ಮೊದಲ ಪಂದ್ಯಕ್ಕೆ ಕೆಕೆಆರ್ & ಆರ್ ಸಿಬಿ ತಂಡಗಳು ರೆಡಿ – ಯಾವ ಟೀಂ ಸ್ಟ್ರಾಂಗ್?

18ನೇ ಸೀಸನ್ ಐಪಿಎಲ್ ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದ್ದು, ಮೊದಲ ಪಂದ್ಯ ಶನಿವಾರ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿದೆ. ಹಾಲಿ ಚಾಂಪಿಯನ್ ಕೆಕೆಆರ್ ಮತ್ತು ಚೊಚ್ಚಲ ಟ್ರೋಫಿ ನಿರೀಕ್ಷೆಯಲ್ಲಿರೋ ಆರ್‌ಸಿಬಿ ತಂಡಗಳ ನಡುವೆ ರೋಚಕ ಫೈಟ್ ನಡೆಯಲಿದೆ. ಈ ಬಾರಿಯ ಐಪಿಎಲ್ಗೂ ಮುನ್ನ ಮೆಗಾ ಹರಾಜು ನಡೆದಿದ್ದರಿಂದ ಎರಡೂ ತಂಡಗಳಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ಅದೆಲ್ಲಕ್ಕಿಂತ ಹೆಚ್ಚಾಗಿ ಎರಡೂ ಟೀಮ್ಗಳಲ್ಲೂ ಹೊಸ ಕ್ಯಾಪ್ಟನ್ಸ್ ಲೀಡ್ ಮಾಡ್ತಿದ್ದಾರೆ. ಇದೇ ಕಾರಣಕ್ಕೆ ಯಾರಿಗೆ ಗೆಲುವಿನ ಶುಭಾರಂಭ ಅನ್ನೋ ಕುತೂಹಲವೂ ಜೋರಾಗಿದೆ.
ಇದನ್ನೂ ಓದಿ : ದುಬಾರಿಯಾಯ್ತು ಆರ್‌ಸಿಬಿ ಮ್ಯಾಚ್ ಟಿಕೆಟ್ ದರ! – ಕನಿಷ್ಠ, ಗರಿಷ್ಠ ಬೆಲೆ ಎಷ್ಟು ಗೊತ್ತಾ?
ಹಾಲಿ ಚಾಂಪಿಯನ್ ಪಟ್ಟದ ಜೊತೆಗೆ 18ನೇ ಸೀಸನ್ನಲ್ಲೂ ಟೈಟಲ್ ಗೆಲ್ಬೇಕು ಅಂತಾ ಕೆಕೆಆರ್ ಟಾರ್ಗೆಟ್ ಇಟ್ಕೊಂಡಿದೆ. ಮತ್ತೊಂದೆಡೆ ಮೊದಲ ಪಂದ್ಯದಲ್ಲೇ ಗೆದ್ದು ಕಾನ್ಫಿಡೆಂಟ್ ಆಗಿ ಟೂರ್ನಿ ಆರಂಭಿಸಬೇಕು ಅನ್ನೋದು ಆರ್‌ಸಿಬಿ ಉದ್ದೇಶ. ಯಾಕಂದ್ರೆ ಕೆಕೆಆರ್ ತಂಡ ಕಳೆದ ಆವೃತ್ತಿಯಲ್ಲಿ ಆಡಿದ ಎರಡು ಪಂದ್ಯಗಳಲ್ಲೂ ಆರ್ಸಿಬಿಯನ್ನು ಮಣಿಸಿತ್ತು. ಹೀಗಾಗಿ ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಮಣಿಸಿ ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳುವ ನಿರೀಕ್ಷೆಯಲ್ಲಿದೆ ರಜತ್ ಪಡೆ. ಆರ್‌ಸಿಬಿ ತಂಡ ಈಗಾಗಲೇ ಕೊಲ್ಕತ್ತಾದಲ್ಲಿ ಭರ್ಜರಿ ತಾಲೀಮು ನಡೆಸ್ತಿದೆ. ಈ ವಿಡಿಯೋವನ್ನು ಫ್ರಾಂಚೈಸಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.
ಶನಿವಾರದ ಪಂದ್ಯಕ್ಕೆ ಬೆಂಗಳೂರು ತಂಡದಲ್ಲಿ ಕೊಹ್ಲಿ ಜೊತೆ ಫಿಲ್ ಸಾಲ್ಟ್ ಓಪನರ್ ಆಗಿ ಕಾಣಿಸಿಕೊಳ್ತಾರೆ. ಮೂರನೇ ಕ್ರಮಾಂಕದಲ್ಲಿ ನಾಯಕ ರಜತ್ ಪಾಟಿದಾರ್ ಬ್ಯಾಟ್ ಬೀಸಲಿದ್ದಾರೆ. ನಾಲ್ಕನೇ ಸ್ಲಾಟ್ನಲ್ಲಿ ಲಿಯಾಮ್ ಲಿವಿಂಗ್ಸ್ಟೋನ್ ಆಡಲಿದ್ದು, ಐದನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಜಿತೇಶ್ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಆರನೇ ಕ್ರಮಾಂಕದಲ್ಲಿ ಟಿಮ್ ಡೇವಿಡ್ಗೆ ಚಾನ್ಸ್ ಸಿಗಲಿದೆ. ಏಳನೇ ಕ್ರಮಾಂಕದಲ್ಲಿ ಕೃನಾಲ್ ಪಾಂಡ್ಯ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹಾಗೇ ವೇಗಿಗಳಾಗಿ ಭುವನೇಶ್ವರ್ ಕುಮಾರ್, ಯಶ್ ದಯಾಳ್ ಹಾಗೂ ಜೋಶ್ ಹ್ಯಾಝಲ್ವುಡ್ ಕಣಕ್ಕಿಳಿಯಲಿದ್ದಾರೆ, ಇನ್ನು ಸ್ಪಿನ್ನರ್ ಆಗಿ ಸುಯಶ್ ಶರ್ಮಾಗೆ ಚಾನ್ಸ್ ಗಿಟ್ಟಿಸಿಕೊಳ್ಳಬಹುದು. ಇನ್ನು ರಾಸಿಖ್ ಸಲಾಂ ಹಾಗೂ ದೇವದತ್ ಪಡಿಕ್ಕಲ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿಕೊಳ್ಳುವ ಸಾಧ್ಯತೆಯಿದೆ.
ಕೆಕೆಆರ್ ಪರ ರಹಮಾನಲ್ಲಾ ಗುರ್ಬಾಜ್ ಓಪನರ್ ಆಗಿ ಕಾಣಿಸಿಕೊಳ್ತಾರೆ. ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ಗುರ್ಬಾಸ್ ಅಗ್ರೆಸ್ಸಿವ್ ಬ್ಯಾಟಿಂಗ್ ಇಂಟೆಂಟ್ ಹೊಂದಿದ್ದಾರೆ. ಅಫ್ಘಾನ್ ಬ್ಯಾಟ್ಸ್‌ಮನ್ 2023 ರಿಂದ KKR ನಲ್ಲಿದ್ದಾರೆ. ಹಾಗೇ ಸುನಿಲ್ ನರೈನ್ ಮತ್ತೊಂದೆಡೆ ಇನ್ನಿಂಗ್ಸ್ ಆರಂಭಿಸ್ತಾರೆ. ಲಾಸ್ಟ್ ಸೀಸನಲ್ಲಿ ಆರಂಭಿಕನಾಗಿ ಅಬ್ಬರಿಸಿದ್ದ ನರೈನ್, ಐಪಿಎಲ್ 2024 ರಲ್ಲಿ ಕೆಕೆಆರ್ ಪರ ಅತ್ಯಂತ ಪ್ರಭಾವಶಾಲಿ ಆಟಗಾರರಾಗಿದ್ದರು. ಕೆರಿಬಿಯನ್ ಆಲ್‌ರೌಂಡರ್ 14 ಪಂದ್ಯಗಳಲ್ಲಿ 488 ರನ್ ಗಳಿಸಿದರು, ಮೂರು ಅರ್ಧಶತಕಗಳು ಮತ್ತು ಒಂದು ಶತಕವನ್ನು ಗಳಿಸಿದರು. ಬೌಲಿಂಗ್‌ನಲ್ಲೂ ಮಾರಕ ದಾಳಿ ನಡೆಸಿ 17 ವಿಕೆಟ್‌ಗಳನ್ನು ಕಬಳಿಸಿದರು. ಇನ್ನು ಕ್ಯಾಪ್ಟನ್ ರಹಾನೆ 3ನೇ ಕ್ರಮಾಂಕದಲ್ಲಿ ಆಡ್ತಾರೆ. 185 ಐಪಿಎಲ್ ಪಂದ್ಯಗಳಲ್ಲಿ 30 ಅರ್ಧಶತಕಗಳು ಮತ್ತು ಎರಡು ಶತಕಗಳು ಸೇರಿದಂತೆ 4,642 ರನ್ ಗಳಿಸಿರುವ ರಹಾನೆ ಕ್ಯಾಪ್ಟನ್ ಸವಾಲನ್ನೂ ಮೆಟ್ಟಿ ನಿಲ್ಲಬೇಕಿದೆ. ಇನ್ನು ನಾಲ್ಕನೇ ಸ್ಲಾಟ್ಗೆ ವೆಂಕಟೇಶ್ ಅಯ್ಯರ್ ಬರ್ತಾರೆ. ಅಯ್ಯರ್ಗೆ ಅಯ್ಯರ್ ಅವರನ್ನು ಕೆಕೆಆರ್ 23.75 ಕೋಟಿಗೆ ರಿಟೇನ್ ಮಾಡ್ಕೊಂಡಿದ್ರು. 50 ಪಂದ್ಯಗಳಲ್ಲಿ 11 ಅರ್ಧಶತಕಗಳು ಮತ್ತು ಒಂದು ಶತಕ ಸೇರಿದಂತೆ 140 ಸ್ಟ್ರೈಕ್ ರೇಟ್‌ನಲ್ಲಿ 1,326 ರನ್ ಗಳಿಸಿರುವ ಅಯ್ಯರ್ ಮಧ್ಯಮ ಕ್ರಮಾಂಕದಲ್ಲಿ ಪಂದ್ಯ ಗೆಲ್ಲುವ ಆಟಗಾರ ಎಂದು ಸಾಬೀತಾಗಿದೆ. ಇನ್ನು 5ನೇ ಕ್ರಮಾಂಕದಲ್ಲಿ ರಿಂಕು ಸಿಂಗ್ ಆಡ್ತಾರೆ. 6ನೇ ಸ್ಲಾಟ್ನಲ್ಲಿ ಆಂಡ್ರೆ ರಸೆಲ್ ಮತ್ತೊಮ್ಮೆ ಕೊಲ್ಕತ್ತಾಗೆ ಪ್ಲಸ್ ಆಗ್ತಾರೆ. ನಂತರದಲ್ಲಿ ರಮಣದೀಪ್ ಸಿಂಗ್ ಆಡ್ತಾರೆ. ಕೆಕೆಆರ್‌ನ 2024 ರ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಆಸ್ಟ್ರೇಲಿಯಾದ ಎಡಗೈ ವೇಗಿ ಸ್ಪೆನ್ಸರ್ ಜಾನ್ಸನ್ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಬೆಸ್ಟ್ ಫಾರ್ಮ್ನಲ್ಲಿದ್ದಾರೆ. ಇನ್ನು ಸ್ಪಿನ್ನರ್ ವರುಣ್ ಚಕ್ರವರ್ತಿ ಇರೋದು ಕೂಡ ಕೆಕೆಆರ್ ಪ್ಲಸ್. ಚಾಂಪಿಯನ್ಸ್ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನಿಡಿದ್ರು. ಇನ್ನು ಹರ್ಷಿತ್ ರಾಣಾ ಕೂಡ ವೇಗಿಯಾಗಿ ಅದ್ಭುತ ಪ್ರದರ್ಶನ ನೀಡ್ತಿದ್ದಾರೆ. ಹಾಗೇ ವೈಭವ್ ಅರೋರಾ ತಮ್ಮ ಪರಿಣಾಮಕಾರಿ ಸ್ವಿಂಗ್ ಬೌಲಿಂಗ್ ಮೂಲಕ ಕೆಕೆಆರ್‌ನ ಬೌಲಿಂಗ್ ಸ್ಟ್ರೆಂಥ್ ಹೆಚ್ಚಿಸಲಿದ್ದಾರೆ.