RCBಗೆ 2ನೇ ಕಪ್ ಫಿಕ್ಸ್ – DCಗೆ 4ನೇ ಸಲ ಮಿಸ್?
ಮಂದಾನ Vs ಜೆಮಿಮಾ

RCBಗೆ 2ನೇ ಕಪ್ ಫಿಕ್ಸ್ – DCಗೆ 4ನೇ ಸಲ ಮಿಸ್?ಮಂದಾನ Vs ಜೆಮಿಮಾ

ಸತತ ನಾಲ್ಕನೇ ಬಾರಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಫೈನಲ್​ಗೆ ಲಗ್ಗೆ ಇಟ್ಟಿದೆ. ಡಬ್ಲ್ಯೂಪಿಎಲ್ ಇತಿಹಾಸದಲ್ಲಿ ಒನ್ ಆಫ್ ದಿ ಮೋಸ್ಟ್ ಕನ್ಸಿಸ್ಟೆನ್ಸಿ ಟೀಂ ಆಗಿ ಡೆಲ್ಲಿ ಪಡೆ ಚಾಂಪಿಯನ್ ಸುತ್ತಿಗೆ ಕಾಲಿಟ್ಟಿದೆ. ಬ್ಯಾಡ್ ಲಕ್ ಅಂದ್ರೆ ಕಂಟಿನ್ಯೂಯಸ್ ಆಗಿ ಪ್ರಶಸ್ತಿ ವಂಚಿತರಾಗಿರೋ ಡೆಲ್ಲಿ ಈಗ ಅದೃಷ್ಟ ಪರೀಕ್ಷೆಗೆ ಇಳಿದಿದೆ. ಡಬ್ಲ್ಯೂಪಿಎಲ್ ಇತಿಹಾಸದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ್ತಿಯರು ಇತಿಹಾಸ ಸೃಷ್ಟಿಸಿದೆ. ಸತತ ನಾಲ್ಕನೇ ಬಾರಿಗೆ ಫೈನಲ್​ಗೆ ಲಗ್ಗೆ ಇಟ್ಟಿದ್ದಾರೆ. ನಾಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಌಂಡ್ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಚಾಂಪಿಯನ್ ಫೈಟ್ ನಡೆಯಲಿದ್ದು ಹೊಸ ಚಾಂಪಿಯನ್​ನ ಉದಯವಾಗಲಿದೆ. ಹಾಗೇ ಈ ಪಂದ್ಯ ಆರ್​ಸಿಬಿ ನಾಯಕಿ ಸ್ಮೃತಿ ಮತ್ತು ಡೆಲ್ಲಿ ನಾಯಕಿ ಜೆಮಿನಾ ನಡುವಿನ ವಾರ್​ನಂತೆಯೇ ಬಿಂಬಿತವಾಗ್ತಿದೆ.

ಇದನ್ನೂ ಓದಿ : ಫೈನಲ್‌ಗೆ ಡೆಲ್ಲಿಎಂಟ್ರಿ – RCB VS DCಯಲ್ಲಿ ಗೆಲ್ಲೋದ್ಯಾರು?

ಗುಜರಾತ್ ಮಣಿಸಿ 4ನೇ ಸಲ ಫೈನಲ್ ಗೇರಿದ ಡೆಲ್ಲಿ!

ಮಂಗಳವಾರ ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವೆ ಎಲಿಮಿನೇಟರ್ ಪಂದ್ಯ ನಡೆದಿದೆ. ಈ ಪಂದ್ಯದಲ್ಲಿ ದೆಹಲಿ ತಂಡ ಗುಜರಾತ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿ ಫೈನಲ್‌ಗೆ ಟಿಕೆಟ್ ಪಡೆದಿದೆ. ಎಲಿಮಿನೇಟರ್ ಮ್ಯಾಚಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಜೆಮಿಮಾ ರೊಡ್ರಿಗಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಗುಜರಾತ್ ಜೈಂಟ್ಸ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 168 ರನ್​ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಪರ ಲಿಝಿಲ್ ಲೀ 43 ರನ್ ಬಾರಿಸಿದರೆ, ಶಫಾಲಿ ವರ್ಮಾ 31 ರನ್ ಚಚ್ಚಿದ್ದರು. ಜೆಮಿಮಾ ರೊಡ್ರಿಗಸ್ 41 ರನ್​ ಕಲೆ ಹಾಕಿದ್ರು. ಈ ಮೂಲಕ 15.4 ಓವರ್​ಗಳಲ್ಲಿ 169 ರನ್​ಗಳಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸತತ 4ನೇ ಬಾರಿಗೆ ಫೈನಲ್​ಗೆ ಎಂಟ್ರಿ ಕೊಡ್ತು.

ಪ್ರತೀ ಸೀಸನ್ ನಲ್ಲೂ ಫೈನಲ್ ಗೇರಿದ ತಂಡವೆಂಬ ದಾಖಲೆ!

ಗುಜರಾತ್ ವಿರುದ್ಧದ ಗೆಲುವಿನೊಂದಿಗೆ ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಪ್ರತಿ ಸೀಸನ್​ನಲ್ಲೂ ಫೈನಲ್​ಗೇರಿದ ತಂಡ ಎಂಬ ದಾಖಲೆ ಡೆಲ್ಲಿ ಪಾಲಾಗಿದೆ. 2023, 2024 ಮತ್ತು 2025 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಫೈನಲ್ ಆಡಿತ್ತು. ಬಟ್ ಮೂರು ಬಾರಿಯೂ ರನ್ನರ್ ಅಪ್ ಆಗಿದೆ. ಈ ಮೂಲಕ ಎಲ್ಲಾ ಸೀಸನ್​ಗಳಲ್ಲೂ ಫೈನಲ್​ಗೇರಿದ ಏಕೈಕ ತಂಡ ಎನಿಸಿಕೊಂಡಿದೆ. ಗುರುವಾರ ಅಂದ್ರೆ ನಾಳೆ ನಡೆಯಲಿರುವ ಫೈನಲ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ಟ್ರೋಫಿಗಾಗಿ ಅಖಾಡಕ್ಕಿಳಿಯಲಿದೆ.

ಡೈರೆಕ್ಟ್ ಫೈನಲ್ ಗೇರಿದ ಆರ್ ಸಿಬಿ ಕಪ್ ಬಿಟ್ಟುಕೊಡ್ತಾರಾ?

ಇನ್ನು 2024ರಲ್ಲಿ ಚಾಂಪಿಯನ್ ಆಗಿದ್ದ ಆರ್​ಸಿಬಿ ಈ ಸಲವೂ ಟ್ರೋಫಿ ಗೆಲ್ಲೋ ಫೇವರೆಟ್ ಟೀಂ ಆಗಿದೆ. ಲೀಗ್ ಹಂತದಲ್ಲಿ ಸತತ ಐದು ಪಂದ್ಯ ಗೆದ್ದು ಪ್ಲೇಆಫ್​ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದ ಆರ್​ಸಿಬಿ ಆ ನಂತ್ರ 2 ಪಂದ್ಯ ಸೋತ್ರೂ ಕೊನೇ ಪಂದ್ಯ ಗೆದ್ದು ಡೈರೆಕ್ಟ್ ಫೈನಲ್​ಗೇರಿದ್ದಾರೆ. ಌಂಡ್ ಬೆಂಗಳೂರು ತಂಡದ ಬ್ಯಾಟಿಂಗ್, ಬೌಲಿಂಗ್ ಬೊಂಬಾಟ್ ಆಗಿದ್ದು ಈ ಸಲ ಕಪ್ ಗೆಲ್ಲೋ ಫೇವರೆಟ್ ಟೀಂ ಆಗಿದೆ. ಬೌಲಿಂಗ್​ನಲ್ಲಂತೂ ಲಾರೆನ್ ಬೆಲ್ ಡಾಟ್ ಬಾಲ್​ಗಳೇ ಹೈಲೆಟ್ ಆಗಿವೆ. ಹಾಗಂತ ಡೆಲ್ಲಿ ಪಡೆಯನ್ನೂ ಈಸಿಯಾಗಿ ತಗೊಳ್ಳೋಕೆ ಆಗಲ್ಲ. ಯಾಕಂದ್ರೆ ಲೀಗ್ ಹಂತದಲ್ಲಿ ಜನವರಿ 24ರಂದು ಆರ್​ಸಿಬಿಯನ್ನ ಸೋಲಿಸಿದೆ. ಅದೂ ಕೂಡ ಜಸ್ಟ್ 109 ರನ್​ಗಳಿಗೆ ಕಟ್ಟಿಹಾಕಿದ್ದನ್ನ ಮರೆಯೋಕಾಗಲ್ಲ. ಹೀಗಾಗಿ ಫೈನಲ್ ಪಂದ್ಯದಲ್ಲಿ ಆರ್​ಸಿಬಿ ಮತ್ತಷ್ಡು ಗೇಮ್​ಪ್ಲ್ಯಾನ್​ನಲ್ಲೇ ಕಣಕ್ಕಿಳಿಬೇಕಿದೆ. ಌಂಡ್ ಸ್ಮೃತಿ ಮತ್ತು ಜೆಮಿಮಾ ಬೆಸ್ಟ್ ಫ್ರೆಂಡ್ಸ್ ಆಗಿದ್ದು ಯಾರಿಗೆ ಟ್ರೋಫಿ ಗೆಲುವಿನ ಕಿರೀಟ ನೋಡ್ಬೇಕು.

Shantha Kumari