RCBಗೆ ಸ್ಟ್ರೈಕ್ ರೇಟ್.. GTಗೆ ರನ್ಸ್ – GAME CHANGERS ಕೈಯಲ್ಲಿ ಕಪ್!
ಪಾಂಡ್ಯ ಪಕ್ಕ ನಿಂತವ್ರೇ ಚಾಂಪಿಯನ್ಸ್?

RCBಗೆ ಸ್ಟ್ರೈಕ್ ರೇಟ್.. GTಗೆ ರನ್ಸ್ – GAME CHANGERS ಕೈಯಲ್ಲಿ ಕಪ್!ಪಾಂಡ್ಯ ಪಕ್ಕ ನಿಂತವ್ರೇ ಚಾಂಪಿಯನ್ಸ್?

ಬೆಂಗಳೂರು ವರ್ಸಸ್ ಗುಜರಾತ್ ನಡುವಿನ ಫೈನಲ್ ಫೈಟ್​ಗೆ ಕೌಂಟ್​ಡೌನ್ ಸ್ಟಾರ್ಟ್ ಆಗಿದೆ. ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ಇವತ್ತು ಗೆದ್ದವ್ರು 19ನೇ ಸೀಸನ್ ಚಾಂಪಿಯನ್ಸ್ ಪಟ್ಟಕ್ಕೇರ್ತಾರೆ. ಜಗತ್ತಿನ ಶ್ರೀಮಂತ ಲೀಗ್ ಆಗಿರುವ ಐಪಿಎಲ್​ನಲ್ಲಿ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗೋ ಟೈಂ ಬಂದಿದೆ. ಮೇ 31 ಬೆಂಗಳೂರು ಮತ್ತು ಗುಜರಾತ್ ತಂಡಗಳ ಪಾಲಿಗೆ ಸುವರ್ಣಾಕ್ಷರಗಳಲ್ಲಿ ಬರೆದಿಡೋ ದಿನ. ಒಬ್ಬರಿಗೆ ಟ್ರೋಫಿಯ ಕಿರೀಟ.. ಮತ್ತೊಬ್ಬರಿಗೆ ನಿರಾಸೆಯ ಮುಕ್ತಾಯ. ಸೀಸನ್ ಉದ್ದಕ್ಕೂ ಬೆಸ್ಟ್​ನಲ್ಲೇ ಬೆಸ್ಟ್ ಅಂತಾ ಬಂದವ್ರು ಈಗ ಹೈವೋಲ್ಟೇಜ್ ಬ್ಯಾಟಲ್​ನಲ್ಲಿ ಮುಖಾಮುಖಿಯಾಗ್ತಿದ್ದಾರೆ. ಕಪ್ ನಮ್ದು ಅಂತಾ ಹೇಳೋಕೆ ಇನ್ನೊಂದೇ ಹೆಜ್ಜೆ ಬಾಕಿ ಇದೆ.

ಇದನ್ನೂ ಓದಿ : RCBಗೆ ಸಾಲ್ಟ್ ಬೇಕಾ.. ವೆಂಕಿ ಸಾಕಾ -FINALಗೆ ಬೌಲಿಂಗ್ ಬ್ರಹ್ಮಾಸ್ತ್ರ ಯಾರು?

ಬೆಂಗಳೂರು ಟಾಪ್-3 ಸ್ಟಾರ್ಸ್!

ಆಟಗಾರ                               ರನ್ಸ್                    ಸ್ಟ್ರೈಕ್ ರೇಟ್

ವಿರಾಟ್ ಕೊಹ್ಲಿ                        600                        164

ರಜತ್ ಪಾಟಿದಾರ್                     486                        196

ದೇವದತ್ ಪಡಿಕ್ಕಲ್                   463                         173

 

ಗುಜರಾತ್ ಟಾಪ್-3 ಸ್ಟಾರ್ಸ್!

ಆಟಗಾರ                          ರನ್ಸ್                      ಸ್ಟ್ರೈಕ್ ರೇಟ್

ಶುಭ್ ಮನ್ ಗಿಲ್                 722                        163

ಸಾಯಿ ಸುದರ್ಶನ್                 710                        159

ಜೋಸ್ ಬಟ್ಲರ್                   507                         157

ರನ್ಸ್ ಕಂಪೇರ್ ಮಾಡಿದ್ರೆ ಗುಜರಾತ್ ಬೆಟರ್ ಅನ್ಸುತ್ತೆ. ಟಾಪ್ 3 ಪ್ಲೇಪರ್ಸ್ ಇಬ್ರು 700+ ರನ್ಸ್ ಇದ್ದಾರೆ.. ಬಟ್ಲರ್ ಕೂಡ 500 ಕ್ರಾಸ್ ಮಾಡಿದ್ದಾರೆ. ಬಟ್ ಸ್ಟ್ರೈಕ್​ರೇಟ್ ಅಂತಾ ಬಂದಾಗ ಮಿಡಿಯಮ್ ರೇಂಜ್​ನಲ್ಲಿದೆ. ಅದೇ ಬೆಂಗಳೂರು ಪರ ಸ್ಟ್ರೈಕ್​ರೇಟ್ ಸೂಪರ್ ಡೂಪರ್ ಆಗಿದೆ. ಟಾಪ್-3 ಬ್ಯಾಟರ್ ಎಲ್ರೂ 165 ಪ್ಲಸ್ ಇದ್ದಾರೆ. ಸೋ ಬ್ಯಾಟಿಂಗ್​ನಲ್ಲಿ ಜಿಟಿ ಟಾಪ್-3 ಮೇಲೆಯೇ ಕಂಪ್ಲೀಟ್ ಡಿಪೆಂಡೆನ್ಸಿ ಇರೋದು ಗೊತ್ತಾಗುತ್ತೆ. ಇನ್ನು ಬೌಲಿಂಗ್ ಅಂತಾ ಬಂದಾಗ 26 ವಿಕೆಟ್‌ಗಳೊಂದಿಗೆ ಭವಿ ಆರ್​ಸಿಬಿಯ ಹೈಯೆಸ್ಟ್ ವಿಕೆಟ್ ಟೇಕರ್ ಆಗಿದ್ದಾರೆ. ರಸಿಕ್ ಸಲಾಂ 16 ವಿಕೆಟ್ಸ್ ಇನ್ನು ಜೋಶ್  ಹೇಜಲ್ ವುಡ್ ಮತ್ತು ಕೃನಾಲ್ 13 ವಿಕೆಟ್ಸ್ ತಗೊಂಡಿದ್ದಾರೆ. ಗುಜರಾತ್ ಪರ ಕಗಿಸೊ ರಬಾಡ 16 ಪಂದ್ಯಗಳಲ್ಲಿ 28 ವಿಕೆಟ್‌ಗಳೊಂದಿಗೆ ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ರಶೀದ್ ಖಾನ್ 19, ಮೊಹಮ್ಮದ್ ಸಿರಾಜ್ 18 ವಿಕೆಟ್‌ಗಳನ್ನು ಪಡೆದಿದ್ದಾರೆ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ರಬಾಡ 165 ಮತ್ತು ಸಿರಾಜ್ 162 ಡಾಟ್ ಬಾಲ್​ಗಳನ್ನ ಹಾಕಿದ್ದಾರೆ. ಹೀಗಾಗಿ ಈ ಬೌಲರ್​ಗಳೇ ಮ್ಯಾಚ್ ವಿನ್ನರ್ಸ್ ಕೂಡ ಆಗ್ತಾರೆ. ಇಷ್ಟೇ ಅಲ್ಲದೆ ಬೆಂಗಳೂರು ವರ್ಸಸ್ ಗುಜರಾತ್ ನಡುವಿನ ಫೈನಲ್ ಮ್ಯಾಚ್​ಗೆ ಒಂದಷ್ಟು ಕಾಕತಾಳೀಯಗಳ ಬಗ್ಗೆಯೂ ಟ್ರೆಂಡಿಂಗ್​ನಲ್ಲಿ ಇರುವಂಥದ್ದು. ಹಿಂದಿನ ಸೀಸನ್​ನಲ್ಲಿ ರಿಸಲ್ಟ್ ನೋಡ್ಕೊಂಡು ಅವ್ರು ಫೇವರ್ ಇವ್ರು ಫೇವರ್ ಅಂತಿದ್ದಾರೆ.

ಹಿಂಗೂ ಆಗುತ್ತಾ?

  1. 2023ರಿಂದ ಕ್ಯಾಪ್ಟನ್ಸಿ ಫೋಟೋಶೂಟ್ ನಲ್ಲಿ ಪಾಂಡ್ಯ ಪಕ್ಕ ನಿಂತವ್ರದ್ದೇ ಕಪ್!
  2. 2022ರಿಂದ ವಿನ್ನಿಂಗ್ ಕ್ಯಾಪ್ಟನ್ಸ್ ನೆಕ್ಸ್ ಟ್ ಸೀಸನ್ ಫೈನಲ್ ನಲ್ಲಿ ಸೋಲ್ತಾರಾ?
  3. 2025ರಂತೆಯೇ ಡೈರೆಕ್ಟ್ ಫೈನಲ್.. ಈ ಸಲವೂ ಕಪ್ ನಮ್ಮದೇ?

ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಚರ್ಚೆಗಳು ಆಗ್ತಾ ಇದೆ. ಪೋಸ್ಟ್​ಗಳನ್ನ, ಫೋಟೋಗಳನ್ನ ಹಾಕೋ ಮೂಲಕ ಒಂದಷ್ಟು ಫ್ಯಾನ್ಸ್ ಸೋಲು ಗೆಲುವುಗಳನ್ನ ಪ್ರೆಡಿಕ್ಟ್ ಮಾಡ್ತಿದ್ದಾರೆ. ಆದ್ರಿಲ್ಲಿ ಕೋಇನ್ಸಿಡೆನ್ಸ್ ಮ್ಯಾಟ್ರ್ ಆಗಲ್ಲ. ಗ್ರೌಂಡ್​ನಲ್ಲಿ ಯಾರು ಚೆನ್ನಾಗಿ ಆಡ್ತಾರೋ ಅವ್ರೇ ಗೆಲ್ಲೋದು. ಹಾಗಾದ್ರೆ ಫೈನಲ್ ಫೈಟ್​ಗೆ ಸಿದ್ಧವಾಗಿರೋ ಮೋದಿ ಸ್ಟೇಡಿಯಂ ರಿಪೋರ್ಟ್ ಹೇಗಿದೆ ಅನ್ನೋದನ್ನೂ ನೋಡೋಣ.

ಮೋದಿ ಸ್ಟೇಡಿಯಂನಲ್ಲಿ ಗೆದ್ದು ಚಾಂಪಿಯನ್ಸ್ ಯಾರಾಗ್ತಾರೆ?

ಐಪಿಎಲ್ ಅಂತಾ ಬಂದಾಗ ಬೆಂಗಳೂರು ಮತ್ತು ಗುಜರಾತ್ ತಂಡಗಳು ಇದುವರೆಗೆ ಟೋಟಲ್ ಆಗಿ 9 ಸಲ ಮುಖಾಮುಖಿ ಆಗಿದ್ದಾರೆ. ಇದ್ರಲ್ಲಿ ಆರ್​ಸಿಬಿ 5 ಸಲ ಗೆದ್ರೆ ಜಿಟಿ 4 ಸಲ ಗೆದ್ದಿದೆ. ಕಳೆದ ಐದು ಪಂದ್ಯಗಳ ಸ್ಟಾಟ್ಸ್ ನೋಡಿದ್ರೆ 3ರಲ್ಲಿ ಬೆಂಗಳೂರು ಗೆದ್ದಿದೆ ಗುಜರಾತ್ 2 ಬಾರಿ ವಿನ್ ಆಗಿದೆ. ಇನ್ನು ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ಉಭಯ ತಂಡಗಳು ಎರಡು ಸಲ ಮುಖಾಮುಖಿಯಾಗಿದ್ದಾರೆ. ಇಬ್ರೂ ಕೂಡ ತಲಾ ಒಂದೊಂದು ಪಂದ್ಯಗಳನ್ನ ಗೆದ್ಕೊಂಡಿದ್ದಾರೆ. ಬಟ್ ಓವರ್ ಆಲ್ ಅಂಥಾ ಬಂದಾಗ ಜಿಟಿ ಈ ಮೈದಾನದಲ್ಲಿ ಟೋಟಲ್ 22 ಪಂದ್ಯಗಳನ್ನ ಆಡಿದ್ದು ಅದ್ರಲ್ಲಿ 15ರಲ್ಲಿ ಗೆದ್ದಿದೆ. ಇನ್ನು ಇದೇ ಸೀಸನ್​ನಲ್ಲಿ ಆರ್​ಸಿಬಿ ಈ ಗ್ರೌಂಡ್​ನಲ್ಲಿ ಆಲೌಟ್ ಆಗಿತ್ತು. ಹಾಗೇ ಶುಭ್​ಮನ್ ಗಿಲ್ ಅಹಮದಾಬಾದ್ ಪಿಚ್​ನಲ್ಲಿ ಎಕ್ಸ್​ಟ್ರಾರ್ಡಿನರಿ ರೆಕಾರ್ಡ್ಸ್ ಹೊಂದಿದ್ದಾರೆ. ಗುಜರಾತ್ ನಾಯಕ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 1,347 ಐಪಿಎಲ್ ರನ್‌ಗಳನ್ನು ಗಳಿಸಿದ್ದಾರೆ. ಈ ಸೀಸನ್​ನಲ್ಲೂ ಸಖತ್ ಫಾರ್ಮ್​ನಲ್ಲಿದ್ದು 722 ರನ್‌ಗಳೊಂದಿಗೆ ಆರೆಂಜ್ ಕ್ಯಾಪ್ ರೇಸ್‌ನಲ್ಲಿ 2 ನೇ ಸ್ಥಾನದಲ್ಲಿದ್ದಾರೆ. ಹೀಗಾಗಿ ಜಿಟಿ ಬ್ಯಾಟರ್ಸ್ ಡಾಮಿನೇಟ್ ಮಾಡೋ ನಿರೀಕ್ಷೆಯೂ ಇದೆ. ಅಟ್ ದಿ ಸೇಮ್ ಟೈಂ ಆರ್ ಸಿಬಿ ಬ್ಯಾಟಿಂಗ್ ಡೆಪ್ತ್ ಚೆನ್ನಾಗಿ ಇರೋದ್ರಿಂದ ಇಲ್ಲೂ ಬಿಗ್ ಸ್ಕೋರ್ ನಿರೀಕ್ಷೆ ಮಾಡ್ಬೋದು. ಒಟ್ನಲ್ಲಿ ಯಾರು ಏನೇ ಲೆಕ್ಕಾಚಾರ ಹಾಕಿದ್ರೂ ಇವತ್ತು ಆಡೋದಷ್ಟೇ ಮುಖ್ಯ. ಌಂಡ್ ಎಫರ್ಟ್ ಜೊತೆ ಸ್ವಲ್ಪ ಲಕ್ ಕೂಡ ಮ್ಯಾಟ್ರ್ ಆಗುತ್ತೆ.

Shantha Kumari

Leave a Reply

Your email address will not be published. Required fields are marked *