RCB Vs GT.. ಕಳೆದ ಪಂದ್ಯದಂತೆಯೇ ಪ್ಲೇಯಿಂಗ್ 11 – ಗುಜರಾತ್ ತಂಡದಲ್ಲಿದ್ದಾರೆ ಡೇಂಜರಸ್ ಸ್ಪಿನ್ನರ್ಸ್!

RCB Vs GT.. ಕಳೆದ ಪಂದ್ಯದಂತೆಯೇ ಪ್ಲೇಯಿಂಗ್ 11 – ಗುಜರಾತ್ ತಂಡದಲ್ಲಿದ್ದಾರೆ ಡೇಂಜರಸ್ ಸ್ಪಿನ್ನರ್ಸ್!

18ನೇ ಸೀಸನ್​ನ ಅದ್ಧೂರಿಯಾಗಿ ಸ್ಟಾರ್ಟ್ ಮಾಡಿರೋ ಆರ್​ಸಿಬಿ ಆಟಗಾರರ ಅಬ್ಬರವನ್ನ ನೋಡೋಕೆ ಕನ್ನಡಿಗರು ರೆಡಿಯಾಗಿದ್ದಾರೆ. ಹೋಂ ಗ್ರೌಂಡ್​ನಲ್ಲೂ ಗೆಲುವಿನ ಕೇಕೆ ಹಾಕಲಿ ಅಂತಾ ಲಾಯಲ್ ಫ್ಯಾನ್ಸ್ ಕಾಯ್ತಿದ್ದಾರೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಇವತ್ತು ಆರ್​ಸಿಬಿ ಮತ್ತು ಗುಜರಾತ್ ಟೈಟನ್ಸ್ ನಡುವೆ ಹೈ-ವೋಲ್ಟೇಜ್ ಫೈಟ್ ನಡೆಯಲಿದೆ. ಸತತ ಎರಡು ಗೆಲುವುಗಳೊಂದಿಗೆ ಟೇಬಲ್ ಟಾಪರ್ ಆಗಿರೋ ಬೆಂಗಳೂರು ಟೀಂ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ ಮೊದಲ ಪಂದ್ಯ ಸೋತ್ರೂ ಎರಡನೇ ಪಂದ್ಯದಲ್ಲೇ ಗ್ರೇಟ್ ಕಮ್ ಬ್ಯಾಕ್ ಮಾಡಿರೋ ಗುಜರಾತ್ ಕೂಡ ಅದೇ ಫಾರ್ಮ್​​ನಲ್ಲೇ ಗೆಲುವಿನ ಟ್ರ್ಯಾಕ್​ನಲ್ಲೇ ಕಂಟಿನ್ಯೂ ಮಾಡೋ ಪ್ಲ್ಯಾನ್​ನಲ್ಲಿದೆ.

ಇದನ್ನೂ ಓದಿ : MI ಬತ್ತಳಿಕೆಯಲ್ಲಿ ಯಂಗ್ ಗನ್- ಎಂಟ್ರಿಯಲ್ಲೇ 4 ವಿಕೆಟ್ ಉಡೀಸ್

18ನೇ ಸೀಸನ್ ಐಪಿಎಲ್​ನಲ್ಲಿ ಈಗಾಗ್ಲೇ ಎರಡೂ ತಂಡಗಳು ಎರಡೆರಡು ಪಂದ್ಯಗಳನ್ನ ಆಡಿವೆ. ಆರ್​ಸಿಬಿ ಎರಡೂ ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿದೆ. ಮೊದಲ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ ಗೆದ್ದರೆ, ಎರಡನೇ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ದಾಖಲೆಗೆ ಗೆಲುವು ಸಾಧಿಸಿತ್ತು. ಇನ್ನು ಗುಜರಾತ್​ ತಂಡ ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋತಿದ್ದು ಎರಡನೇ ಪಂದ್ಯ ಮುಂಬೈ ಇಂಡಿಯನ್ಸ್​ ವಿರುದ್ಧ ಗೆಲುವು ಕಂಡಿದೆ. ಕಳೆದ ಪಂದ್ಯಗಳಲ್ಲಿ ಎರಡೂ ತಂಡಗಳು ಗೆದ್ದಿರೋದ್ರಿಂದ ಈ ಪಂದ್ಯದಲ್ಲೂ ಕೂಡ ಗೆಲ್ಲೋ ಕಾನ್ಫಿಡೆನ್ಸ್​ನಲ್ಲಿದ್ದಾರೆ.

ಇನ್ನು ಗುಜರಾತ್ ವಿರುದ್ಧದ ಪಂದ್ಯಕ್ಕೆ ಬೆಂಗಳೂರು ತಂಡದಲ್ಲಿ ಯಾವುದೇ ಬದಲಾವಣೆಗಳನ್ನ ಮಾಡೋ ಸಾಧ್ಯತೆ ಇಲ್ಲ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡ್ರಲ್ಲೂ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸುವಂತ ಪ್ರದರ್ಶನ ಕೊಟ್ಟಿದ್ದಾರೆ. ಮಿಡಲ್ ಆರ್ಡರ್ ಬ್ಯಾಟಿಂಗ್‌ ವಿಭಾಗದಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ ಸ್ವಲ್ಪ ಫಾರ್ಮ್​ಗೆ ಬರ್ಬೇಕಿದೆ. ಅದನ್ನ ಬಿಟ್ರೆ ಉಳಿದವ್ರೆಲ್ಲಾ ತಮ್ಮ ತಮ್ಮ ಜವಾಬ್ದಾರಿಯನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಜೋಶ್ ಹೇಜಲ್‌ವುಡ್ ಆರ್‌ಸಿಬಿ ಪರ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಅವರು ಆರಕ್ಕಿಂತ ಕಡಿಮೆ ಎಕಾನಮಿ ರೇಟ್ ಹೊಂದಿದ್ದಾರೆ. ಸ್ವಿಂಗ್ ಮಾಸ್ಟರ್​ ಭುವಿ ಕೂಡ ಲಯದಲ್ಲಿರೋದ್ರಿಂದ ಗುಜರಾತ್​ ತಂಡಕ್ಕೆ ಆಘಾತ ನೀಡುವ ನೀರಿಕ್ಷೆ ಇದೆ. ಯಶ್ ದಯಾಳ್ ಕೂಡ ಸೈ ಎನಿಸಿಕೊಂಡಿದ್ದಾರೆ. ಇಂದರಿಂದ ಗುಜರಾತ್ ತಂಡಕ್ಕೆ ಭುವಿ, ಹೇಜಲ್​ವುಡ್​ ಮೇಲೆ ಸಹಜವಾಗಿಯೇ ನಡುಕ ಶುರುವಾಗಿದೆ.  ಹೀಗಾಗಿ ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಪಂದ್ಯಕ್ಕೆ ಆರ್ ಸಿಬಿ ಟೀಮ್​ನ ಪ್ಲೇಯಿಂಗ್ 11ನಲ್ಲಿ ಬದಲಾವಣೆಗಳು ಆಗೋದು ಡೌಟಿದೆ.

ಮತ್ತೊಂದೆಡೆ ಗುಜರಾತ್ ಟೈಟಾನ್ಸ್ ತಂಡದಲ್ಲೂ ಯಾವುದೇ ಬದಲಾವಣೆಗಳಾಗೋ ಸಾಧ್ಯತೆಗಳು ಕಡಿಮೆ ಇವೆ. ಕಳೆದ ಪಂದ್ಯದಲ್ಲಿ ಸಾಯಿ ಸುದರ್ಶನ್ ಮತ್ತು ನಾಯಕ ಶುಭ್​ಮನ್ ಗಿಲ್ ಉತ್ತಮ ಆರಂಭ ನೀಡಿದ್ರು. ಸುದರ್ಶನ್ 41 ಎಸೆತಗಳಲ್ಲಿ 63 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿದರು. ಮೂರನೇ ಸ್ಥಾನದಲ್ಲಿ ಜೋಸ್ ಬಟ್ಲರ್ ತಮ್ಮ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸುತ್ತಿದ್ದಾರೆ. ಆದಾಗ್ಯೂ, ಕೆಳ ಕ್ರಮಾಂಕದಲ್ಲಿ, ತಂಡವು ರುದರ್ಫೋರ್ಡ್, ಶಾರುಖ್ ಖಾನ್ ಮತ್ತು ರಾಹುಲ್ ತೆವಾಟಿಯಾ ಅವರಿಂದ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸುತ್ತದೆ. ಬೌಲಿಂಗ್‌ನಲ್ಲಿ ಮೊಹಮ್ಮದ್ ಸಿರಾಜ್ ಮುಂಬೈ ವಿರುದ್ಧ ಉತ್ತಮ ಲಯದಲ್ಲಿ ಕಾಣಿಸಿಕೊಂಡರೆ, ಪ್ರಸಿದ್ಧ್ ಕೃಷ್ಣ ಅದ್ಭುತ ಪ್ರದರ್ಶನ ನೀಡಿದ್ದರು. ಇನ್ನು ಗುಜರಾತ್​ನಲ್ಲಿ ರಶೀದ್ ಖಾನ್ ಮತ್ತು ಆರ್.ಸಾಯಿ ಕಿಶೋರ್ ಅವರಂತಹ ಡೇಂಜರಸ್ ಸ್ಪಿನ್ನರ್‌ಗಳಿದ್ದಾರೆ. ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳ ಮೇಲೆ ಇವರು ಅಟ್ಯಾಕ್ ಮಾಡಬಹುದು. ಕಗಿಸೊ ರಬಾಡ ಮತ್ತು ಸಿರಾಜ್ ಅವರಂತಹ ವೇಗದ ಬೌಲರ್‌ಗಳಿದ್ದಾರೆ. ರಬಾಡ ಇದುವರೆಗೆ 14 ಇನ್ನಿಂಗ್ಸ್‌ಗಳಲ್ಲಿ ನಾಲ್ಕು ಬಾರಿ ಕೊಹ್ಲಿಯನ್ನು ಔಟ್ ಮಾಡಿದ್ದಾರೆ.

ಆರ್ ಸಿಬಿ ತಂಡದಲ್ಲಿದ್ದ ಇಬ್ಬರು ಮಾಜಿ ಆಟಗಾರರು ಈಗ ಗುಜರಾತ್ ತಂಡದಲ್ಲಿದ್ದಾರೆ. ಒಂದು ಮೊಹಮ್ಮದ್ ಸಿರಾಜ್ ಮತ್ತೊಂದು ಪ್ರಸಿದ್ಧ್ ಕೃಷ್ಣ. ಅದ್ರಲ್ಲೂ ಕಳೆದ 7 ವರ್ಷಗಳಿಂದ ಆರ್​ಸಿಬಿಯ ಪ್ರಮುಖ ಬೌಲರ್​ ಆಗಿದ್ದ ಮೊಹಮ್ಮದ್​ ಸಿರಾಜ್​ ಈ ಬಾರಿ ಗುಜರಾತ್​​ ಟೈಟಾನ್​ ಪರ ಕಣಕ್ಕಿಳಿಯುತ್ತಿದ್ದಾರೆ. ಚಿನ್ನಸ್ವಾಮಿ ಪಿಚ್ ಕುರಿತು ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣಗೆ ಚೆನ್ನಾಗೇ ಗೊತ್ತಿದೆ. ಹಲವು ವರ್ಷಗಳ ಕಾಲ ಆರ್ ಸಿಬಿ ಪರ ಆಡಿದ್ದ ಇವ್ರು ಪಿಚ್​ನ ಫೀಚರ್ಸ್ ಬಗ್ಗೆ ಚೆನ್ನಾಗೇ ಅರಿತಿದ್ದಾರೆ. ಪ್ರಸಿದ್ಧ್ ಕೃಷ್ಣಗೆ ಇದು ತವರಿನ ಮೈದಾನವಾಗಿದೆ. 2017ಕ್ಕೆ ಐಪಿಎಲ್​ಗೆ ಎಂಟ್ರಿ ಕೊಟ್ಟ ಸಿರಾಜ್​ ಮೊದಲ ಆವೃತ್ತಿಯಲ್ಲಿ ಸನ್‌ರೈಸರ್ಸ್​ ಹೈದರಾಬಾದ್​ ತಂಡದ ಪರ ಆಡಿದ್ದರು. 2018ರಲ್ಲಿ ಆರ್​ಸಿಬಿ ಸೇರಿದ್ದ ಸಿರಾಜ್​ 2024ರವರೆಗೆ ಅಂದರೆ 7 ವರ್ಷಗಳ ಕಾಲ ಆರ್​ಸಿಬಿ ಭಾಗವಾಗಿದ್ದರು. ಆದರೆ ಈ ಆವೃತ್ತಿಯಿಂದ ಸಿರಾಜ್‌ರನ್ನು ಕೈಬಿಡಲಾಗಿದೆ. ಸಿರಾಜ್ ಐಪಿಎಲ್​ನಲ್ಲಿ ಈವರೆಗೂ 95 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 95 ವಿಕೆಟ್​ಗಳನ್ನು ಪಡೆದಿದ್ದಾರೆ. 21 ರನ್​ಗೆ 4 ವಿಕೆಟ್​ ಪಡೆದಿದ್ದು ಇವರ ಬೆಸ್ಟ್​ ಸ್ಪೆಲ್​ ಆಗಿದೆ.

ಚಿನ್ನಸ್ವಾಮಿ ಪಿಚ್ ಬೆಂಗಳೂರು ಆಟಗಾರರಿಗೆ ಪ್ಲಸ್ ಅನ್ನೋದಕ್ಕಿಂತ ಚಾಲೆಂಜಸ್ಸೇ ಜಾಸ್ತಿ ಇವೆ. ಚಿನ್ನಸ್ವಾಮಿ ಪಿಚ್, ಬ್ಯಾಟ್ಸ್​​ಮನ್​​ಗಳಿಗೆ ಹೇಳಿ ಮಾಡಿಸಿದ ಪಿಚ್. ಹಾಗಾಗಿ ಆರ್​ಸಿಬಿಯ ತ್ರಿವಳಿ ವೇಗಿಗಳಾದ ಜೋಷ್ ಹೇಜಲ್​ವುಡ್, ಭುವನೇಶ್ವರ್ ಕುಮಾರ್ ಮತ್ತು ಯಶ್ ದಯಾಳ್​​ಗೆ ಈ ಪಿಚ್​ನಲ್ಲಿ ಬೌಲಿಂಗ್ ಮಾಡೋದು ಸವಾಲಾಗಲಿದೆ. ಸ್ಪಿನ್ನರ್​ಗಳಾದ ಕೃನಾಲ್ ಮತ್ತು ಸುಯೇಶ್ ಶರ್ಮಾಗೂ ಇಲ್ಲಿ ಬೌಲಿಂಗ್ ಮಾಡೋದು ಅಷ್ಟು ಸುಲಭ ಇಲ್ಲ. ಈಡನ್ ಗಾರ್ಡನ್ಸ್​ನಲ್ಲಿ ಸಕ್ಸಸ್​ಫುಲ್ ಚೇಸಿಂಗ್, ಚೆನ್ನೈನಲ್ಲಿ 196 ರನ್​ಗಳನ್ನ ಡಿಫೆಂಡ್ ಮಾಡಿಕೊಂಡಿರುವ ಆರ್​ಸಿಬಿ, ಚಿನ್ನಸ್ವಾಮಿಯಲ್ಲಿ ಡಿಫರೆಂಟ್ ಆಗೇ ಡೀಲ್ ಮಾಡ್ಬೇಕಾಗುತ್ತೆ.

ಐಪಿಎಲ್​ನಲ್ಲಿ ವಿರಾಟ್ ಕೊಹ್ಲಿ ಈಗಾಗ್ಲೇ ನಾಲ್ಕು ಫ್ರಾಂಚೈಸಿಗಳ ವಿರುದ್ಧ 1,000 ಪ್ಲಸ್ ರನ್ಸ್ ಸ್ಕೋರ್ ಮಾಡಿದ್ದಾರೆ. ಗುಜರಾತ್ ವಿರುದ್ಧವೂ ಬೆಸ್ಟ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಜಿಟಿ ವಿರುದ್ಧ ಈವರೆಗೆ 5 ಪಂದ್ಯಗಳನ್ನ ಆಡಿದ್ದು 1 ಶತಕ, 3 ಅರ್ಧಶತಕಗಳೊಂದಿಗೆ 344 ರನ್ ಗಳಿಸಿದ್ದಾರೆ. ಈ ಸಲವೂ ಸಾಲ್ಟ್ ಮತ್ತು ಕೊಹ್ಲಿ ಜೋಡಿ ಉತ್ತಮ ಸ್ಟಾರ್ಟ್ ನೀಡ್ತಿದೆ. ಕೊಲ್ಕತ್ತಾ ವಿರುದ್ಧ 95 ರನ್, ಸಿಎಸ್​​ಕೆ ವಿರುದ್ಧ 45 ರನ್​​ ಜೊತೆಯಾಟದ ಕಾಣಿಕೆ ನೀಡಿರುವ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್, ಗುಜರಾತ್​ ವಿರುದ್ಧವೂ ಉತ್ತಮ ಜೊತೆಯಾಟ ಆಡಬೇಕಿದೆ.  ಪವರ್​ ಪ್ಲೇನಲ್ಲಿ ಸಾಲಿಡ್ ಬ್ಯಾಟಿಂಗ್ ನಡೆಸಿದ್ರೆ ಉತ್ತಮ ಸ್ಕೋರ್ ಕಲೆ ಹಾಕಬಹುದು. ಇನ್ನು ಚಿನ್ನಸ್ವಾಮಿಯಲ್ಲಿ ಎರಡೂ ತಂಡಗಳು ಒಂದೊಂದು ಬಾರಿ ಮುಖಾಮುಖಿಯಾಗಿದ್ದು ಒಂದೊಂದು ಸಲ ಪಂದ್ಯವನ್ನ ಗೆದ್ದುಕೊಂಡಿದ್ದಾರೆ.

ಇದೇ ಮೊದಲ ಬಾರಿ ತವರಿನಲ್ಲಿ ಆಡುತ್ತಿರುವ ಆರ್​ಸಿಬಿ, ಲೋಕಲ್ ಫ್ಯಾನ್ಸ್​ಗೆ ಕಿಕ್ ನೀಡಲು ತುದಿಗಾಲಲ್ಲಿ ನಿಂತಿದೆ. ಅಷ್ಟೇ ಅಲ್ಲ. ತವರಿನಲ್ಲಿ ಗುಜರಾತ್​​ ಟೈಟನ್ಸ್​​​ ವಿರುದ್ಧ ಗೆದ್ದು ಹ್ಯಾಟ್ರಿಕ್​ ಗೆಲುವು ಸಾಧಿಸುವ ಲೆಕ್ಕಾಚಾರದಲ್ಲಿದೆ. ಆರ್​ಸಿಬಿಯ ಮಿಡಲ್ ಆರ್ಡರ್​​​​​​​ ಪಂಟರ್​​​, ಕ್ಯಾಪ್ಟನ್ ರಜತ್ ಪಟಿದಾರ್. ಈಡನ್ ಗಾರ್ಡನ್ಸ್​ನಲ್ಲಿ 16 ಎಸೆತಗಳಲ್ಲಿ 34 ರನ್, ಚೆಪಾಕ್​ನಲ್ಲಿ 32 ಬಾಲ್​ಗಳಲ್ಲಿ 51 ರನ್​​ ಸಿಡಿಸಿರುವ ಪಟಿದಾರ್, ಟೂರ್ನಿಯಲ್ಲಿ 178ರ ಬ್ಯಾಟಿಂಗ್ ಸ್ಟ್ರೈಕ್​ರೇಟ್​​ನಲ್ಲಿ ರನ್​ ಗಳಿಸುತ್ತಿದ್ದಾರೆ. ಚಿನ್ನಸ್ವಾಮಿಯಲ್ಲಿ ಪಟಿದಾರ್ ಇದೇ ಅಗ್ರೆಸಿವ್ ಬ್ಯಾಟಿಂಗ್ ಮುಂದುವರೆಸಿದ್ರೆ ಗುಜರಾತ್​​ ತಂಡವನ್ನ ಈಸಿಯಾಗಿ ಕಟ್ಟಿ ಹಾಕ್ಬೋದು.

Shantha Kumari

Leave a Reply

Your email address will not be published. Required fields are marked *