ಕೊಹ್ಲಿ ಕಾಲೆಳೆದು ಕೆಟ್ರಾ ಕಮಿನ್ಸ್‌? – ಕೆರಳಿದ ಕಿಂಗ್‌ ಸಿಡೀತಾರಾ?
ಮಲ್ಯನಂತ ಮಾಲೀಕ ಯಾಕಿಲ್ಲ?

ಕೊಹ್ಲಿ ಕಾಲೆಳೆದು ಕೆಟ್ರಾ ಕಮಿನ್ಸ್‌? – ಕೆರಳಿದ ಕಿಂಗ್‌ ಸಿಡೀತಾರಾ?ಮಲ್ಯನಂತ ಮಾಲೀಕ ಯಾಕಿಲ್ಲ?

ಮತ್ತೊಂದು ಬಿಗ್‌ ಬ್ಯಾಟಲ್‌ಗೆ ಆರ್‌ ಸಿಬಿ ಸಜ್ಜಾಗಿದೆ.. ಕಳೆದ ಮುಖಾಮುಖಿಯಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದ ತಂಡಗಳು ಈಗ ಸೆಕೆಂಡ್‌ ರೌಂಡ್‌ನಲ್ಲಿ ಎದುರಾಗುತ್ತಿವೆ.. ಎಸ್‌ಆರ್‌ಹೆಚ್‌ಗೆ 250 ರನ್‌ ಬಾರಿಸೋದು ನೀರು ಕುಡಿದಷ್ಟು ಸಲೀಸಾಗಿದೆ.. ದೊಡ್ಡ ಮೊತ್ತದ ಚೇಸಿಂಗ್‌ನಲ್ಲಿ ಗೆಲ್ಲಲು ವಿಫಲವಾದರೂ ಗೆಲ್ಲುವ ಹೊಸ್ತಿಲಿನವರೆಗೂ ಬೆಂಗಳೂರು ಬರುತ್ತಿದೆ. ಹೈದ್ರಾಬಾದ್‌ನಲ್ಲಿ ನಡೆಯುತ್ತಿರುವ ಪಂದ್ಯಕ್ಕೂ ಮುನ್ನವೇ ಎಸ್‌ ಆರ್‌ ಹೆಚ್ ಕ್ಯಾಪ್ಟನ್‌ ಪ್ಯಾಟ್‌ ಕಮಿನ್ಸ್‌, ಪ್ರಾಕ್ಟೀಸ್‌ ವೇಳೆ ಕಿಂಗ್ ಕೊಹ್ಲಿಯ ಕಾಲೆಳೆದಿದ್ದಾರೆ.. ನಗುತ್ತಲೇ ಉತ್ತರ ಕೊಟ್ಟಿರುವ ಕೊಹ್ಲಿ ಈಗ ಹಸಿದ ಸಿಂಹದಂತಾಗಿರುವುದು ಸ್ಪಷ್ಟ.. ಹೀಗಾಗಿಯೇ ಈ ಪಂದ್ಯದಲ್ಲಿ ಮತ್ತೊಂದು ಅದ್ಭುತ ಆಟದ ನಿರೀಕ್ಷೆಯಿದೆ. ಇದೇ ವೇಳೆ ಅನಿಲ್‌ ಕುಂಬ್ಲೆ ಹೇಳಿದ ಒಂದು ಮಾತು ಆರ್‌ಸಿಬಿ ತಂಡಕ್ಕೆ ಇಂತ ಮಾಲೀಕ ಯಾಕಿಲ್ಲ ಎಂಬ ಪ್ರಶ್ನೆ ಕ್ರಿಕೆಟ್‌ ಅಭಿಮಾನಿಗಳನ್ನು ಕಾಡಲು ಶುರು ಮಾಡಿದೆ..

ಇದನ್ನೂ ಓದಿ: ಅಭಿಮಾನಿಗಳೇ ಬಂಡವಾಳ.. – ಒಂದು ವರ್ಷದ RCB ಫ್ರಾಂಚೈಸಿ ವಹಿವಾಟು ಎಷ್ಟು?

ಕಾವ್ಯಾ ಮಾರನ್ ಒಡೆತನದ ಎಸ್‌ಆರ್‌ಹೆಚ್‌ ಟೀಂ ಈ ಬಾರಿ ಐಪಿಎಲ್‌ನಲ್ಲಿ ಹವಾ ಎಬ್ಬಿಸಿದೆ.. ಹೈದ್ರಾಬಾದ್‌ ಬ್ಯಾಟ್ಸ್‌ಮನ್‌ಗಳು ಕೈಯಲ್ಲಿರುವ ಬ್ಯಾಟಿರೋದು ಸಿಕ್ಸ್‌, ಫೋರ್‌ ಬಾರಿಸೋದಿಕ್ಕಷ್ಟೇ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.. ಇದ್ರಿಂದಾಗಿ ಐಪಿಎಲ್‌ನಲ್ಲಿ ಯಾವಾಗ 20 ಓವರ್‌ಗಳಲ್ಲಿ 300 ರನ್‌ ದಾಖಲಾಗುತ್ತದೆ ಎಂಬ ಚರ್ಚೆಯಾಗುತ್ತಿದೆ.. ಮುಂಬೈ ವಿರುದ್ಧ 277 ರನ್‌ ಹೊಡೆದು ದಾಖಲೆ ಬರೆದಿದ್ದ ಎಸ್‌ಆರ್‌ಹೆಚ್‌, ಬೆಂಗಳೂರು ವಿರುದ್ಧ 287 ರನ್‌ ಹೊಡೆದಿತ್ತು.. 300 ರನ್‌ ಗೆ ಕೇವಲ 13 ರನ್‌ ಗಳ ಹಿಂದೆ ಉಳಿದಿತ್ತು.. ಎಸ್‌ಆರ್‌ಎಚ್‌ಗೆ ಏನಾದ್ರೂ ಡಿಸಿ ವಿರುದ್ಧದ ಮ್ಯಾಚ್‌ ನಂತಹ ಓಪನಿಂಗ್ ಸಿಕ್ಕರೆ ಆರ್‌ ಸಿಬಿ ವಿರುದ್ಧ 300 ರನ್ ಹೊಡೆದರೂ ಅಚ್ಚರಿಯಿಲ್ಲ.. ಈಗಾಗ್ಲೇ ಆರ್‌ಸಿಬಿ ವಿರುದ್ಧ ಎಸ್‌ಆರ್‌ ಹೆಚ್ಚ್ 300 ರನ್ ಹೊಡೆಯುತ್ತೆ ಎಂಬ ನಿರೀಕ್ಷೆ ಐಪಿಎಲ್‌ ಅಭಿಮಾನಿಗಳಲ್ಲಿ ಮನೆ ಮಾಡಿದೆ.. ಟಾಸ್‌ ಗೆದ್ದರೆ ಎಸ್‌ಆರ್‌ಹೆಚ್‌ ಮೊದಲು ಬ್ಯಾಟಿಂಗ್‌ ಮಾಡೋದು ಖಚಿತ.. ಹಾಗೆಯೇ ಒಂದು ವೇಳೆ ಆರ್‌ಸಿಬಿ ಟಾಸ್‌ ಗೆದ್ದರೂ ತನ್ನ ಬೌಲಿಂಗ್‌ ನಂಬಿಕೊಂಡು, ಮೊದಲು ಬ್ಯಾಟ್‌ ಮಾಡುವ ಸಾಧ್ಯತೆ ಕಡಿಮೆ.. ಯಾಕಂದ್ರೆ ಆರ್‌ಸಿಬಿ ಮೊದಲು ಬ್ಯಾಚಿಂಗ್‌ ಮಾಡಿ 250 ಪ್ಲಸ್‌ ರನ್ ಹೊಡೆದರೂ ಬೌಲಿಂಗ್‌ ಮೂಲಕ ಅದನ್ನು ಡಿಫೆಂಡ್‌ ಮಾಡಿಕೊಳ್ಳೋದು ಕಷ್ಟ.. ಅದಕ್ಕಿಂತ ಹೈದ್ರಾಬಾದ್‌ ಮೊದಲು ಬ್ಯಾಟಿಂಗ್ ಮಾಡಿ ಮುನ್ನೂರು ರನ್ ಹೊಡೆದರೂ ಚೇಸಿಂಗ್‌ ಮಾಡುವ ಸಾಹಸಕ್ಕೆ ಕೈಹಾಕುವುದೇ ಬೆಸ್ಟ್‌ ಎಂಬ ಸ್ಥಿತಿಯಲ್ಲಿ ಸದ್ಯ ಬೆಂಗಳೂರು ತಂಡವಿದೆ..

ಇದರ ನಡುವೆ ಹೈದ್ರಾಬಾದ್‌ನಲ್ಲಿ ಪ್ರಾಕ್ಟೀಸ್‌ ಮಾಡ್ತಿದ್ದಾಗ ಎಸ್‌ಆರ್‌ಹೆಚ್‌ ಕ್ಯಾಪನ್‌ ಪ್ಯಾಟ್‌ ಕಮಿನ್ಸ್‌, ವಿರಾಟ್‌ ಕೊಹ್ಲಿಯ ಕಾಲೆಳೆದಿದ್ದಾರೆ. ಜೊತೆಗೆ ಬಿಗ್‌ ಸ್ಕೋರ್‌ನ ಮುನ್ಸೂಚನೆಯನ್ನೂ ಕೊಟ್ಟಿದ್ದಾರೆ.. ಬ್ಯಾಟಿಂಗ್ ಪ್ರಾಕ್ಟೀಸ್‌ ಮುಗಿಸಿ ವಿಶ್ರಾಂತಿಗೆ ಕುಳಿತಿದ್ದ ಕೊಹ್ಲಿ ಬಳಿ ಬಂದ ಪ್ಯಾಟ್‌, ನಾನು ವಿಕೆಟ್‌ ಅನ್ನು ಪ್ಲ್ಯಾಟ್‌ ಇರುವಂತೆ ನೋಡಿಕೊಳ್ತಿದ್ದೇನೆ ಎಂದು ನೀವು ಹೇಳಿರೋದನ್ನು ಕೇಳಿಸ್ಕೊಂಡೆ ಎಂದು ಪ್ರಶ್ನಿಸಿದ್ದಾರೆ.. ಅದಕ್ಕೆ ನಗುತ್ತಾ ಉತ್ತರಿಸಿದ ಕೊಹ್ಲಿ, ಯು ಆರ್‌ ಗುಡ್ ಪ್ಯಾಟ್‌ ಅಂತಷ್ಟೇ ಹೇಳಿದ್ದಾರೆ.. ಆದ್ರಿಲ್ಲಿ ಕಮಿನ್ಸ್‌ ತಮ್ಮ ತಂಡದ ಬಲವಾಗಿರುವ ಬ್ಯಾಟಿಂಗ್‌ ಅನ್ನೇ ಬಹುವಾಗಿ ನೆಚ್ಚಿಕೊಂಡಿರುವುದು ಸ್ಪಷ್ಟವಿದೆ. ಇದಕ್ಕಾಗಿ ಪ್ಲ್ಯಾಟ್‌ ವಿಕೆಟ್‌ಗಳಿದ್ದರೆ ದೊಡ್ಡ ಸ್ಕೋರ್‌ ಬಂದೇ ಬರುತ್ತದೆ.. ಅಲ್ಲದೆ ಹಾಗೋ ಹೀಗೋ ಮಾಡಿ ಬೌಲಿಂಗ್‌ ಮೂಲಕ ಸ್ಕೋರ್‌ ಡಿಫೆಂಡ್‌ ಮಾಡಿಕೊಳ್ಳಬಹುದು ಎನ್ನುವುದು ಕಮಿನ್ಸ್‌ ಲೆಕ್ಕಾಚಾರ.. ಇದನ್ನೇ ಕೊಹ್ಲಿ ಲೇವಡಿ ಮಾಡಿದ್ದಾರೆ ಎನ್ನುವುದು ಕಮಿನ್ಸ್‌ ಮಾತಿನಿಂದಲೂ ಗೊತ್ತಾಗಿದೆ..  ಇದೇ ಕಾರಣಕ್ಕೆ ಎಸ್‌ಆರ್‌ಹೆಚ್‌ ಬಿಗ್‌ ಸ್ಕೋರ್ ದಾಖಲಿಸಿದ್ರೂ ದೊಡ್ಡ ಅಂತರದಲ್ಲಿ ಗೆಲುವು ದಾಖಲಿಸಲು ವಿಫಲವಾಗುತ್ತಿದೆ.. ತೀರಾ ಹತ್ತಿರಕ್ಕೆ ಬಂದು ಎದುರಾಳಿಗಳು ಸೋಲುತ್ತಿದ್ದಾರೆ..

ಈಗ ಆರ್‌ಸಿಬಿ ವಿರುದ್ಧವೂ ಅಂತದ್ದೇ ರೀತಿಯ ಆಟದ ನಿರೀಕ್ಷೆಯನ್ನು ಎಸ್‌ಆರ್‌ಹೆಚ್ಚ್ ಇಟ್ಟುಕೊಂಡಿದೆ.. ಆದರೆ ಆರ್‌ಸಿಬಿಯ ವಿರಾಟ್‌ ಕೊಹ್ಲಿ ಈಗ ಗಾಯಗೊಂಡ ಸಿಂಹದಂತಾಗಿದ್ದಾರೆ.. ಕಳೆದ ಪಂದ್ಯದಲ್ಲಿ  6 ಎಸೆತಗಳಲ್ಲಿ 18 ರನ್ ಹೊಡೆದಿದ್ದ ರಾಣಾ ಎಸೆದ ಬೀಮರ್‌ಗೆ ಔಟ್‌ ಕೊಟ್ಟಿದ್ದರು. ಆದ್ರೆ ಅಂಪೈರ್ ತೀರ್ಮಾನವನ್ನು ಪ್ರಶ್ನಿಸಿದ್ದ ಕೊಹ್ಲಿಗೆ ಡಿಆರ್‌ಎಸ್‌ ನಿಂದಲೂ ಲಾಭ ಆಗಿರಲಿಲ್ಲ.. ಇದ್ರಿಂದ ಆನ್‌ ಫೀಲ್ಡ್‌ ನಲ್ಲೇ ಅಂಪೈರ್‌ಗಳ ವಿರುದ್ಧ ಕೊಹ್ಲಿ ಜಗಳವಾಡಿ, ಪಂದ್ಯ ಶೇ.50ರಷ್ಟು ಸಂಭಾವನೆಯನ್ನು ದಂಡ ಪಾವತಿಸಿದ್ದರು.. ಈ ಬೆಳವಣಿಗೆಯಿಂದ ಕೆರಳಿರುವ ಕೊಹ್ಲಿ ಈಗ ತನ್ನ ಬ್ಯಾಟ್‌ ಮೂಲಕವೇ ಎಲ್ಲರಿಗೂ ಉತ್ತರ ಕೊಡುವ ನಿರೀಕ್ಷೆಯಿದ್ದು, ಇದು ಆರ್‌ಸಿಬಿ ಅಭಿಮಾನಿಗಳಿಗೆ ಇರುವ ಗುಡ್‌ ನ್ಯೂಸ್.

ಆರ್‌ಸಿಬಿ ಈ ಬಾರಿ ಪ್ಲೇ ಆಪ್‌ಗೆ ಹೋಗುವ ಕನಸನ್ನು ಬಹುತೇಕ ಬಿಟ್ಟಾಗಿದೆ.. ಆದ್ರೆ ಇದೇ ಸಂದರ್ಭದಲ್ಲೇ ಅನಿಲ್ ಕುಂಬ್ಳೆ ಹೇಳಿರುವ ಒಂದು ಮಾತು  ಆರ್‌ಸಿಬಿ ಅಭಿಮಾನಿಗಳನ್ನುಕಾಡುತ್ತಿದೆ.. ಮೊದಲೇ ಆರ್‌ಸಿಬಿ ಫ್ಯಾನ್ಸ್‌ ತಂಡದ ಮಾಲೀಕರ ವಿರುದ್ಧ ಸಿಟ್ಚಾಗಿದ್ದಾರೆ.. ಆದ್ರೆ ಐಪಿಎಲ್‌ನ ಮೊದಲ ಸೀಸನ್‌ನಲ್ಲಿ ಹರಾಜಿನ ವೇಳೆ ಕುಂಬ್ಳೆ ಹೆಸರು ಬಂದಾಗ ಆಗಿನ ಆರ್‌ಸಿಬಿ ಮಾಲೀಕ ವಿಜಯ್‌ ಮಲ್ಯ, ಹೀ ಈಸ್‌ ಬೆಂಗಳೂರು ಬಾಯ್‌ ಎಂದು ಎದ್ದು ನಿಂತು ಹೇಳಿದ್ದರಂತೆ.. ಈ ಮೂಲಕ ಅವರ ಮೇಲೆ ನಮಗಷ್ಟೇ ಹಕ್ಕಿದೆ. ಉಳಿದವರು ಖರೀದಿಸುವಂತಿಲ್ಲ ಎಂದು ಸೂಚ್ಯವಾಗಿ ಹೇಳಿದ್ದರು ಎಂದು ಅನಿಲ್‌ ಕುಂಬ್ಳೆ, ರವಿಚಂದ್ರನ್‌ ಅಶ್ವಿನ್ ಅವರ ಯೂಟ್ಯೂಬ್‌ ಸಂದರ್ಶನದಲ್ಲಿ ಹೇಳಿದ್ದಾರೆ.. ಆ ರೀತಿಯಲ್ಲಿ ಲೋಕಲ್‌ ಪ್ಲೇಯರ್‌ಗೆ ಪ್ರಾಮುಖ್ಯತೆ ಕೊಟ್ಟಿದ್ದರು ಮಲ್ಯ.. ಆದ್ರೆ ಈಗಿನ ಆರ್‌ಸಿಬಿಯಲ್ಲಿ ಲೋಕಲ್ ಪ್ಲೇಯರ್‌ಗಳೇ ಇಲ್ಲದಂತಾಗಿದ್ದಾರೆ.. ಮಲ್ಯ ಮಾಲೀಕತ್ವದಲ್ಲಿದ್ದಾಗ ಮಾತ್ರ ಮೂರು ಬಾರಿ ಆರ್‌ಸಿಬಿ, ಐಪಿಎಲ್‌ನಲ್ಲಿ ಫೈನಲ್‌ ಗೆ ಪ್ರವೇಶಿಸಿತ್ತು.. ಆದ್ರೆ ಒಂದು ಬಾರಿಯೂ ಕಪ್‌ ಗೆಲ್ಲದ ಆರ್‌ ಸಿಬಿಯ ಈಗಿನ ಮಾಲೀಕರು ಮಾತ್ರ ತಂಡವನ್ನು ಅದ್ಯಾವ ರೀತಿಯಲ್ಲಿ ಆರಿಸುತ್ತಾರೆ ಎನ್ನುವುದೇ ಆರ್‌ಸಿಬಿ ಅಭಿಮಾನಿಗಳಿಗೆ ಅರ್ಥವಾಗದ ಪ್ರಶ್ನೆಯಾಗಿದೆ.

Shwetha M