ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPLಗೆ ಅದ್ದೂರಿ ಚಾಲನೆ – RCB VS SRH ಪಂದ್ಯಕ್ಕೆ ಇದ್ಯಾ ಮಳೆ ಕಾಟ

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPLಗೆ ಅದ್ದೂರಿ ಚಾಲನೆ – RCB VS SRH ಪಂದ್ಯಕ್ಕೆ ಇದ್ಯಾ ಮಳೆ ಕಾಟ

ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ 19ನೇಯ ಆವೃತ್ತಿಗೆ ಇಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅದ್ದೂರಿ ಚಾಲನೆ ಸಿಗಲಿದೆ. ಉದ್ಘಾಟನ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ಮು ಖಾಮುಖಿಯಾಗಲಿವೆ. ರಾಜ್ಯದ ಹಲವೆಡೆ  ಮಳೆಯಾಗುತ್ತಿರುವ ಕಾರಣ ಪಂದ್ಯಕ್ಕೆ ಮಳೆ ಅಡ್ಡಿಯಾಗಬಹುದಾ ಎಂಬ ಆತಂಕ ಅಭಿಮಾನಿಗಳಲ್ಲಿ ಮೂಡಿದೆ.ಪಂದ್ಯದ ಸಮಯದಲ್ಲಿ ಮೋಡ ಕವಿದಿರುವ ಸಾಧ್ಯತೆ ಶೇ. 60 ರಷ್ಟು ಇದ್ದರೂ, ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಮತ್ತು ಸುತ್ತಮುತ್ತ ವಾತಾವರಣ ಆಹ್ಲಾದಕರವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಮಳೆಯಾಗುವ ಸಾಧ್ಯತೆ ಶೇ. 10 ರಷ್ಟು ಇರಲಿದೆ ಎಂದು ತಿಳಿಸಿದೆ.

ಮಳೆ ಬಂದರೂ  ಇಲ್ಲ ಟೆನ್ಷನ್ 

ಪಂದ್ಯ ನಡೆಯುವ ಸಮಯದಲ್ಲಿ ಎಷ್ಟೇ ಜೋರಾಗಿ ಮಳೆ ಬಂದರೂ 15 ರಿಂದ 20 ನಿಮಿಷದೊಳಗೆ ಮತ್ತೆ ಪಂದ್ಯ ಮುಂದುವರಿಯಲು ಅವಕಾಶ ಮಾಡಿಕೊಡುವ ಸೌಲಭ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದೆ. ದಶಕದ ಹಿಂದೆ ಇಲ್ಲಿ ಅಳವಡಿಸಲಾಗಿರುವ ಸಬ್‌ ಏರ್ ಸಿಸ್ಟಂ ತಂತ್ರಜ್ಞಾನದಿಂದ ಮಳೆ ನೀರನ್ನು ಶೀಘ್ರವಾಗಿ ಹೊರಹಾಕಬಹುದು. ಮೈದಾನವನ್ನು ಪಂದ್ಯಕ್ಕೆ ಅಣಿಗೊಳಿಸಬಹುದು. ಆದ್ದರಿಂದ ಮಳೆಯಿಂದಾಗಿ ಪಂದ್ಯ ರದ್ದಾಗುವುದು ತೀರಾ ವಿರಳ. ಆದರೆ ಸತತವಾಗಿ ಮಳೆ ಹನಿಯುತ್ತಲೇ ಇದ್ದರೆ ಪಂದ್ಯ ಮುಂದುವರಿಸುವುದು ತುಸು ಕಷ್ಟ.

ಇದನ್ನೂ ಓದಿ: ಶನಿ ದೋಷಗಳಿಂದ ಮುಕ್ತಿ ಪಡೆಯಬೇಕಾ? – ಶನಿವಾರ ಹನುಮಂತನ ಆರಾಧನೆಯನ್ನ ಹೀಗೆ ಮಾಡಿ

ಹೆಚ್ಚುವರಿ ಸಮಯ: ಮಳೆಯಿಂದ ತಡವಾದರೆ ಪಂದ್ಯವನ್ನು ಪೂರ್ಣಗೊಳಿಸಲು 120 ನಿಮಿಷಗಳ (2 ಗಂಟೆ) ಹೆಚ್ಚುವರಿ ಸಮಯ ಲಭ್ಯವಿರುತ್ತದೆ.

ಪಂದ್ಯದ ಓವರ್‌ಗಳು: 5-ಓವರ್‌ಗಳ ಪಂದ್ಯವನ್ನು ನಡೆಸಲು ಎರಡೂ ತಂಡಗಳಿಗೆ ಕನಿಷ್ಠ 5 ಓವರ್‌ಗಳ ಅವಕಾಶವಿರಬೇಕು. ಮಳೆಯಿಂದಾಗಿ 5 ಓವರ್‌ಗಳ ಪಂದ್ಯವೂ ಸಾಧ್ಯವಾಗದಿದ್ದರೆ, ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ ಮತ್ತು ಉಭಯ ತಂಡಗಳಿಗೂ ಅಂಕಗಳನ್ನು ಹಂಚಿಕೊಳ್ಳಲಾಗುತ್ತದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು:

 ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜಾಕೋಬ್ ಬೆಥೆಲ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ನುವಾನ್ ಸಿಂಗ್ ದಯಾಳ್, ಭುವನೇಶ್ವರ್ ಕುಮಾರ್, ನುವಾನ್ ಸಿಂಗ್ ದಯಾಳ್, ರಶ್ಯಾ ವೆಂಕಟ್, ಅಬ್ದೀನ್ ಸಿಂಗ್ ಅಯ್ಯರ್, ಜಾಕೋಬ್ ಡಫ್ಫಿ, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ಜೋರ್ಡಾನ್ ಕಾಕ್ಸ್, ವಿಕ್ಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕನಿಷ್ಕ್ ಚೌಹಾಣ್.

Kishor KV