ಬೆಂಗಳೂರು Vs ಗುಜರಾತ್ ಕದನಕ್ಕೆ ಕೌಂಟ್ ಡೌನ್ – ಸ್ಮೃತಿ ಮಂದಾನ ಪಡೆ ಹೇಗಿದೆ?
ಟಗರು ಪುಟ್ಟಿ ಹವಾ ಶುರುವಾಗುತ್ತಾ?

ಮಹಿಳಾ ಪ್ರೀಮಿಯರ್ ಲೀಗ್ ಸೀಸನ್ 3 ಟೂರ್ನಿಯ ಮೊದಲನೇ ಪಂದ್ಯ ವಡೋದರದಲ್ಲಿ ಇಂದಿನಿಂದ ಆರಂಭವಾಗಲಿದೆ. ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಬಾರಿಯ ಟೂರ್ನಿಯಲ್ಲೂ ಒಟ್ಟು 5 ತಂಡಗಳು ಕಣಕ್ಕಿಳಿಯಲಿದೆ. ಇನ್ನು ಈ ಪಂದ್ಯದಲ್ಲಿ ಆರ್‌ಸಿಬಿಯೇ ಪಂದ್ಯ ಗೆಲ್ಲುವ ಫೆವರೀಟ್ ಟೀಂ. ಇದಕ್ಕೂ ಮುನ್ನ ಉಭಯ ತಂಡಗಳು ಒಟ್ಟು ಐದು ಬಾರಿ ಮುಖಾಮುಖಿ ಆಗಿದ್ದವು. ಈ ವೇಳೆ ಆರ್‌ಸಿಬಿ ಮೂರು ಪಂದ್ಯಗಳನ್ನು ಗೆದ್ದಿದೆ. ಸೋ ಇಂದಿನ ಪಂದ್ಯದಲ್ಲೂ ಸ್ಮೃತಿ ಮಂದಾನ ನಾಯಕತ್ವದ ಬೆಂಗಳೂರು ತಂಡವೇ ಗೆಲ್ಲೋ ಫೇವರೆಟ್ ಟೀಂ ಎನಿಸಿಕೊಂಡಿದೆ.
ಇದನ್ನೂ ಓದಿ : ಕೊಹ್ಲಿ ಶ್ರೀಕೃಷ್ಣ, ಪಾಟೀದಾರ್ ಅರ್ಜುನ – ಆರ್‌ಸಿಬಿ ನೂತನ ನಾಯಕನಿಗೆ ಕೊಹ್ಲಿ ಶುಭ ಹಾರೈಕೆ
ಆರ್‌ಸಿಬಿ ತಂಡಕ್ಕೆ ಸ್ಟಾರ್ ಆಟಗಾರ್ತಿಯರ ದಂಡೇ ಇದೆ. ಟಾಪ್ ಆರ್ಡರ್‌ನಲ್ಲಿ ಭಾರತೀಯ ಆಟಗಾರ್ತಿ ಸ್ಮೃತಿ ಮಂದಾನ ಹಾಗೂ ಇಂಗ್ಲೆಂಡ್ ಡ್ಯಾನಿ ವ್ಯಾಟ್ ತಂಡಕ್ಕೆ ಆಧಾರವಾಗಬಲ್ಲ ಆಟಗಾರ್ತಿಯರು. ಇನ್ನು ಆರ್‌ಸಿಬಿ ತಂಡದಲ್ಲಿರುವ ಸ್ಟಾರ್ ಆಲ್‌ರೌಂಡರ್ ಎಲ್ಲಿಸಾ ಪೆರ್ರಿ ಮೇನ್ ಸ್ಟ್ರೆಂಥ್. ಮಿಡಲ್ ಆರ್ಡರ್‌ನಲ್ಲಿ ಬ್ಯಾಟಿಂಗ್ ಮಾಡಿ, ಬೌಲಿಂಗ್ ಸಹ ಮಾಡುವ ಪ್ಲೇಯರ್. ವಿಕೆಟ್ ಕೀಪರ್ ರಿಚಾ ಘೋಷ್ ಹಾಗೂ ರಾಘ್ವಿ ಬಿಸ್ಟ್ ಮೇಲೆಯೂ ಹೆಚ್ಚಿನ ಭರವಸೆಗಳನ್ನ ಇಟ್ಟುಕೊಳ್ಳಲಾಗಿದೆ. ಹಾಗೇ ಆರ್ಸಿಬಿಯ ಬೌಲಿಂಗ್ ವಿಭಾಗ ಸಹ ಬಲಿಷ್ಠವಾಗಿದೆ. ಕನಿಕಾ ಅಹುಜಾ, ರೇಣುಕಾ ಸಿಂಗ್ ಜೊತೆ ಕನ್ನಡತಿ ಶ್ರೇಯಾಂಕಾ ಪಾಟೀಲ್ ಸಹ ತಮ್ಮ ಸ್ಪಿನ್ ಮೋಡಿಯಿಂದ ಎದುರಾಳಿ ಬ್ಯಾಟರ್‌ಗಳಿಗೆ ಬೆವರಿಳಿಸಬಲ್ಲರು.
ಇನ್ನು ಟೂರ್ನಿ ಆರಂಭಕ್ಕೂ ಮುನ್ನವೇ ಬೆಂಗಳೂರು ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ಆಶಾ ಸೋಭಾನ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಈ ಬಗ್ಗೆ ಆರ್‌ಸಿಬಿ ಫ್ರಾಂಚೈಸಿಯೇ ತಮ್ಮ ಸೋಶಿಲ್ ಮೀಡಿಯಾ ಮೂಲಕ ಅಪ್ಡೇಟ್ ನೀಡಿದೆ. ಚಾಂಪಿಯನ್ ಆಲ್‌ರೌಂಡರ್ ಆಶಾ ಶೋಭನಾ ಮಹಿಳಾ ಪ್ರೀಮಿಯರ್ ಲಿಗ್ 2025ರಿಂದ ಹೊರಗುಳಿದಿದ್ದಾರೆ. ಅವರ ಮೊಣಕಾಲಿನ ಗಾಯದ ಸಮಸ್ಯೆಯನ್ನು ಎದುರಿಸುತಿದ್ದಾರೆ ಎಂದು ಆರ್‌ಸಿಬಿ ತಿಳಿಸಿದೆ. ಅಲ್ಲದೆ ಈ ಆಟಗಾರ್ತಿಯ ಬದಲಿಗೆ ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ನುಜತ್ ಪರ್ವೀನ್ ತಂಡ ಸೇರಿದ್ದಾರೆ. ಭಾರತದ ಭರವಸೆಯ ಆಲ್‌ರೌಂಡರ್ ಆಶಾ ಶೋಭನಾ ಲೀಗ್‌ನ ಅತ್ಯಂತ ಯಶಸ್ವಿ ಆಟಗಾರ್ತಿಯರಲ್ಲಿ ಒಬ್ಬರು. ಇವರು ಆರ್‌ಸಿಬಿ ಪರ 15 ಪಂದ್ಯಗಳನ್ನು ಆಡಿದ್ದು 17 ವಿಕೆಟ್ ಕಬಳಿಸಿದ್ದಾರೆ.
WPL-2025ರಲ್ಲಿ ಒಟ್ಟು 5 ತಂಡಗಳು ಭಾಗವಹಿಸುತ್ತಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಮತ್ತು ಯುಪಿ ವಾರಿಯರ್ಸ್ ತಂಡಗಳು. ಒಟ್ಟು 22 ಪಂದ್ಯಗಳು ನಡೆಯಲಿವೆ. ಆ ಪೈಕಿ 20 ಪಂದ್ಯಗಳು ಗುಂಪು ಹಂತದಲ್ಲಿರುತ್ತವೆ. ಪ್ರತಿ ತಂಡವು ಇತರ 4 ತಂಡಗಳ ವಿರುದ್ಧ ಎರಡು ಬಾರಿ ಆಡಲಿವೆ. ಗುಂಪು ಹಂತದಲ್ಲಿ ನಂಬರ್-1 ಆಗಿ ಹೊರಹೊಮ್ಮಿದ ತಂಡ ನೇರವಾಗಿ ಫೈನಲ್‌ಗೆ ಹೋಗುತ್ತದೆ. ಎರಡನೇ ಮತ್ತು ಮೂರನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್ ಪಂದ್ಯ ಆಡುತ್ತವೆ. ಇಲ್ಲಿ ಗೆದ್ದವರು ಫೈನಲ್ ಪ್ರವೇಶ ಮಾಡುತ್ತವೆ. ಮಾರ್ಚ್ 15ರಂದು ಫೈನಲ್ ಪಂದ್ಯ ನಡೆಯಲಿದೆ.