ಕೊಹ್ಲಿಗಿಲ್ಲ ಪವರ್ ಫುಲ್ ಪಾರ್ಟ್ನರ್ – ಪಂಜಾಬ್ ಬೇಟೆಗೂ ಬೆಥೆಲ್ ಬೇಕಾ?
ವಿರಾಟ್ & ಪಡಿಕ್ಕಲ್ ಸೇರಿದ್ರೆ ವಿಶ್ವರೂಪ

ಪಂಜಾಬ್ ವಿರುದ್ಧದ ಪಂದ್ಯಕ್ಕೆ ಸಿದ್ಧವಾಗಿರೋ ಬೆಂಗಳೂರು ತಂಡದಲ್ಲಿ ಇರುವಂಥ ಮೇನ್ ಪ್ರಾಬ್ಲಂ ಅಂದ್ರೆ ಕಿಂಗ್ ವಿರಾಟ್ ಕೊಹ್ಲಿ ಜೊತೆ ಇನ್ನಿಂಗ್ಸ್ ಓಪನ್ ಮಾಡೋದು ಯಾರು ಅನ್ನೋದು. ಫಿಲ್ ಸಾಲ್ಟ್ ಇಂಜುರಿ ಬಳಿಕ ಜೇಕಬ್ ಬೆಥೆಲ್ಗೆ ಚಾನ್ಸ್ ಕೊಟ್ರೂ ಬೆಥೆಲ್ ಕಡೆಯಿಂದ ಸಾಥ್ ಸಿಗ್ತಾನೇ ಇಲ್ಲ. ಕ್ರೂಶಿಯಲ್ ಟೈಮಲ್ಲೂ ಅವ್ರ ಕಡೆಯಿಂದ ಸಪೋರ್ಟ್ ಬರ್ತಿಲ್ಲ.
ಇದನ್ನೂ ಓದಿ : LSG ಏಟಿಗೆ ಹಾದಿ ತಪ್ಪಿದ ಚೆನ್ನೈ – ಆಕಾಶ್ ಚೀಟಿ, ಮಾರ್ಷ್ ಏಟಿಗೆ ಪಲ್ಟಿ
ಪಂಜಾಬ್ ವಿರುದ್ಧದ ಮ್ಯಾಚ್ ಗೆದ್ರೆ ಆರ್ಸಿಬಿಗೆ ಪ್ಲೇ ಆಫ್ಸ್ ಟಿಕೆಟ್ ಕನ್ಫರ್ಮ್ ಆಗುತ್ತೆ. ನೆಟ್ ರನ್ ರೇಟ್ ಸೂಪರ್ ಸಾಲಿಡ್ ಆಗಿರೋದ್ರಿಂದ ಯಾರೂ ಓವರ್ ಟೇಕ್ ಮಾಡೋಕೆ ಆಗಲ್ಲ. ಆದ್ರೆ ಇವತ್ತಿನ ಪಂದ್ಯದ ಜೊತೆಗೆ ಮುಂದಿನ ಪಂದ್ಯಗಳಿಗೆ ಆರ್ಸಿಬಿಗೆ ಬೇಕಿರೋ ಬಿಗ್ಗೆಸ್ಟ್ ಸ್ಟ್ರೆಂಥ್ ಅಂದ್ರೆ ಓಪನಿಂಗ್ ಪಾರ್ಟ್ನರ್ ಶಿಪ್. ಕೊಲ್ಕತ್ತಾ ವಿರುದ್ಧದ ಮ್ಯಾಚಲ್ಲಿ ಬೌಲಿಂಗ್ ಸ್ಕ್ವಾಡ್ನಲ್ಲಿ ಬಿಗ್ ಸರ್ಜರಿ ಮಾಡಿ ಜೇಕಬ್ ಡಫಿಯನ್ನ ಒಳಗೆ ತಂದಿದ್ದಾರೆ. ಹಾಗೇ ಸುಯಾಶ್ ಶರ್ಮಾ ಬದಲಿಗೆ ವೆಂಕಟೇಶ್ ಅಯ್ಯರ್ಗೆ ಚಾನ್ಸ್ ಕೊಟ್ಟಿದ್ದಾರೆ. ಆದ್ರೆ ಕೊಹ್ಲಿ ಜೊತೆಗಿನ ಪಾರ್ಟ್ನರ್ ಫೇಲ್ಯೂರ್ಗೆ ಇನ್ನೂ ಸಲ್ಯೂಷನ್ ಸಿಕ್ಕಿಲ್ಲ.
ಸತತ 6 ಪಂದ್ಯಗಳಲ್ಲಿ ನಿರಾಸೆ ಮೂಡಿಸಿದ ಜೇಕಬ್ ಬೆಥೆಲ್!
ಇಂಗ್ಲೆಂಡ್ ಮೂಲದ ಜೇಕಬ್ ಬೆಥೆಲ್ ಪವರ್ ಹಿಟ್ಟಿಂಗ್ ಬ್ಯಾಟಿಂಗ್ ಮೂಲಕವೇ ಹೆಸರುವಾಸಿ ಆದವ್ರು. ಕಳೆದ ವಿಶ್ವಕಪ್ನಲ್ಲಿ ಇಂಗ್ಲೆಂಡ್ ಪರ ಭಾರತದ ವಿರುದ್ಧವೇ ಶತಕ ಸಿಡಿಸಿ ಅಬ್ಬರಿಸಿದ್ರು. ಹೀಗಾಗಿ ಆರ್ಸಿಬಿ ಕ್ಯಾಂಪ್ನಲ್ಲಿ ಫುಲ್ ಖುಷಿಯಾಗಿದ್ರು. ಆರಂಭದ ಪಂದ್ಯಗಳಲ್ಲಿ ಫಿಲ್ ಸಾಲ್ಟ್ ಕಾರಣದಿಂದಾಗಿ ಬೆಥೆಲ್ಗೆ ಅವಕಾಶ ಕೊಟ್ಟಿರಲಿಲ್ಲ. ಫ್ರಾಂಚೈಸಿಯ ನಿರ್ಧಾರವನ್ನ ಸಾಕಷ್ಟು ಜನ ಟೀಕೆ ಮಾಡಿದ್ರು. ಬೆಥೆಲ್ರಂಥ ಆಟಗಾರ ಬೆಂಚ್ ಕಾಯಿಸೋದು ಒಳ್ಳೇದಲ್ಲ. ನೀವು ಇಂಗ್ಲೆಂಡ್ಗೆ ವಾಪಸ್ ಹೋಗಿ ಕೌಂಟ್ ಕ್ರಿಕೆಟ್ ಆಡಿ ಅಂತೆಲ್ಲಾ ಸಜೇಷನ್ಸ್ ಕೊಟ್ಟಿದ್ರು. ಇದ್ರ ನಡುವೆ ಫಿಲ್ ಸಾಲ್ಟ್ ಇಂಜುರಿಯಾಗಿ ತಂಡದಿಂದ ಹೊರಬಿದ್ದು ಬೆಥೆಲ್ಗೆ ಅದೃಷ್ಟ ಖುಲಾಯಿಸಿತ್ತು. ಸಾಲ್ಟ್ ಸ್ಥಾನದಲ್ಲಿ ಕಿಂಗ್ ಕೊಹ್ಲಿ ಜೊತೆ ಇನ್ನಿಂಗ್ಸ್ ತೆರೆಯೋಕೆ ಅವಕಾಶನೂ ಸಿಕ್ತು. ಆದ್ರೆ ಬೆಥೆಲ್ ಮಾತ್ರ ಒಂದೇ ಒಂದು ಸ್ಯಾಟಿಸ್ಫೈಡ್ ಅನ್ನೋ ಇನ್ನಿಂಗ್ಸ್ ಆಡಲೇ ಇಲ್ಲ. ಸತತ 6 ಪಂದ್ಯಗಳಲ್ಲೂ ನಿರಾಸೆ ಮೂಡಿಸಿದ್ದಾರೆ. 14.16 ಸರಾಸರಿ ಮತ್ತು 121.42 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 85 ರನ್‌ಗಳನ್ನು ಗಳಿಸಿದ್ದಾರೆ. ಈ ಸೀಸನ್ನ ಹೈಯೆಸ್ಟ್ ಸ್ಕೋರ್ ಅಂದ್ರೆ 27 ರನ್ಸ್.. ಅದೂ ಕೂಡ ಮುಂಬೈ ವಿರುದ್ಧ ಹೊಡೆದ ಬಾಲ್ಗೊಂದು ರನ್. ಬೆಥೆಲ್ರ ಇದೇ ಕಳಪೆ ಪ್ರದರ್ಶನ ಫ್ರಾಂಚೈಸಿಗೆ ತಲೆನೋವಾಗಿ ಪರಿಣಮಿಸಿದೆ. ಮತ್ತೊಂದೆಡೆ ಫಿಲ್ ಸಾಲ್ಟ್ ರಿಕವರ್ ಆಗೋದನ್ನೇ ಫ್ರಾಂಚೈಸಿ ಎದುರು ನೋಡ್ತಾ ಇದೆ. ಈ ಬಗ್ಗೆ ಮಾತ್ನಾಡಿರೋ ಆರ್ಸಿಬಿ ನಾಯಕ ರಜತ್ ಪಾಟಿದಾರ್ ಶೀಘ್ರದಲ್ಲೇ ಫಿಲ್ ಸಾಲ್ಟ್ ತಂಡಕ್ಕೆ ಕಂ ಬ್ಯಾಕ್ ಮಾಡ್ತಾರೆ ಎಂದಿದ್ದಾರೆ. ಆದ್ರೆ ಪಂಜಾಬ್ ವಿರುದ್ಧ ಆಡ್ತಾರಾ ಇಲ್ವಾ ಅನ್ನೋದು ಮಾತ್ರ ಇನ್ನೂ ಕನ್ಫರ್ಮ್ ಆಗಿಲ್ಲ. ಜೊತೆಗೆ ಆಲ್ಟರ್ನೇಟಿವ್ ಪ್ಲ್ಯಾನ್ ಬಗ್ಗೆಯೂ ಚರ್ಚೆಯಾಗ್ತಿದೆ.
ಕೊಹ್ಲಿ ಜೊತೆ ಓಪನಿಂಗ್ ಪಾರ್ಟ್ನರ್ ಬದಲಾಗ್ತಾರಾ?
ಆಕ್ಚುಲಿ ಈ ಸೀಸನ್ನಲ್ಲಿ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಅಂತಾ ದೊಡ್ಡ ಬದಲಾವಣೆಗಳನ್ನೇನೂ ಮಾಡಿಲ್ಲ. ಜೋಶ್ ಹೇಜಲ್ವುಡ್ ಬಂದ್ಮೇಲೆ ಡಫಿಯನ್ನ ಕೂರಿಸಿದ್ದು ಬಿಟ್ರೆ ಸಾಲ್ಟ್ ಬದಲಿಗೆ ಬೆಥೆಲ್ ಬಂದಿದ್ದು ಬಿಟ್ರೆ ದೊಡ್ಡ ಚೇಂಜಸ್ ಅಂತಾ ಏನೂ ಇರ್ಲಿಲ್ಲ. ಆದ್ರೆ ಕಳೆದ ಪಂದ್ಯದಲ್ಲಿ ಕಳಪೆ ಪ್ರದರ್ಶನದ ಹಿನ್ನೆಲೆ ಮೊದಲ ಬಾರಿಗೆ ರೊಮ್ಯಾರಿಯೋ ಶೆಫರ್ಡ್ ಮತ್ತು ಸುಯಾಶ್ ಶರ್ಮಾನ ಡ್ರಾಪ್ ಮಾಡಿದ್ರು. ಬ್ಯಾಟಿಂಗ್ ಹಾಗೇ ಬೌಲಿಂಗ್ನಲ್ಲಿ ಕೈಕೊಡ್ತಿದ್ದ ಶೆಫರ್ಡ್ಗೆ ರೆಸ್ಟ್ ನೀಡಿ ಎಕ್ಸ್ಪೆನ್ಸಿವ್ ಆಗಿದ್ದ ಸುಯಾಶ್ರನ್ನ ಡ್ರಾಪ್ ಮಾಡಿ ಜೇಕಬ್ ಡಫಿ ಮತ್ತು ವೆಂಕಟೇಶ್ ಅಯ್ಯರ್ನ ಮೈದಾನಕ್ಕಿಳಿಸಿದ್ರು. ಈಗ ಇದೇ ಸಾಲಿನಲ್ಲಿ ಬೆಥೆಲ್ಗೂ ಅವಕಾಶ ಮಿಸ್ ಆಗುತ್ತಾ ನೋಡ್ಬೇಕು. ಒಂದು ವೇಳೆ ಬೆಥೆಲ್ರನ್ನ ಕೂರಿಸಬೇಕು ಅಂತಾ ಯೋಚನೆ ಮಾಡಿದ್ರೆ ವಿದೇಶಿ ಆಟಗಾರರಲ್ಲಿ ಮತ್ತೊಬ್ಬ ಇಂಗ್ಲಿಷ್ ಆಟಗಾರ ಜೋರ್ಡಾನ್ ಕಾಕ್ಸ್ ಐಪಿಎಲ್‌ಗೆ ಡೆಬ್ಯೂ ಮಾಡೋಕೆ ಕಾಯ್ತಾ ಇದ್ದಾರೆ. ಪ್ರಸ್ತುತ ಐವರು ಇಂಪ್ಯಾಕ್ಟ್ ಪ್ಲೇಯರ್ಗಳ ಲಿಸ್ಟ್ನಲ್ಲಿ ಇದ್ದಾರಾದ್ರೂ ಇನ್ನೂ ಅವಕಾಶ ಸಿಕ್ಕಿಲ್ಲ. ಅಥವಾ ವೆಂಕಟೇಶ್ ಅಯ್ಯರ್ ಅವರನ್ನು ಅಗ್ರಸ್ಥಾನಕ್ಕೆ ಬಡ್ತಿ ನೀಡಲೂಬಹುದು. ಇನ್ನೊಂದು ಆಪ್ಶನ್ ಕೂಡ ದೇವದತ್ ಪಡಿಕ್ಕಲ್ಗೆ ಓಪನಿಂಗ್ ಸ್ಲಾಟ್ ಕೊಟ್ಟು ವೆಂಕಿನ ಒನ್ ಡೌಟ್ ತರಬಹುದು. ಯಾಕಂದ್ರೆ ಈ ಸೀಸನ್ನಲ್ಲಿ ಪಡಿಕ್ಕಲ್ ಹಾಗೂ ಕೊಹ್ಲಿ ಪಾರ್ಟ್ನರ್ಶಿಪ್ ತುಂಬಾ ಚೆನ್ನಾಗಿ ವರ್ಕ್ ಆಗಿದೆ. ಕೊಲ್ಕತ್ತಾ ವಿರುದ್ಧವೂ 92 ರನ್ಗಳ ಜೊತೆಯಾಟ ಬಂದಿತ್ತು. ಸೋ ಈ ಆಯ್ಕೆಯೂ ಇದೆ. ಸೋ ಫ್ರಾಂಚೈಸಿ ಲೆಕ್ಕಾಚಾರಗಳು ಏನಿದೆ ಅನ್ನೋದು ಕೂಡ ಮುಖ್ಯವಾಗುತ್ತೆ. ಆರ್ಸಿಬಿ ಇನ್ಮುಂದೆ ಪ್ರತೀ ಮ್ಯಾಚ್ನೂ ಡು ಆರ್ ಡೈ ಅನ್ನೋ ಥರನೇ ಆಡ್ಬೇಕು. ಅದ್ರಲ್ಲೂ ಕ್ವಾಲಿಫೈಯರ್ 1 ಟಿಕೆಟ್ ಗಿಟ್ಟಿಸಿಕೊಳ್ಬೇಕು ಅಂದ್ರೆ ಮಸ್ಟ್ ಌಂಡ್ ಶುಡ್ ಇವತ್ತು ಪಂಜಾಬ್ ವಿರುದ್ಧ ಗೆಲ್ಬೇಕು. ಹೀಗಾಗಿ ಕೊಹ್ಲಿಗೆ ಸಾಥ್ ಕೊಡೋಕೆ ಒಬ್ಬ ಸಾಲಿಡ್ ಪಾರ್ಟ್ನರ್ ಅಗತ್ಯ ಅಂತೂ ಇದೆ.

ನೋಡಿರಿ

