ಡೆಲ್ಲಿ ಬೇಟೆಗೆ RCB ರೆಡಿ – ಗೆದ್ದವರ ಗುದ್ದಾಟದಲ್ಲಿ ಸೋಲೋದ್ಯಾರು?

 ಡೆಲ್ಲಿ ಬೇಟೆಗೆ RCB ರೆಡಿ – ಗೆದ್ದವರ ಗುದ್ದಾಟದಲ್ಲಿ ಸೋಲೋದ್ಯಾರು?

ಮೊದಲನೇ ಪಂದ್ಯದಲ್ಲಿ ಇತಿಹಾಸ ಸೃಷ್ಟಿಸಿ ಗೆದ್ದಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಿಂಹಿಣಿಯರು ಈಗ ಎರಡನೇ ಫೈಟ್​​ಗೆ ಸಜ್ಜಾಗಿದ್ದಾರೆ.  ಆರ್‌ಸಿಬಿ ಆರಂಭಿಕ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ವಿರುದ್ಧ ದಾಖಲೆಯ 202 ರನ್‌ ಬೆನ್ನತ್ತಿ ಗೆಲುವು ಸಾಧಿಸಿತ್ತು. ಇದೀಗ ದೆಹಲಿ ವಿರುದ್ಧವೂ ಗೆಲುವಿನ ಪತಾಕೆ ಹಾರಿಸೋಕೆ ಸರ್ವಸನ್ನದ್ಧವಾಗಿದ್ದಾರೆ. ಆದ್ರೆ ಡಿಸಿಯನ್ನ ಬಗ್ಗು ಬಡಿಯೋದು ಅಷ್ಟು ಸುಲಭವಿಲ್ಲ. ಮುಂಬೈ ಇಂಡಿಯನ್ಸ್‌ ವಿರುದ್ಧ ಕೊನೆ ಎಸೆತದಲ್ಲಿ ರೋಚಕ ಗೆಲುವು ಸಾಧಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ಕೂಡಾ ಸತತ 2ನೇ ಗೆಲುವಿನ ಕಾತರದಲ್ಲಿದೆ. ಉಭಯ ತಂಡಗಳು ಬಲಿಷ್ಠವಾಗಿದ್ದು ಸೋ ಇಂದಿನ ಪಂದ್ಯ ಹೈವೋಲ್ಟೇಜ್​ನಿಂದ ಕೂಡಿರಲಿದೆ. ಅದ್ರಲ್ಲೂ ವಡೋಧರಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿಯೇ ಪಂದ್ಯ ಗೆಲ್ಲುವ ಹಾಟ್‌ ಫೆವರೀಟ್ ತಂಡ ಎನಿಸಿಕೊಂಡಿದೆ.

ಇದನ್ನೂ ಓದಿ : IPLಗೂ ಸ್ಟಾರ್ ಪ್ಲೇಯರ್ಸ್ ಮಿಸ್ಸಿಂಗ್ – ಬುಮ್ರಾ, ಲಾಕಿ, ಕಮಿನ್ಸ್.. ಯಾರೆಲ್ಲಾ?

ಡಬ್ಲ್ಯೂಪಿಎಲ್​ನ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದರೂ ಕೂಡ ತಂಡದ ಪರ ಆರಂಭಿಕ ಆಟಗಾರ್ತಿಯರು ರನ್ ಕಲೆ ಹಾಕುವಲ್ಲಿ ಎಡವಿದ್ದರು. ನಾಯಕಿ ಸ್ಮೃತಿ ಮಂಧನಾ ಹಾಗೂ ಡೈನಿ ವೈಟ್‌ ಒಂದಂಕಿಗೆ ವಿಕೆಟ್ ಒಪ್ಪಿಸಿದ್ರು. ಸೋ ಇವತ್ತಿನ ಪಂದ್ಯದಲ್ಲಿ ಇವ್ರಿಬ್ಬರ ಮೇಲೆ ಬಾರೀ ನಿರೀಕ್ಷೆಗಳನ್ನ ಇಟ್ಟುಕೊಳ್ಳಲಾಗಿದೆ. ಇನ್ನು ಅಭಿಮಾನಿಗಳ ಚೆರ್ರಿ ಚೆರ್ರಿ ಲೇಡಿ ಎಲ್ಲಿಸ್ ಪೆರ್ರಿ ಕಳೆದ ಪಂದ್ಯದಲ್ಲಿ ಫಿಫ್ಟಿ ಬಾರಿಸಿದ್ದು ಈ ಮ್ಯಾಚ್​ನಲ್ಲೂ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ಕೊಡಬಹುದು. ಇನ್ನು ಮಧ್ಯಮ ಕ್ರಮಾಂಕದಲ್ಲಿ ರಾಘ್ವಿ ಬಿಷ್ತಾ, ಕನಿಕಾ ಅಹುಜಾ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಬೇಕಿದೆ. ಅದೆಲ್ಲಿಕ್ಕಿಂತ ಹೆಚ್ಚಾಗಿ ಕಳೆದ ಪಂದ್ಯದಲ್ಲಿ ಬಿರುಗಾಳಿ ಎಬ್ಬಿಸಿದ್ದ ವಿಕೆಟ್ ಕೀಪರ್ ಬ್ಯಾಟ್ಸ್ ವುಮೆನ್ ಆಗಿರೋ ರಿಚಾ ಘೋಷ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ರಿಚಾ ಕಳೆದ ಪಂದ್ಯದಲ್ಲಿ 27 ಎಸೆತಗಳಲ್ಲೇ 64 ರನ್ ಸಿಡಿಸಿ ಅಬ್ಬರಿಸಿದ್ದರು. ಇವ್ರ ಜೊತೆಗೆ ಬೌಲರ್​ಗಳಾದ ರೇಣುಕಾ ಸಿಂಗ್, ವಿಜೆ ಜೋಶಿತಾ, ಪ್ರೇಮಾ ರಾವತ್ ರನ್ ಕಟ್ಟಿ ಹಾಕಿದ್ರೆ ಮತ್ತೊಂದು ಗೆಲುವು ನಮ್ಮದೇ ಆಗಲಿದೆ.

ಮತ್ತೊಂದೆಡೆ ಮುಂಬೈ ಇಂಡಿಯನ್ಸ್‌ ವಿರುದ್ಧದ ಲೀಗ್‌ ಹಂತದ ಮೊದಲ ಪಂದ್ಯದಲ್ಲಿ ರೋಚಕ ಗೆಲುವು ದಾಖಲಿಸಿರುವ ಡೆಲ್ಲಿ, ಎರಡನೇ ಗೆಲುವಿನ ನಿರೀಕ್ಷೆಯಲ್ಲಿದೆ. ಬಟ್ ಡೆಲ್ಲಿ ಆಟಗಾರ್ತಿಯರು ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ನಲ್ಲಿ ಫೇಲ್ಯೂರ್ ಆಗಿದ್ದಾರೆ. ಶಫಾಲಿ ವರ್ಮಾರನ್ನ ಬಿಟ್ರೆ ಉಳಿದವರು ಯಾರು ರನ್ ಸ್ಕೋರ್ ಮಾಡ್ಲಿಲ್ಲ. ಕನ್ನಡತಿ ನಿಕಿ ಪ್ರಸಾದ್ 35 ರನ್ ಗಳಿಸಿ ಸೆಕೆಂಡ್ ಹೈಯೆಸ್ಟ್ ಸ್ಕೋರರ್ ಎನಿಸಿಕೊಂಡಿದ್ರು.  ಉಳಿದಂತೆ ಸ್ಟಾರ್ ಆಟಗಾರ್ತಿಯರು ಕಮ್ ಬ್ಯಾಕ್ ಮಾಡ್ಬೇಕಿದೆ. ಇನ್ನು ಬೌಲಿಂಗ್‌ನಲ್ಲಿ ಅನ್ನಾಬೆಲ್ ಸದರ್ಲ್ಯಾಂಡ್ ಹಾಗೂ ಶಿಖಾ ಪಾಂಡೆ ಆರ್​ಸಿಬಿ ಬ್ಯಾಟರ್ಸ್​ನ ಕಾಡಬಹುದು.ಸದ್ಯ ಕಳೆದ ಎರಡೂ ಸೀಸನ್​ಗಳಲ್ಲಿ ಫೈನಲಿಸ್ಟ್ ಆಗಿರೋ ಡೆಲ್ಲಿ ಆಟಗಾರ್ತಿಯರು ಈ ಸಲ ಕಪ್​ಗೆ ಮುತ್ತಿಕ್ಕೋ ಟಾರ್ಗೆಟ್ ಇಟ್ಕೊಂಡಿದ್ದಾರೆ. 2023ರ ಫೈನಲ್​ನಲ್ಲಿ ಮುಂಬೈ ಇಂಡಿಯನ್ಸ್ ಕಪ್ ಗೆದ್ರೆ 2024ರ ಟೂರ್ನಿಯಲ್ಲಿ ಬೆಂಗಳೂರು ವಿನ್ ಆಗಿತ್ತು. ಎರಡೂ ಸೀಸನ್​ಗಳಲ್ಲೂ ಡೆಲ್ಲಿ ಲಾಸ್ಟ್ ಮೂಮೆಂಟ್​ನಲ್ಲಿ ಎಡವಿತ್ತು.

ಇನ್ನು ಆರ್​ಸಿಬಿ ಅಭಿಮಾನಿಗಳ ಕ್ರಶ್, ಟಗರು ಪುಟ್ಟಿ ಶ್ರೇಯಾಂಕಾ ಪಾಟೀಲ್ ಈ ಸಲ ಟೂರ್ನಿಯಿಂದಲೇ ಔಟ್ ಆಗಿದ್ದಾರೆ. ಕಳೆದ ಸೀಸನ್​ನಲ್ಲಿ ಅಬ್ಬರಿಸಿದ್ದ ಶ್ರೇಯಾಂಕ ಪಾಟೀಲ್​ ಶುಕ್ರವಾರ ನಡೆದಿದ್ದ ಗುಜರಾತ್ ವಿರುದ್ಧದ ಪಂದ್ಯದಲ್ಲೂ ಆಡಿರಲಿಲ್ಲ. ಇದೀಗ ಅವರ ಬದಲಿಗೆ ಆರೌಂಡರ್ ಸ್ನೇಹ್ ರಾಣಾ ಆರ್‌ಸಿಬಿ ಸೇರ್ಪಡೆಗೊಂಡಿದ್ದಾರೆ. ಕಳೆದ ವರ್ಷ ಗುಜರಾತ್ ಜೈಂಟ್ಸ್ ಪರ ಆಡಿದ್ದ ರಾಣಾ ಈ ಬಾರಿ ಹರಾಜಿನಲ್ಲಿ ಅನ್​ಸೋಲ್ಡ್ ಆಗಿದ್ದರು. ಇದೀಗ ಬೆಂಗಳೂರು ತಂಡ ರಾಣಾ ಅವರನ್ನು 30 ಲಕ್ಷ ರೂಪಾಯಿಗೆ ಖರೀದಿಸಿದೆ. ಕಳೆದ ವರ್ಷ ಗಾಯದ ಕಾರಣದಿಂದ ಶ್ರೇಯಾಂಕ ಪಾಟೀಲ್ ಏಷ್ಯಾಕಪ್ ಮಿಸ್ ಮಾಡಿಕೊಂಡಿದ್ದರು. ಇನ್ನೂ ಕೂಡ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಕಂಪ್ಲೀಟ್ ಆಗಿ ರಿಕವರಿ ಆಗಲು ಇನ್ನೂ ಒಂದು ತಿಂಗಳು ಬೇಕಾಗುತ್ತದೆ. ಹೀಗಾಗಿ ಟಗರು ಪುಟ್ಟಿಯನ್ನ ಇಡೀ ಸೀಸನ್​ನಿಂದಲೇ ಹೊರಗಿಡಲಾಗಿದೆ. ಇತ್ತೀಚೆಗೆ, ಶ್ರೇಯಾಂಕ ಪಾಟೀಲ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. “ನನ್ನ ಹೃದಯ ಹೊಡೆದಿದೆ, ಆದರೆ ನಾನು ಮತ್ತೆ ಪುಟಿದೇಳುತ್ತೇನೆ” ಎಂಬ ಶೀರ್ಷಿಕೆಯೊಂದಿಗೆ ಅವರು ತೂಗುಯ್ಯಾಲೆಯಲ್ಲಿ ತೂಗಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ರು. ಸೋ ಈ ಇಡೀ ಸೀಸನ್​ ಟಗರು ಪುಟ್ಟಿನ ಆರ್​ಸಿಬಿ ಫ್ಯಾನ್ಸ ್ಮಿಸ್ ಮಾಡಿಕೊಳ್ತಾರೆ.

Shantha Kumari