RR ಗೆಲ್ಲೋಕೆ RCB ಸೇನೆ ರೆಡಿ! – ಕೊಹ್ಲಿ & ಮ್ಯಾಕ್ಸಿ ಸಿಡಿಯೋದು ಪಕ್ಕಾ! – ಫಾಫ್ ಪಡೆಯಲ್ಲಿ ಯಾರಿಗೆಲ್ಲಾ ಚಾನ್ಸ್?

RR ಗೆಲ್ಲೋಕೆ RCB ಸೇನೆ ರೆಡಿ! – ಕೊಹ್ಲಿ & ಮ್ಯಾಕ್ಸಿ ಸಿಡಿಯೋದು ಪಕ್ಕಾ! – ಫಾಫ್ ಪಡೆಯಲ್ಲಿ ಯಾರಿಗೆಲ್ಲಾ ಚಾನ್ಸ್?

ಅಸಾಧ್ಯ ಅನ್ನೋದನ್ನ ಸಾಧಿಸಿ ಪ್ಲೇಆಫ್​ಗೆ ಕಾಲಿಟ್ಟಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಸೀಸನ್​ನ ಮೋಸ್ಟ್ ಫೇವರೆಟ್ ಟೀಂ. ಫಸ್ಟ್ ಆಫ್​ನಲ್ಲಿ ಸತತ 6 ಪಂದ್ಯಗಳನ್ನ ಸೋತು ಬಳಿಕ ಸೆಕೆಂಡ್ ಆಫ್​ನಲ್ಲಿ ಸತತ 6 ಪಂದ್ಯಗಳನ್ನ ಗೆದ್ದು ಟಾಪ್ 4ಗೆ ಜಿಗಿದಿದ್ದ ಆರ್​ಸಿಬಿ ಪಾಯಿಂಟ್ಸ್ ಟೇಬಲ್​ನ ಲೆಕ್ಕಾಚಾರಗಳನ್ನೆಲ್ಲಾ ಬುಡಮೇಲು ಮಾಡಿತ್ತು. ರಾಜಸ್ಥಾನ ರಾಯಲ್ಸ್ ವಿರುದ್ಧ ಬುಧವಾರ ಬೆಂಗಳೂರು ತಂಡ ಎಲಿಮಿನೇಟರ್ ಮ್ಯಾಚ್ ಆಡಲಿದೆ. ಈ ಪಂದ್ಯ ಒಂಥರಾ ಟೇಬಲ್ ಟಾಪರ್ ವರ್ಸಸ್ ಬಾಟಮ್ ತಂಡಗಳ ನಡುವಿನ ಹಣಾಹಣಿಯಾಗಿದೆ. ಬುಧವಾರದ ಪಂದ್ಯ ಉಭಯ ತಂಡಗಳಿಗೂ ನಿರ್ಣಾಯಕವಾಗಿದ್ದು, ಗೆದ್ದವರು ಸೆಕೆಂಡ್ ಕ್ವಾಲಿಫೈಯರ್​ಗೆ ಸೆಲೆಕ್ಟ್ ಆದ್ರೆ ಸೋತವರು ಟೂರ್ನಿಯಿಂದಲೇ ಗಂಟು ಮೂಟೆ ಕಟ್ಟಬೇಕಾಗುತ್ತೆ. ಅಷ್ಟಕ್ಕೂ ಈ ಪಂದ್ಯದಲ್ಲಿ ಆರ್​ಸಿಬಿಯಿಂದ ಯಾರೆಲ್ಲಾ ಕಣಕ್ಕಿಳಿಯಲಿದ್ದಾರೆ.

ಇದನ್ನೂ ಓದಿ: RCB ವಿಕ್ಟರಿ.. RRಗೆ ಸೋಲಿನ ಭೀತಿ – ಮೋಸ್ಟ್ ಡೇಂಜರಸ್ ಆಗಿದ್ದೇಗೆ ಕೊಹ್ಲಿ?

ಮಂಗಳವಾರ ನಡೆದ ಕ್ವಾಲಿಫೈಯರ್ 1 ಮ್ಯಾಚ್​ನಲ್ಲಿ ಟೇಬಲ್ ಟಾಪರ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಹೀನಾಯವಾಗಿ ಸೋಲಿಸುವ ಮೂಲಕ ಫೈನಾಲೆಗೆ ಲಗ್ಗೆ ಇಟ್ಟಿದೆ. ಇದೀಗ  ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ಮತ್ತು ಬೆಂಗಳೂರು ಮುಖಾಮುಖಿಯಾಗಲಿದ್ದು, ಗೆದ್ದವರು ಹೈದ್ರಾಬಾದ್​ ತಂಡವನ್ನ ಮತ್ತೆ ಎದುರಿಸಬೇಕಾಗಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ಮತ್ತೊಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಲೀಗ್​ನ ಸೆಕೆಂಡ್ ಆಫ್ ಮ್ಯಾಚ್​ಗಳನ್ನ ನೋಡಿದ್ರೆ ರಾಜಸ್ಥಾನ ವಿರುದ್ಧ ಬೆಂಗಳೂರು ತಂಡವೇ ಮೇಲುಗೈ ಸಾಧಿಸೋ ಸಾಧ್ಯತೆ ಇದೆ. ಯಾಕಂದ್ರೆ ಜಸ್ಟ್ ಒಂದು ವಾರದ ಹಿಂದೆ ಆರ್​​ಸಿಬಿ ಮತ್ತು ರಾಜಸ್ಥಾನ್​ ಕಥೆ ಬೇರೆ ಇತ್ತು. ಫ್ಯಾನ್ಸ್ ಅಷ್ಟೇ ಯಾಕೆ ಬಹುಶಃ ಕ್ರಿಕೆಟ್ ಪಂಡಿತರು ಕೂಡ ಆರ್​​ಸಿಬಿ ಮತ್ತು ರಾಜಸ್ಥಾನ್​ ಎಲಿಮಿನೇಟರ್​​ ಪಂದ್ಯದಲ್ಲಿ ಎದುರು ಬದುರಾಗ್ತಾವೆ ಅಂತಾ ಇಮ್ಯಾಜಿನ್ ಕೂಡ ಮಾಡಿರಲಿಲ್ಲ. ಆದ್ರೀಗ ಅಸಾಧ್ಯ ಅನ್ನೋದು ಸಾಧ್ಯವಾಗಿದೆ. ಆರಂಭದಿಂದಲೂ ಟೇಬಲ್​​ ಟಾಪರ್​ ಆಗಿದ್ದ ರಾಜಸ್ಥಾನ್​​, ಆರ್​​ಸಿಬಿ ವಿರುದ್ಧ ಸೆಣಸಲಿದೆ. ಐಪಿಎಲ್​​ ಮೊದಲಾರ್ಧದಲ್ಲಿ ಆರ್​​ಸಿಬಿ  ಆಡಿದ 8 ಪಂದ್ಯಗಳಲ್ಲಿ ಕೇವಲ 1 ಪಂದ್ಯ ಗೆದ್ದಿತ್ತು. ಬಳಿಕ ನಡೆದ 6 ಪಂದ್ಯಗಳಲ್ಲಿ ಆರೂ ಪಂದ್ಯಗಳನ್ನ ಗೆದ್ದು ಪ್ಲೇ ಆಫ್​​ ಪ್ರವೇಶಿಸಿದೆ. ಆದ್ರೆ ರಾಜಸ್ಥಾನ ಸ್ಥಿತಿ ಹೀಗಿರಲಿಲ್ಲ. ಮೊದಲಾರ್ಧದಲ್ಲಿ 7ರಲ್ಲಿ 6 ಪಂದ್ಯ ಗೆದ್ದು ಟೇಬಲ್​ ಟಾಪರ್​ ಆಗಿದ್ದ ರಾಜಸ್ಥಾನ್​​ ಬಳಿಕ ಸಾಲು ಸಾಲು ಮ್ಯಾಚ್​​ಗಳಲ್ಲಿ ಸೋತಿದೆ. ಕೊನೆಗೆ ಪಾಯಿಂಟ್ಸ್ ಟೇಬಲ್​ನಲ್ಲಿ 10ನೇ ಸ್ಥಾನದಲ್ಲಿದ್ದ ಆರ್​​ಸಿಬಿ ಜತೆಗೆ ಮೊದಲ ಸ್ಥಾನದಲ್ಲಿದ್ದ ರಾಜಸ್ಥಾನ ಎಲಿಮಿನೇಟರ್ ಪಂದ್ಯದಲ್ಲಿ ಫೈಟ್ ನಡೆಸಬೇಕಿದೆ. ಸದ್ಯ ಭರ್ಜರಿ ಫಾರ್ಮ್​ನಲ್ಲಿರುವ ಆರ್​ಸಿಬಿ ರಾಜಸ್ಥಾನ ವಿರುದ್ಧದ ಪಂದ್ಯಕ್ಕೆ ಬಲಿಷ್ಠ ಬಳಗವನ್ನೇ ಕಣಕ್ಕಿಳಿಸಲು ರಣತಂತ್ರ ರೂಪಿಸಿದೆ. ಅಂದರೆ ಇಲ್ಲಿ ಪ್ಲೇಯಿಂಗ್ ಇಲೆವೆನ್​ನಲ್ಲಿ ಮಹತ್ವದ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ. ಯಾಕಂದ್ರೆ ಕಳೆದ 6 ಪಂದ್ಯಗಳಿಂದ್ಲೂ ಆರ್​ಸಿಬಿ ಸತತ ಜಯ ಸಾಧಿಸಿದೆ. ಹೀಗಾಗಿ ಇದೇ ಆಟಗಾರರನ್ನೇ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೂಡ ಕಣಕ್ಕಿಳಿಸಲಿದ್ದಾರೆ. ಹಾಗಾದ್ರೆ ಇಂದಿನ ಪಂದ್ಯದಲ್ಲಿ ಯಾರೆಲ್ಲಾ ಕಣಕ್ಕಿಳಿಯಬಹುದು ಅನ್ನೋದನ್ನ ಹೇಳ್ತೇನೆ ನೋಡಿ.

ಫಾಫ್ ಡುಪ್ಲೆಸಿಸ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ಆಗಿರುವ ಫಾಫ್ ಡುಪ್ಲೆಸಿಸ್ ಇತ್ತೀಚೆಗೆ ಒಳ್ಳೆ ಫಾರ್ಮ್​ನಲ್ಲಿದ್ದಾರೆ. ಕಳೆದ 14 ಪಂದ್ಯಗಳಲ್ಲಿ ಎಲ್ಲಾ ಮ್ಯಾಚ್​ಗಳಲ್ಲೂ ಆರಂಭಿಕನಾಗಿ ಕಣಕ್ಕಿಳಿದಿರುವ ಫಾಫ್ ಒಟ್ಟು 421 ರನ್​ ಕಲೆಹಾಕುವ ಮೂಲಕ ಆರ್​ಸಿಬಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದಾರೆ. ಸ್ಟ್ರೈಕ್ ರೇಟ್ ಕೂಡ 163 ಇದೆ.

ವಿರಾಟ್ ಕೊಹ್ಲಿ

ರನ್ ಮಷಿನ್ ಅಂತಾನೇ ಕರೆಸಿಕೊಳ್ಳೋ ಆರ್​ಸಿಬಿಯ ಈ ಕಿಂಗ್ ಬಗ್ಗೆ ಹೇಳೋದೇ ಬೇಡ. ಸೀಸನ್ 17 ಐಪಿಎಲ್​ನಲ್ಲಿ ಆರ್​ಸಿಬಿ ತಂಡ ಪ್ಲೇಆಫ್ ಹಂತಕ್ಕೆ ಬರೋಕೆ ಮುಖ್ಯ ಕಾರಣ ವಿರಾಟ್ ಕೊಹ್ಲಿ ಅಂತಾನೇ ಹೇಳ್ಬೋದು. ಯಾಕಂದ್ರೆ 14 ಇನಿಂಗ್ಸ್​ಗಳಲ್ಲಿ ಕೊಹ್ಲಿ ಕಲೆಹಾಕಿರುವುದು ಬರೋಬ್ಬರಿ 708 ರನ್​ಗಳು. ಈ ಮೂಲಕ ಆರ್​ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ರಜತ್ ಪಟೀದಾರ್

ಇನ್ನು ಕಳೆದ ಕೆಲ ಪಂದ್ಯಗಳಿಂದ ಆರ್​ಸಿಬಿಯಲ್ಲಿ ರಜತ್ ಪಟೀದಾರ್ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. 3ನೇ ಕ್ರಮಾಂಕದಲ್ಲಿ 12 ಇನಿಂಗ್ಸ್ ಆಡಿರುವ ಪಟಿದಾರ್ ಒಟ್ಟು 361 ರನ್ ಕಲೆಹಾಕಿದ್ದಾರೆ. ಅದೂ ಕೂಡ 179.60 ಸ್ಟ್ರೈಕ್ ರೇಟ್ ಅನ್ನೋದು ಮೋಸ್ಟ್ ಇಂಪಾರ್ಟೆಂಟ್.

ಕ್ಯಾಮರೋನ್ ಗ್ರೀನ್

ಈ ಸೀಸನ್​ನ ಆರಂಭದ ಪಂದ್ಯಗಳಲ್ಲಿ ಅಷ್ಟೇನು ಪರ್ಫಾಮ್ ಮಾಡದ ಕ್ಯಾಮರೂನ್ ಗ್ರೀನ್ ಈಗ ಉತ್ತಮ ಪ್ರದರ್ಶನ ನೀಡ್ತಿದ್ದಾರೆ. 12 ಪಂದ್ಯಗಳನ್ನಾಡಿರುವ ಗ್ರೀನ್ 228 ರನ್  ಹಾಗೂ 9 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೂ ಕೂಡ ಕ್ರೂಶಿಯಲ್ ಟೈಮ್​ನಲ್ಲಿ ಎದುರಾಳಿ ತಂಡದ ವಿಕೆಟ್ ಬೀಳಿಸೋ ಮೂಲಕ ತಂಡಕ್ಕೆ ಆಸರೆಯಾಗ್ತಿದ್ದಾರೆ.

ಗ್ಲೆನ್ ಮ್ಯಾಕ್ಸ್​ವೆಲ್

ಬೆಂಗಳೂರು ತಂಡದ ಆರಂಭದ ಪಂದ್ಯಗಳಲ್ಲಿ ಅಟ್ಟರ್ ಫ್ಲಾಪ್ ಆಗಿದ್ದ ಗ್ಲೆನ್ ಮ್ಯಾಕ್ಸ್​ವೆಲ್ ಈಗ ಕಮ್​ ಬ್ಯಾಕ್ ಮಾಡ್ತಿದ್ದಾರೆ. ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದ ಮ್ಯಾಕ್ಸಿ ಚೆನ್ನೈ ವಿರುದ್ಧದ ಪ್ಲೇಆಫ್ ಕ್ವಾಲಿಫೈ ಪಂದ್ಯದಲ್ಲಿ ಹೀರೋ ಆಗಿದ್ರು. ಫಸ್ಟ್ ಬಾಲ್​ನಲ್ಲೇ ರುತುರಾಜ್ ಗಾಯಕ್ವಾಡ್​ರನ್ನ ಔಟ್ ಮಾಡೋ ಮೂಲಕ ಮಹತ್ವದ ವಿಕೆಟ್ ಕಬಳಿಸಿದ್ರು. ಬ್ಯಾಟಿಂಗ್​ನಲ್ಲಿ ಸದ್ದು ಮಾಡದ ಮ್ಯಾಕ್ಸಿ ಈವರೆಗೆ ಆಡಿದ 8 ಇನಿಂಗ್ಸ್​ಗಳಿಂದ ಗಳಿಸಿರೋದು ಕೇವಲ 52 ರನ್​ಗಳು ಮಾತ್ರ.

ದಿನೇಶ್ ಕಾರ್ತಿಕ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಪತ್ಬಾಂಧವ, ಡಿಕೆ ಬಾಸ್ ಅಂತಾನೇ ಕರೆಸಿಕೊಳ್ಳೋ ದಿನೇಶ್ ಕಾರ್ತಿಕ್ ಯಾವಾಗ್ಲೂ ಬೆಸ್ಟ್ ಪ್ಲೇಯರ್. ಆರ್​ಸಿಬಿ ಪರ ವಿಕೆಟ್ ಕೀಪರ್ ಆಗಿ ಕಣಕ್ಕಿಳಿಯುತ್ತಿರುವ ಡಿಕೆ 12 ಇನಿಂಗ್ಸ್​ಗಳಿಂದ ಒಟ್ಟು 315 ರನ್ ಕಲೆಹಾಕಿ ಮಿಂಚಿದ್ದಾರೆ.

ಸ್ವಪ್ನಿಲ್ ಸಿಂಗ್

ಇನ್ನು ಈ ಆಟಗಾರನ ಬಗ್ಗೆ ಹೇಳೋದೇ ಬೇಡ. ಅದ್ಯಾವಾಗ ಬೆಂಗಳೂರು ತಂಡದ ಪರ ಮೈದಾನಕ್ಕೆ ಕಾಲಿಟ್ರೋ ಅಲ್ಲಿಂದ ಆರ್​ಸಿಬಿ ಸೋತಿದ್ದೇ ಇಲ್ಲ. ಒಂಥರಾ ಲಕ್ಕಿ ಚಾರ್ಮ್ ಅಂತಾನೇ ಹೇಳಲಾಗ್ತಿದೆ. ಆರ್​ಸಿಬಿ ಪರ 6 ಪಂದ್ಯಗಳನ್ನಾಡಿರುವ ಸ್ವಪ್ನಿಲ್ ಸಿಂಗ್ 6 ವಿಕೆಟ್​ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಆರ್​ಆರ್ ವಿರುದ್ಧ ಕೂಡ ಸ್ವಪ್ನಿಲ್ ಕಾಣಿಸಿಕೊಳ್ಳುವುದು ಖಚಿತ.

ಕರ್ಣ್ ಶರ್ಮಾ

ಆರ್​ಸಿಬಿ ತಂಡದ ಹಿರಿಯ ಸ್ಪಿನ್ನರ್ ಕರ್ಣ್ ಶರ್ಮಾ ಈವರೆಗೆ 8 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, ಈ ವೇಳೆ 6 ವಿಕೆಟ್​ಗಳನ್ನು ಕಬಳಿಸಿದ್ದಾರೆ.

ಯಶ್ ದಯಾಳ್

ಕಳೆದ ಸೀಸನ್​ನಲ್ಲಿ ತುಂಬಾನೇ ದುಬಾರಿ ಆಟಗಾರ ಅನ್ನಿಸಿಕೊಂಡಿದ್ದ ಯಶ್ ದಯಾಳ್​ಗೆ ಆರ್​ಸಿಬಿಗೆ ಬಂದ ಮೇಲೆ ಅದೃಷ್ಟನೇ ಬದಲಾಗಿದೆ. ಸಿಎಸ್​ಕೆ ವಿರುದ್ಧದ ಪಂದ್ಯದ ಗೆಲುವಿನ ರೂವಾರಿ ಎಡಗೈ ವೇಗಿ ಯಶ್ ದಯಾಳ್ ಅನ್ನೋದನ್ನ ಮರೆಯೋಕ್ಕಾಗಲ್ಲ. ಈ ಬಾರಿ 13 ಪಂದ್ಯಗಳನ್ನಾಡಿದ್ದು, ಈ ವೇಳೆ 15 ವಿಕೆಟ್​ಗಳನ್ನು ಕಬಳಿಸಿದ್ದಾರೆ.

ಮೊಹಮ್ಮದ್ ಸಿರಾಜ್

ಆರಂಭಿಕ ಪಂದ್ಯಗಳಲ್ಲಿ ಡಲ್ ಆಗಿದ್ದ ಮೊಹಮ್ಮದ್ ಸಿರಾಜ್ ಇತ್ತೀಚೆಗೆ ಫಾರ್ಮ್​ಗೆ ಬಂದಿದ್ದಾರೆ. ಆರ್​ಸಿಬಿ ಪರ 13 ಪಂದ್ಯಗಳನ್ನಾಡಿರುವ ಮೊಹಮ್ಮದ್ ಸಿರಾಜ್ 13 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಲಾಕಿ ಫರ್ಗುಸನ್

ಆರ್​ಸಿಬಿ ಪರ 6 ಪಂದ್ಯಗಳನ್ನಾಡಿರುವ ವೇಗಿ ಲಾಕಿ ಫರ್ಗುಸನ್ ಈವರೆಗೆ 8 ವಿಕೆಟ್ ಕಬಳಿಸಿದ್ದಾರೆ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲೂ ಫರ್ಗುಸನ್ ಕಣಕ್ಕಿಳಿಯೋ ಸಾಧ್ಯತೆ ಹೆಚ್ಚಿದೆ.

ಮಹಿಪಾಲ್ ಲೋಮ್ರರ್

ಕಳೆದ ಕೆಲ ಪಂದ್ಯಗಳಿಂದ ಆರ್​ಸಿಬಿ ಪರ ಇಂಪ್ಯಾಕ್ಟ್ ಪ್ಲೇಯರ್ ಆಗಿ ಮಹಿಪಾಲ್ ಲೋಮ್ರರ್ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ನಿರ್ಣಾಯಕ ಪಂದ್ಯದಲ್ಲೂ ಲೋಮ್ರರ್ ಇಂಪ್ಯಾಕ್ಟ್​ ಸಬ್​ ಆಗಿ ಬ್ಯಾಟಿಂಗ್​ಗೆ ಬರುವ ನಿರೀಕ್ಷೆ ಇದೆ.

ಆರ್​ಸಿಬಿಯ ಕಳೆದ ಆರು ಪಂದ್ಯಗಳ ಅಬ್ಬರ ನೋಡ್ತಿದ್ರೆ ರಾಜಸ್ಥಾನದ ವಿರುದ್ಧದ ಪಂದ್ಯದಲ್ಲೂ ಗೆದ್ದು ಬೀಗೋ ಎಲ್ಲಾ ಲಕ್ಷಣ ಕಾಣಿಸ್ತಿದೆ. ಪ್ಲೇಯಿಂಗ್ 11ನ ಎಲ್ಲಾ ಆಟಗಾರರು ಉತ್ತರಮ ಪ್ರದರ್ಶನ ನೀಡ್ತಿದ್ದಾರೆ. ಆದ್ರೆ ಬೆಂಗಳೂರು ತಂಡಕ್ಕೆ ಗ್ಲೆನ್ ಮ್ಯಾಕ್ಸ್​ವೆಲ್ ಪ್ಲಸ್ ಹಾಗೇ ಮೈನಸ್ ಎರಡೂ ಹೌದು. ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡದೇ ಇದ್ರೂ ಚೆನ್ನೈ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಮ್ಯಾಕ್ಸಿ ಫಾರ್ಮ್​ಗೆ ಬಂದಿದ್ರು. ಆರ್​​​ಸಿಬಿ ರೋಚಕ ಗೆಲುವಿನಲ್ಲಿ ಗ್ಲೆನ್​ ಮ್ಯಾಕ್ಸ್​ವೆಲ್​​ ಪಾತ್ರ ಬಹಳಷ್ಟಿತ್ತು. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಕೊನೆಯಲ್ಲಿ ಬಂದ ಮ್ಯಾಕ್ಸಿ ಕೇವಲ 5 ಬಾಲ್​ನಲ್ಲಿ 1 ಸಿಕ್ಸರ್​​, 2 ಫೋರ್​ ಸಮೇತ 16 ರನ್​ ಚಚ್ಚಿದ್ರು. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​ 320ಕ್ಕೂ ಹೆಚ್ಚಿತ್ತು. ಜತೆಗೆ ಮ್ಯಾಕ್ಸಿ ಬೌಲಿಂಗ್​ನಲ್ಲೂ ಕಮಾಲ್​ ಮಾಡಿದ್ರು. ಕೇವಲ 4 ಓವರ್​ನಲ್ಲಿ 25 ರನ್​ ಕೊಟ್ಟು 1 ಪ್ರಮುಖ ವಿಕೆಟ್​ ತೆಗೆದ್ರು. ಒಂದು ರನೌಟ್​ ಕೂಡ ಮಾಡಿದ್ರು. ಹಾಗಾಗಿ ಆರ್​​ಸಿಬಿ ಚೆನ್ನೈ ವಿರುದ್ಧ ಗೆಲ್ಲಲು ಸಹಾಯವಾಗಿತ್ತು. ಹಾಗೇ ಫಾರ್ಮ್​ಗೆ ಬಂದಿರೋ ಮ್ಯಾಕ್ಸಿ ರಾಜಸ್ತಾನ ವಿರುದ್ಧ ಮತ್ತೆ ಬ್ಯಾಟಿಂಗ್ ಆರ್ಭಟ ತೋರೋ ಎಲ್ಲಾ ಸಾಧ್ಯತೆ ಇದೆ. ಹಾಗೇ ಸಾಮರ್ಥ್ಯ ಕೂಡ ಇದೆ. ಹೀಗಾಗಿ ರಾಜಸ್ಥಾನಕ್ಕೆ ರನ್ ಮಿಷನ್ ವಿರಾಟ್ ಕೊಹ್ಲಿ ಜೊತೆ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಭಯವೂ ಕಾಡ್ತಿದೆ. ಇದುವರೆಗೂ ಬೆಂಚ್ ಗೆ ಸೀಮಿತವಾಗಿದ್ದ ಮ್ಯಾಕ್ಸ್ ವೆಲ್ ಸರಿಯಾದ ಸಮಯಕ್ಕೆ ಫಾರ್ಮ್ ಗೆ ಬಂದಿರುವುದು ಆರ್‌ಸಿಬಿ ಅಭಿಮಾನಿಗಳಿಗೆ ಖುಷಿ ತಂದಿದೆ. ಒಮ್ಮೆ ಮ್ಯಾಕ್ಸ್‌ವೆಲ್ ಫಾರ್ಮ್‌ಗೆ ಮರಳಿದರೆ ಎಂತಹುದೇ ಪಂದ್ಯವನ್ನಾದರೂ ಸಹ ಏಕಾಂಗಿಯಾಗಿ ತಂಡವನ್ನು ಗೆಲ್ಲಿಸುವಂತಹ ಸಾಮರ್ಥ್ಯ ಹೊಂದಿದ್ದಾರೆ. ಅಲ್ಲದೇ ಮ್ಯಾಕ್ಸಿ ಇಂತಹ ಸೆಮೀಸ್‌‌ ಪಂದ್ಯಗಳಲ್ಲಿ ಯಾವಾಗಲೂ ಅಬ್ಬರಿಸುತ್ತಾರೆ. ಈ ಬಾರಿಯ ಏಕದಿನ ವಿಶ್ವಕಪ್‌ನಲ್ಲಿ ಮ್ಯಾಕ್ಸಿ ಅವರ ದ್ವಿಶತಕವೇ ಇದಕ್ಕೆ ಬೆಸ್ಟ್ ಎಕ್ಸಾಂಪಲ್. ಹೀಗಾಗಿ ಇಷ್ಟು ದಿನ ಆರ್​ಸಿಬಿಗಾಗಿ ಏನೂ ಮಾಡದ ಮ್ಯಾಕ್ಸಿ ಪ್ಲೇ ಆಫ್ ಪಂದ್ಯಗಳಲ್ಲಾದ್ರೂ ಅಬ್ಬರಿಸೋ ಮೂಲಕ ಅಭಿಮಾನಿಗಳ ನಿರಾಸೆಯನ್ನ ಹೋಗಲಾಡಿಸಬಹುದು ಒಂದೊಳ್ಳೆ ಅವಕಾಶ ಇದೆ. ಒಟ್ಟಾರೆ ಜಸ್ಟ್ 1 ಪರ್ಸೆಂಟ್ ಇದ್ದ ಆರ್​ಸಿಬಿಯ ಪ್ಲೇಆಫ್ ಕನಸು 100 ಪರ್ಸೆಂಟ್ ನನಸಾಗಿದೆ. ಕೊಹ್ಲಿ ಅಂದು ಆಡಿದ್ದ ಮಾತು ನಿಜವಾಗಿದೆ. ನಮಗೆ ಕೇವಲ ಶೇಕಡಾ 1ರಷ್ಟು ಅವಕಾಶವಿದೆ ಮತ್ತು ಕೆಲವೊಮ್ಮೆ ಈ ಅವಕಾಶವೇ ಸಾಕಷ್ಟು ಉತ್ತಮವಾಗಿರುತ್ತದೆ. ಆದರೆ, ಆ ಶೇಕಡಾ ಒಂದರಷ್ಟು ಅವಕಾಶದ ಬಗ್ಗೆ ನೀವು ಹೇಗೆ ಯೋಚಿಸುತ್ತೀರಿ ಎಂಬುದು ಮುಖ್ಯವಾಗಿರುತ್ತದೆ. ಆ ಶೇ 1ರಷ್ಟು ಅವಕಾಶವನ್ನು ನೀವು 10 ಆಗಿ ಪರಿವರ್ತಿಸಲು ಮತ್ತು 10 ಅನ್ನು ಶೇ 30ರಷ್ಟಾಗಿ ಬೆಳೆಸಲು ಎಲ್ಲವನ್ನೂ ಮಾಡಲು ಸಿದ್ಧರಿದ್ದೀರಾ?. ಸಿದ್ಧರಿದ್ದೀರ ಎಂದಾದ್ರೆ ಅಂತಿಮವಾಗಿ ಅದರಿಂದ ಏನು ಬೇಕಾದ್ರೂ ಮಾಡಬಹುದು ಎಂದಿದ್ರು. ಈ ಮಾತೇ ಈಗ ಆರ್​ಸಿಬಿಯನ್ನ ಪ್ಲೇಆಫ್​ಗೆ ಕರೆ ತಂದಿದೆ. ಹೀಗೆ ಎಲಿಮಿನೇಟರ್ ಪಂದ್ಯದಲ್ಲೂ ಗೆದ್ದು ಬಳಿಕ ಹೈದ್ರಾಬಾದ್​ ತಂಡವನ್ನೂ ಮಣಿಸಿ ಅಂತಿಮವಾಗಿ ಕೆಕೆಆರ್ ವಿರುದ್ಧ ಗೆದ್ದು ಆರ್​ಸಿಬಿ ತನ್ನ 16 ವರ್ಷಗಳ ಕನಸನ್ನ ನನಸು ಮಾಡಿಕೊಳ್ಳಲಿ. ಬೆಂಗಳೂರು ಆಟಗಾರರು ಚಾಂಪಿಯನ್ ಆಗಿ ಟ್ರೋಫಿಗೆ ಮುತ್ತಿಡಲಿ. ಅದ್ರಲ್ಲೂ ಕಿಂಗ್ ಕೊಹ್ಲಿಗೆ  ಕಪ್ ಸಿಗ್ಲಿ ಅಂತಾ ಕೋಟ್ಯಂತರ ಫ್ಯಾನ್ಸ್ ಬೇಡಿಕೊಳ್ತಿದ್ದಾರೆ.

 

Sulekha