ಸಿಂಹಿಣಿಯರ ಗರ್ಜನೆಗೆ ಶರಣಾದ UP – ಡಾಟ್ ಬಾಲ್ ನಲ್ಲೇ ಬೇಟೆಯಾಡಿದ ಬೆಲ್
RCBಯಲ್ಲಿ ಟಗರು ಪುಟ್ಟಿಯದ್ದೇ ಹವಾ!

ಮುಂಬೈ ಇಂಡಿಯನ್ಸ್ ವಿರುದ್ಧ ಲಾಸ್ಟ್ ಬಾಲ್ನಲ್ಲಿ ರಣರೋಚಕವಾಗಿ ಗೆದ್ದಿದ್ದ ಆರ್‌ಸಿಬಿ ಯುಪಿ ವಾರಿಯರ್ಸ್ ವಿರುದ್ಧ ಕಂಪ್ಲೀಟ್ ಆಗಿ ಡಾಮಿನೇಟ್ ಮಾಡಿ ಒನ್ ಸೈಡೆಡ್ ಆಗಿ ಗೆದ್ದಿದೆ. ಬೌಲಿಂಗ್ನಲ್ಲಿ ರನ್ಸ್ ಕೊಡದೇ ಬ್ಯಾಟಿಂಗ್ನಲ್ಲಿ ವಿಕೆಟ್ ಕೊಡದೇ ವಾರಿಯರ್ಗಳನ್ನೇ ಬೇಟೆಯಾಡಿದ್ದಾರೆ. ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಮವಾರದ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಭರ್ಜರಿ ಗೆಲುವು ಕಂಡಿದೆ. ನವಿ ಮುಂಬೈನ DY ಪಾಟೀಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಆರ್‌ಸಿಬಿ, ಯುಪಿ ವಾರಿಯರ್ಸ್ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಯುಪಿ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 143 ರನ್ ಗಳಿಸಿತು. 144 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ಆರ್‌ಸಿಬಿ ಕೇವಲ 12.1 ಓವರ್‌ಗಳಲ್ಲಿ ಟಾರ್ಗೆಟ್ ರೀಚ್ ಆಗಿದೆ.
ಇದನ್ನೂ ಓದಿ : ಬಾಂಗ್ಲಾಗೆ ಚೋಕ್ ಕೊಟ್ಟ ICC – ಮೈದಾನ ಚೇಂಜ್.. ಭಾರತದಲ್ಲೇ ಫೈಟ್
ರನ್ ಕೊಡದೇ ಯುಪಿ ಬ್ಯಾಟರ್ ಗಳನ್ನ ಕಾಡಿದ ಲಾರೆನ್ ಬೆಲ್!
ಆರ್ಸಿಬಿಯ ವುಮೆನ್ಸ್ ಟೀಮ್ನಲ್ಲೂ ಬೌಲಿಂಗ್ ಯುನಿಟ್ ಸಿಕ್ಕಾಪಟ್ಟೆ ಸ್ಟ್ರಾಂಗ್ ಇದೆ. ಅದ್ರಲ್ಲೂ ಲಾರೆನ್ ಬೆಲ್ ಅಂತೂ ಡಾಟ್ ಬಾಲ್ಗಳಲ್ಲೇ ಸೌಂಡ್ ಮಾಡ್ತಿದ್ದಾರೆ. ಜಿಂಕೆಯಂತೆ ಜಿಗಿತಾ ಜಿಗಿತಾ ಬಂದು ಬಾಲ್ ಹಾಕೋ ಬೆಲ್ ರನ್ಗಳನ್ನೇ ಕೊಡಲ್ಲ. ಆರ್ಸಿಬಿಯ ಎರಡೂ ಗೆಲುವುಗಳಲ್ಲೂ ಇವ್ರ ಕೊಡುಗೆ ತುಂಬಾ ದೊಡ್ಡದಿದೆ. ಪವರ್ ಪ್ಲೇನಲ್ಲಿ ಬೌಲಿಂಗ್ ಮಾಡುವ ಲಾರೆನ್ ಬೆಲ್ ಎದುರಾಳಿಗಳ ಬೆವರಿಳಿಸಿದ್ದಾರೆ. ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ 4 ಓವರ್ ಬೌಲಿಂಗ್ ನಡೆಸಿ ಜಸ್ಟ್ 16 ರನ್‌ಗಳನ್ನು ನೀಡಿ 1 ವಿಕೆಟ್ ಕಬಳಿಸಿದರು. ಅಲ್ಲದೆ 15 ಡಾಟ್ ಬಾಲ್‌ಗಳನ್ನು ಸಹ ಮಾಡಿದ್ದಾರೆ. ಮುಂಬೈ ವಿರುದ್ಧವೂ ಲಾರೆನ್ ಬೆಲ್ ಬೌಲಿಂಗ್ ಅಟ್ಯಾಕ್ ಸಖತ್ತಾಗಿತ್ತು. 4 ಓವರ್ ಬೌಲಿಂಗ್ ಮಾಡಿ 14 ರನ್ ನೀಡಿ 1 ವಿಕೆಟ್ ಪಡೆದರು. ಈ ವೇಳೆ ಇವರು ಒಂದು ಮೇಡನ್ ಸಹ ಮಾಡಿದರು. ಈ ಪಂದ್ಯದಲ್ಲಿ ಇವರು 19 ಡಾಟ್ ಬೌಲ್‌ಗಳನ್ನು ಎಸೆದಿದ್ರು. ಆಡಿದ 2 ಪಂದ್ಯಗಳಲ್ಲಿ 2 ವಿಕೆಟ್ ಪಡೆದಿದ್ದು, 3.75ರ ಎಕಾನಮಿಯಲ್ಲಿ ರನ್ಸ್ ಕೊಟ್ಟಿದ್ದಾರೆ. ಅತೀ ಹೆಚ್ಚು ಡಾಟ್ ಬಾಲ್ ಹಾಕಿರೋರ ಲಿಸ್ಟ್ನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಒಂದೇ ಓವರ್ ನಲ್ಲಿ 2 ವಿಕೆಟ್ ಪಡೆದ ಶ್ರೇಯಾಂಕಾ!
ಇನ್ನು ಆರ್‌ಸಿಬಿ ಪರ ನಮ್ಮ ಕನ್ನಡತಿ ಶ್ರೇಯಾಂಕಾ ಪಾಟೀಲ್ ಕೂಡ ಶೈನ್ ಆಗ್ತಿದ್ದಾರೆ. ಮುಂಬೈ ವಿರುದ್ಧದ ಮೊದಲ ಪಂದ್ಯದಲ್ಲೂ 32 ರನ್ಗಳನ್ನ ನೀಡಿ 1 ವಿಕೆಟ್ ತೆಗೆದಿದ್ರು. ಯುಪಿ ವಾರಿಯರ್ಸ್ ವಿರುದ್ಧ 4 ಓವರ್ಗಳನ್ನ ಬೌಲ್ ಮಾಡಿದ ಶ್ರೇಯಾಂಕಾ ಸ್ವಲ್ಪ ಎಕ್ಸ್ಪೆನ್ಸಿವ್ ಅನ್ಸಿದ್ರೂ ಎರಡು ಪ್ರಮುಖ ವಿಕೆಟ್ಗಳನ್ನ ಬೇಟೆಯಾಡಿದ್ರು. 12.50 ಎಕಾನಮಿಯಲ್ಲಿ 50 ರನ್ಸ್ ಕೊಟ್ಟು 2 ವಿಕೆಟ್ ತೆಗೆದ್ರು. ಅದರಲ್ಲೂ ಪಂದ್ಯದ 8ನೇ ಓವರ್ ಬೌಲಿಂಗ್ನಲ್ಲಿ ಮೊದಲ ಎಸೆತದಲ್ಲೇ ಯುಪಿ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಅವರ ವಿಕೆಟ್ ಪಡೆದರು. ಌಕ್ಚುಲಿ ರಾಧಾ ಯಾದವ್ ಅದ್ಭುತವಾಗಿ ಈ ಕ್ಯಾಚ್ ಗಿಡಿದ್ರು. ನೆಕ್ಸ್ಟ್ ಇದೇ ಓವರ್ನ ಕೊನೇ ಎಸೆತದಲ್ಲಿ ಯುಪಿ ಬ್ಯಾಟಿಂಗ್ ಬ್ರಹ್ಮಾಸ್ತ್ರವಾಗಿರೋ ಫೋಬೆ ಲಿಚ್‌ಫೀಲ್ಡ್ ಅವರ ವಿಕೆಟ್ ಎಗರಿಸಿದ್ರು. ಹಾಗೇ ಯುಪಿ ವಿರುದ್ಧ ನಡಿನ್ ಡಿ ಕ್ಲರ್ಕ್ ಕೂಡ 28 ರನ್ಸ್ ನೀಡಿ 2 ವಿಕೆಟ್ ತೆಗೆದ್ರು.
ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಅಬ್ಬರಿಸಿದ ಗ್ರೇಸ್ ಹ್ಯಾರಿಸ್!
ಇನ್ನು ಯುಪಿ ವಿರುದ್ಧದ ಮ್ಯಾಚಲ್ಲಿ ಬೌಲಿಂಗ್ ಎಷ್ಟು ಎಫೆಕ್ಟಿವ್ ಆಗಿತ್ತೋ ಬ್ಯಾಟಿಂಗ್ ಅದಕ್ಕೂ ಮೇಲೆ ಅನ್ನೋ ಥರ ಇತ್ತು. ಓಪನರ್ಗಳಾದ ಗ್ರೇಸ್ ಹ್ಯಾರಿಸ್ ಮತ್ತು ಸ್ಮೃತಿ ಮಂದಾನ ಜೊತೆಯಾಟ ಸಖತ್ತಾಗಿ ವರ್ಕ್ ಆಯ್ತು. ಒಂದ್ಕಡೆ ಗ್ರೇಸ್ ಅಗ್ರೆಸ್ಸಿವ್ ಮೂಡ್ನಲ್ಲಿದ್ರೆ ಸ್ಮೃತಿ ಕೂಡ ಅಷ್ಟೇ ಸಪೋರ್ಟಿವ್ ಆಗಿ ಇನ್ನಿಂಗ್ಸ್ ಆಡಿದ್ರು. ಒಂದ್ಕಡೆ ಗ್ರೇಸ್ ಶತಕದತ್ತ ಮುನ್ನುಗ್ತಿದ್ರೆ ಇನ್ನೊಂದ್ಕಡೆ ಸ್ಮೃತಿ ಅರ್ಧಶತಕದತ್ತ ರನ್ಸ್ ಬಾರಿಸ್ತಿದ್ರು. ಆದ್ರೆ12ನೇ ಓವರ್‌ನಲ್ಲಿ ಶಿಖಾ ಪಾಂಡೆ ಬೌಲಿಂಗ್ನಲ್ಲಿ ಗ್ರೇಸ್ ವಿಕೆಟ್ ಒಪ್ಪಿಸಿದರು. ಅಷ್ಟೊತ್ತಿಗೆಲ್ಲಾ ಆರ್‌ಸಿಬಿ 137 ರನ್ ಗಳಿಸಿತ್ತು. ಹ್ಯಾರಿಸ್ ಕೇವಲ 40 ಎಸೆತಗಳಲ್ಲಿ 5 ಸಿಕ್ಸರ್‌ಗಳು ಮತ್ತು 10 ಬೌಂಡರಿಗಳನ್ನು ಒಳಗೊಂಡಂತೆ 85 ರನ್‌ಗಳ ಅಬ್ಬರದ ಇನ್ನಿಂಗ್ಸ್ ಆಡಿದರು. ಇನ್ನಿಂಗ್ಸ್‌ನ 73ನೇ ಎಸೆತದಲ್ಲೇ ಆರ್‌ಸಿಬಿ ವಿನ್ ಆಯ್ತು. ಸ್ಮೃತಿ 47 ರನ್ ಗಳಿಸಿ ಅಜೇಯರಾಗಿ ಉಳಿದ್ರು. ಸೋ ಎರಡಕ್ಕೆ ಎರಡೂ ಪಂದ್ಯಗಳನ್ನ ಗೆದ್ದಿರೋ ಆರ್‌ಸಿಬಿ ಈಗ ಪಾಯಿಂಟ್ಸ್ ಪಟ್ಟಿಯಲ್ಲಿ ಟಾಪ್ ಆಫ್ ದಿ ಟೇಬಲ್ ಇದೆ. ನೆಕ್ಸ್ಟ್ ಜನವರಿ 16ರಂದು ಗುಜರಾತ್ ಜೇಂಟ್ಸ್ ವಿರುದ್ಧ ಮೂರನೇ ಪಂದ್ಯ ಆಡಲಿದೆ. ಗುಜರಾತ್ ಕೂಡ ಎರಡು ಪಂದ್ಯಗಳನ್ನ ಗೆದ್ದಿದೆ.

ನೋಡಿರಿ

