ಇಂದು WPL ಫೈನಲ್‌ – RCB VS DC ಕಾದಾಟದಲ್ಲಿ ಗೆಲ್ಲೋದ್ಯಾರು?

ಇಂದು WPL ಫೈನಲ್‌ – RCB VS DC ಕಾದಾಟದಲ್ಲಿ ಗೆಲ್ಲೋದ್ಯಾರು?

ಬಹುನಿರೀಕ್ಷಿತ 2026ರ ಮಹಿಳಾ ಪ್ರೀಮಿಯರ್‌ ಲೀಗ್‌   ಟೂರ್ನಿಯ ಫೈನಲ್‌ ಪಂದ್ಯಕ್ಕೆ ಇನ್ನ ಕೆಲವೇ ಗಂಟೆಗಳು ಬಾಕಿ ಇವೆ. ಇಲ್ಲಿನ ಬಿಸಿಎ ಕ್ರೀಡಾಂಗಣದಲ್ಲಿ ಸಜ್ಜಾಗುತ್ತಿರುವ ವೇದಿಕೆಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು  ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌  ತಂಡಗಳು ಕಾದಾಟ ನಡೆಸಲಿವೆ. ಸ್ಮೃತಿ ಮಂಧಾನಾ ನಾಯಕತ್ವದ ಆರ್‌ಸಿಬಿ ವನಿತೆಯರು ಡೆಲ್ಲಿಯನ್ನು ಮಣಿಸಿ ಎರಡನೇ ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲು ಎದುರು ನೋಡುತ್ತಿದ್ದರೆ, ಜೆಮಿಮಾ ರೊಡ್ರಿಗಸ್‌ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್‌, ಮೂರು ಬಾರಿ ಫೈನಲ್‌ ಸೋಲಿನಿಂದ ಹೊರಬಂದು ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲು ಕಾಯುತ್ತಿದೆ.

ಇದು ಡಬ್ಲ್ಯುಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ಮತ್ತು ಡಿಸಿ ತಂಡಗಳುು ಮುಖಾಮುಖಿಯಾಗುವ ಎರಡನೇ ಸಂದರ್ಭವಾಗಿದೆ. ಮೊದಲ ಬಾರಿ 2024ರಲ್ಲಿ ನಡೆದಿದ್ದು, ಆ ಪಂದ್ಯದಲ್ಲಿ ಆರ್‌ಸಿಬಿ ಎಂಟು ವಿಕೆಟ್‌ಗಳ ಜಯದೊಂದಿಗೆ ತನ್ನ ಮೊದಲ ಪ್ರಶಸ್ತಿಯನ್ನು ಗೆದ್ದಿತ್ತು. ಇತ್ತ ಡೆಲ್ಲಿ ತಂಡವು ಎಲ್ಲಾ ನಾಲ್ಕು ಫೈನಲ್‌ಗಳಿಗೆ ಪ್ರವೇಶ ಪಡೆದಿದ್ದರೂ, ಇನ್ನೂ ತನ್ನ ಮೊದಲ ಡಬ್ಲ್ಯುಪಿಎಲ್ ಪ್ರಶಸ್ತಿಗಾಗಿ ಎದುರು ನೋಡುತ್ತಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌! – ಪಿಂಕ್ ಲೈನ್ ಮೆಟ್ರೋಗೆ ಬಂತು ಇನ್ನೊಂದು ರೈಲು

ಪ್ರಸಕ್ತ ಆವೃತ್ತಿಯ ಲೀಗ್ ಹಂತದ ಆರು ಪಂದ್ಯಗಳ ಜಯದಿಂದ 12 ಪಾಯಿಂಟ್‌ಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ ಹಿನ್ನೆಲೆಯಲ್ಲಿ ಆರ್‌ಸಿಬಿ ವನಿತೆಯರು, ಫೈನಲ್‌ಗೆ ನೇರವಾಗಿ ಪ್ರವೇಶ ಮಾಡಿದ್ದಾರೆ. ಯುಪಿ ವಾರಿಯರ್ಸ್ ವಿರುದ್ಧ ಲೀಗ್ ಹಂತದ ಪಂದ್ಯದಲ್ಲಿ ಎಂಟು ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ.

ಫೈನಲ್‌ ಪಂದ್ಯದವರೆಗೂ ಆರ್‌ಸಿಬಿ ತಂಡವನ್ನು ಮುಂಭಾಗದಿಂದ ಮುನ್ನಡೆಸಿದವರು ಸ್ಮೃತಿ ಮಂಧಾನಾ. ಅವರು ಎಂಟು ಪಂದ್ಯಗಳಲ್ಲಿ 48.33ರ ಸರಾಸರಿಯೊಂದಿಗೆ 290 ರನ್ ಗಳಿಸಿದ್ದಾರೆ. ನದಿನ್ ಡಿ ಕ್ಲರ್ಕ್ ಅವರ ಪ್ರದರ್ಶನ ಆರ್‌ಸಿಬಿ ತಂಡದ ಬೌಲಿಂಗ್‌ನಲ್ಲಿ ಹೈಲೈಟ್ ಆಗಿದ್ದು, ಅವರು 13.53ರ ಸರಾಸರಿ ಮತ್ತು 7.25ೆ ಎಕನಾಮಿ ರೇಟ್‌ನೊಂದಿಗೆ 15 ವಿಕೆಟ್‌ಗಳನ್ನು ಪಡೆದಿದ್ದಾರೆ.

ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ, ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನನೊಂದಿಗೆ ಲೀಗ್‌ ಹಂತವನ್ನು ಮುಗಿಸಿ ಎಲಿಮಿನೇಟರ್‌ ಪಂದ್ಯಕ್ಕೆ ಅರ್ಹತೆ ಪಡೆದಿತ್ತು. ಅದರಂತೆ ಎಲಿಮಿನೇಟರ್‌ನಲ್ಲಿಯೂ ಬಲಿಷ್ಠ ಗುಜರಾತ್ ಜಯಂಟ್ಸ್‌ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿ ಫೈನಲ್‌ಗೆ ನಾಲ್ಕನೇ ಬಾರಿ ಅರ್ಹತೆ ಪಡೆದಿತ್ತು. ಎಲಿಮಿನೇಟರ್‌ನಲ್ಲಿ 23 ಎಸೆತಗಳಲ್ಲಿ 41 ರನ್‌ಗಳ ವೇಗದ ಪ್ರದರ್ಶನಕ್ಕೆ ಜೆಮಿಮಾ ರೊಡ್ರಿಗಸ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಈ ಸೀಸನ್‌ನಲ್ಲಿ ಡಿಸಿ ತಂಡದ ಪ್ರಮುಖ ಬ್ಯಾಟರ್‌ ಲಿಝೆಲ್‌ ಲೀ, ಇವರು 31.44ರ ಸರಾಸರಿ ಮತ್ತು 141.50ರ ಸ್ಟ್ರೈಕ್‌ ರೇಟ್‌ನಲ್ಲಿ 283 ರನ್ ಗಳಿಸಿದ್ದಾರೆ. ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಅವರು ಆರ್‌ಸಿಬಿ ಸ್ಮೃತಿ ಮಂಧಾನಾ ನಂತರ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇನ್ನು ಡೆಲ್ಲಿ ಬೌಲಿಂಗ್ ವಿಭಾಗವನ್ನು ನಂದಿನಿ ಶರ್ಮಾ ಮುನ್ನಡೆಸಲಿದ್ದಾರೆ. ಅವರು 16 ವಿಕೆಟ್‌ಗಳೊಂದಿಗೆ ಪರ್ಪಲ್ ಕ್ಯಾಪ್ ರೇಸ್‌ನಲ್ಲಿದ್ದಾರೆ. ಗುಜರಾತ್ ಜಯಂಟ್ಸ್‌ ತಂಡದ ಸೋಫಿ ಡೆವೈನ್ ಒಂದು ವಿಕೆಟ್ ಜಾಸ್ತಿ ಪಡೆದಿದ್ದಾರೆ.

Kishor KV