RCB ಪಂದ್ಯ ಮಳೆಗೆ WASH OUT? – ತಲಾ 1 ಅಂಕ.. ಯಾರಿಗೆ ಪ್ಲಸ್?
ಪ್ಲೇಆಫ್ ರೇಸ್ ಲೆಕ್ಕಾಚಾರ ಉಲ್ಟಾ!

ಕಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಮಳೆಯಾಗ್ತಿದೆ. ಅದ್ರಲ್ಲೂ ಸಿಲಿಕಾನ್ ಸಿಟಿಯಲ್ಲಿ ಶುಕ್ರವಾರ ಮಧ್ಯಾಹ್ನ ಕೂಡ ಮಳೆಯಿಂದಾಗಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಬಟ್ ಈಗ ಇರೋ ಟೆನ್ಷನ್ ಅಂದ್ರೆ ಮ್ಯಾಚ್ ಟೈಮಲ್ಲಿ ಮಳೆ ಬಂದ್ರೆ ಹೆಂಗೆ ಅಂತಾ. ಈಗಾಗ್ಲೇ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಶನಿವಾರ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿ ರಾಜ್ಯದ 23 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇದನ್ನೂ ಓದಿ : RCB 3ನೇ ಸ್ಲಾಟ್ ಮಯಾಂಕ್ ಗೆ – ಪಡಿಕ್ಕಲ್ ಸ್ಥಾನ ನಿಭಾಯಿಸ್ತಾರಾ ಕನ್ನಡಿಗ?
ಹವಾಮಾನ ಇಲಾಖೆ ವರದಿ ಪ್ರಕಾರ ಶನಿವಾರ ಬೆಂಗಳೂರಿನಲ್ಲಿ ಕಡು ಮೋಡ ಕವಿದ ವಾತಾವರಣವಿರಲಿದ್ದು, ಮಧ್ಯಾಹ್ನ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ದೇ ಸಂಜೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, ಪಂದ್ಯದ ಸಮಯದಲ್ಲಿ ಸುಮಾರು 8 ಮಿಮೀ ಮಳೆಯಾಗುವ ಚಾನ್ಸಸ್ ಇದೆ. ಅಕ್ಯೂವೆದರ್ ಪ್ರಕಾರ ಸುಮಾರು ಎರಡು ಗಂಟೆಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ. ಹಗಲಿನಲ್ಲಿ ಶೇ. 84 ರಷ್ಟು ಮತ್ತು ಸಂಜೆ ಶೇ. 56 ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಇನ್ನು ಗುರುವಾರ ಕೂಡ ಮಳೆಯಿಂದಾಗಿ ಆರ್‌ಸಿಬಿ ಹೆಚ್ಚಿನ ಪ್ರಾಕ್ಟೀಸ್ ನಡೆಸೋಕೆ ಸಾಧ್ಯವಾಗಿರಲಿಲ್ಲ.
ಇನ್ನು ಮಳೆ ಆರಂಭವಾದ್ರೂ ಕೂಡ ಒಂದಷ್ಟು ಟೈಂ ಮಳೆ ನಿಲ್ಲಲಿ ಅಂತಾ ವೇಯ್ಟ್ ಮಾಡಲಾಗುತ್ತೆ. ಬಟ್ ನಿಲ್ಲದೇ ಇದ್ದ ಪಕ್ಷದಲ್ಲಿ ಮಾತ್ರ ಪಂದ್ಯವನ್ನ ಕ್ಯಾನ್ಸಲ್ ಮಾಡಿ ಉಭಯ ತಂಡಗಳಿಗೂ ಒಂದೊಂದು ಅಂಕಗಳನ್ನ ನೀಡಲಾಗುತ್ತೆ. ಸೋ ಆರ್ಸಿಬಿಗೆ 17 ಅಂಕಗಳು ಸಿಕ್ಕಂತಾಗುತ್ತೆ. ಆದ್ರೆ ದೊಡ್ಡ ಮಟ್ಟದ ಡಿಫ್ರೆನ್ಸ್ ಏನೂ ಕ್ರಿಯೇಟ್ ಆಗಲ್ಲ. ಈಗಾಗ್ಲೇ 8 ಪಂದ್ಯ ಗೆದ್ದು ಒಟ್ಟು 16 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ 2ನೇ ಸ್ಥಾನದಲ್ಲಿದೆ. ಲೀಗ್ ಹಂತದಲ್ಲಿ ಇನ್ನೂ ಮೂರು ಪಂದ್ಯಗಳು ಬಾಕಿ ಇರುವಾಗ, ಆರ್‌ಸಿಬಿ ಪ್ಲೇಆಫ್‌ಗೆ ತಲುಪಲು ಕೇವಲ ಒಂದು ಗೆಲುವಿನ ಅವಶ್ಯಕತೆ ಇದೆ. ಹೀಗಾಗಿ ಶನಿವಾರದ ಪಂದ್ಯ ಮಳೆಗೆ ವಾಶ್ ಔಟ್ಆಗೋದು ಬೇಡ ಎಂದು ಬೇಡಿಕೊಳ್ತಿದ್ದಾರೆ. ಬಟ್ ಕೆಕೆಆರ್ ಸಿಚುಯೇಶನ್ ಡಿಫ್ರೆಂಟ್ ಆಗಿದ್ದು ಲೀಗ್ ಹಂತದಲ್ಲಿ ಅವ್ರಿಗೆ ಉಳಿದಿರೋದೇ ಎರಡು ಮ್ಯಾಚ್. ಹೀಗಾಗಿ ಎರಡಕ್ಕೆ ಎರಡು ಪಂದ್ಯ ಗೆದ್ರಷ್ಟೇ ಪ್ಲೇಆಫ್ಸ್ಗೆ ಹೋಗೋಕೆ ಚಾನ್ಸಸ್ ಇದೆ. ಪಂದ್ಯ ರದ್ದಾಗಿ 1 ಅಂಕ ಪಡೆದ್ರೆ ನಾಕೌಟ್ ಜರ್ನಿ ಮುಗಿದಂತೆಯೇ ಲೆಕ್ಕ.
ಇನ್ನು ಗುರುವಾರ, ಶುಕ್ರವಾರ ಕೂಡ ಬೆಂಗಳೂರಲ್ಲಿ ಬಾರೀ ಮಳೆಯಾಗಿದೆ. ಗುರುವಾರ ಆರ್‌ಸಿಬಿ ಆಟಗಾರರು ಪ್ರಾಕ್ಟೀಸ್ ಮಾಡ್ತಿದ್ದ ವೇಳೆ ಮಳೆಯಾಗಿದೆ. ಈ ವೇಳೆ ಹೆಚ್ಚಿನ ಆಟಗಾರರು ಡ್ರೆಸ್ಸಿಂಗ್ ರೂಂ ಕಡೆ ಓಡಿದ್ದಾರೆ. ಆದ್ರೆ ಮಳೆಯನ್ನ ಎಂಜಾಯ್ ಮಾಡಿದ ಆಸ್ಟ್ರೇಲಿಯಾದ ಆಟಗಾರ ಟಿಮ್ ಡೇವಿಡ್ ಮೈದಾನಕ್ಕೆ ಓಡಿದ್ದಾರೆ. ನೀರಿನಿಂದ ಮುಚ್ಚಿದ ಕವರ್ ಮೇಲೆ ಡೈವ್ ಮಾಡಿ ಸ್ವಿಮ್ಮಿಂಗ್ ಪೂಲ್ನಂತೆ ಎಂಜಾಯ್ ಮಾಡಿದ್ದಾರೆ. ಹೀಗೆ ನೀರಲ್ಲಿ ಎಂಜಾಯ್ ಮಾಡಿ ಡ್ರೆಸ್ಸಿಂಗ್ ಕೋಣೆಗೆ ಹಿಂತಿರುಗಿದಾಗ, ಆರ್‌ಸಿಬಿ ತಂಡದ ಸದಸ್ಯರು ಚಪ್ಪಾಳೆಯೊಂದಿಗೆ ವೆಲ್ಕಂ ಮಾಡಿಕೊಂಡಿದ್ರು.
ಌಕ್ಚುಲಿ ಮಳೆ ಸುರಿದು ನಿಂತ್ರೆ ಪಂದ್ಯಕ್ಕೆ ಯಾವುದೇ ಪ್ರಾಬ್ಲಂ ಆಗಲ್ಲ. ಯಾಕಂದ್ರೆ ಚಿನ್ನಸ್ವಾಮಿ ಕ್ರೀಡಾಂಗಣದ ಒಳಚರಂಡಿ ವ್ಯವಸ್ಥೆಯು ವಿಶ್ವದಲ್ಲೇ ಅತ್ಯುತ್ತಮವಾಗಿದೆ. ಅದೆಂಥದ್ದೇ ಮಳೆಯಾಗಿದ್ರೂ ಎಷ್ಟೇ ನೀರಿದ್ರೂ ಮಳೆ ನಿಂತ 20 ನಿಮಿಷದಲ್ಲೇ ಮೈದಾನ ರೆಡಿಯಾಗುತ್ತೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ 2017 ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಬ್‌ಏರ್ ಸಬ್‌ಸರ್ಫೇಸ್ ಏರಿಯೇಶನ್ ಮತ್ತು ನಿರ್ವಾತ-ಚಾಲಿತ ಒಳಚರಂಡಿ ವ್ಯವಸ್ಥೆಯನ್ನು ಮಾಡಿದೆ. ಈ ಟೆಕ್ನಾಲಜಿಯಿಂದ ಮೈದಾನವನ್ನ ವೇಗ ಒಣಗಿಸಲು ಮತ್ತು ನೀರು ನಿಲ್ಲುವುದನ್ನು ತಡೆಯಲು ಸಹಾಯ ಮಾಡುತ್ತದೆ. ಒಂದು ನಿಮಿಷಕ್ಕೆ 10,000 ಲೀಟರ್ ನೀರನ್ನು ತೆಗೆದುಹಾಕಬಹುದು.