RCBಗೆ ಬದಲಿ ಆಟಗಾರರ ಟೆನ್ಷನ್ – LSG ಸದೆ ಬಡಿದ್ರೆ ಟಾಪ್-2 ಫಿಕ್ಸ್
ಪ್ಲೇಯಿಂಗ್ 11ನಲ್ಲಿ ಯಾರಿಗೆ ಚಾನ್ಸ್?

18ನೇ ಸೀಸನ್ ಕ್ವಾಲಿಫೈಯರ್ 1 ಮ್ಯಾಚ್ ಆಡೋದು ಯಾರು ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆಗ ಅರ್ಧ ಉತ್ತರ ಸಿಕ್ಕಿದೆ. ಈಗ ಇರೋ ಕುತೂಹಲ ಅಂದ್ರೆ ಮತ್ತೊಂದು ತಂಡ ಯಾರು ಅನ್ನೋದು. ಲಕ್ನೋ ಹಾಗೂ ಆರ್ಸಿಬಿ ನಡುವಿನ ಪಂದ್ಯದ ಬಳಿಕ ಯಾರು ಅನ್ನೋದು ಕೂಡ ಕನ್ಫರ್ಮ್ ಆಗುತ್ತೆ. ಹಾಗೇನಾದ್ರೂ ಎಲ್ಎಸ್ಜಿಯನ್ನ ಮಣಿಸಿದ್ರೆ ರೆಡ್ ಆರ್ಮಿಯೇ ಟಾಪ್-2ನಲ್ಲಿ ಕ್ವಾಲಿಫೈಯರ್ 1ಗೆ ಲಗ್ಗೆ ಇಡುತ್ತೆ.
ಇದನ್ನೂ ಓದಿ : CSK ಗೆದ್ದಿದ್ದು RCBಗೆ ಲಾಭ.. LSG ಸೋತ್ರೆ ಟಾಪ್-2 ಫಿಕ್ಸ್!
18ನೇ ಸೀಸನ್ ಐಪಿಎಲ್ನ ಲೀಗ್ ಹಂತದ ಕೊನೇ ಪಂದ್ಯಕ್ಕೆ ಕೌಂಟ್ಡೌನ್ ಶುರುವಾಗಿದೆ. ಇದು ಲೀಗ್ನ ಲಾಸ್ಟ್ ಮ್ಯಾಚ್ ಅನ್ನೋದಕ್ಕಿಂತ ರಿಸಲ್ಟ್ ಮೇಲೆಯೇ ಎಲ್ಲರ ಕಣ್ಣಿದೆ. ಯಾಕಂದ್ರೆ ಆರ್ಸಿಬಿ ಈ ಪಂದ್ಯದಲ್ಲಿ ಲಕ್ನೋವನ್ನ ಸೋಲಿಸಿದ್ರೆ ಟಾಪ್-2ಗೆ ಕ್ವಾಲಿಫೈ ಆಗುತ್ತೆ. ಈ ಮೂಲಕ ಇನ್ನೊಂದೇ ಹೆಜ್ಜೆಯಲ್ಲಿ ಸೀದಾ ಫಿನಾಲೆಗೆ ಲಗ್ಗೆ ಇಡ್ಬೋದು. ಇದೇ ಕಾರಣಕ್ಕೆ ಇವತ್ತಿನ ಪಂದ್ಯ ಬರೀ ಆರ್ಸಿಬಿ ಪಾಲಿಗಷ್ಟೇ ಅಲ್ಲ ಕ್ರಿಕೆಟ್ ಪ್ರೇಮಿಗಳಿಗೂ ತುಂಬಾನೇ ಕ್ಯೂರಿಯಾಸಿಟಿ ಹುಟ್ಟಿಸಿದೆ. ಆದ್ರೆ ಇಂಥಾ ಟೈಮಲ್ಲೇ ಆರ್ಸಿಬಿ ಟೀಮ್ನಲ್ಲಿ ಒಂದಷ್ಟು ಚೇಂಜಸ್ ಆಗಿದೆ.
ಬದಲಿ ಆಟಗಾರರ ಟೆನ್ಷನ್!
ಒಂದಷ್ಟು ಆಟಗಾರರು ನ್ಯಾಷನಲ್ ಡ್ಯೂಟಿಗಾಗಿ ತವರಿಗೆ ವಾಪಸ್
ಸೌತ್ ಆಫ್ರಿಕಾ ವೇಗಿ ಲುಂಗಿ ಎನ್ ಗಿಡಿ ತವರಿಗೆ ವಾಪಸ್
ಆರ್ ಸಿಬಿ ಪರ ಒಟ್ಟು 2 ಪಂದ್ಯಗಳನ್ನ ಆಡಿದ್ದು 4 ವಿಕೆಟ್
ಬದಲಿ ಆಟಗಾರನಾಗಿ ಝಿಂಬಾಬ್ವೆ ವೇಗಿ ಬ್ಲೆಸಿಂಗ್ ಮುಝರಬಾನಿ
ಝಿಂಬಾಬ್ವೆ ಪರ 67 ಟಿ20 ಪಂದ್ಯಗಳಲ್ಲಿ 78 ವಿಕೆಟ್ ಕಬಳಿಸಿ ಮಿಂಚು
2 ಪಂದ್ಯಗಳಲ್ಲಿ ಓಪನರ್ ಆಗಿದ್ದ ಜೇಕಬ್ ಬೆಥೆಲ್ ಕೂಡ ತವರಿಗೆ
ವೆಸ್ಟ್ ಇಂಡೀಸ್ ವಿರುದ್ಧ ಕಣಕ್ಕಿಳಿಯಲು ಇಂಗ್ಲೆಂಡ್ ಗೆ ತೆರಳಿದ್ದಾರೆ
2 ಪಂದ್ಯಗಳನ್ನಾಡಿರುವ ಬೆಥೆಲ್ 1 ಅರ್ಧಶತಕದೊಂದಿಗೆ ಒಟ್ಟು 67 ರನ್
ನ್ಯೂಝಿಲೆಂಡ್ನ ವಿಕೆಟ್ ಕೀಪರ್ ಬ್ಯಾಟರ್ ಟಿಮ್ ಸೈಫರ್ಟ್ ಬದಲಿ ಆಯ್ಕೆ
66 ಟಿ20 ಪಂದ್ಯಗಳನ್ನಾಡಿರುವ ಸೈಫರ್ಟ್ 63 ಇನಿಂಗ್ಸ್, 1540 ರನ್
ಟಿಮ್ ಸೈಫರ್ಟ್ ಕೂಡ ಲಕ್ನೋದಲ್ಲಿ ಆರ್ಸಿಬಿ ತಂಡವನ್ನು ಕೂಡಿಕೊಂಡಿದ್ದಾರೆ
ಫಿಲ್ ಸಾಲ್ಟ್ ಅವರ ಪತ್ನಿ ಮೊದಲ ಮಗುವಿನ ನಿರೀಕ್ಷೆಯಲ್ಲಿರೋ ಕಾರಣ
ನಾಕೌಟ್ ಪಂದ್ಯಗಳಲ್ಲಿ ಆರ್ ಸಿಬಿ ಪರ ಕೊಹ್ಲಿ ಜೊತೆ ಯಾರು ಓಪನರ್?