RCBಯಲ್ಲಿ ಲಾಸ್ಟ್ ಮಿನಿಟ್ ಟ್ವಿಸ್ಟ್ – ಫಸ್ಟ್ ಮ್ಯಾಚಲ್ಲೇ ಕೈಕೊಟ್ಟ ಬೌಲರ್ಸ್!
SRH 300 ರನ್ಸ್ ನನಸಾಗುತ್ತಾ?

RCBಯಲ್ಲಿ ಲಾಸ್ಟ್ ಮಿನಿಟ್ ಟ್ವಿಸ್ಟ್ – ಫಸ್ಟ್ ಮ್ಯಾಚಲ್ಲೇ ಕೈಕೊಟ್ಟ ಬೌಲರ್ಸ್!SRH 300 ರನ್ಸ್ ನನಸಾಗುತ್ತಾ?

ಫೈನಲಿ ಮ್ಯಾಚ್ ಡೇ ಬಂದಾಯ್ತು. ಇನ್ನೇನು ಕೆಲವೇ ಗಂಟೆಗಳಲ್ಲಿ ಬೆಂಗಳೂರು ವರ್ಸಸ್ ಹೈದ್ರಾಬಾದ್ ನಡುವೆ ಮ್ಯಾಚ್ ಸ್ಟಾರ್ಸ್ ಆಗಲಿದೆ. ಚಿನ್ನಸ್ವಾಮಿಯಲ್ಲೇ ಪಂದ್ಯ ನಡೀತಾ ಇದ್ರೂ ಕೂಡ ಆರ್​ಸಿಬಿಗೆ ಮಾತ್ರ ತಲೆಬಿಸಿ ತಪ್ಪಿಲ್ಲ. ಯಾಕಂದ್ರೆ ಉದ್ಘಾಟನಾ ಪಂದ್ಯದಲ್ಲೇ ಬೌಲರ್​ಗಳು ಕೈಕೊಟ್ಟಿದ್ದಾರೆ. ಡಿಫೆಂಡಿಂಗ್ ಚಾಂಪಿಯನ್ಸ್ ಆರ್​ಸಿಬಿ ಹಾಗೇ ರನ್​ಗಳಲ್ಲೇ ಸುನಾಮಿ ಎಬ್ಬಿಸ್ತೀವಿ ಅನ್ನೋ ಎಸ್​ಆರ್​ಹೆಚ್. ಐಪಿಎಲ್​ನ ಎರಡು ಬಲಿಷ್ಠ ತಂಡಗಳು ಇವತ್ತಿನ ಪಂದ್ಯದಲ್ಲಿ ಮುಖಾಮುಖಿ ಆಗೋ ಮೂಲಕ 19ನೇ ಸೀಸನ್ ಐಪಿಎಲ್ ಸ್ಟಾರ್ಟ್ ಆಗಲಿದೆ. ಈ ಪಂದ್ಯಕ್ಕೆ ಪ್ಲೇಯಿಂಗ್ 11 ಬಗ್ಗೆಯೂ ಆಯಾ ತಂಡಗಳಲ್ಲಿ ಡಿಸ್ಕಷನ್ಸ್ ಆಗಿದೆ. ಬಟ್ ಆರ್​ಸಿಬಿಯಲ್ಲಿ ಆರಂಭದ ಪಂದ್ಯಗಳಲ್ಲೇ ಸ್ವಲ್ಪ ಗೊಂದಲ ಇದೆ. ಯಾಕಂದ್ರೆ ಮೈದಾನಕ್ಕೆ ಇಳಿದು ಬ್ಯಾಟರ್​ಗಳಿಗೆ ಬ್ರೇಕ್ ಹಾಕ್ಬೇಕಿದ್ದ ಮೂವರು ಮೇನ್ ಬೌಲರ್​ಗಳೇ ಪಂದ್ಯದಿಂದ ಹೊರಗುಳಿಯಲಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನ ವಾಹನ ಸವಾರರ ಗಮನಕ್ಕೆ – ಇಂದು ಚಿನ್ನಸ್ವಾಮಿ ಸ್ಟೇಡಿಯಂ ಅಕ್ಕಪಕ್ಕ ಇರಲ್ಲ ವೆಹಿಕಲ್ ಪಾರ್ಕಿಂಗ್

ಆರ್ ಸಿಬಿಗೆ ಮೂವರು ವೇಗಿಗಳ ಆಬ್ಸೆನ್ಸ್ ಹೊಡೆತ ನೀಡುತ್ತಾ?

ಲಾಸ್ಟ್ ಸೀಸನ್ ಆರ್​ಸಿಬಿ ಸಕ್ಸಸ್​ ಸೀಕ್ರೆಟ್ ಬೌಲಿಂಗ್. ಈ ಸಲ ಕೂಡ ಅದೇ ಬೌಲಿಂಗ್ ಲೈನಪ್ ಉಳಿಸಿಕೊಂಡಿದ್ರು. ಬಟ್ ಈಗ ಟೂರ್ನಿ ಆರಂಭದಲ್ಲೇ ಮೂವರು ಫಾಸ್ಟ್ ಬೌಲರ್ಸ್ ಆಡೋದಿಲ್ಲ. ಮೊದಲನೇದಾಗಿ ಆಸ್ಟ್ರೇಲಿಯನ್ ವೇಗಿ ಜೋಶ್ ಹೇಝಲ್​​ವುಡ್ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಫಿಟ್​​ನೆಸ್ ಸಮಸ್ಯೆಯಿಂದ ಬಳಲ್ತಿರೋ ಹೇಜಲ್​​ವುಡ್​​ ಲಾಸ್ಟ್ ಮೂಮೆಂಟ್​ನಲ್ಲಿ ಜಾಯ್ನ್ ಆಗಿದ್ದು ಫಸ್ಟ್ ಮ್ಯಾಚ್ ಆಡಲ್ಲ ಅಂತಾ ಆರ್​ಸಿಬಿ ಕೋಚ್ ಆ್ಯಂಡಿ ಫ್ಲವರ್ ಹೇಳಿದ್ದಾರೆ. ಹಾಗೇ ಶ್ರೀಲಂಕಾದ ವೇಗದ ಬೌಲರ್​ ನುವಾನ್ ತುಷಾರ ಇನ್ನೂ ಸಹ ಬೆಂಗಳೂರಿಗೆ ಬಂದಿಲ್ಲ. ಫಿಟ್​​ನೆಸ್ ಸಮಸ್ಯೆಯಿಂದ ಬಳಲುತ್ತಿರುವ ತುಷಾರಾ​​ಗೆ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಐಪಿಎಲ್ ಆಡಲು ಇನ್ನೂ ಸಹ ಎನ್​​ಒಸಿ ನೀಡಿಲ್ಲ. ಮತ್ತೊಂದೆಡೆ ಎಡಗೈ ವೇಗಿ ಯಶ್ ದಯಾಳ್ ಪರ್ಸನಲ್ ಇಶ್ಯೂನಿಂದಾಗಿ ಟೂರ್ನಿಯಿಂದಲೇ ಹೊರಗಿದ್ದಾರೆ. ಈ ಮೂವರ ಅಲಭ್ಯತೆಯೇ ಈಗ ಆರ್​ಸಿಬಿಗೆ ದೊಡ್ಡ ತಲೆನೋವಾಗಿದೆ. ಜೋಶ್ ಹೇಝಲ್​ವುಡ್ ಹಾಗೂ ಯಶ್ ದಯಾಳ್ ಆರ್​ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್​ನ ಖಾಯಂ ಸದಸ್ಯರಾಗಿದ್ದರು. ಹೀಗಾಗಿ ಈ ಆಟಗಾರರಿಗೆ ರಿಪ್ಲೇಸ್ ಜೊತೆ ಪ್ಲೇಯಿಂಗ್ 11ನಲ್ಲಿ ಫಾರಿನರ್ಸ್ ಮತ್ತು ಭಾರತದ ಆಟಗಾರರ ನಂಬರ್ಸ್ ಬ್ಯಾಲೆನ್ಸ್ ಮಾಡಬೇಕಾದ ಅನಿವಾರ್ಯತೆ ಇದೆ.

ಆರ್ ಸಿಬಿ ಸಂಭಾವ್ಯ ಪ್ಲೇಯಿಂಗ್ 11

ಫಿಲ್ ಸಾಲ್ಟ್

ವಿರಾಟ್ ಕೊಹ್ಲಿ

ದೇವದತ್ ಪಡಿಕ್ಕಲ್

ರಜತ್ ಪಾಟಿದಾರ್

ಜಿತೇಶ್ ಶರ್ಮಾ

ಟಿಮ್ ಡೇವಿಡ್

ಕೃನಾಲ್ ಪಾಂಡ್ಯ

ರೊಮ್ಯಾರಿಯೋ ಶೆಫರ್ಡ್

ಜೇಕಬ್ ಡಫಿ

ಭುವನೇಶ್ವರ್ ಕುಮಾರ್

ಮಂಗೇಶ್ ಯಾದವ್

ಸುಯಾಶ್ ಶರ್ಮಾ ( IP)

ಇಲ್ಲಿ ಎಸ್ ಆರ್ ಹೆಚ್ ವಿರುದ್ಧದ ಪಂದ್ಯದ ಮೂಲಕ ಇವತ್ತಿನ ಮ್ಯಾಚಲ್ಲಿ ಇಬ್ಬರಂತೂ ಆರ್​ಸಿಬಿಗೆ ಡೆಬ್ಯೂ ಮಾಡೋದು ಪಕ್ಕಾ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಿನಿ ಆಕ್ಷನ್​ನಲ್ಲಿ ಆಯ್ಕೆಯಾಗಿರುವ ನ್ಯೂಝಿಲೆಂಡ್ ವೇಗಿ ಜೇಕಬ್ ಡಫಿ ಜೋಶ್ ಹೇಝಲ್​ವುಡ್ ಬದಲಿಯಾಗಿ ಕಣಕ್ಕಿಳೀತಾರೆ. ಯಾಕಂದ್ರೆ ಡಫಿ ಬಿಟ್ರೆ ಮತ್ತೋರ್ವ ವಿದೇಶಿ ವೇಗಿ ತಂಡದಲ್ಲಿಲ್ಲ. ಹಾಗೇ ಯಶ್ ದಯಾಳ್ ಟೂರ್ನಿಯಿಂದ ಹೊರಗುಳಿದಿರುವ ಕಾರಣ ದೇಶೀ ಆಟಗಾರ ಮಂಗೇಶ್ ಯಾದವ್​ ಅವರನ್ನು ಕಣಕ್ಕಿಳಿಬೇಕಾಗುತ್ತೆ. ಅದೂ ಅಲ್ದೇ  ಮಂಗೇಶ್ ಇತ್ತೀಚಿನ ಅಭ್ಯಾಸ ಪಂದ್ಯಗಳಲ್ಲಿ ಅದ್ಭುತವಾಗಿ ಪರ್ಫಾಮ್ ಮಾಡಿದ್ದಾರೆ. ಹೀಗಾಗಿ ಚಿನ್ನಸ್ವಾಮಿಯಲ್ಲೇ ತಮ್ಮ ಐಪಿಎಲ್ ಕರಿಯರ್ ಸ್ಟಾರ್ಟ್ ಮಾಡೋದು ಪಕ್ಕಾ ಆಗಿದೆ. ಉಳಿದಂತೆ ಬ್ಯಾಟಿಂಗ್​ನಲ್ಲಿ ಯಾವುದೇ ಬದಲಾವಣೆ ಇರಲ್ಲ. ಜೇಕಬ್ ಬೆಥೆಲ್ ಮತ್ತು ವೆಂಕಟೇಶ್ ಅಯ್ಯರ್ ಸ್ಟ್ರಾಂಗ್ ಆಗಿ ಚಾನ್ಸ್ ಕೊಡಿ ಅಂತಿದ್ರೂ ಇವತ್ತಿನ ಪಂದ್ಯಕ್ಕೆ ಆಡಿಸೋದು ಕಷ್ಟ ಇದೆ. ಸೋ ಇದು ಬೆಂಗಳೂರು ಪ್ಲೇಯಿಂಗ್ 11 ಆದ್ರೆ ಅತ್ತ ಹೈದ್ರಾಬಾದ್ ಮಾತ್ರ ನಾವು 300 ರನ್ಸ್ ಹೊಡೀತಿವಿ ಅಂತಿದ್ದಾರೆ. ಚಿನ್ನಸ್ವಾಮಿಯಲ್ಲಿ ದಾಖಲೆಯ ರನ್ಸ್ ಹೊಡೆದಿರೋ ಹೈದ್ರಾಬಾದ್ ಈ ಸಲ ನಾವು 300 ರನ್ಸ್ ಹೊಡೆಯಬೇಕು ಎಂದಿದ್ದಾರೆ

Shantha Kumari