ತವರಿನಲ್ಲಿ ಹ್ಯಾಟ್ರಿಕ್ ಸೋಲುಂಡ ಆರ್​ಸಿಬಿ – ಬ್ಯಾಟಿಂಗ್​ನಲ್ಲಿ ಸ್ಮೃತಿ ಮಂದಾನ ಮತ್ತೆ ವಿಫಲ, ಪೆರ್ರಿ ಡಕೌಟ್​

ತವರಿನಲ್ಲಿ ಹ್ಯಾಟ್ರಿಕ್ ಸೋಲುಂಡ ಆರ್​ಸಿಬಿ – ಬ್ಯಾಟಿಂಗ್​ನಲ್ಲಿ ಸ್ಮೃತಿ ಮಂದಾನ ಮತ್ತೆ ವಿಫಲ, ಪೆರ್ರಿ ಡಕೌಟ್​

ಹ್ಯಾಟ್ರಿಕ್ ಗೆಲುವಿನ ಹೊಸ್ತಿನಲ್ಲಿದ್ದ ಆರ್​ಸಿಬಿ ಗರ್ಲ್ಸ್, ಈಗ ಹ್ಯಾಟ್ರಿಕ್ ಸೋಲು ಕಂಡಿದ್ದಾರೆ. ಆರ್‌ಸಿಬಿ ಮತ್ತು ಗುಜರಾತ್ ಜೈಂಟ್ಸ್ ನಡುವಿನ ಹಣಾಹಣಿಯಲ್ಲಿ ಮತ್ತೊಮ್ಮೆ ಆರ್​ಸಿಬಿ ಬ್ಯಾಟಿಂಗ್ ವಿಫಲವಾಗಿದೆ. ಸತತ ಮೂರನೇ ಬಾರಿಗೆ ಆರ್‌ಸಿಬಿ ತಂಡ ಹೀನಾಯ ಸೋಲು ಅನುಭವಿಸಿದೆ.

ಇದನ್ನೂಓದಿ: IND Vs NZ.. ಸೇಡು ತೀರುತ್ತಾ? – ಕಿವೀಸ್ ವಿರುದ್ಧ ಆಡಲ್ವಾ ರೋಹಿತ್?

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ  ಗುಜರಾತ್ ನಾಯಕಿ ಆಶ್ಲೀ ಗಾರ್ಡ್ನರ್ ಟಾಸ್ ಗೆದ್ದು ಆರ್​ಸಿಬಿ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನ ಮಾಡಿದರು. ಬ್ಯಾಟಿಂಗ್​ಗೆ ಆಗಮಿಸಿದ ಆರ್​ಸಿಬಿ ಓಪನರ್ಸ್, ಬಂದ ದಾರಿಗೆ ಸುಂಕವಿಲ್ಲಂತೆ ಬ್ಯಾಟ್ ಬೀಸಿದರು. 25 ರನ್​ ಒಳಗೆ ನಾಯಕಿ ಸ್ಮೃತಿ ಮಂದಾನ, ವ್ಯಾಟ್-ಹಾಡ್ಜ್, ಪೆರ್ರಿ ಔಟ್ ಆಗಿದ್ದು ತಂಡಕ್ಕೆ ಭಾರೀ ಹಿನ್ನಡೆ ಆಯಿತು. ಮಧ್ಯಮ ಕ್ರಮಾಂಕದಲ್ಲಿ ಹಾಗೂ 7, 8 ಸ್ಥಾನದಲ್ಲಿ ಸುಧಾರಣೆಯ ರನ್ ಬಂದಿದ್ದರಿಂದ ಆರ್​ಸಿಬಿ 20 ಓವರ್​ಗಳಲ್ಲಿ 7 ವಿಕೆಟ್​ಗೆ 125 ರನ್ ಮಾತ್ರ ಗಳಿಸಿತು.

ಈ ಟಾರ್ಗೆಟ್ ಚೇಸ್ ಮಾಡಿದ ಗುಜರಾತ್ ಬ್ಯಾಟ್ಸ್​ ವುಮೆನ್ಸ್​ ಆರಂಭದಲ್ಲಿ ಆಘಾತಕ್ಕೆ ಒಳಗಾದರೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ನಾಯಕಿ ಆಶ್ಲೀ ಗಾರ್ಡ್ನರ್ 6 ಬೌಂಡರಿ, 3 ಸಿಕ್ಸರ್ ಸಮೇತ 58 ರನ್​ ಚಚ್ಚಿದರು. ಲಿಚ್ಫೀಲ್ಡ್ 3 ಬೌಂಡರಿ, 1 ಸಿಕ್ಸರಿಂದ 30 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. 16.3 ಓವರ್​ನಲ್ಲಿ 4 ವಿಕೆಟ್​ಗೆ 126 ರನ್​ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು.

ಇದುವರೆಗೆ ಗುಜರಾತ್ ಡಬ್ಲುಪಿಎಲ್​​ನಲ್ಲಿ ಒಟ್ಟು 6 ಪಂದ್ಯಗಳನ್ನು ಗೆದ್ದಿದ್ದು ಇದರಲ್ಲಿ 3 ಪಂದ್ಯಗಳನ್ನು ಆರ್​ಸಿಬಿ ವಿರುದ್ಧ ಗೆದ್ದಿರುವುದು ಅಚ್ಚರಿ ಮೂಡಿಸಿದೆ. ಈ ಸಲದ ಟೂರ್ನಿಯಲ್ಲಿ ಸತತ 2 ಗೆಲುವು ಕಂಡಿದ್ದ ಆರ್​ಸಿಬಿ ಹ್ಯಾಟ್ರಿಕ್ ಗೆಲುವಿನ ಹೊಸ್ತಿಲಲ್ಲಿತ್ತು. ಆದ್ರೆ ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದ ಮೇಲೆ ಸತತ 3 ಪಂದ್ಯಗಳನ್ನು ಸೋತಿರುವುದು ಆರ್​ಸಿಬಿ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

Shwetha M

Leave a Reply

Your email address will not be published. Required fields are marked *