RCB Vs DC.. ರಿವೇಂಜ್ ಟಾಸ್ಕ್.. ಗೆದ್ರೆ ನಾವೇ ಟೇಬಲ್ ಟಾಪರ್ಸ್ – ಬಲಿಷ್ಠ ತಂಡಗಳಲ್ಲಿ ಯಾರಿಗೆ ಪ್ಲಸ್?

ಚಿನ್ನಸ್ವಾಮಿ ಮೈದಾನದಲ್ಲಿ ರಾಜಸ್ಥಾನದ ವಿರುದ್ಧ ಮೊದಲ ಗೆಲುವಿನ ಜೋಶ್ನಲ್ಲಿರೋ ಆರ್ಸಿಬಿ ಇದೀಗ ಡೆಲ್ಲಿ ವಿರುದ್ಧ ಸೇಡು ತೀರಿಸಿಕೊಳ್ಳೋಕೆ ರೆಡಿಯಾಗಿದೆ. ಬೆಂಗಳೂರಿನ ಸೋಲಿಗೆ ದೆಹಲಿಯಲ್ಲೇ ರಿವೇಂಜ್ ತಗೊಳ್ಳೋದು ನೆಕ್ಸ್ಟ್ ಟಾಸ್ಕ್. ಅಲ್ದೇ ಈ ಪಂದ್ಯದಲ್ಲಿ ಗೆದ್ದವ್ರು ಟೇಬಲ್ ಟಾಪರ್ ಆಗಲಿದ್ದಾರೆ. ಅವೇ ಪಿಚ್ನಲ್ಲಿ ಸೋಲೇ ಕಾಣದ ಆರ್ಸಿಬಿಗೆ ಡೆಲ್ಲಿ ಹೇಗೆ ಸವಾಲಾಗುತ್ತಾ? ಹೋಂ ಪಿಚ್ನಲ್ಲಿ ಕೊಹ್ಲಿ ವಿರಾಟ್ ರೂಪ ತೋರಿಸ್ತಾರಾ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ : ತಂದೆ ಪಾದ ಪೂಜೆ ಮಾಡಿದ ಡ್ರೋನ್.. ಪ್ರತಾಪ್, ಗಗನಾ ಮದ್ವೆ ಆಗ್ತಾರಾ? – ಭರ್ಜರಿ ಬ್ಯಾಚುಲರ್ಸ್‌ನಲ್ಲಿ ಭಾವುಕ ಕ್ಷಣ
ತವರಿನಲ್ಲಿ ಫಸ್ಟ್ ವಿಕ್ಟರಿ ಮೂಲಕ ಆರ್ಸಿಬಿ ಆಟಗಾರರ ಕಾನ್ಫಿಡೆನ್ಸ್ ಮತ್ತಷ್ಟು ಹೆಚ್ಚಾಗಿದೆ. ಇದೀಗ ತವರಿನಿಂದ ಹೊರಗೆ ತಮ್ಮ 10ನೇ ಪಂದ್ಯ ಆಡಲು ರೆಡಿಯಾಗಿದ್ದಾರೆ. ಅದೂ ಕೂಡ ಬೆಂಗಳೂರಿನಲ್ಲೇ ಆರ್ಸಿಬಿಗೆ ಸೋಲಿನ ಶಾಕ್ ಕೊಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ. ಈವರೆಗೆ ತವರಿನಿಂದ ಹೊರಗೆ ಆಡಿರುವ ಎಲ್ಲಾ ಐದು ಪಂದ್ಯಗಳಲ್ಲೂ ಭರ್ಜರಿ ಗೆಲುವು ಸಾಧಿಸಿರುವು ಆರ್ ಸಿಬಿ ಮುಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಬಗ್ಗು ಬಡಿಯೋ ಲೆಕ್ಕಾಚಾರದಲ್ಲಿದ್ದಾರೆ.
ಡೆಲ್ಲಿ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಆರ್ ಸಿಬಿ?
ತವರಿನಿಂದ ಹೊರಗೆ ಬಲಿಷ್ಠ ತಂಡಗಳನ್ನೇ ಬಗ್ಗು ಬಡಿದು ಪಾಯಿಂಟ್ಸ್ ಟೇಬಲ್ನ ಟಾಪರ್ ಲಿಸ್ಟ್ನಲ್ಲಿರೋ ಆರ್ಸಿಬಿ ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಕಣಕ್ಕಿಳಿಯಲಿದೆ. ನಾಳೆ ಸಂಜೆ 7.30ಕ್ಕೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬಲಿಷ್ಠ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಆರ್ಸಿಬಿ ಪಾಲಿಗೆ ತುಂಬಾನೇ ಮಹತ್ವದ್ದು. ಯಾಕೆ ಅನ್ನೋದನ್ನ ಒಂದೊಂದಾಗೇ ಹೇಳ್ತಾ ಹೋಗ್ತೇನೆ ನೋಡಿ.
ಪ್ರತೀಕಾರದ ಪಂದ್ಯ!
- ಹೊರಗಿನ ಪಿಚ್ ನಲ್ಲಿ ಗೆಲುವಿನ ಜರ್ನಿ ಕಂಟಿನ್ಯೂ
- ಬೆಂಗಳೂರಿನ ಸೋಲಿಗೆ ದೆಹಲಿಯಲ್ಲಿ ಪ್ರತೀಕಾರ
- ವಿರಾಟ್ ಕೊಹ್ಲಿ ಹೋಂ ಗ್ರೌಂಡ್ ಅಡ್ವಾಂಟೇಜ್
- ಪಾಯಿಂಟ್ಸ್ ಟೇಬಲ್ ಟಾಪರ್ ಚಾನ್ಸ್
- ಪವರ್ ಪ್ಲೇಗೆ ಮತ್ತಷ್ಟು ಹತ್ತಿರವಾಗುವ ಅವಕಾಶ
ಬೆಂಗಳೂರು ತಂಡಕ್ಕೆ ಡೆಲ್ಲಿ ತಂಡವನ್ನ ಅವ್ರದ್ದೇ ತವರಿನಲ್ಲಿ ಸೋಲಿಸೋದ್ರಿಂದ ಸಾಕಷ್ಟು ಅಡ್ವಾಂಟೇಜ್ಗಳಿವೆ. ಅದ್ರಲ್ಲಿ ನಂಬರ್ 1 ಹೊರಗಿನ ಪಿಚ್ಗಳಲ್ಲಿ ಸೋಲನ್ನೇ ಕಾಣದೆ ಕಂಟಿನ್ಯೂ ಆಗ್ತಿರೋ ಜರ್ನಿ ಹಾಗೇ ಮುಂದುವರಿಯುತ್ತೆ. ಈಗಾಗ್ಲೇ 9 ಪಂದ್ಯಗಳ ಪೈಕಿ 5 ಪಂದ್ಯಗಳನ್ನ ಅವೇ ಪಿಚ್ನಲ್ಲೇ ಆಡಿ ಎಲ್ಲಾ ಪಂದ್ಯಗಳನ್ನೂ ಗೆದ್ದಿದ್ದಾರೆ. ಕೊಲ್ಕತ್ತಾ, ಚೆನ್ನೈ, ಮುಂಬೈ, ರಾಜಸ್ಥಾನ ಹಾಗೇ ಪಂಜಾಬ್ ವಿರುದ್ಧ ಸತತ ಗೆಲುವುಗಳನ್ನ ಕಂಡಿದ್ದಾರೆ. ಸೋ ಇದೇ ಕಾನ್ಫಿಡೆನ್ಸ್ ಕಂಟಿನ್ಯೂ ಆಗ್ಬೇಕು ಅಂದ್ರೆ ಈ ಮ್ಯಾಚ್ ಗೆಲ್ಲಲೇಬೇಕು. ಹಾಗೇ ಬೆಂಗಳೂರಿನಲ್ಲಿ ಏಪ್ರಿಲ್ 10ರಂದು ನಡೆದಿದ್ದ ಐಪಿಎಲ್ನ 24ನೇ ಪಂದ್ಯದಲ್ಲಿ ಉಭಯ ತಂಡಗಳು ಈ ಸೀಸನ್ನಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದ್ವು. ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಆರ್ ಸಿಬಿ 163 ರನ್ ಕಲೆ ಹಾಕಿತ್ತು. ಟಾರ್ಗೆಟ್ ಬೆನ್ನತ್ತಿದ ಡಿಸಿ ಪರ ಕೆಎಲ್ ರಾಹುಲ್ ಅದ್ಭುತ ಪ್ರದರ್ಶನ ನೀಡಿ 17.5ನೇ ಓವರ್ನಲ್ಲೇ ಮ್ಯಾಚ್ ಫಿನಿಶ್ ಮಾಡಿದ್ರು. ಸೋ ಈ ಸೋಲಿಗೆ ರಿವೇಂಜ್ ತೆಗೆದುಕೊಳ್ಬೇಕಿದೆ. ಹಾಗೇ ಮತ್ತೊಂದು ರೀಸನ್ ಅಂದ್ರೆ ದೆಹಲಿಯ ಅರುಣ್ ಜೇಟ್ಲಿ ಮೈದಾನ ವಿರಾಟ್ ಕೊಹ್ಲಿ ಹೋಂ ಪಿಚ್. ಈ ಮೈದಾನದಲ್ಲಿ ಕೊಹ್ಲಿ ವಿರಾಟ ರೂಪ ನೋಡೋಕೆ ಫ್ಯಾನ್ಸ್ ಕಾಯ್ತಿದ್ದಾರೆ. ತವರಿನ ಮೈದಾನದ ಲಾಭ ಪಡೆದು ದೊಡ್ಡ ಇನ್ನಿಂಗ್ಸ್ ನಿರೀಕ್ಷೆಯಲ್ಲಿದ್ದಾರೆ. ಹಾಗೇ ಮತ್ತೊಂದು ಪ್ರಮುಖ ಕಾರಣ ಅಂದ್ರೆ ಡೆಲ್ಲಿ ವಿರುದ್ಧದ ಭಾನುವಾರದ ಪಂದ್ಯದಲ್ಲಿ ಆರ್ಸಿಬಿ ಗೆದ್ರೆ ಟೇಬಲ್ ಟಾಪರ್ ಆಗಲಿದೆ. ಸದ್ಯ ಪಾಯಿಂಟ್ಸ್ ಪಟ್ಟಿಯಲ್ಲಿ ಜಿಟಿ, ಡಿಸಿ ಹಾಗೇ ಆರ್ ಸಿಬಿ ತಲಾ 12 ಅಂಕಗಳೊಂದಿಗೆ ಟಾಪ್ ತ್ರಿ ಪ್ಲೇಸ್ನಲ್ಲಿದ್ದಾರೆ. ನೆಟ್ ರನ್ ರೇಟ್ ಆಧಾರದಲ್ಲಿ ಗುಜರಾತ್ ಫಸ್ಟ್, ಡೆಲ್ಲಿ ಸೆಕೆಂಡ್ ಹಾಗೇ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಒಂದ್ವೇಳೆ ನಾಳಿನ ಮ್ಯಾಚ್ ಆರ್ಸಿಬಿ ಗೆದ್ರೆ 14 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ನಂಬರ್ 1 ಸ್ಥಾನಕ್ಕೇರಲಿದೆ. ಇನ್ನು ಈ ಗೆಲುವು ಎಷ್ಟು ಮುಖ್ಯ ಅನ್ನೋದನ್ನ ಮತ್ತೊಂದು ಕಾರಣ ಪವರ್ ಪ್ಳೇ. ಈಗಾಗ್ಳೇ ಆರ್ಸಿಬಿ 12 ಅಂಕ ಪಡೆದಿದ್ರೂ ಪ್ಲೇಆಫ್ ತಲುಪೋಕೆ ಇನ್ನೂ 2 ಪಂದ್ಯಗಳನ್ನಾದ್ರೂ ಗೆಲ್ಲಲೇಬೇಕು. ಸೋ ಡಿಸಿ ವಿರುದ್ಧ ಗೆದ್ರೆ ಇನ್ನೂ ನಾಲ್ಕು ಪಂದ್ಯಗಳು ಉಳಿಯಲಿವೆ. ಆಗ ಪ್ಲೇಆಫ್ ಹಾದಿ ತುಂಬಾನೇ ಈಸಿಯಾಗುತ್ತೆ. ಈ ಎಲ್ಲಾ ಕಾರಣಗಳಿಂದ ಆರ್ಸಿಬಿಗೆ ಈ ಗೆಲುವು ಬೇಕೇ ಬೇಕಿದೆ. ಒಂದೇ ಕಲ್ಲಿನಲ್ಲಿ ಹಲವು ಹಕ್ಕಿಗಳನ್ನ ಹೊಡೆಯೋಕೆ ಚಾನ್ಸ್ ಸಿಗುತ್ತೆ.
ಗೆಲುವಿನ ಜೋಶ್ ನಲ್ಲಿ ಪೈಪೋಟಿಗೆ ಸಿದ್ಧವಾಗಿವೆ ಉಭಯ ತಂಡಗಳು!
ಈ ಸೀಸನ್ನಲ್ಲಿ ಈ ಎರಡೂ ತಂಡಗಳು ತುಂಬಾನೇ ಬಲಿಷ್ಠವಾಗಿವೆ. ಆರ್ ಸಿಬಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅದ್ಭುತ ಫಾರ್ಮ್ನಲ್ಲಿದೆ. ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಬ್ಯಾಕ್ ಟು ಬ್ಯಾಕ್ ಅರ್ಧಶತಕಗಳನ್ನ ಬಾರಿಸಿದ್ದಾರೆ. ಅಲ್ದೇ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಲುವ ಹಂತದಲ್ಲಿದ್ದ ಪಂದ್ಯವನ್ನು ಆರ್ ಸಿಬಿ ಬೌಲರ್ ಗಳು ಗೆಲ್ಲಿಸಿಕೊಟ್ಟಿದ್ದು ತಂಡದ ಬೌಲಿಂಗ್ ವಿಭಾಗದ ಆತ್ಮವಿಶ್ವಾಸ ಹೆಚ್ಚಿಸಿದೆ. ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದು ಬೀಗಿದ್ದಾರೆ. ಇದೇ ವಿಕ್ಟರಿಯಲ್ಲಿ ತವರಿಗೆ ಮರಳಿದ್ದು, ಅವ್ರೂ ಕೂಡ ಆರ್ ಸಿಬಿ ವಿರುದ್ಧ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಎರಡೂ ತಂಡಗಳಲ್ಲಿ ಸ್ಪೋಟಕ ಬ್ಯಾಟಿಂಗ್ ಪಡೆಯೇ ಇದ್ದು ಹೈಸ್ಕೋರಿಂಗ್ ನಿರೀಕ್ಷೆ ಕೂಡ ಇದೆ.
ಕನ್ನಡಿಗರು Vs ಕನ್ನಡಿಗರ ನಡುವಿನ ಕದನ!
ನಾಳೆ ನಡೆಯೋ ಮ್ಯಾಚ್ ಕನ್ನಡಿಗರಿಗೂ ತುಂಬಾನೇ ಸ್ಪೆಷಲ್ ಆಗಲಿದೆ. ಯಾಕಂದ್ರೆ ಡೆಲ್ಲಿ ಪರ ಕನ್ನಡಿಗರಾದ ಕೆಎಲ್ ರಾಹುಲ್ ಮತ್ತು ಕರುಣ್ ನಾಯರ್ ಕಣಕ್ಕಿಳಿಯುತ್ತಿದ್ದಾರೆ. ಇನ್ನು ಆರ್ ಸಿಬಿ ಪರ ಕನ್ನಡಿಗ ದೇವದತ್ ಪಡಿಕ್ಕಲ್ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಹಾಗೇ ಫೀಲ್ಡಿಂಗ್ ವೇಳೇ ಮನೋಜ್ ಭಾಂಡಗೆ ಕೂಡ ಚಾನ್ಸ್ ಪಡೀತಿದ್ದಾರೆ. ಬೆಂಗಳೂರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕನ್ನಡಿಗ ಕರುಣ್ ನಾಯರ್ ಪ್ಲೇಯಿಂಗ್ 11ನಲ್ಲಿ ಇರಲಿಲ್ಲ. ಬಟ್ ಅರುಣ್ ಜೇಟ್ಲಿ ಮೈದಾನದಲ್ಲಿ ಕರುಣ್ ಮತ್ತು ರಾಹುಲ್ ಜೋಡಿ ಮತ್ತೊಮ್ಮೆ ಅಬ್ಬರಿಸೋಕೆ ರೆಡಿಯಾಗಿದೆ. ಹೀಗಾಗಿ ಕನ್ನಡಿಗರಿಗೆ ಕರ್ನಾಟಕ ಟೀಂ ವರ್ಸಸ್ ಕನ್ನಡಿಗರ ಆಟ ನೋಡೋ ಚಾನ್ಸ್ ಸಿಗಲಿದೆ.
ಪ್ರಸ್ತುತ ಪಾಯಿಂಟ್ಸ್ ಟೇಬಲ್ನಲ್ಲಿ ಡೆಲ್ಲಿ ಎರಡನೇ ಸ್ಥಾನದಲ್ಲಿದ್ರೆ ಆರ್ಸಿಬಿ ಮೂರನೇ ಪ್ಲೇಸ್ನಲ್ಲಿದೆ. ಗೆದ್ದವ್ರು ಸೀದಾ ಟೇಬಲ್ ಟಾಪರ್ ಆಗಲಿದ್ದಾರೆ. ಅಲ್ದೇ ಉಭಯ ತಂಡಗಳೂ ಚೊಚ್ಚಲ ಟ್ರೋಫಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.