CSKಗೆ ಹ್ಯಾಟ್ರಿಕ್ ಸೋಲು ಫಿಕ್ಸ್? – ಚಿನ್ನಸ್ವಾಮಿಯಲ್ಲೂ ಚೆಂಡಾಡ್ತಾರಾ RCB?
ಬೆಂಗಳೂರು Vs ಚೆನ್ನೈ ಟ್ರೋಲ್ ವಾರ್!

CSKಗೆ ಹ್ಯಾಟ್ರಿಕ್ ಸೋಲು ಫಿಕ್ಸ್? – ಚಿನ್ನಸ್ವಾಮಿಯಲ್ಲೂ ಚೆಂಡಾಡ್ತಾರಾ RCB?ಬೆಂಗಳೂರು Vs ಚೆನ್ನೈ ಟ್ರೋಲ್ ವಾರ್!

ಆರ್​​ಸಿಬಿ ಅಂದ್ರೆ ಫ್ಯಾನ್ಸ್​ಗಷ್ಟೇ ಕ್ರೇಜ್ ಅಲ್ಲ.. ಬಿಸಿಸಿಐಗೂ ಫೇವರೆಟ್. ಯಾಕಂದ್ರೆ ಚಿನ್ನದ ಮೊಟ್ಟೆ ಇಡೋ ಕೋಳಿ ಥರ. ಹೀಗಾಗೇ ಬೆಂಗಳೂರು ಮ್ಯಾಚಸ್ ಅಂದ್ರೆ ಆಲ್ಮೋಸ್ಟ್ ವೀಕೆಂಡ್​ನಲ್ಲೇ ಇಡ್ತಾರೆ. ಈ ಸೀಸನ್​ನಲ್ಲಿ ಹೈದ್ರಾಬಾದ್ ವಿರುದ್ಧ ಉದ್ಘಾಟನಾ ಪಂದ್ಯ ಆಡಿ 9ನೇ ದಿನಕ್ಕೆ 2ನೇ ಮ್ಯಾಚ್ ಶೆಡ್ಯೂಲ್ ಮಾಡಿದ್ದಾರೆ. ಸೋ ಆರ್​ಸಿಬಿ ಫ್ಯಾನ್ಸ್ ಅಂತೂ ನಮ್ಮ ರೆಡ್ ಆರ್ಮಿ ಬಾಯ್ಸ್ ಯಾವಾಗ ಅಖಾಡಕ್ಕೆ ಬರ್ತಾರೆ ಅಂತಾ ಕಾಯ್ತಿದ್ದಾರೆ. ಌಂಡ್ ವಿಶೇಷ ಅಂದ್ರೆ ಈ ಮ್ಯಾಚ್ ಇರೋದು ಸಿಎಸ್​ಕೆ ವಿರುದ್ಧ. ಆಲ್ರೆಡಿ ಬ್ಯಾಕ್ ಟು ಬ್ಯಾಕ್ 2 ಮ್ಯಾಚ್ ಸೋತಿರೋ ಸಿಎಸ್​ಕೆ ಈಗ ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿದೆ.

ಇದನ್ನೂ ಓದಿ : 27 ಕೋಟಿ ಕೊಟ್ಟಿದ್ದು ಸುಮ್ಮನೆ ಅಲ್ಲ – ವೈಭವ್ ಆಟ ನೋಡಿ ಕಲೀರಿ ಎಂದು ಪಂತ್‌ಗೆ ವಾರ್ನಿಂಗ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ವರ್ಸಸ್ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ ನಾಳೆ ಅಂದ್ರೆ ಭಾನುವಾರ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಆಲ್ರೆಡಿ ಫ್ಯಾನ್ಸ್ ಅಂತೂ ಫುಲ್ ಎಕ್ಸೈಟ್ ಆಗಿದ್ದಾರೆ. ಒಂದ್ಕಡೆ ಫಸ್ಟ್ ಮ್ಯಾಚ್ ಗೆದ್ದಿರೋ ಆರ್ಸಿಬಿ ಮತ್ತೊಂದೆಡೆ ಸತತ ಸೋಲಿನೊಂದಿಗೆ ಕಾಲಿಡ್ತಿರೋ ಸಿಎಸ್​ಕೆ. ಇಬ್ರೂ ಕೂಡ ಗೆಲುವಿನ ಮೈಂಡ್​ಸೆಟ್​​ನಲ್ಲೇ ಮೈದಾನಕ್ಕೆ ಬರ್ತಾರೆ. ಅದ್ರಲ್ಲೂ ಸಿಎಸ್​ಕೆಗೆ ಹ್ಯಾಟ್ರಿಕ್ ಸೋಲಿನ ಆತಂಕ ಇದೆ. ಬಟ್ ಈ ಪಂದ್ಯದಲ್ಲಿ ಎಂ ಎಸ್ ಧೋನಿ  ಆಡಬಹುದು. ಐಪಿಎಲ್​ಗೂ ಮುನ್ನ 15 ದಿನ ಧೋನಿ ಮ್ಯಾಚಸ್ ಆಡಲ್ಲ ಅಂತಾ ಫ್ರಾಂಚೈಸಿ ಹೇಳಿತ್ತು. ಬಟ್ ಧೋನಿ ಆಲ್ರೆಡಿ ನೆಟ್ಸ್​ನಲ್ಲಿ ಭರ್ಜರಿಯಾಗಿ ಪ್ರಾಕ್ಟೀಸ್ ಮಾಡ್ತಿರೋದ್ರಿಂದ 3ನೇ ಪಂದ್ಯಕ್ಕೆ ಎಂಟರ್ ಆಗಬಹುದು.

ಇತ್ತ ಬೆಂಗಳೂರು ಟೀಂ ಡೇಂಜರಸ್ ಫಾರ್ಮ್​ನಲ್ಲಿದ್ದು ಡಾಮಿನೇಟ್ ಮಾಡೋಕೆ ಕಾಯ್ತಿದೆ. ಆರ್​ಸಿಬಿಯೇ ಗೆಲ್ಲುವಂಥ ಫೇವರೆಟ್ ಟೀಂ ಕೂಡ ಹೌದು. ಇನ್ನು ಆರ್​ಸಿಬಿ ವರ್ಸಸ್ ಸಿಎಸ್​ಕೆ ಮ್ಯಾಚಸ್ ಅಂದ್ಮೇಲೆ ಅಲ್ಲಿ ಟ್ರೋಲ್ ಇರಲೇಬೇಕು. ಆಲ್ರೆಡಿ ಸೋಶಿಯಲ್ ಮೀಡಿಯಾದಲ್ಲಿ ಟಾಂಟ್ ರೀಲ್ಸ್, ಮೀಮ್ಸ್, ಪೋಸ್ಟರ್ಸ್ ಸದ್ದು ಮಾಡ್ತಿವೆ. ಆರ್​ಸಿಬಿ ಸೋತಾಗ ಚೆನ್ನೈ ಫ್ಯಾನ್ಸ್ ಚೆನ್ನೈ ಸೋತಾಗ ಆರ್​ಸಿಬಿ ಫ್ಯಾನ್ಸ್ ಟ್ರೋಲ್ ಮಾಡ್ತಾನೇ ಇರ್ತಾರೆ. ಹಾಗೇ ಸಿಎಸ್​ಕೆ ಟೀಂ ಯಾರ ವಿರುದ್ಧ ಸೋತ್ರೂ ಕನ್ನಡಿಗರು ಟಾಂಟ್ ಕೊಡೋದನ್ನ ಬಿಡಲ್ಲ. ಈಗ ಐಪಿಎಲ್​ನಲ್ಲಿ ಬ್ಯಾಕ್ ಟು ಬ್ಯಾಕ್ 2 ಮ್ಯಾಚ್ ಸೋತಿರೋ ಸಿಎಸ್​ಕೆ ಫ್ಯಾನ್ಸ್ ಕದ್ದುಮುಚ್ಚಿ ಓಡಾಡೋ ಸ್ಥಿತಿ ಬಂದಿದೆ ಅನ್ನೋ ಥರದಲ್ಲಿ ರೀಲ್ಸ್ ಮಾಡಿದ್ದಾರೆ.

ಇನ್ನು ಫ್ರೆಂಡ್ಸ್ ಗ್ರೂಪಲ್ಲೂ ಕೂಡ ಸಿಎಸ್​ಕೆ  ಆರ್​ಸಿಬಿ ಫ್ಯಾನ್ಸ್ ಇಬ್ರೂ ಇರ್ತಾರೆ. ಸೋ ಅವ್ರು ಐಪಿಎಲ್​ಗೂ ಮುನ್ನ ಕುಚಿಕು ಕುಚಿಕು ಗೆಳೆಯರಾಗಿದ್ರೆ ಐಪಿಎಲ್ ಟೈಮಲ್ಲಿ ಹೆಂಗೆ ಕಿತ್ತಾಡ್ತಾರೆ ಅನ್ನೋದನ್ನೂ ತೋರಿಸಿದ್ದಾರೆ ನೋಡಿ. ಇದು ರೀಲ್ಸ್ ಅಷ್ಟೇ ಎಷ್ಟೋ ಫ್ರೆಂಡ್ಸ್ ಗ್ರೂಪಲ್ಲಿ ಹಿಂಗೇ ಇರುತ್ತೆ. ಇನ್ನು ಇತ್ತೀಚೆಗೆ ಪ್ರತೀ ಸೀಸನ್ ಸ್ಟಾರ್ಟ್ ಆದಾಗ್ಲೂ ಧೋನಿ ನಿವೃತ್ತಿ ವಿಚಾರ ಸದ್ದು ಮಾಡ್ತಾನೇ ಇರುತ್ತೆ. ಯಾಕಂದ್ರೆ ಧೋನಿಗೆ ಈಗ 44 ವರ್ಷ. ಇದೇ ವಯಸ್ಸನ್ನ ಅನಂತ್​ನಾಗ್ ಅವ್ರ ಈ ಸೀನ್​ಗೆ ಕಂಪೇರ್ ಮಾಡಿದ್ದಾರೆ ನೋಡಿ. ಮಕ್ಕಳ ಜೊತೆ ಬ್ಯಾಟ್ ಹಿಡಿದು ಕ್ರಿಕೆಟ್ ಆಡೋಕೆ ಬರ್ತಿರೋ ಅನಂತ್​ನಾಗ್​ರನ್ನ ಧೋನಿ ಕೂಡ ಹಿಂಗೇ ಅನ್ನೋ ಥರ ಕಂಪೇರ್ ಮಾಡಿದ್ದಾರೆ.

ಸಿಎಸ್​ಕೆ ವಿರುದ್ಧದ ಮ್ಯಾಚ್ ಅಂದ್ರೆ ನಮ್ಮ ಆರ್​ಸಿಬಿಯ ರೊಮ್ಯಾರಿಯೋ ಶೆಫರ್ಡ್ ಫುಲ್ ಟ್ರೆಂಡಿಂಗ್​ಗೆ ಬರ್ತಾರೆ. ಅದಕ್ಕೆ ಕಾರಣ ಲಾಸ್ಟ್ ಸೀಸನ್​ನಲ್ಲಿ ಸಿಎಸ್​ಕೆ ವಿರುದ್ಧ 14 ಎಸೆತಗಳಲ್ಲೇ ಸ್ಫೋಟಕ ಅರ್ಧಶತಕ ಸಿಡಿಸಿದ್ರು. ಹೀಗಾಗಿ ಈ ಸಲವೂ ಚೆನ್ನೈ ವಿರುದ್ಧ ಶೆಫರ್ಡ್ ಅಬ್ಬರಿಸೋದು ಪಕ್ಕಾ ಅನ್ನೋ ಥರ ರೀಲ್ಸ್ ಹರಿದಾಡ್ತಿದೆ. ಸಿಎಸ್​ಕೆ ಫ್ಯಾನ್ಸ್​ಗೆ ಕನಸಲ್ಲೂ ಶೆಫರ್ಡ್ ಭಯ ಬೀಳಿಸ್ತಿದ್ದಾನೆ ಅನ್ನೋ ಥರದ ರೀಲ್ಸ್.

Shantha Kumari