವೇಳೆ ಚೆನ್ನೈ ತಂಡದ ವಿಕೆಟ್‌ ಕೀಪರ್‌, ಕ್ರಿಕೆಟ್ ಲೆಜೆಂಡ್ ಎಂ.ಎಸ್‌ ಧೋನಿ ಅವರಿಗೆ ಹಸ್ತಲಾಘವ ಮಾಡುವಾಗ ಕೆ.ಎಲ್‌ ರಾಹುಲ್‌ ತಾವು ಧರಿಸಿದ್ದ ಕ್ಯಾಪ್‌ ತೆಗೆದಿದ್ದರು. ಈ ಮೂಲಕ ವಿಶ್ವ ಕಂಡ ಶ್ರೇಷ್ಠ ಆಟಗಾರನಿಗೆ ಗೌರವ ಸೂಚಿಸಿದ್ದರು. ರಾಹುಲ್​ರ ಇದೇ ನಡೆ ಕೋಟ್ಯಂತರ ಅಭಿಮಾನಿಗಳು ಹಾಗೇ ಕ್ರಿಕೆಟರ್ಸ್ ವಲಯದಲ್ಲಿ ಮೆಚ್ಚುಗೆಗೆ ಕಾರಣವಾಗಿತ್ತು.

ಸದ್ಯ ಐಪಿಎಲ್​ನಲ್ಲಿ ಫ್ರಾಂಚೈಸಿ ಮಾಲೀಕನಿಂದ ಅವಮಾನಕ್ಕೊಳಗಾಗಿ ವಿಶ್ವಕಪ್ ಟೂರ್ನಿ ಮಿಸ್ ಮಾಡಿಕೊಂಡಿರೋ ಕನ್ನಡಿಗ ಕೆ.ಎಲ್ ರಾಹುಲ್​ಗೆ ಆರ್​ಸಿಬಿ ಆಫರ್ ಕೊಟ್ಟಿದ್ದಾರೆ. ನಮ್ಮ ಆರ್​ಸಿಬಿಯಲ್ಲಿ ಮೊದ್ಲೇ ಕನ್ನಡಿಗರಿಗೆ ಚಾನ್ಸ್ ಕೊಡಲ್ಲ ಅನ್ನೋ ಆಕ್ರೋಶ ಕರ್ನಾಟಕ ಫ್ಯಾನ್ಸ್​ಗಿದೆ. ಹೀಗಾಗಿ ಪ್ರತೀ ವರ್ಷ ಕೂಡ ಕೆ.ಎಲ್ ರಾಹುಲ್ ಬೆಂಗಳೂರು ತಂಡಕ್ಕೆ ಬನ್ನಿ ಅಂತಾ ಫ್ಯಾನ್ಸ್ ಒತ್ತಾಯ ಮಾಡ್ತಾರೆ. ಅದ್ರಲ್ಲೂ ಈ ಸಲ ಲಕ್ನೋ ತಂಡದಲ್ಲಿ ಅಷ್ಟೆಲ್ಲಾ ಆದ ಮೇಲಂತೂ ಈ ಕೂಗು ಇನ್ನೂ ಜಾಸ್ತಿಯಾಗಿದೆ. ಕೆಎಲ್ ರಾಹುಲ್ ಅವರ ತವರೂರು ಕೂಡ ಆಗಿರುವ ಕಾರಣ, ಫ್ರಾಂಚೈಸಿ ಅವರನ್ನು ಖರೀದಿ ಮಾಡಲಿ ಅಂತಾ ಒತ್ತಾಯಿಸುತ್ತಿದ್ದಾರೆ. ಅಭಿಮಾನಿಗಳ ಆಗ್ರಹದ ಹೊರತಾಗಿಯೂ ರಾಹುಲ್​ರನ್ನ ಬೆಂಗಳೂರು ತಂಡಕ್ಕೆ ಖರೀದಿ ಮಾಡಲು ಆರ್​ಸಿಬಿ ಫ್ರಾಂಚೈಸಿಗೆ 2 ಕಾರಣಗಳಿವೆ. ಒಂದು ಕ್ಯಾಪ್ಟನ್ ಮತ್ತೊಂದು ವಿಕೆಟ್ ಕೀಪರ್. ಈಗಾಗ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೆಸ್ಟ್ ಫಿನಿಶರ್ ಅಂಡ್ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಈ ಬಾರಿಯ ಐಪಿಎಲ್ ಟೂರ್ನಿ ಬಳಿಕ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ ಆರ್​ಸಿಬಿಗೆ ಮುಂದಿನ ಆವೃತ್ತಿಯಲ್ಲಿ ವಿಕೆಟ್ ಕೀಪರ್, ಬ್ಯಾಟರ್ ಬೇಕಿದೆ. ಆರ್​ಸಿಬಿ ತಂಡ ಪ್ರತೀ ಬಾರಿ ಸಂಕಷ್ಟಕ್ಕೆ ಸಿಲುಕಿದ್ದಾಗಲೆಲ್ಲಾ ಡಿಕೆ ಆಸರೆಯಾಗ್ತಿದ್ರು. ಸೋ ಅವ್ರ ಪ್ಲೇಸ್​ಗೆ ಬೆಸ್ಟ್ ಪ್ಲೇಯರ್ ರಿಪ್ಲೇಸ್ ಆಗ್ಬೇಕಿದೆ. ಹಾಗೇನಾದ್ರೂ ರಾಹುಲ್ ಬಂದ್ರೆ ಬೆಂಗಳೂರು ತಂಡದ ಬಲ ಹೆಚ್ಚಾಗಲಿದೆ. ವಿಕೆಟ್ ಕೀಪರ್ ಕೂಡ ಸಿಕ್ಕಂತಾಗುತ್ತೆ. ಹಾಗೇ ಇನ್ನೊಂದು ರೀಸನ್ ಅಂದ್ರೆ ಆರ್​ಸಿಬಿ ಕ್ಯಾಪ್ಟನ್ಸಿ. 2025ರ ಐಪಿಎಲ್ ಟೂರ್ನಿಗೂ ಮುನ್ನ ಬೆಂಗಳೂರು ತಂಡದಲ್ಲಿ ಸಾಕಷ್ಟು ಚೇಂಜಸ್ ಆಗೋ ನಿರೀಕ್ಷೆಗಳಿವೆ. ಅದ್ರಲ್ಲಿ ಕ್ಯಾಪ್ಟನ್ಸಿಯೂ ಒಂದು. ಆರ್​​ಸಿಬಿ ಪ್ರಸೆಂಟ್ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್​ಗೆ ಈಗ 39 ವರ್ಷ. ಮುಂದಿನ ವರ್ಷಕ್ಕೆ 40 ವರ್ಷವಾಗಲಿದೆ. ಹೀಗಾಗಿ ಫಾಫ್ 2025ಕ್ಕೆ  ಐಪಿಎಲ್ ಆಡ್ತಾರೋ ಇಲ್ವೋ ಗೊತ್ತಿಲ್ಲ. ಸೋ ಫಾಫ್ ನಾಯಕತ್ವದಿಂದ ಕೆಳಗಿಳಿದ್ರೆ ಉತ್ತಮ ನಾಯಕನನ್ನ ಆಯ್ಕೆ ಮಾಡಬೇಕು. ಕಿಂಗ್ ಕೊಹ್ಲಿಯಂತೂ ನಾನು ಸಾರಥ್ಯ ವಹಿಸಲ್ಲ ಅಂತಾ ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ. ಹೀಗಾಗಿ ಹೊಸ ನಾಯಕನನ್ನ ಹುಡುಕಬೇಕಿದೆ. ಹಾಗೇನಾದ್ರೂ ರಾಹುಲ್ ಬೆಂಗಳೂರು ತಂಡಕ್ಕೆ ಬಂದ್ರೆ ಈ ಇಬ್ಬರ ಸ್ಥಾನವನ್ನೂ ತುಂಬಬಲ್ಲರು. ನಾಯಕನಾಗಿ ಎರಡು ಬಾರಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಪ್ಲೇಆಫ್​ಗೆ ಕೊಂಡೊಯ್ದಿರುವ ಕೆಎಲ್ ರಾಹುಲ್​ ಈಗಾಗಲೇ ತಮ್ಮ ನಾಯಕತ್ವದ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ. ಇದರ ಜೊತೆಗೆ ವಿಕೆಟ್ ಕೀಪರ್ ಆಗಿಯೂ ಐಪಿಎಲ್​ನಲ್ಲಿ ಮಿಂಚಿದ್ದಾರೆ. ಅಂದರೆ ಕೆಎಲ್ ರಾಹುಲ್ ಆಯ್ಕೆಯಿಂದ ಆರ್​ಸಿಬಿ ಫ್ರಾಂಚೈಸಿ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರ ಸ್ಥಾನಗಳನ್ನು ತುಂಬಬಹುದು. ಹೀಗಾಗಿಯೇ ಮೆಗಾ ಹರಾಜಿನಲ್ಲಿ ಕೆಎಲ್ ರಾಹುಲ್ ಕಾಣಿಸಿಕೊಂಡರೆ ಕನ್ನಡಿಗನ ಖರೀದಿಗೆ ಆರ್​ಸಿಬಿ ಫ್ರಾಂಚೈಸಿ ಮುಂಚೂಣಿಯಲ್ಲಿರಲಿದೆ. ಅದರಂತೆ ಐಪಿಎಲ್ 2025 ರಲ್ಲಿ ಕೆಎಲ್​ಆರ್​ ಆರ್​ಸಿಬಿಗೆ ಬಂದರೆ ಕ್ಯಾಪ್ಟನ್ ಪಟ್ಟದೊಂದಿಗೆ ಕಣಕ್ಕಿಳಿಯುವುದು ಖಚಿತ. ಕನ್ನಡಿಗರು ಕೂಡ ಇದೇ ಆಸೆಯಲ್ಲಿದ್ದಾರೆ.

Shwetha M

Leave a Reply

Your email address will not be published. Required fields are marked *