SRH ಬಗ್ಗು ಬಡಿದ್ರೆ RCB ಟಾಪರ್.. ರಜತ್ ಪಡೆಗೆ ಪ್ಲೇಯಿಂಗ್ 11 ಟ್ವಿಸ್ಟ್ – 20 ದಿನದ ಬ್ರೇಕ್ ಚಾಲೆಂಜಾಗುತ್ತಾ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ವರ್ಸಸ್ ಸನ್ ರೈಸರ್ಸ್ ಹೈದ್ರಾಬಾದ್ ನಡುವಿನ ಪಂದ್ಯಕ್ಕೆ ಕೌಂಟ್ಡೌನ್ ಶುರುವಾಗಿದೆ. ಈ ಪಂದ್ಯ ಆರ್ಸಿಬಿಗೆ ಮೋಸ್ಟ್ ಇಂಪಾರ್ಟೆಂಟ್. ಟಾಪ್-2 ರೇಸ್ನಲ್ಲಿ ಉಳಿಯೋಕೆ ಮಸ್ಟ್ ವಿನ್ ಗೇಮ್. ಹೀಗಾಗಿ ಈ ಪಂದ್ಯಕ್ಕೆ ಆರ್ ಸಿಬಿ ಪರ ಯಾರೆಲ್ಲಾ ಕಣಕ್ಕಿಳಿಯಬಹುದು? ಹೇಗಿದೆ ಅವ್ರ ಪರ್ಫಾಮೆನ್ಸ್? ಪ್ಲೇಆಫ್ ರೇಸ್ನಿಂದ ಹೊರಬಿದ್ದಿರೋ ಹೈದ್ರಾಬಾದ್ಗೂ ಈ ಮ್ಯಾಚ್ ಯಾಕೆ ಮುಖ್ಯ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಸ್ಟೇಜ್‌ನಲ್ಲಿ ಗಿಲ್ಲಿ – ಡ್ರೋನ್ ಫೈಟ್.. ಪಾರ್ಟ್ನರ್ ಪರೀಕ್ಷೆಯಲ್ಲಿ ಪಾಸ್ ಯಾರು? -ಗಿಲ್ಲಿನಟ ಮಲೇಷ್ಯಾ ಸಿಕ್ರೇಟ್ ರಿವೀಲ್!
ಒಂದಲ್ಲ.. ಎರಡಲ್ಲ.. ಬರೋಬ್ಬರಿ 20 ದಿನಗಳ ಲಾಂಗ್ ಬ್ರೇಕ್.. ಸತತ ಮೂರು ವಾರಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಾಯ್ಸ್ ಮೈದಾನಕ್ಕೆ ಇಳಿಯೋಕೆ ರೆಡಿಯಾಗಿದ್ದಾರೆ. ಮೇ 3ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯವನ್ನ 2 ರನ್ಗಳಿಂದ ರೋಚಕವಾಗಿ ಗೆದ್ದಿದ್ದ ಆರ್ಸಿಬಿ ಆಟಗಾರರು ಮೇ 9ರಂದು ಲಕ್ನೋ ವಿರುದ್ಧ ಕಣಕ್ಕಿಳಿಯೋಕೆ ರೆಡಿಯಾಗಿದ್ರು. ಬಟ್ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದಿಂದಾಗಿ ಅದೇ ದಿನ ಇಡೀ ಟೂರ್ನಿಯನ್ನ ಪೋಸ್ಟ್ಪೋನ್ ಮಾಡಲಾಗಿತ್ತು. ಆ ಬಳಿಕ ಮೇ 17ರಿಂದ ಆರ್ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯದ ಮೂಲಕವೇ ಟೂರ್ನಿ ರೀಸ್ಟಾರ್ಟ್ ಆದ್ರೂ ಮಳೆಯಿಂದಾಗಿ ಪಂದ್ಯ ನಡೆದೇ ಇರಲಿಲ್ಲ. ಸೋ ಮೇ 3ರಲ್ಲಿ ಕಣಕ್ಕಿಳಿದಿದ್ದ ಬೆಂಗಳೂರು ಟೀಂ ಈಗ ಮೇ 23ಕ್ಕೆ ಮತ್ತೆ ಮೈದಾನಕ್ಕೆ ಇಳೀತಿದ್ದಾರೆ. ಈ ನಡುವೆ ತಂಡದಲ್ಲಿ ಸಾಕಷ್ಟು ಬದಲಾವಣೆಗಳೂ ಆಗಿದೆ. ಹೀಗಾಗೇ ಅಳೆದು ತೂಗಿ ಹೈದ್ರಾಬಾದ್ ವಿರುದ್ಧದ ಪಂದ್ಯಕ್ಕೆ ಪ್ಲೇಯಿಂ್ 11ನಲ್ಲಿ ಯಾರೆಲ್ಲಾ ಕಣಕ್ಕಿಳಿಯಬಹುದು ಅನ್ನೋದು ಕೂಡ ಕುತೂಹಲ ಮೂಡಿಸಿದೆ.
ಐಪಿಎಲ್ನ 65ನೇ ಪಂದ್ಯದಲ್ಲಿ ಆರ್ಸಿಬಿ ಮತ್ತು ಹೈದ್ರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಆರ್ಸಿಬಿ ಪರ ಇಂಗ್ಲಿಷ್ ಆಲ್‌ರೌಂಡರ್ ಜೇಕಬ್ ಬೆಥೆಲ್ ಹಾಗೇ ಆರ್ಸಿಬಿ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸುವ ನಿರೀಕ್ಷೆಯಿದೆ. ಬೆಥೆಲ್ ಅಗ್ರೆಸ್ಸಿವ್ ಇಂಟೆಂಟ್ನಲ್ಲಿ ಈ ಪಂದ್ಯದಲ್ಲೂ ಬ್ಯಾಟ್ ಬೀಸುವ ಮೈಂಡ್ಸೆಟ್ನಲ್ಲಿ ಇರ್ತಾರೆ. ಮತ್ತೊಂದೆಡೆ ವಿರಾಟ್ ಕೊಹ್ಲಿ ಆರಂಭದಲ್ಲಿ ಡಿಫೆನ್ಸಿವ್ ಮೋಡ್ನಲ್ಲಿ ಬ್ಯಾಟ್ ಬೀಸ್ತಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ವಿರಾಟ್ ಮತ್ತು ಬೆಥೆಲ್ ಇಬ್ರೂ ಅರ್ಧಶತಕಗಳನ್ನ ಸಿಡಿಸಿದ್ರು. ಸೋ ಈ ಜೋಡಿ ಎಸ್ಆರ್ಹೆಚ್ ವಿರುದ್ಧ ಮೋಡಿ ಮಾಡೋ ನಿರೀಕ್ಷೆ ಇದೆ. ಹಾಗೇ ಮಿಡಲ್ ಆರ್ಡರ್ನಲ್ಲಿ ಮಯಾಂಕ್ ಅಗರ್ವಾಲ್ ಮತ್ತು ರಜತ್ ಪಾಟಿದಾರ್ ಬರ್ತಾರೆ. ಮಯಾಂಕ್ ಆರ್ಸಿಬಿ ಸೇರಿದ್ಮೇಲೆ ಅವ್ರಿಗೆ ಇದು ಫಸ್ಟ್ ಮ್ಯಾಚ್. ಪಡಿಕ್ಕಲ್ ಬದ್ಲಿಗೆ ಬಂದಿರೋ ಮಯಾಂಕ್ಗೆ ಪ್ಲೇಯಿಂಗ್ 11ನಲ್ಲಿ ಚಾನ್ಸ್ ಸಿಗೋ ನಿರೀಕ್ಷೆ ಇದೆ. ಹಾಗೇ ಪಾಟಿದಾರ್ ಸ್ಫೋಟಕ ಇನ್ನಿಂಗ್ಸ್ ಆಡ್ಬೇಕಿದೆ. ಆ ಬಳಿಕ ಜಿತೇಶ್ ಶರ್ಮಾ ಒಳ್ಳೆ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸ್ತಾರೆ. ಇನ್ನು ಆಲ್‌ರೌಂಡರ್ ಗಳಾಗಿ ರೊಮಾರಿಯೊ ಶೆಫರ್ಡ್, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ ಬ್ಯಾಟಿಂಗ್ಗೆ ಬರ್ತಾರೆ. ಲೀಗ್ ಹಂತದ ಪಂದ್ಯಗಳ ಬಳಿಕ ವೆಸ್ಟ್ ಇಂಡೀಸ್ ಸೇರಲಿರುವ ಹಾರ್ಡ್ ಬ್ಯಾಟರ್ ರೊಮಾರಿಯೊ ಶೆಫರ್ಡ್ ರನ್ನ ಉಳಿದ ಎರಡು ಪಂದ್ಯಗಳಲ್ಲಿ ಕಣಕ್ಕಿಳಿಸಲು ಫ್ರಾಂಚೈಸಿ ಎದುರು ನೋಡ್ತಿದೆ. ಬೌಲರ್ಗಳ ಕೋಟಾದಲ್ಲಿ ಎಂದಿನಂತೆ ಸುಯಾಶ್ ಶರ್ಮಾ, ಯಶ್ ದಯಾಳ್, ಭುವನೇಶ್ವರ್ ಕುಮಾರ್ ಇರ್ತಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಸ್ಪಿನ್ ವಿಭಾಗವನ್ನು ಕೃನಾಲ್ ಪಾಂಡ್ಯ ಮತ್ತು ಸುಯಾಶ್ ಶರ್ಮಾ ನಿರ್ವಹಿಸಲಿದ್ದಾರೆ, ಇಬ್ಬರೂ ಮಧ್ಯಮ ಓವರ್‌ಗಳಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಬಟ್ ಹೇಜಲ್ ವುಡ್ ರೀ ಜಾಯ್ನ್ ಬಗ್ಗೆ ಇನ್ನಷ್ಟೇ ಅಪ್ಡೇಟ್ ಬರ್ಬೇಕು. ಹೀಗಾಗಿ ಹೇಜಲ್ವುಡ್ ಇಲ್ಲ ಅಂದ್ರೆ ಲುಂಗಿ ಎನ್ಗಿಡಿ ಪ್ಲೇಯಿಂಗ್ 11ಗೆ ಬರ್ತಾರೆ. ಇನ್ನು ಲುಂಗಿ ಎನ್ಗಿಡಿ ಈ ಪಂದ್ಯಕ್ಕಷ್ಟೇ ಲಭ್ಯ ಇರ್ತಾರೆ. ಆ ಬಳಿಕ ಅವ್ರು ತವರಿಗೆ ಮರಳಲಿದ್ದು ಅವ್ರ ಬದಲಿಗೆ ಬ್ಲೆಸಿಂಗ್ ಮುಜರಬಾನಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗುತ್ತದೆ.
ಇಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಯಾರನ್ನ ಬಳಸಿಕೊಳ್ತಾರೆ ಅನ್ನೋದು ಕೂಡ ಕುತೂಹಲ ಮೂಡಿಸಿದೆ. ಕಳೆದ ಪಂದ್ಯಗಳಲ್ಲಿ ದೇವದತ್ ಪಡಿಕ್ಕಲ್ ಇಂಪ್ಯಾಕ್ಟ್ ಸಬ್ ಆಗಿ ಕಣಕ್ಕಿಳೀತಾ ಇದ್ರು. ಬಟ್ ಈಗ ಅವ್ರು ಇಡೀ ಟೂರ್ನಿಯಿಂದ್ಲೇ ರೂಲ್ಡ್ ಔಟ್ ಆಗಿದ್ದಾರೆ. ಹೀಗಾಗಿ ಯಾರನ್ನ ಇಂಪ್ಯಾಕ್ಟ್ ಸಬ್ ಆಗಿ ಬಳಸ್ತಾರೆ ನೋಡ್ಬೇಕು.