ಬೆಂಗಳೂರಿನ ವಾಹನ ಸವಾರರ ಗಮನಕ್ಕೆ – ಇಂದು ಚಿನ್ನಸ್ವಾಮಿ ಸ್ಟೇಡಿಯಂ ಅಕ್ಕಪಕ್ಕ ಇರಲ್ಲ ವೆಹಿಕಲ್ ಪಾರ್ಕಿಂಗ್

ಇಂದು ಎಂ.ಚಿನ್ನಸ್ವಾಮಿ ಕ್ರೀಡಾಂಗಣ ದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಈ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಕ್ರೀಡಾಂಗಣದ ಸುತ್ತಮುತ್ತಲ ರಸ್ತೆಗಳು, ಜಂಕ್ಷನ್ಗಳಲ್ಲಿ ವಾಹನ ನಿಲುಗಡೆ ನಿಷೇಧ ಮಾಡಲಾಗಿದೆ.
ಕ್ರೀಡಾಂಗಣದ ವ್ಯಾಪ್ತಿ ಸಂಚಾರ ವ್ಯವಸ್ಥೆ ಬದಲಾವಣೆ ಮಾಡಲಾಗಿದೆ. ಭದ್ರತೆ ದೃಷ್ಟಿಯಿಂದ ಪೊಲೀಸರ ಸೂಚನೆಗಳನ್ನು ಪ್ರೇಕ್ಷಕರಿಗೆ ಕಡ್ಡಾಯವಾಗಿ ಪಾಲನೆ ಮಾಡಬೇಕು. ಯಾವುದೇ ರೀತಿಯ ನಿಯಮ ಉಲ್ಲಂಘಿಸಿದರೆ ಸಹಿಸುವುದಿಲ್ಲ ಅನ್ನೋ ಮಾಹಿತಿ ನೀಡಿದ್ದಾರೆ. ಕಾಲ್ತುಳಿತ ದುರಂತದ ಬಳಿಕ ಬಂದೋಬಸ್ತ್ ವ್ಯವಸ್ಥೆಯಲ್ಲಿ ಭಾರಿ ಸುಧಾರಣೆ ತರಲಾಗಿದೆ. ಹಾಗಿದ್ರೆ ಯಾವ್ಯಾವ ಸ್ಥಳದಲ್ಲಿ ವಾಹನ ಸಂಚಾರ ನಿಷೇಧ ಇರುತ್ತೆ ಅನ್ನೋದ್ದನ್ನ ನೋಡೋದಾದ್ರೆ.
ವಾಹನಗಳ ನಿಲುಗಡೆ ನಿಷೇಧ ಇರುವ ರಸ್ತೆಗಳು
*ಕ್ವೀನ್ಸ್ ರಸ್ತೆಯ ಎರಡೂ ಬದಿಯಲ್ಲಿ ಹಾಗೂ ಬಾಳೇಕುಂದ್ರಿ ವೃತ್ತದಿಂದ ಕ್ವೀನ್ಸ್ ವೃತ್ತದ ವರೆಗೆ. ಕ್ವೀನ್ಸ್ ವೃತ್ತದಿಂದ ಸಿ.ಟಿ.ಒ ಜಂಕ್ಷನ್ ವರೆಗೆ
*ಎಂ.ಜಿ. ರಸ್ತೆಯಲ್ಲಿ ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ಮತ್ತು ಕ್ವೀನ್ಸ್ ರಸ್ತೆಯಿಂದ ಅನಿಲ್ ಕುಂಬ್ಳೆ ಜಂಕ್ಷನ್ವರೆಗೆ ರಸ್ತೆಯ ಎರಡೂ ಕಡೆ
*ಲಿಂಕ್ ರಸ್ತೆ– ಎಂ.ಜಿ ರಸ್ತೆಯಿಂದ ಕಬ್ಬನ್ ರಸ್ತೆವರೆಗೆ
*ರಾಜಭವನ ರಸ್ತೆ, ಟಿ.ಚೌಡಯ್ಯ ರಸ್ತೆ ಮತ್ತು ರೇಸ್ ಕೋರ್ಸ್ ರಸ್ತೆ
*ಸೆಂಟ್ರಲ್ ಸ್ಟ್ರೀಟ್ ರಸ್ತೆಯಲ್ಲಿ ರಸ್ತೆಯ ಎರಡೂ ಕಡೆ
*ಕಬ್ಬನ್ ರಸ್ತೆಯಲ್ಲಿ, ಸಿ.ಟಿ.ಒ ವೃತ್ತದಿಂದ ಡಿಕನ್ಸನ್ ರಸ್ತೆ ಜಂಕ್ಷನ್ವರೆಗೆ ರಸ್ತೆಯ ಎರಡೂ ಕಡೆ. ಕಬ್ಬನ್ ರಸ್ತೆಯಲ್ಲಿ ಕಾಮರಾಜ ರಸ್ತೆ ಜಂಕ್ಷನ್ನಿಂದ ಡಿಕನ್ಸನ್ ರಸ್ತೆ ಜಂಕ್ಷನ್ವರೆಗೆ ಬಿಎಂಟಿಸಿ ಬಸ್ಗಳನ್ನು ಹೊರತುಪಡಿಸಿ, ಇತರೆ ಎಲ್ಲಾ ತರಹದ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ
*ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ, ಕ್ಯಾಶ್ ಫಾರ್ಮಸಿ ಜಂಕ್ಷನ್ನಿಂದ ಅನಿಲ್ ಕುಂಬ್ಳೆ ವೃತ್ತದವರೆಗೆ
*ಮ್ಯೂಸಿಯಂ ರಸ್ತೆಯಲ್ಲಿ, ಎಂ.ಜಿ ರಸ್ತೆಯಿಂದ ಸೇಂಟ್ ಮಾರ್ಕ್ಸ್ ರಸ್ತೆವರೆಗೆ ಹಾಗೂ ಆಶೀರ್ವಾದಂ ವೃತ್ತದವರೆಗೆ
*ಕಸ್ತೂರಬಾ ರಸ್ತೆಯಲ್ಲಿ, ಕ್ವೀನ್ಸ್ ವೃತ್ತದಿಂದ ಹಡ್ಸನ್ ವೃತ್ತದ ವರೆಗೆ ಹಾಗೂ ಮಲ್ಯ ಆಸ್ಪತ್ರೆ ರಸ್ತೆಯಲ್ಲಿ ಸಿದ್ದಲಿಂಗಯ್ಯ ವೃತ್ತದಿಂದ ಆರ್ಆರ್ಎಂಆರ್ ವೃತ್ತದವರೆಗೆ
*ಕಬ್ಬನ್ ಪಾರ್ಕ್ ಒಳಭಾಗದ ಕಿಂಗ್ ರಸ್ತೆ, ಪ್ರೆಸ್ಕ್ಲಬ್ ಮುಂಭಾಗ, ಬಾಲಭವನ ಮುಂಭಾಗ, ಫೌಂಟೇನ್ ರಸ್ತೆಗಳಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ
- ಲ್ಯಾವೆಲ್ಲೆ ರಸ್ತೆಯಲ್ಲಿ ಕ್ವೀನ್ಸ್ ವೃತ್ತದಿಂದ ವಿಠಲ್ಮಲ್ಯ ರಸ್ತೆ ಜಂಕ್ಷನ್ವರೆಗೆ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ
ವಿಠಲ್ ಮಲ್ಯ ರಸ್ತೆ, ಸಿದ್ದಲಿಂಗಯ್ಯ ವೃತ್ತದಿಂದ ಸೇಂಟ್ ಮಾರ್ಕ್ಸ್ ರಸ್ತೆಯ ಬಿಷಪ್ ಕಾಟನ್ ಬಾಲಕಿಯರ ಶಾಲೆಯವರೆಗೆ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ
ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಿರುವ ಸ್ಥಳಗಳು
ಸೇಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್ ಮೈದಾನ, ಸಿದ್ದಲಿಂಗಯ್ಯ ವೃತ್ತ
ಸೇಂಟ್ ಜೋಸೆಫ್ಸ್ ಯುರೋಪಿಯನ್ ಸ್ಕೂಲ್ ಮೈದಾನ, ಮ್ಯೂಸಿಯಂ ರಸ್ತೆ
ಫ್ರೀಡಂ ಪಾರ್ಕ್ ಎಂಎಲ್ಸಿಪಿ ಪಾರ್ಕಿಂಗ್ ಸ್ಥಳ
ಗರುಡ ಮಾಲ್ನ ವಾಹನ ನಿಲುಗಡೆಯ ಸ್ಥಳ
ಶಿವಾಜಿನಗರ ಬಸ್ ನಿಲ್ದಾಣದ ಒಂದನೇ ಮಹಡಿ
ಯುಬಿಸಿಟಿ ವಾಹನ ನಿಲುಗಡೆಯ ಸ್ಥಳ

ನೋಡಿರಿ

