ಕೊಹ್ಲಿ ಅಬ್ಬರ ತಡೆಯೋಕಾಗುತ್ತಾ? – SRHಗೆ ಮನೆಮಗ ಭುವಿ ಭಯ!!
ಚಿನ್ನಸ್ವಾಮಿಯಲ್ಲಿ ಯಾರ ಪಾರುಪತ್ಯ?

ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳು ಕಾಯ್ತಾ ಇದ್ದ ಐಪಿಎಲ್ ಹಬ್ಬ ಬಂದೇ ಬಿಡ್ತು. ಈ ದಿನದ ಸೂರ್ಯ ಜಾರಿ ಮರೆಯಾಗೋ ಹೊತ್ತಿಗೆಲ್ಲಾ ಐಪಿಎಲ್ ರಂಗು ಚೆಲ್ಲಲಿದೆ. ಸಂಜೆ 7.30ಕ್ಕೆ ಆರ್ಸಿಬಿ ವರ್ಸಸ್ ಎಸ್‌ಆರ್‌ಹೆಚ್ ಪಂದ್ಯದೊಂದಿಗೆ 19ನೇ ಆವೃತ್ತಿ ಅದ್ಧೂರಿಯಾಗಿ ಸ್ಟಾರ್ಟ್ ಆಗುತ್ತೆ. ಬಲಿಷ್ಠ ತಂಡಗಳ ನಡುವಿನ ಈ ಕಾದಾಟದಲ್ಲಿ ಕೆಲ ಆಟಗಾರರ ಕ್ಲಾಶ್ ಕೂಡ ಹೈಲೆಟ್ ಆಗಲಿದೆ.
ಇದನ್ನೂ ಓದಿ : RCB Vs CSK ರಿವೇಂಜ್ ಫೈಟ್ ಇಲ್ಲ – ಬೆಂಗಳೂರಲ್ಲಿ ಫಸ್ಟ್ ಆಫ್ ಮಾತ್ರ ಯಾಕೆ?
ಆರ್ಸಿಬಿ ಕಂಪ್ಲೀಟ್ ಬ್ಯಾಲೆನ್ಸ್ಡ್ ಟೀಂ.. ಎಸ್‌ಆರ್‌ಹೆಚ್ ಅಗ್ರೆಸ್ಸಿವ್ ಬ್ಯಾಟಿಂಗ್ ಲೈನಪ್ ಇರೋ ಪವರ್ ಹೌಸ್. ಎರಡೂ ತಂಡಗಳಲ್ಲೂ ಘಟಾನುಘಟಿ ಆಟಗಾರರೇ ಇದ್ದಾರೆ. ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಹೇಜಲ್ವುಡ್, ಭುವನೇಶ್ವರ್ ಕುಮಾರ್ ಹೀಗೆ ಎಕ್ಸ್ಪೀರಿಯನ್ಸ್ ಪ್ಲೇಯರ್ಸ್ ಜೊತೆ ಯಂಗ್ ಗನ್ಗಳ ಶಕ್ತಿಯೂ ಇದೆ. ಅತ್ತ ಹೈದ್ರಾಬಾದ್ನಲ್ಲಿ ಹೆಡ್, ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ಕ್ಲಾಸೆನ್ರಂಥ ಹೈಕ್ಲಾಸ್ ಬ್ಯಾಟರ್ಸ್ ಜೊತೆ ಉನದ್ಕತ್, ಹರ್ಷಲ್ ಪಟೇಲ್ರಂತ ಬೌಲರ್ಗಳ ಬಲವೂ ಇದೆ. ಈ ರಣರೋಚಕ ಪಂದ್ಯಕ್ಕಾಗಿ ಪ್ಲೇಯಿಂಗ್ 11ನಲ್ಲೂ ಸಾಕಷ್ಟು ಬದಲಾವಣೆ ಪಕ್ಕಾ.
ವಿರಾಟ್ ಕೊಹ್ಲಿ Vs ಜಯದೇವ್ ಉನದ್ಕತ್
ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿರಾಟ್ ಕೊಹ್ಲಿ ಆರ್‌ಸಿಬಿಯ ತವರು ಮೈದಾನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ. ಹೀಗಾಗಿ ಆರೆಂಜ್ ಆರ್ಮಿಯ ಮೇನ್ ಟಾರ್ಗೆಟ್ ಇರೋದೇ ಕೊಹ್ಲಿಯನ್ನ ಆರಂಭದಲ್ಲೇ ಔಟ್ ಮಾಡ್ಬೇಕು ಅನ್ನೋದು. ಯಾಕಂದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವಿರಾಟ್ ಕೊಹ್ಲಿ ಹೈದ್ರಾಬಾದ್ ವಿರುದ್ಧ 805 ರನ್‌ಗಳನ್ನ ಕಲೆ ಹಾಕಿದ್ದಾರೆ. ಹೈದ್ರಾಬಾದ್ ಪರ ಎಡಗೈ ವೇಗಿ ಜಯದೇವ್ ಉನದ್ಕಟ್ ನ್ಯೂಬಾಲ್ನೊಂದಿಗೆ ಇನ್ನಿಂಗ್ಸ್ ಸ್ಟಾರ್ಟ್ ಮಾಡ್ತಾರೆ. ಉನದ್ಕಟ್ 10 ಐಪಿಎಲ್ ಪಂದ್ಯಗಳಲ್ಲಿ ಕೊಹ್ಲಿಗೆ ಬೌಲ್ ಮಾಡಿದ್ದು 1 ಸಲ ಮಾತ್ರವೇ ಔಟ್ ಮಾಡಿದ್ದಾರೆ. ಬಟ್ ಹೆಚ್ಚಿನ ರನ್ಸ್ ಕೊಟ್ಟಿಲ್ಲ. ಯಾಕಂದ್ರೆ ಉನದ್ಕತ್ ಬೌಲಿಂಗ್ನಲ್ಲಿ ಕೊಹ್ಲಿ ಸ್ಟ್ರೈಕ್ ರೇಟ್ ಕೇವಲ 112.12 ರಷ್ಟಿದೆ.
ಅಭಿಷೇಕ್ ಶರ್ಮಾ Vs ಭುವನೇಶ್ವರ್ ಕುಮಾರ್
ಟಿ-20 ಫಾರ್ಮೆಟ್ನಲ್ಲಿ ಮೋಸ್ ಡೇಂಜರಸ್ ಬ್ಯಾಟರ್ ಅಭಿಷೇಕ್ ಶರ್ಮಾ. ಈಗ 2026ರಲ್ಲಿ ಹೈದ್ರಾಬಾದ್ ಪರ ಓಪನರ್ ಆಗಿ ಕಣಕ್ಕಿಳೀತಾರೆ. ಹಾಗೇ ಆರ್‌ಸಿಬಿಯ ಭುವನೇಶ್ವರ ಕುಮಾರ್ ಅವರೊಂದಿಗೆ ಪೈಪೋಟಿ ನಡೆಸಲಿದ್ದಾರೆ. ಭುವಿ ಪವರ್‌ಪ್ಲೇನಲ್ಲಿ ಅತಿ ಹೆಚ್ಚು ಐಪಿಎಲ್ ವಿಕೆಟ್‌ಗಳನ್ನು ಪಡೆದ ಬೌಲರ್ (79) . ಭುವನೇಶ್ವರ್ ಅವರ 6.46 ರ ಪವರ್‌ಪ್ಲೇ ಎಕಾನಮಿ ದರವು ಈ ಹಂತದಲ್ಲಿ ಕನಿಷ್ಠ 50 ವಿಕೆಟ್‌ಗಳನ್ನು ಪಡೆದ ಬೌಲರ್‌ಗಳಲ್ಲಿ ಅತ್ಯುತ್ತಮವಾಗಿದೆ. ಇನ್ನು ಎಸ್‌ಆರ್‌ಹೆಚ್ ಸ್ಟಾರ್ ಬ್ಯಾಟರ್ ಅಭಿಷೇಕ್ ಮೊದಲ ಆರು ಓವರ್‌ಗಳಲ್ಲಿ 161.2 ರ ಐಪಿಎಲ್ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಇನ್ನು ಅಭಿಷೇಕ್ ಮತ್ತು ಭುವನೇಶ್ವರ್ ಆಪೋಸಿಟ್ ಆಗಿದ್ದೇ 2025ರಲ್ಲಿ. ಯಾಕಂದ್ರೆ ಭುವಿ 2014ರಿಂದ 2024ರವರೆಗೆ ಹೈದ್ರಾಬಾದ್ನಲ್ಳೇ ಆಡಿದ್ರು. ಇತ್ತ ಅಭಿಷೇಕ್ ಕೂಡ 2019ರಿಂದ ಹೈದ್ರಾಬಾದ್ನಲ್ಲೇ ಇದ್ದಾರೆ. ಕಳೆದ ಸೀಸನ್ನಲ್ಲಿ ಮಾತ್ರವೇ ಮುಖಾಮುಖಿ ಆಗಿದ್ರು. ಬಟ್ ಒಂದೂ ವಿಕೆಟ್ಸ್ ತೆಗೆದಿಲ್ಲ. ಸೋ ಈ ಸಲ ಇಬ್ಬರ ಫೈಟ್ ತುಂಬಾನೇ ಕುತೂಹಲಕಾರಿಯಾಗಿರುತ್ತೆ. ಯಾಕಂದ್ರೆ ಹೈದ್ರಾಬಾದ್ ತಂಡದಲ್ಲಿ ದಶಕದವರೆಗೆ ಇದ್ದ ಭುವಿಗೆ ಅಲ್ಲಿನ ಪ್ಲಸ್ ಮತ್ತು ಮೈನಸ್ಗಳ ಬಗ್ಗೆ ತಿಳಿದಿರುತ್ತೆ.
ಇಶಾನ್ ಕಿಶನ್ Vs ಕೃನಾಲ್ ಪಾಂಡ್ಯ
ಇನ್ನು ಈ ಬಾರಿ ಐಪಿಎಲ್‌ನಲ್ಲಿ ಇಶಾನ್ ಕಿಶನ್ ಅವರ ನಾಯಕತ್ವದ ಚೊಚ್ಚಲ ಪಂದ್ಯವಾಗಲಿದೆ. ಪ್ಯಾಟ್ ಕಮ್ಮಿನ್ಸ್ ಅವರ ಸ್ಥಾನ ವಹಿಸಿಕೊಳ್ಳುತ್ತಾರೆ.3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಕಿಶನ್ ಸ್ಫೋಟಕ ಪ್ರದರ್ಶನ ನೀಡುತ್ತಿದ್ದಾರೆ. ಎಡಗೈ ಸ್ಪಿನ್ನರ್ ಕೃನಾಲ್ ಪಾಂಡ್ಯ ಅವರೊಂದಿಗಿನ ಅವರ ಹೋರಾಟದ ಮೇಲೆ ಎಲ್ಲರ ಕಣ್ಣಿದೆ. ಮಧ್ಯಮ ಓವರ್‌ಗಳಲ್ಲಿ ಪಾಂಡ್ಯ ತಮ್ಮ ಮಿತವ್ಯಯದ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದರೂ, ಕಿಶನ್ 41 ಎಸೆತಗಳಲ್ಲಿ 62 ರನ್‌ಗಳನ್ನು ಗಳಿಸಿದ್ದಾರೆ. ಬಟ್ ಕೃನಾಲ್ಗೆ ಒಮ್ಮೆಯೂ ವಿಕೆಟ್ ಒಪ್ಪಿಸಿಲ್ಲ. ಇಷ್ಟೇ ಅಲ್ದೇ ಟ್ರಾವಿಸ್ ಹೆಡ್ ಬ್ಯಾಟಿಂಗ್ ಕೂಡ ಗಮನ ಸೆಳೀತಿದೆ. ಇನ್ನು ಆರ್ಸಿಬಿ ಪರ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಓಪನರ್ ಗಳಾಗಿ ಕಣಕ್ಕಿಳೀತಾರೆ. ಈ ಜೋಡಿ ಕಳೆದ ವರ್ಷ 13 ಇನ್ನಿಂಗ್ಸ್ಗಳಿಂದ 175.98ರ ಸ್ಟ್ರೈಕ್ರೇಟ್ನಲ್ಲಿ 403 ರನ್‌ಗಳ ಜೊತೆಯಾಟ ನೀಡಿತ್ತು. ವಿರಾಟ್ ಕೊಹ್ಲಿ 15 ಇನ್ನಿಂಗ್ಸ್ಗಳಿಂದ 657ರನ್ಸ್ ಸ್ಕೋರ್ ಮಾಡಿದ್ರು. ಎಸ್‌ಆರ್‌ಹೆಚ್ ಪರ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ 9 ಇನ್ನಿಂಗ್ಸ್ಗಳಲ್ಲಿ 316 ರನ್ಸ್ ಕಲೆ ಹಾಕಿದ್ರು.
ಐಪಿಎಲ್ ದಾಖಲೆಗಳು!
ಗರಿಷ್ಠ ಮೊತ್ತ : ಏಪ್ರಿಲ್ 15, 2024 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನಿಂದ 20 ಓವರ್‌ಗಳಲ್ಲಿ 287/3.
ಕನಿಷ್ಠ ಮೊತ್ತ: ಏಪ್ರಿಲ್ 23, 2022 ರಂದು ಮುಂಬೈನ ಬ್ರಬೌರ್ನೆ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 16.1 ಓವರ್‌ಗಳಲ್ಲಿ 68/10.
ಅತಿ ದೊಡ್ಡ ಗೆಲುವು (ರನ್‌ಗಳಿಂದ): ಮಾರ್ಚ್ 31, 2019 ರಂದು ಹೈದರಾಬಾದ್‌ನಲ್ಲಿ SRH ತಂಡವು RCB ತಂಡವನ್ನು 118 ರನ್‌ಗಳಿಂದ (232 ರನ್‌ಗಳ ಗುರಿ) ಸೋಲಿಸಿತು.
ಅತಿ ದೊಡ್ಡ ಗೆಲುವು (ವಿಕೆಟ್‌ಗಳಿಂದ): ಏಪ್ರಿಲ್ 23, 2022 ರಂದು ಮುಂಬೈನ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 9 ವಿಕೆಟ್‌ಗಳಿಂದ (69 ರನ್‌ಗಳ ಗುರಿ) ಸೋಲಿಸಿತು.

ನೋಡಿರಿ

