ವಾಂಖೆಡೆಯಲ್ಲಿ 10 ವರ್ಷಗಳಿಂದ ಮುಂಬೈ ವಿರುದ್ಧ ಗೆದ್ದಿಲ್ಲ ಆರ್ ಸಿಬಿ – ಈ ಸಲ ದಾಖಲೆ ಬರೆಯುತ್ತಾ?

ಕೆಕೆಆರ್ ಮತ್ತು ಸಿಎಸ್ ಕೆ ವಿರುದ್ಧ ಗೆದ್ದಿದ್ದ ಆರ್ ಸಿಬಿ ಗುಜರಾತ್ ವಿರುದ್ಧ ಸೋಲು ಕಂಡಿದೆ. ಇದೀಗ ಆರ್ ಸಿಬಿ ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಏಪ್ರಿಲ್ 7ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಹಾರ್ದಿಕ್ ಪಾಂಡ್ಯ ಪಡೆ ವಿರುದ್ಧ ಹೋರಾಡಬೇಕಿದೆ. ಆದ್ರೆ ವಾಂಖೇಡೆಯಲ್ಲಿ ಮುಂಬೈ ತಂಡವನ್ನ ಮಣಿಸೋದು ಬೆಂಗಳೂರಿಗೆ ಅಷ್ಟು ಈಸಿ ಇಲ್ಲ. ಹಿಂದಿನ ರೆಕಾರ್ಡ್ಸ್ ನೋಡಿದ್ರೆ ಆರ್ ಸಿಬಿ ಪಡೆ ಎಂಐ ಮಣಿಸೋಕೆ ಒಂದಷ್ಟು ವರ್ಕೌಟ್ ಮಾಡ್ಬೇಕಾಗಿದೆ.
ಇದನ್ನೂ ಓದಿ : ವ್ಹೀಲ್ ಚೇರ್ ನಲ್ಲಿ ರಾಜಸ್ತಾನಕ್ಕೆ ದ್ರಾವಿಡ್ ತರಬೇತಿ – ರಾಯಡುಗೆ ಯಾಕಿಷ್ಟು ಉರಿ?
ಯೆಸ್. ಅಚ್ಚರಿ ಅನ್ಸಿದ್ರೂ ಇದೇ ಫ್ಯಾಕ್ಸ್. ಕಳೆದ 10 ವರ್ಷಗಳಿಂದ ಆರ್ ಸಿಬಿ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಗೆದ್ದಿಲ್ಲ. 2015ರಲ್ಲಿ ಕೊನೆಯ ಬಾರಿಗೆ ಮುಂಬೈ ತಂಡವನ್ನ ಆರ್ಸಿಬಿ ವಾಂಖೆಡೆಯಲ್ಲಿ ಸೋಲಿಸಿದ್ದೇ ಕೊನೇ. ಈ ವರ್ಷ ಸಿಎಸ್ಕೆ ವಿರುದ್ಧ ಚೆನ್ನೈನಲ್ಲಿ 17 ವರ್ಷಗಳಿಂದ ಗೆಲ್ಲದ ಆರ್ ಸಿಬಿ ಈ ವರ್ಷ ಭರ್ಜರಿ ಗೆಲುವು ಸಾಧಿಸಿತ್ತು, ಇದೀಗ ಮುಂಬೈನಲ್ಲೂ ದಶಕಗಳ ಬಳಿಕ ಮೊದಲ ಗೆಲುವು ಸಾಧಿಸೋ ನಿರೀಕ್ಷೆಯಲ್ಲಿದೆ. ಮೊದಲ ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದ ಮುಂಬೈ ಇಂಡಿಯನ್ಸ್ ಮೂರನೇ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿತ್ತು.. ಆದ್ರೆ ಲಕ್ನೋ ವಿರುದ್ಧದ ಪಂದ್ಯದಲ್ಲಿ ಸೋಲುವ ಮೂಲಕ ಆಘಾತ ಎದುರಿಸಿದೆ. ಆಡಿರೋ ನಾಲ್ಕು ಪಂದ್ಯಗಳಲ್ಲಿ ಮೂರು ಮ್ಯಾಚ್ಗಳನ್ನ ಸೋತು ಪಾಯಿಂಟ್ಸ್ ಟೇಬಲ್ನಲ್ಲಿ ಕೆಳಗಿದ್ದಾರೆ. ಹೀಗಾಗಿ ಕಮ್ಬ್ಯಾಕ್ ಮಾಡೋಕೆ ಅವ್ರಿಗೂ ಸೋಮವಾರದ ಪಂದ್ಯ ತುಂಬಾನೇ ಇಂಪಾರ್ಟೆಂಟ್ ಆಗಿದೆ.
ಮುಂಬೈ ತಂಡದ ಬೌಲಿಂಗ್ ಬ್ರಹ್ಮಾಸ್ತ್ರವಾಗಿರುವ ಜಸ್ಪ್ರೀತ್ ಬುಮ್ರಾ ಇನ್ನೂ ಕೂಡ ಫಿಟ್ ಆಗಿದೆ. ಎನ್ಸಿಎನಲ್ಲಿ ಬೌಲಿಂಗ್ ಮಾಡುತ್ತಿದ್ದು ಇನ್ನೂ ಎರಡು ವಾರ ಐಪಿಎಲ್ನಲ್ಲಿ ಆಡುವುದು ಅನುಮಾನವಾಗಿದೆ. ಮೊದಲ ಎರಡೂ ಪಂದ್ಯಗಳಲ್ಲಿ ಬುಮ್ರಾ ಅನುಪಸ್ಥಿತಿ ಮುಂಬೈ ಇಂಡಿಯನ್ಸ್ ತಂಡವನ್ನು ಕಾಡಿತ್ತು. ಮತ್ತೊಂದೆಡೆ ಹಿಟ್ಮ್ಯಾನ್ ರೋಹಿತ್ ಶರ್ಮಾ ಕೂಡ ಆಡೋದು ಡೌಟ್ ಇದೆ. ಇಂಜುರಿ ಕಾರಣದಿಂದ ಲಕ್ನೋ ವಿರುದ್ಧ ಆಡದ ರೋಹಿತ್ ಆರ್ಸಿಬಿ ವಿರುದ್ಧವೂ ಕಣಕ್ಕಿಳಿಯೋದು ಡೌಟಿದೆ.
ಮತ್ತೊಂದೆಡೆ ಗುಜರಾತ್ ಟೈಟಾನ್ಸ್ ವಿರುದ್ಧ ಸೋತಿರುವ ಆರ್ ಸಿಬಿ ಗೆಲುವಿನ ಟ್ರ್ಯಾಕ್ ಗೆ ಮರಳಲು ಎದುರು ನೋಡ್ತಿದೆ. ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ಎಲ್ಲಾ ಆಟಗಾರರು ಬಹುತೇಕ ಫಾರ್ಮ್ ಕಂಡುಕೊಂಡಿದ್ದು ಬ್ಯಾಟಿಂಗ್ ಸ್ನೇಹಿ ವಾಂಖೆಡೆ ಕ್ರೀಡಾಂಗಣದಲ್ಲಿ ಅಬ್ಬರಿಸಬೇಕಿದೆ. ಜೋಶ್ ಹೇಜಲ್ವುಡ್, ಭುವನೇಶ್ವರ್ ಕುಮಾರ್, ಯಶ್ ದಯಾಳ್ ಬೌಲಿಂಗ್ನಲ್ಲಿ ಮಿಂಚಿದ್ರೆ ಆರ್ ಸಿಬಿ ದಶಕಗಳ ಬಳಿಕ ವಾಂಖೆಡೆಯಲ್ಲಿ ಗೆಲ್ಲೋದ್ರಲ್ಲಿ ಅನುಮಾನ ಇಲ್ಲ.
ಮುಂಬೈ ಮತ್ತು ಆರ್ಸಿಬಿ ತಂಡಗಳು ಈವರೆಗೂ ಐಪಿಎಲ್ನಲ್ಲಿ 33 ಪಂದ್ಯಗಳನ್ನು ಆಡಿವೆ. ಇದರಲ್ಲಿ ಮುಂಬೈ 19 ಪಂದ್ಯಗಳನ್ನು ಗೆದ್ದುಕೊಂಡು ಮೇಲುಗೈ ಸಾಧಿಸಿದ್ದರೇ, ಆರ್ಸಿಬಿ 14 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ. ಆರ್ಸಿಬಿ ವಿರುದ್ಧ ಮುಂಬೈ ದಾಖಲಿಸರುವ ಹೈಸ್ಕೋರ್ 213 ಆಗಿದ್ದರೆ, 111 ಕಡಿಮೆ ಸ್ಕೋರ್ ಆಗಿದೆ. ಮುಂಬೈ ವಿರುದ್ಧ ಆರ್ಸಿಬಿ ದಾಖಲಿಸಿರುವ ಹೈಸ್ಕೋರ್ 235 ಆಗಿದ್ದು 122 ಕನಿಷ್ಠ ಸ್ಕೋರ್ ಆಗಿದೆ. ಈ ತಂಡಗಳು ಕೊನೆಯ ಆವೃತ್ತಿಯಲ್ಲಿ ಮುಖಾಮುಖಿ ಆಗಿದ್ದಾಗ ಮುಂಬೈ ತಂಡ 7 ವಿಕೆಟ್ಗಳಿಂದ ಗೆಲುವ ಸಾಧಿಸಿತ್ತು. ಒಟ್ನಲ್ಲಿ ಎರಡೂ ತಂಡಗಳು ಸೋಲಿನ ಶಾಕ್ನಿಂದಲೇ ಮೈದಾನಕ್ಕೆ ಕಾಲಿಡ್ತಿದ್ದು ಗೆಲುವಿನ ಟ್ರ್ಯಾಕ್ಗೆ ಬರೋಕೆ ಕಾಯ್ತಿದ್ದಾರೆ.

ನೋಡಿರಿ

