RCB Vs RR.. ರಿಯಲ್ ಚಾಲೆಂಜ್ – ಮೊದಲ ಸೋಲು ಯಾರಿಗೆ?
KING ಎದುರು ವೈಭವಿಸ್ತಾರಾ ಸೂರ್ಯವಂಶಿ?

2026ರ ಐಪಿಎಲ್ ಸೀಸನ್ನ ಅಸಲಿ ಖದರ್ ಈಗ ಸ್ಟಾರ್ಟ್ ಆಗ್ತಿದೆ. ಅದ್ರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ ರಾಯಲ್ಸ್ ಹಾಗೇ ಪಂಜಾಬ್ ತಂಡಗಳು ಸೂಪರ್ ಟೀಂಗಳು. ಈಗ ಸೋಲೇ ಇಲ್ಲದ ಸರದಾರರ ನಡುವಿನ ಹೈವೋಲ್ಟೇಜ್ ಫೈಟ್ಗೆ ವೇದಿಕೆ ಸಿದ್ಧವಾಗ್ತಿದೆ. ಶುಕ್ರವಾರ ಗುವಾಹಟಿಯಲ್ಲಿ ಬೆಂಗಳೂರು ವರ್ಸಸ್ ರಾಜಸ್ಥಾನ ನಡುವೆ ಫೈಟ್ ನಡೆಯಲಿದೆ. ಈ ಸೀಸನ್ನಲ್ಲಿ ಇಬ್ರೂ ಕೂಡ ಅಜೇಯವಾಗಿ ಮುನ್ನುಗ್ತಿದ್ದು ಯಾರಿಗೆ ಮೊದಲ ಸೋಲು ಅನ್ನೋದು ಈ ಮ್ಯಾಚಲ್ಲಿ ಗೊತ್ತಾಗುತ್ತೆ.
ಇದನ್ನೂ ಓದಿ : PSL ನಡುವೆ ಡೇವಿಡ್ ವಾರ್ನರ್ ಅರೆಸ್ಟ್ – ರಾತ್ರಿ ವೇಳೆ ಆಗಿದ್ದೇನು ಗೊತ್ತಾ
ಆರ್ಸಿಬಿ ವರ್ಸಸ್ ಆರ್ಆರ್ ನಡುವಿನ ಮ್ಯಾಚ್ ಏಪ್ರಿಲ್ 10 ಅಂದ್ರೆ ಇದೇ ಭಾನುವಾರ ಗುವಾಹಟಿಯಲ್ಲಿ ನಡೆಯಲಿದೆ. ಎರಡೂ ತಂಡಗಳು ಸೂಪರ್ ಸ್ಟ್ರಾಂಗ್ ಆಗಿದ್ದು ಈ ಸೀಸನ್ನ ಅದ್ಭುತವಾಗಿ ಸ್ಟಾರ್ಟ್ ಮಾಡಿದ್ದಾರೆ. ಸೋಲೇ ಕಂಡಿಲ್ಲ. ಹಾಲಿ ಚಾಂಪಿಯನ್ ಆರ್ಸಿಬಿ ಆಡಿರುವಂಥ ಎರಡೂ ಪಂದ್ಯಗಳಲ್ಲೂ 200ಪ್ಲಸ್ ಸ್ಕೋರ್ ಮಾಡಿದ್ದು ಚೇಸಿಂಗ್ ಹಾಗೇ ಡಿಫೆನ್ಸ್ ಎರಡ್ರಲ್ಲೂ ತಮ್ಮ ಸಾಮರ್ಥ್ಯ ಪ್ರೂವ್ ಮಾಡಿದ್ದಾರೆ. ಇತ್ತ ರಾಜಸ್ಥಾನ ಕೂಡ ಮೂರಕ್ಕೆ ಮೂರೂ ಪಂದ್ಯಗಳನ್ನ ಗೆದ್ಕೊಂಡು ಬರ್ತಿದ್ದಾರೆ. ಸೋ ಈಗ ಈ ಎರಡೂ ತಂಡಗಳಿಗೆ ಅಸಲಿ ಅಗ್ನಿಪರೀಕ್ಷೆ ಎದುರಾಗ್ತಿದೆ.
ಸೋಲಿಲ್ಲದ ಸರದಾರರದಲ್ಲಿ ಮೊದಲ ಸೋಲು ಯಾರಿಗೆ?
ಇಂಟ್ರೆಸ್ಟಿಂಗ್ ಅಂದ್ರೆ ಇದೇ ನೋಡಿ. ರಾಜಸ್ಥಾನ ಈ ಸೀಸನ್ನಲ್ಲಿ ಆಲ್ರೆಡಿ ಮೂರು ಮ್ಯಾಚ್ ಆಡಿದ್ರೆ ಬಟ್ ಒಂದೂ ಪಂದ್ಯ ಸೋತಿಲ್ಲ. ಮತ್ತೊಂದೆಡೆ ಬೆಂಗಳೂರು ಟೀಂ ಎರಡು ಪಂದ್ಯ ಆಡಿದ್ದು ಎರಡರಲ್ಲೂ ಗೆದ್ದು ಬೀಗಿದೆ. ಮೊದಲನೇದಾಗಿ ರಾಜಸ್ಥಾನ ತಂಡ ಮಾರ್ಚ್ 30ಕ್ಕೆ ಚೆನ್ನೈ ವಿರುದ್ಧ ಫಸ್ಟ್ ಮ್ಯಾಚ್ ಆಡಿತ್ತು. ಫಸ್ಟ್ ಬೌಲಿಂಗ್ ಮಾಡಿ ಕೇವಲ 127 ರನ್ಗಳಿಗೆ ಚೆನ್ನೈ ಕಟ್ಟಿ ಹಾಕಿದ್ರು. ನಂತ್ರ 12.1 ಓವರ್ನಲ್ಲೇ ರಾಜಸ್ಥಾನ ಟಾರ್ಗೆಟ್ ರೀಚ್ ಆಗಿತ್ತು. ನೆಕ್ಸ್ಟ್ ಗುಜರಾತ್ ವಿರುದ್ಧ 210 ರನ್ಸ್ ಗಳಿಸಿ ನೆಕ್ ಟು ನೆಕ್ ಫೈಟ್ ಇದ್ದು ಲಾಸ್ಟ್ ಬಾಲ್ವರೆಗೂ ಕುತೂಹಲ ಇತ್ತು. ಅಂತಿಮವಾಗಿ 6 ರನ್ಗಳಿಂದ ಆರ್ಆರ್ ಗೆದ್ದುಕೊಳ್ತು. ಈಗ ಮುಂಬೈ ವಿರುದ್ಧ 11 ಓವರ್ಗಳಲ್ಲಿ 150 ರನ್ ಗಳಿಸಿ 27 ರನ್ಗಳಿಂದ ಎಂಐ ಪಡೆಯನ್ನ ಸೋಲಿಸಿದ್ದಾರೆ. ಇನ್ನು ಆರ್ಸಿಬಿ ತಂಡ ಫಸ್ಟ್ ಮ್ಯಾಚಲ್ಲಿ ಹೈದ್ರಾಬಾದ್ ವಿರುದ್ಧ ಫಸ್ಟ್ ಫೀಲ್ಡಿಂಗ್ ಮಾಡಿ 201 ರನ್ಗಳಿಗೆ ಕಂಟ್ರೋಲ್ ಮಾಡಿದ್ರು. ಌಂಡ್ 15.4 ಓವರ್ನಲ್ಲೇ ಈ ಟಾರ್ಗೆಟ್ ಬೆನ್ನಟ್ಟಿದ್ರು. ಆಮೇಲೆ ಸಿಎಸ್ಕೆ ವಿರುದ್ಧ 250 ರನ್ಸ್ ಹೊಡೆದು 43 ರನ್ಗಳಿಸಿ ಸೋಲಿಸಿದ್ದಾರೆ. ಸೋ ಈ ರಿಸಲ್ಟ್ಗಳನ್ನ ನೋಡಿದಾಗ್ಲೇ ಗೊತ್ತಾಗುತ್ತೆ. ಎರಡೂ ತಂಡಗಳಲ್ಲೂ ಬ್ಯಾಟಿಂಗ್ ಚೆನ್ನಾಗಿದೆ ಬೌಲಿಂಗ್ ಕೂಡ ಸಾಲಿಡ್ ಆಗಿದೆ ಅನ್ನೋದು.
ಬೆಂಗಳೂರು ತಂಡದಲ್ಲಿ ರಣಬೇಟೆಗಾರರು!
ಹಾಲಿ ಚಾಂಪಿಯನ್ಸ್ ಎರಡೂ ಪಂದ್ಯಗಳಲ್ಲಿ 200+ ಸ್ಕೋರ್
ಪಡಿಕ್ಕಲ್ & ಪಾಟಿದಾರ್ ಅದ್ಭುತ ಸ್ಟ್ರೈಕ್ ರೇಟ್ ಬ್ಯಾಟಿಂಗ್
ಡೆತ್ ಓವರ್ ಗಳಲ್ಲಿ ಬಿಗ್ ಹಿಟ್ಸ್ ಬಾರಿಸ್ತಿರೋ ಟಿಮ್ ಡೇವಿಡ್
ಎರಡೂ ಪಂದ್ಯಗಳಲ್ಲೂ ಓಪನರ್ಸ್ ವಿಕೆಟ್ ತೆಗೆದಿರೋ ಡಫಿ
2 ಪಂದ್ಯಗಳಲ್ಲಿ 19 ವಿಕೆಟ್ ತೆಗೆದಿರೋ ಬೆಂಗಳೂರು ಬೌಲರ್ಸ್
ಬ್ಯಾಟಿಂಗ್ ನಲ್ಲಿ ಎರಡೂ ಪಂದ್ಯ ಸೇರಿ 7 ವಿಕೆಟ್ಸ್ ಕಳ್ಕೊಂಡಿದ್ರು
ಸೋ ಇದನ್ನೆಲ್ಲಾ ನೋಡಿದಾಗ ಬೆಂಗಳೂರು ತಂಡದಲ್ಲಿ ಬ್ಯಾಟಿಂಗ್ ಬಗ್ಗೆ ಮಾತಾಡಂಗಿಲ್ಲ. ಌಂಡ್ ಬೌಲಿಂಗ್ ಕೂಡ ಸ್ಟ್ರಾಂಗ್ ಆಗೇ ಇದೆ. ಎಲ್ರೂ ಕೂಡ ವಿಕೆಟ್ ಟೇಕಿಂಗ್ ಎಬಿಲಿಟಿ ತೋರಿಸ್ತಿದ್ದಾರೆ. 2 ಪಂದ್ಯಗಳಲ್ಲೇ 19 ವಿಕೆಟ್ ತೆಗೆದಿರೋದು ಇದಕ್ಕೆ ಬೆಸ್ಟ್ ಎಕ್ಸಾಂಪಲ್. ವಿನ್ನಿಂಗ್ ಟ್ರ್ಯಾಕ್ನಲ್ಲೇ ಮೂರನೇ ಪಂದ್ಯಕ್ಕೆ ಬರ್ತಾ ಇರೋದ್ರಿಂದ ಇಲ್ಲೂ ಕೂಡ ಅಂಥದ್ದೇ ಪರ್ಫಾಮೆನ್ಸ್ ನಿರೀಕ್ಷೆ ಮಾಡ್ಬೋದು.
ರಾಜಸ್ಥಾನದಲ್ಲಿ ರಣಕಲಿಗಳು!
ರಾಜಸ್ಥಾನದ ಅತಿದೊಡ್ಡ ಶಕ್ತಿಯೇ ಓಪನಿಂಗ್ ಜೋಡಿಯ ರನ್ಸ್
ಸೂರ್ಯವಂಶಿ ಮತ್ತು ಜೈಸ್ವಾಲ್ ಬೆಂಕಿ ಫಾರ್ಮ್ ನಲ್ಲಿ ಬ್ಯಾಟಿಂಗ್
ರಾಜಸ್ಥಾನ ತಂಡದಲ್ಲಿ ಬೌಲರ್ ಗಳ ಕಡೆಯಿಂದಲೂ ಸಪೋರ್ಟ್
ಮೂರು ಪಂದ್ಯಗಳಲ್ಲಿ 27 ವಿಕೆಟ್ ತೆಗೆದಿರೋ ಬೌಲಿಂಗ್ ಯುನಿಟ್
ಕಿಂಗ್ ಕೊಹ್ಲಿ ಮುಂದೆ ವೈಭವಿಸ್ತಾರಾ ಸೂರ್ಯವಂಶಿ?
ಲಾಸ್ಟ್ ಸೀಸನ್ನಿಂದ ಐಪಿಎಲ್ನಲ್ಲಿ ಆರ್ಆರ್ ಮ್ಯಾಚ್ ಅಂದ್ರೆ ಅಲ್ಲಿ ವೈಭವ್ ಸೂರ್ಯವಂಶಿ ಬ್ಯಾಟಿಂಗ್ಗಾಗಿ ಎಲ್ರೂ ಕಾಯ್ತಿರ್ತಾರೆ. ಆತ ಸ್ಟ್ರೈಕ್ನಲ್ಲಿ ಇದ್ದ ಅಂದ್ರೆ ಪ್ರತೀ ಬಾಲ್ನಲ್ಲೂ ಸಿಕ್ಸ್ನೇ ನಿರೀಕ್ಷೆ ಮಾಡ್ತಾರೆ. ಌಂಡ್ ಆರ್ಸಿಬಿ ಮ್ಯಾಚ್ ಅಂದಾಗ ಎಲ್ಲರ ಕಣ್ಣೂ ಕಿಂಗ್ ಕೊಹ್ಲಿ ಮೇಲೆ ಇರುತ್ತೆ. ಬ್ಯಾಟಿಂಗ್ನಲ್ಲಿ ಅವ್ರ ಸ್ಟೈಲಿಶ್ ಶಾಟ್ಗಳನ್ನ ಎಂಜಾಯ್ ಮಾಡ್ತಾರೆ. ಜೊತೆಗೆ ಫೀಲ್ಡಿಂಗ್ ಟೈಮಲ್ಲಿ ಎದುರಾಳಿ ಪಡೆಯ ಯಾವ ಬ್ಯಾಟರ್ನ ಹೇಗೆ ಕಟ್ಟಿ ಹಾಕ್ಬೇಕು ಅನ್ನೋದನ್ನ ಪ್ಲ್ಯಾನ್ ಮಾಡೋದು ಕೂಡ ಕೊಹ್ಲಿಯೇ. ಆರ್ಸಿಬಿಗೆ ಪಾಟಿದಾರ್ ಕ್ಯಾಪ್ಟನ್ ಆದ್ರೂ ಗೇಮ್ ಪ್ಲ್ಯಾನ್ ಎಲ್ಲವೂ ಕೊಹ್ಲಿಯದ್ದೇ ಆಗಿರೋದ್ರಿಂದ ಸೂರ್ಯವಂಶಿಯನ್ನ ಎಷ್ಟು ಬೇಗ ಸೈಲೆಂಟ್ ಮಾಡ್ತಾರೆ ಅನ್ನೋದು ಮುಖ್ಯ ಆಗುತ್ತೆ. ಆಲ್ರೆಡಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ನಲ್ಲೂ ಅಬ್ಬರಿಸಿರೋ ಸೂರ್ಯವಂಶಿ ಬೆಂಗಳೂರು ವಿರುದ್ಧ ಗರ್ಜಿಸ್ತಾರಾ ಕಿಂಗ್ ಕೊಹ್ಲಿ ಮುಂದೆಯೂ ಬಿಗ್ ಇನ್ನಿಂಗ್ಸ್ ಬರುತ್ತಾ ಅಂತಾ ಕಾಯ್ತಿದ್ದಾರೆ. ಸೋ ಇವ್ರಿಬ್ಬರ ಬ್ಯಾಟಲ್ ಕೂಡ ಇಂಟ್ರೆಸ್ಟಿಂಗ್ ಆಗಿರುತ್ತೆ. ಎರಡು ಬಲಿಷ್ಠ ತಂಡಗಳ ಕಾಳಗದಲ್ಲಿ ಬ್ಯಾಟಿಂಗ್ ಹಾಗೇ ಬೌಲಿಂಗ್ ಎರಡ್ರಲ್ಲೂ ಬಿಗ್ ಫೈಟ್ ಅಂತೂ ಇರುತ್ತೆ. ಸತತವಾಗಿ ಪಂದ್ಯಗಳನ್ನ ಗೆದ್ಕೊಂಡು ಅದ್ಭುತವಾದಂತ ಫಾರ್ಮ್ನಲ್ಲಿ ಇರೋದ್ರಿಂದ ಈ ಮ್ಯಾಚಲ್ಲಿ ಗೆದ್ದು ಯಾರು ಅಜೇಯ ಜರ್ನಿಯನ್ನ ಕಂಟಿನ್ಯೂ ಮಾಡ್ತಾರೆ ಹಾಗೇ ಯಾರು ಟೂರ್ನಿಯಲ್ಲಿ ಮೊದಲ ಸೋಲು ಅನುಭವಿಸ್ತಾರೆ ಅನ್ನೋದೇ ಈಗಿರೋ ಮಿಲಿಯನ್ ಡಾಲರ್ ಪ್ರಶ್ನೆ.

ನೋಡಿರಿ

