ಚಿನ್ನಸ್ವಾಮಿಯಲ್ಲಿ RCB ಡಾಮಿನೇಷನ್ – ಹೈದ್ರಾಬಾದ್ ಹೈ ಸ್ಕೋರ್ ಗರ್ವಭಂಗ?
IPL ಬಲಿಷ್ಠರ ಹೆಡ್ ಟು ಹೆಡ್ ರೆಕಾರ್ಡ್ಸ್

ಆರ್ಸಿಬಿ ವರ್ಸಸ್ ಎಸ್ಆರ್ಹೆಚ್ ನಡುವಿನ ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಕೆಲವೇ ಕೆಲ ಗಂಟೆಗಳಿವೆ. ಶನಿವಾರ ಚಿನ್ನಸ್ವಾಮಿ ಮೈದಾನದಲ್ಲಿ ಅದ್ಧೂರಿಯಾಗಿ ಲೀಗ್ ಸ್ಟಾರ್ಟ್ ಆಗಲಿದೆ. ಒಂದ್ಕಡೆ ಹಾಲಿ ಚಾಂಪಿಯನ್ ಬೆಂಗಳೂರು ಮತ್ತೊಂದೆಡೆ ಡೆಡ್ಲಿ ಬ್ಯಾಟಿಂಗ್ ಕಾಂಬಿನೇಷನ್ ಇರೋ ಹೈದ್ರಾಬಾದ್. ಐಪಿಎಲ್ನ ಎರಡು ಬಲಿಷ್ಠ ತಂಡಗಳೇ ಮುಖಾಮುಖಿಯಾಗ್ತಿದ್ದು ಫ್ಯಾನ್ಸ್ ಅಂತೂ ಫುಲ್ ಎಕ್ಸೈಟ್ ಆಗಿದ್ದಾರೆ.
ಇದನ್ನೂ ಓದಿ : RCB ಪಂದ್ಯದ ಟಿಕೆಟ್‌ಗೆ ಡಿಮ್ಯಾಂಡ್ ಮಾಡಿದ ಶಾಸಕರಿಗೆ ಗುಡ್‌ನ್ಯೂಸ್! – MLAಗಳಿಗೆ ಸಿಗಲಿದೆ 1+1 ಟಿಕೆಟ್!
ರಜತ್ ಪಾಟಿದಾರ್ ನಾಯಕತ್ವದ ಆರ್ಸಿಬಿ ಹಾಗೇ ಇಶಾನ್ ಕಿಶನ್ ಕ್ಯಾಪ್ಟನ್ಸಿಯಲ್ಲಿ ಎಸ್ಆರ್ಹೆಚ್ ನಾಳೆ ಮುಖಾಮುಖಿ ಆಗ್ತಾರೆ. ಇಬ್ರಿಗೂ ಮೊದಲ ಪಂದ್ಯ ಅನ್ನೋದ್ರ ಜೊತೆಗೆ ಟೂರ್ನಿಯ ಫಸ್ಟ್ ಮ್ಯಾಚ್ ಆಗಿರೋದ್ರಿಂದ ಗೆಲುವಿನ ಮೂಲಕ ಶುಭಾರಂಭ ಮಾಡೋ ನಿಟ್ಟಿನಲ್ಲೇ ಮೈದಾನಕ್ಕಿಳೀತಾರೆ. ಅದ್ರಲ್ಲೂ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯ ಇರೋದ್ರಿಂದ ಬ್ಯಾಟರ್ ಫ್ರೆಂಡ್ಲಿ ಪಿಚ್ನಲ್ಲಿ ಮತ್ತೊಂದು ಹೈ ಸ್ಕೋರ್ ನಿರೀಕ್ಷೆ ಮಾಡ್ಬೋದು. ಹಿಂದಿನ ರೆಕಾರ್ಡ್ಸ್ ನೋಡಿದಾಗ ಇಬ್ರೂ ಕೂಡ ಡಾಮಿನೇಷನ್ ಮಾಡಿರೋದು ಗೊತ್ತಾಗ್ತಿದೆ.
ಬೆಂಗಳೂರು Vs ಹೈದ್ರಾಬಾದ್ ರೆಕಾರ್ಡ್ಸ್!
ಒಟ್ಟು ಪಂದ್ಯಗಳು 26
ಆರ್ ಸಿಬಿ ಗೆಲುವು 11
ಎಸ್ ಆರ್ ಹೆಚ್ ಗೆಲುವು 13
ಡ್ರಾ 2
ಇಲ್ಲಿ ಟೋಟಲ್ ಪಂದ್ಯಗಳು ಅಂದ್ರೆ ಐಪಿಎಲ್ ಇತಿಹಾಸದ ಪಂದ್ಯಗಳನ್ನ ನೋಡಿದಾಗ ಬೆಂಗಳೂರು ವಿರುದ್ಧ ಹೈದ್ರಾಬಾದ್ ತಂಡವೇ ಮೇಲುಗೈ ಸಾಧಿಸಿದೆ. ಆರ್ ಸಿಬಿ ವಿರುದ್ಧ ಹೆಚ್ಚಿನ ಪಂದ್ಯಗಳಲ್ಲಿ ಗೆಲುವನ್ನ ದಾಖಲಿಸಿದೆ. ಆದ್ರೆ ಪಂದ್ಯ ನಡೆಯಲಿರೋ ಚಿನ್ನಸ್ವಾಮಿ ಮೈದಾನದ ಸ್ಟಾಟ್ಸ್ ನೋಡಿದಾಗಿ ಇಲ್ಲಿ ಆರ್ ಸಿಬಿಯೇ ಡಾಮಿನೇಷನ್ ಮಾಡಿರೋದು ಗೊತ್ತಾಗಿದೆ.
ಚಿನ್ನಸ್ವಾಮಿಯಲ್ಲಿ ಹೇಗಿದೆ ದಾಖಲೆ?
ಒಟ್ಟು ಪಂದ್ಯ 9
ಆರ್ ಸಿಬಿ ಗೆಲುವು 5
ಎಸ್ ಆರ್ ಹೆಚ್ ಗೆಲುವು 3
ಡ್ರಾ 2
ಹೀಗೆ ಚಿನ್ನಸ್ವಾಮಿಯಲ್ಲಿ ಆರ್ಸಿಬಿಯೇ ಹೆಚ್ಚಿನ ಪಂದ್ಯಗಳನ್ನ ವಿನ್ ಆಗಿದೆ. ಬಟ್ ಹೈದ್ರಾಬಾದ್ಗೂ ಕೂಡ ಚಿನ್ನಸ್ವಾಮಿ ಫೆವರೆಟ್ ಕ್ರೀಡಾಂಗಣ. ಯಾಕಂದ್ರೆ ಐಪಿಎಲ್ ಇತಿಹಾಸದಲ್ಲೇ ಹೈಯೆಸ್ಟ್ ಸ್ಕೋರ್ ಬಂದಿರೋದು ಇದೇ ಮೈದಾನದಲ್ಲೇ. ಸಣ್ಣ ಬೌಂಡರಿ ಲೈನ್ಸ್ ಇರೋದ್ರಿಂದ ಹೈಸ್ಕೋರಿಂಗ್ ಮ್ಯಾಚ್ಗಳು ಆಗ್ಬೋದು. ಬೆಂಗಳೂರು ವಿರುದ್ಧ ಆರ್ಸಿಬಿ ವಿರುದ್ಧ ಚಿನ್ನಸ್ವಾಮಿಯಲ್ಲಿ ಎಸ್ಆರ್ಹೆಚ್ 3 ವಿಕೆಟ್ ನಷ್ಟಕ್ಕೆ 287 ರನ್ಗಳನ್ನ ಕಲೆ ಹಾಕಿತ್ತು. ಟ್ರಾವಿಸ್ ಹೆಡ್ ಶತಕ ಬಾರಿಸಿದ್ರು. ಌಂಡ್ ಈ ಸಲ ಕೂಡ ಹೈದ್ರಾಬಾದ್ ಪ್ಲೇಯರ್ಸ್ 300ಪ್ಲಸ್ ರನ್ಸ್ ಹೊಡೀತೀವಿ ಅಂದಿದ್ದಾರೆ. ಚಿನ್ನಸ್ವಾಮಿಯಲ್ಲಿ ಬ್ಯಾಟಿಂಗ್ ಅಂದ್ರೆ ನಮ್ಮ ಫೇವರೆಟ್ ಅಂದಿದ್ದಾರೆ. ಹೀಗಾಗಿ ಮೊದಲ ಪಂದ್ಯ ಕುತೂಹಲ ಹೆಚ್ಚಿಸಿದೆ. ಇನ್ನು ಈ ಪಿಚ್ನಲ್ಲಿ ಟಾಸ್ ಗೆದ್ದವ್ರು ಆಲ್ಮೋಸ್ಟ್ ಬೌಲಿಂಗ್ ಚೂಸ್ ಮಾಡಿಕೊಳ್ತಾರೆ. ಫಸ್ಟ್ ಬ್ಯಾಟಿಂಗ್ ಮಾಡೋರು ಬಿಗ್ ಟಾರ್ಗೆಟ್ ಸೆಟ್ ಮಾಡೋಕೆ ನೋಡ್ತಾರೆ. ಸೋ ನಾಳಿನ ಮ್ಯಾಚ್ ಕಿಕ್ಕೇರಿಸೋದ್ರಲ್ಲಿ ಡೌಟೇ ಇಲ್ಲ.

ನೋಡಿರಿ

