ಮ್ಯಾಚ್ ಶಿಫ್ಟ್ RCBಗೇ ಲಾಭ – SRH, LSG ಸೋಲಿಸಿದ್ರೆ ಫೈನಲ್?
1 ಪಿಚ್.. 2 ಮ್ಯಾಚ್.. ಸವಾಲೇನು?

ಆರ್ಸಿಬಿಗೆ ಪ್ಲೇಆಫ್ಗೆ ಕ್ವಾಲಿಫೈ ಆಗಿರೋದಕ್ಕಿಂತ ಟಾಪ್-2ನಲ್ಲಿ ಸೆಲೆಕ್ಟ್ ಆಗೋದು ಮೋಸ್ಟ್ ಇಂಪಾರ್ಟೆಂಟ್. ಬಟ್ ಆಲ್ರೆಡಿ ಕೆಕೆಆರ್ ವಿರುದ್ಧದ ಮ್ಯಾಚ್ ಮಳೆಯಿಂದ ಕ್ಯಾನ್ಸಲ್ ಆಗಿ ಇದೀಗ ಹೈದ್ರಾಬಾದ್ ವಿರುದ್ಧದ ಪಂದ್ಯಕ್ಕೂ ಮಳೆ ರಗಳೆಯಾಗೋ ಆತಂಕ ಎದುರಾಗಿತ್ತು. ಹಾಗೇನಾದ್ರೂ ಈ ಪಂದ್ಯದಲ್ಲೂ ಮಳೆ ಬಂದು ರದ್ದಾದ್ರೆ ದೊಡ್ಡ ಹೊಡೆತ ಬೀಳ್ತಿತ್ತು. ಬಟ್ ಈಗ ಆ ಟೆನ್ಷನ್ ಇಲ್ಲ. ಯಾಕಂದ್ರೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಆರ್‌ಸಿಬಿ ವರ್ಸಸ್ ಎಸ್ಆರ್ಹೆಚ್ ನಡುವಿನ ಪಂದ್ಯವನ್ನೇ ಶಿಫ್ಟ್ ಮಾಡ್ಲಾಗಿದೆ. ಉಭಯ ತಂಡಗಳು ಲಕ್ನೋನಲ್ಲಿ ಕಣಕ್ಕಿಳಿಯಲಿವೆ.
ಇದನ್ನೂ ಓದಿ : ಚೆನ್ನೈ ವಿರುದ್ಧ ರಾಜಸ್ಥಾನ್ ರಾಯಲ್ಸ್‌ಗೆ ಜಯ – ಗೆಲುವಿನೊಂದಿಗೆ ಲೀಗ್‌ಗೆ ವಿದಾಯ ಹೇಳಿದ ಆರ್‌ಆರ್
ಇದೇ ಶುಕ್ರವಾರ ಅಂದ್ರೆ ಮೇ 23ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದ್ರಾಬಾದ್ ಬ್ಯಾಟಲ್ ನಡೆಯಲಿದೆ. ಈ ಪಂದ್ಯವನ್ನ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಸೋಕೆ ಸಿದ್ಧತೆ ಮಾಡಿಕೊಳ್ಳಲಾಗ್ತಿತ್ತು. ಬಟ್ ಕಳೆದ ನಾಲ್ಕೈದು ದಿನಗಳಿಂದ ಬೆಂಗಳೂರಲ್ಲಿ ಮಳೆ ಬೆಂಬಿಡದೆ ಸುರೀತಿದೆ. ಮೇ 17ರಂದು ಕೆಕೆಆರ್ ವಿರುದ್ಧದ ಆರ್‌ಸಿಬಿ ಪಂದ್ಯ ಮಳೆ ಕಾರಣಕ್ಕೆ ರದ್ದಾಗಿತ್ತು. ಇದೀಗ ಹೈದ್ರಾಬಾದ್ ವಿರುದ್ಧದ ಫೈಟ್ ಕೂಡ ವಾಶ್ ಔಟ್ ಆಗೋ ಆತಂಕ ಎದುರಾಗಿದೆ. ಇದೇ ಕಾರಣಕ್ಕೆ ಪಂದ್ಯವನ್ನೇ ಶಿಫ್ಟ್ ಮಾಡ್ಲಾಗಿದೆ. ಆರ್‌ಸಿಬಿ ಮತ್ತು ಎಸ್ಆರ್ ಹೆಚ್ ತಂಡಗಳು ಲಕ್ನೋದಲ್ಲಿ ಕಣಕ್ಕಿಳಿಯಲಿವೆ.
ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಇನ್ನೂ ಒಂದು ವಾರಗಳ ಕಾಲ ಮಳೆ ಮುಂದುವರಿಯೋ ಸಾಧ್ಯತೆ ಇದೆ. ಹವಾಮಾನ ಇಲಾಖೆ ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಅದ್ರಲ್ಲೂ ಮೇ 21 ಮತ್ತು 22 ರಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. ಈ ಕಾರಣದಿಂದ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮೇ 23ಕ್ಕೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪಂದ್ಯವನ್ನು ಲಖನೌನ ಇಕಾನಾ ಕ್ರೀಡಾಂಗಣಕ್ಕೆ ಸ್ಥಳಾಂತರಿಸಿದೆ. ಈ ಸ್ಥಳಾಂತರದಿಂದ ಆರ್‌ಸಿಬಿ ತನ್ನ ಉಳಿದ ಎರಡು ಲೀಗ್ ಪಂದ್ಯಗಳನ್ನು ಲಖನೌನ ಏಕಾನಾ ಕ್ರೀಡಾಂಗಣದಲ್ಲೇ ಆಡಲಿದೆ. ಮೊದಲ ಪಂದ್ಯವು ಮೇ 23 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ, ಮತ್ತು ಎರಡನೇ ಪಂದ್ಯವು ಮೇ 27 ರಂದು ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆಯಲಿದೆ.
ಬಿಸಿಸಿಐ ಆರ್‌ಸಿಬಿ ಮತ್ತು ಎಸ್‌ಆರ್‌ಎಚ್ ತಂಡಗಳಿಗೆ ಮಂಗಳವಾರವೇ ಸ್ಥಳಾಂತರದ ಕುರಿತು ಮಾಹಿತಿ ನೀಡಿದೆ. ಮಂಗಳವಾರ ಆರ್‌ಸಿಬಿ ಆಟಗಾರರ ಪ್ರಾಕ್ಟೀಸ್ ಸೆಷನ್ ನಡೆಯಬೇಕಿತ್ತು, ಆದರೆ ಅದನ್ನು ರದ್ದುಗೊಳಿಸಲಾಗಿದೆ. ಎಸ್‌ಆರ್‌ಎಚ್ ತಂಡವು ಮೇ 20 ರ ಸಂಜೆ ಬೆಂಗಳೂರಿಗೆ ಪ್ರಯಾಣಿಸಬೇಕಿತ್ತು, ಆದರೆ ನೇರವಾಗಿ ಲಖನೌಗೆ ತೆರಳಲು ಸೂಚನೆ ನೀಡಲಾಗಿದೆ. ಇದ್ರಿಂದಾಗಿ ಪಂದ್ಯ ರದ್ದಾಗುತ್ತೆ ಎನ್ನುವ ಆತಂಕ ತಪ್ಪಿದೆ. ಅಷ್ಟಕ್ಕೂ ಬಿಸಿಸಿಐ ಇಂಥಾದ್ದೊಂದು ದಿಟ್ಟ ನಿರ್ಧಾರ ತೆಗೆದುಕೊಳ್ಳೋಕೆ ಕಾರಣ ಕೂಡ ಇದೆ.
2 ಪಂದ್ಯ ಆಡಲೇಬೇಕು ಆರ್ ಸಿಬಿ!
ಆರ್ ಸಿಬಿಗೆ ಲೀಗ್ ಹಂತದಲ್ಲಿ ಇನ್ನು ಎರಡು ಪಂದ್ಯಗಳು ಬಾಕಿ
17 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನ
ಎರಡೂ ಪಂದ್ಯಗಳಲ್ಲೂ ಗೆಲುವು ಸಾಧಿಸಿದರೆ ಕ್ವಾಲಿಫೈಯರ್ 1
ಹೈದ್ರಾಬಾದ್ ವಿರುದ್ಧದ ಪಂದ್ಯವೂ ರದ್ದಾದ್ರೆ 2 ಅಂಕ ಕೈ ತಪ್ಪುತ್ತೆ
ಆರ್ ಸಿಬಿ ತನ್ನ ಪ್ರದರ್ಶನದ ಮೂಲಕ ಅಗ್ರ-2ರ ಸ್ಥಾನವನ್ನು ಉಳಿಸಬಹುದು
ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯವು ಭಾರೀ ಮಳೆಯಿಂದ ರದ್ದು
ಡೆಲ್ಲಿ ತಂಡ ಗುಜರಾತ್ ವಿರುದ್ಧ ಸೋಲೋವರೆಗೂ ಕಾಯಬೇಕಾಗಿರಲಿಲ್ಲ
ನಾಕೌಟ್ನಲ್ಲಿ ಯಾವ ಪ್ಲೇಸ್ ಅನ್ನೋದು ಮುಂದಿನ ಪಂದ್ಯಗಳಲ್ಲಿ ನಿರ್ಧಾರ
ಮೇ 23 ರಂದು ಬೆಂಗಳೂರು ಮತ್ತು ಹೈದ್ರಾಬಾದ್ ತಂಡಗಳು ಲಕ್ನೋದಲ್ಲಿ ಎದುರು ಬದುರಾಗಲಿವೆ. ಈಗಾಗ್ಲೇ ಪ್ಲೇಆಫ್ಸ್ನಿಂದ ಹೊರಬಿದ್ದಿರೋ ಹೈದ್ರಾಬಾದ್ ತಂಡಕ್ಕೆ ಈ ಮ್ಯಾಚ್ ಗೆದ್ರೂ ಸೋತ್ರೂ ನೋ ಲಾಸ್. ಬಟ್ ಆರ್ಸಿಬಿಗೆ ಹಾಗಲ್ಲ. ಈ ಪಂದ್ಯವನ್ನ ಗೆದ್ದು ಲೀಗ್ ಹಂತದ ಕೊನೇ ಪಂದ್ಯ ಲಕ್ನೋ ವಿರುದ್ಧವೂ ಗೆದ್ರೆ ಪಾಯಿಂಟ್ಸ್ ಟೇಬಲ್ನಲ್ಲಿ ಟಾಪ್ 2ನಲ್ಲಿ ಇರ್ಬೋದು. ಕ್ವಾಲಿಫೈಯರ್ 1ಗೆ ಸೆಲೆಕ್ಟ್ ಆಗ್ಬೋದು.