RCB Vs CSK.. ಟ್ರೋಲ್ಸ್ ಟ್ರೆಂಡ್ –  ಸಾಂಗ್ಸ್.. ಡೈಲಾಗ್ಸ್.. ರೀಲ್ಸ್ ಕ್ರೇಜ್
ಕೊಹ್ಲಿ & ಧೋನಿಗಾಗಿ ಫ್ಯಾನ್ಸ್ ಫೈಟ್

RCB Vs CSK.. ಟ್ರೋಲ್ಸ್ ಟ್ರೆಂಡ್ –  ಸಾಂಗ್ಸ್.. ಡೈಲಾಗ್ಸ್.. ರೀಲ್ಸ್ ಕ್ರೇಜ್ಕೊಹ್ಲಿ & ಧೋನಿಗಾಗಿ ಫ್ಯಾನ್ಸ್ ಫೈಟ್

ವಾಟ್ಸಾಪ್ ಓಪನ್ ಮಾಡಿದ್ರೂ ಅದೇ.. ಫೇಸ್​ಬುಕ್, ಇನ್ಸ್​ಟಾಗ್ರಾಂ, ಟ್ವಿಟ್ಟರ್ ತೆಗೆದ್ರೂ ಅಷ್ಟೇ. ಸೋಶಿಯಲ್ ಮೀಡಿಯಾ ತುಂಬೆಲ್ಲಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ವರ್ಸಸ್ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಮ್ಯಾಚ್​ದೇ ಟ್ರೆಂಡ್. ಎರಡೂ ತಂಡಗಳಿಗೆ ಇದು ಡು ಆರ್ ಡೈ ಮ್ಯಾಚ್ ಆಗಿರೋದ್ರಿಂದ ಅಭಿಮಾನಿಗಳ ಅಬ್ಬರ ಜೋರಾಗಿದೆ. ತಮ್ಮ ನೆಚ್ಚಿನ ತಂಡಕ್ಕೆ ಸಪೋರ್ಟ್ ಮಾಡ್ತಾ ಎದುರಾಳಿ ಟೀಂನ ಟೀಕೆ ಮಾಡ್ತಾ ಸಾಮಾಜಿಕ ಜಾಲತಾಣಗಳಲ್ಲಿ ಹಾವಳಿ ಇಡ್ತಿದ್ದಾರೆ. ಫೋಟೋ, ರೀಲ್ಸ್ ತುಂಬೆಲ್ಲಾ ಆರ್​ಸಿಬಿ ವರ್ಸಸ್ ಸಿಎಸ್​ಕೆ, ಧೋನಿ ವರ್ಸಸ್ ಕೊಹ್ಲಿಯೇ ರಾರಾಜಿಸ್ತಿದ್ದಾರೆ.

ಇದನ್ನೂ ಓದಿ:   ಸೋಶಿಯಲ್‌ ಮೀಡಿಯಾ ನೋಡಿ ಮನೆ ಮದ್ದು ಟ್ರೈ ಮಾಡಿದ ಕ್ಯಾನ್ಸರ್‌ ರೋಗಿ – ಆಮೇಲೆ ಏನಾಯ್ತು ಗೊತ್ತಾ?

16 ವರ್ಷದಿಂದ ಕಪ್ ಗೆದ್ದಿಲ್ಲ ಅಂದ್ರೂ ಆರ್​ಸಿಬಿ ತಂಡವನ್ನ ಎದೆಯಲ್ಲಿ ಇಟ್ಟುಕೊಂಡು ಆರಾಧಿಸೋ ಫ್ಯಾನ್ಸ್ ಇದ್ದಾರೆ. ಐಪಿಎಲ್ ಇತಿಹಾಸದಲ್ಲೇ ಯಾವ ಫ್ರಾಂಚೈಸಿಗೂ ಇಲ್ಲದಂಥ ನಿಷ್ಠಾವಂತ ಅಭಿಮಾನಿ ಸೇನೆಯನ್ನ ಬೆಂಗಳೂರು ತಂಡ ಹೊಂದಿದೆ. ಮ್ಯಾಚ್ ಇದೆ ಅಂದ್ರೆ ಊಟ, ನಿದ್ದೆ ಬಿಟ್ಟು ಮ್ಯಾಚ್ ನೋಡೋಕೆ ಕಾಯ್ತಿರ್ತಾರೆ. ಅದ್ರಲ್ಲೂ ಸಿಎಸ್​ಕೆ ವಿರುದ್ಧ ಮ್ಯಾಚ್ ಇದೆ ಅಂದ್ರಂತೂ ಮುಗೀತ್ ಕಥೆ. ಇದೀಗ ಶನಿವಾರ ಸಂಜೆ ಬೆಂಗಳೂರು ಮತ್ತು ಚೆನ್ನೈ ನಡುವೆ ಮಾಡು ಇಲ್ಲವೇ ಮಡಿ ಪಂದ್ಯ ಇದೆ. ಪ್ಲೇಆಫ್​ಗೇರಲು ಉಭಯ ತಂಡಗಳಿಗೆ ನಿರ್ಣಾಯಕ ಹಾಗೇ ಲೀಗ್ ಹಂತದ ಕೊನೇ ಮ್ಯಾಚ್. ಎರಡೂ ಟೀಮ್​ಗಳು ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನ ಹೊಂದಿರೋದ್ರಿಂದ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್, ರೀಲ್ಸ್​ಗಳನ್ನ ಹಾಕ್ತಾ ತಮ್ಮ ನೆಚ್ಚಿನ ತಂಡಕ್ಕೆ ಸಪೋರ್ಟ್ ಮಾಡ್ತಿದ್ದಾರೆ. ಸಿನಿಮಾ ಡೈಲಾಗ್ಸ್.. ಸಾಂಗ್ ಲಿರಿಕ್ಸ್.. ಕಾಮಿಡಿ ಟಚ್.. ಅಬ್ಬಬ್ಬಾ.. ಒಂದಾ ಎರಡಾ.. ಅಂಕಲ್ಸ್​ನ ಹೊಡಿತೀವಿ ಸುಬ್ಬಿ ಅಂತಾ ಪೋಸ್ಟ್ ಹಾಕೋದ್ ಕೇಳ್ತೀರಾ. ಆರ್​ಸಿಬಿಗೆ ಕಪ್ಪು ಚೆನ್ನೈಗೆ ಚಿಪ್ಪು ಅಂತಾ ಟೀಸ್ ಮಾಡೋರನ್ನ ನೋಡ್ತೀರಾ. ದರ್ಶನ್, ಸುದೀಪ್, ಅಪ್ಪು ಸಿನಿಮಾಗಳ ಡೈಲಾಗ್ಸ್, ಕಾಮಿಡಿ ಆಕ್ಟರ್​ಗಳ ಸೀನ್​ಗಳನ್ನ ಸಿಂಕ್ ಮಾಡಿ ಧೂಳೆಬ್ಬಿಸ್ತಾರೆ. ಅವುಗಳಲ್ಲಿ ಒಂದಷ್ಟು ಸ್ಯಾಂಪಲ್ಸ್ ಇಲ್ಲಿವೆ ನೋಡಿ.

ಆರ್​ಸಿಬಿ ಹಾಗೂ ಸಿಎಸ್​ಕೆ ಪಂದ್ಯ ಅಂದ್ರೇನೇ ಹಾಗೇ. ಅದು ಬರೀ ಎರಡು ತಂಡಗಳ ಮ್ಯಾಚ್, ಸೋಲು ಗೆಲುವಿನ ಪ್ರಶ್ನೆಯಷ್ಟೇ ಅಲ್ಲ. ಎರಡೂ ಕಡೆಯ ಫ್ಯಾನ್ಸ್ ನಡುವೆ ನಡೆಯೋ ವಾರ್ ಅಂತಾನೇ ಬಿಂಬಿತವಾಗುತ್ತೆ. ಅದ್ರಲ್ಲೂ ಈಗ ಇಬ್ಬರಿಗೂ ಪ್ಲೇಆಫ್​ಗೆ ಕ್ವಾಲಿಫೈ ಆಗೋಕೆ ಇರೋ ಲಾಸ್ಟ್ ಪಂದ್ಯ ಆಗಿರೋದ್ರಿಂದ ಅಭಿಮಾನಿಗಳ ಸಪೋರ್ಟ್ ಬೇರೆ ಲೆವೆಲ್​ನಲ್ಲೇ ಇದೆ. ಅದ್ರಲ್ಲೂ ಆರ್​ಸಿಬಿ ಫ್ಯಾನ್ಸ್ ಅಬ್ಬರ ಯಾವಾಗ್ಲೂ ಒಂದು ಕೈ ಮೇಲೆಯೇ ಇರುತ್ತೆ. ಅದು ಯಾವ ರೇಂಜ್​ಗೆ ಅಂದ್ರೆ ಸ್ಟೇಡಿಯಮ್​ನಲ್ಲಿ ಆರ್​ಸಿಬಿ, ಆರ್​ಸಿಬಿ ಬಿಟ್ರೆ ವಿರಾಟ್ ಕೊಹ್ಲಿ ಅನ್ನೋ ಘೋಷಣೆ ಅಷ್ಟೇ ಕೇಳುತ್ತೆ. ಅದನ್ನ ಕ್ರಿಕೆಟ್ ವಿಶ್ಲೇಷಕರೇ ಹೇಳಿದ್ದಾರೆ ಕೇಳಿ.

ನಿಜ. ಕಿಂಗ್ ಕೊಹ್ಲಿಗೆ ಇರೋ ಅಭಿಮಾನಿ ಬಳಗವೇ ಅಂಥಾದ್ದು. ಆರ್​ಸಿಬಿಯಲ್ಲಿ ಕೊಹ್ಲಿ ಹೊರತುಪಡಿಸಿ ಆಡೋ ಹತ್ತು ಜನ ಎದುರಾಳಿ ಟೀಮ್​ನ ಹನ್ನೊಂದು ಜನ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವಂತೆಯೇ ಇರುತ್ತೆ. ಇನ್ನು ಆರ್​ಸಿಬಿ ತಂಡದ ಆಟಗಾರರನ್ನ ನವಗ್ರಹ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವ್ರು ಹೇಳುವ ಡೈಲಾಗ್​ಗೆ ಸಿಂಕ್ ಮಾಡಿದ್ದಾರೆ ನೋಡಿ.

ಇನ್ನು ಹಾಲಿವುಡ್ ಲೆವೆಲ್​ನಲ್ಲಿ ಹಿಟ್ ಆಗಿ ಬಾಲಿವುಡ್​ನೇ ಶೇಕ್ ಮಾಡಿದ್ದ ಕನ್ನಡದ ಸಿನಿಮಾ ಕೆಜಿಎಫ್ ಡೈಲಾಗ್ ಕೂಡ ಎಂಟ್ರಿ ಕೊಟ್ಟಿದೆ. ಕೆಜಿಎಫ್​ನಲ್ಲಿ ಬರೋ ತಾತ ಎಲ್ರನ್ನೂ ಹೊಡೆದುಬಿಟ್ಯಾ ಅಂತಾ ಕೇಳಿದ್ರೆ ಅದಕ್ಕೆ ರಾಕಿಭಾಯ್ ಯಶ್ ಜಬರ್ದಸ್ತ್ ಡೈಲಾಗ್ ಹೊಡೀತಾರೆ. ಒಬ್ಬನ್ನ ಉಳಿಸ್ಕೊಂಡಿದ್ದೇನೆ ಮೆರವಣಿಗೆಗೆ ಅನ್ನೋ ಡೈಲಾಗ್. ಆ ಒಬ್ಬ ಚೆನ್ನೈ ತಂಡ ಅನ್ನೋದು ಆರ್​ಸಿಬಿ ಅಭಿಮಾನಿಗಳ ಉದ್ದೇಶ. ಸದ್ಯ ಸತತ ಐದು ಮ್ಯಾಚ್​ಗಳನ್ನ ಗೆದ್ದಿರೋ ಆರ್​ಸಿಬಿ ಇದೀಗ ಸಿಎಸ್​ಕೆ ವಿರುದ್ಧ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ.

ಹಾಗೇ ಡಾ ರಾಜ್​ಕುಮಾರ್ ಹೇಳಿರೋ ಡೈಲಾಗ್ ಕೂಡ ಟ್ರೆಂಡಿಂಗ್​ನಲ್ಲಿದೆ. ನಾವು ಕದಂಬರು ಅಂದ್ರೆ ಆರ್​ಸಿಬಿ ಆಟಗಾರರು, ಕನ್ನಡ ತಾಯಿಯ ಮಡಿಲಲ್ಲಿ ಬೆಳೆದ ಮಕ್ಕಳು. ರಾಜ್ಯವನ್ನ ಅಂದ್ರೆ ಐಪಿಎಲ್ ಟ್ರೋಫಿಯನ್ನ ಹೇಗೆ ಪಡೆಯಬೇಕು ಎಂಬುದು ನಮಗೆ ಗೊತ್ತಿದೆ ಅನ್ನೋ ಅರ್ಥದಲ್ಲಿ ರೀಲ್ಸ್ ಮಾಡಿದ್ದಾರೆ.

ಆರ್​ಸಿಬಿ ಫ್ಯಾನ್ಸ್ ಕ್ರೇಜ್ ಯಾವ ಲೆವೆಲ್ ಅನ್ನೋದಕ್ಕೆ ಮತ್ತೊಂದು ಸಾಕ್ಷಿ ಈ ವಿಡಿಯೋ. ಬೆಂಗಳೂರಿನ ಕರಗ ಮಹೋತ್ಸವದಲ್ಲೂ ಆರ್​ಸಿಬಿ ಅಭಿಮಾನ ರಾರಾಜಿಸಿದೆ. ದೇವರಿಗೆ ಮಾಡಿದ್ದ ಆರತಿಯ ತುದಿಯಲ್ಲಿ RCB ಎಂದು ಬರೆಯಲಾಗಿತ್ತು. ಈ ವಿಡಿಯೋ ಕೂಡ ಇದೀಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ಚೆನ್ನೈ ಮತ್ತು ಬೆಂಗಳೂರು ಪಂದ್ಯದ ಬಗ್ಗೆ ಗಿಳಿ ಹೇಳಿರೋ ಶಾಸ್ತ್ರ ಕೂಡ ಬಾರೀ ವೈರಲ್ ಆಗ್ತಿದೆ. ಜ್ಯೋತಿಷಿಯೊಬ್ಬರು ಆರ್​ಸಿಬಿ ವರ್ಸಸ್ ಚೆನ್ನೈ ಪಂದ್ಯದಲ್ಲಿ ಯಾರು ಗೆಲ್ತಾರೆ ಎಂದು ಶಾಸ್ತ್ರ ಕೇಳಿದ್ದಾರೆ. ಪಂಜರದಿಂದ ಹೊರ ಬರುವ ಗಿಳಿ ಒಂದು ಕಾರ್ಡನ್ನ ಎತ್ತಿ ಕೊಟ್ಟಿದೆ. ಅದೂ ಕೂಡ ಆರ್​ಸಿಬಿ ಕಾರ್ಡ್. ಈ ಗಿಳಿ ಶಾಸ್ತ್ರ ನಿಜವಾಗ್ಲಿ ಅಂತಾ ಫ್ಯಾನ್ಸ್ ಬೇಡಿಕೊಳ್ತಿದ್ದಾರೆ.

ಇನ್ನು ಮೇ 18ರಂದು ಮ್ಯಾಚ್ ನಡೀತಿರೋದು ಜಸ್ಟ್ ಪ್ಲೇ ಆಫ್ ಮ್ಯಾಚ್ ಅಷ್ಟೇ ಅಲ್ಲ. 18ರ ಸಂಖ್ಯೆ ಆರ್​ಸಿಬಿಗೆ ತುಂಬಾನೇ ವಿಶೇಷವಾಗಿದೆ. ಡೇಟ್, ರನ್ ಅಂತರ. ಓವರ್, ಹಿಂದಿನ ಸೀಸನ್​ಗಳು, ಕೊಹ್ಲಿ ಜೆರ್ಸಿ ನಂಬರ್ ಹೀಗೆ ಹಲವು ಕಾರಣಗಳಿಂದ ಈ ದಿನ ಹಾಗೇ ಸಂಖ್ಯೆ ತುಂಬಾನೇ ಸ್ಪೆಷಲ್ ಆಗಿದೆ. ಈ ಬಗ್ಗೆ ಆರ್​ಸಿಬಿ ಅಭಿಮಾನಿಯೊಬ್ಬರು ವಿಶೇಷವಾಗಿ ರೀಲ್ಸ್ ಮಾಡಿದ್ದಾರೆ ನೋಡಿ.

ಹೀಗೆ ಒಬ್ಬೊಬ್ರೂ ಕೂಡ ಒಂದೊಂದು ರೀತಿಯಲ್ಲಿ ರೀಲ್ಸ್, ಡೈಲಾಗ್ಸ್ ಮೂಲಕ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಹಾಕ್ತಿದ್ದಾರೆ. ಅದ್ರಲ್ಲೂ ಚೆನ್ನೈ ವಿರುದ್ಧದ ಮ್ಯಾಚ್ ಆಗಿರೋದ್ರಿಂದ ಆರ್​ಸಿಬಿ ಅಭಿಮಾನಿಗಳು ಫುಲ್ ಌಕ್ಟಿವ್ ಆಗಿದ್ದಾರೆ. ಪ್ಲೇಆಫ್ ಎಲಿಮಿನೇಟರ್ ಪಂದ್ಯವನ್ನ ಫಿನಾಲೆ ಎನ್ನುವಂತೆಯೇ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಅಲ್ದೇ ಈ ಪಂದ್ಯ ಇಷ್ಟೊಂದು ಕ್ರೇಜ್ ಪಡೆದುಕೊಳ್ಳೋಕೆ ಕಾರಣ ಬರೀ ತಂಡಗಳು ಮಾತ್ರವಲ್ಲ. ಆರ್​ಸಿಬಿಯ ಕಿಂಗ್ ವಿರಾಟ್ ಕೊಹ್ಲಿ ಮತ್ತು ಸಿಎಸ್​​ಕೆಯ ತಲಾ ಮಹೇಂದ್ರ ಸಿಂಗ್ ಧೋನಿ. ಕ್ರಿಕೆಟ್‌‌ ಲೋಕದ ದಿಗ್ಗಜರು ಈ ಪಂದ್ಯದ ನಂತರ ಮತ್ತೆ ಮೈದಾನದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವುದು ಅನುಮಾನ ಎನ್ನಲಾಗುತ್ತಿದೆ. ಯಾಕಂದ್ರೆ ಈ ಸೀಸನ್‌ ಬಳಿಕ ಧೋನಿ ನಿವೃತ್ತಿ ಘೋಷಿಸುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಮುಂದಿನ ವರ್ಷ ಕೊಹ್ಲಿ ಐಪಿಎಲ್‌ ಆಡಿದ್ರೂ ಸಹ ಧೋನಿ ಚೆನ್ನೈ ತಂಡದಲ್ಲಿ ಇರುವುದಿಲ್ಲ. ಹೀಗಾಗಿ ಧೋನಿ ಹಾಗೂ ಕೊಹ್ಲಿ ಮೈದಾನದಲ್ಲಿ ಆಟಗಾರರಾಗಿ ಒಟ್ಟಿಗೆ ಕಾಣಿಸಿಕೊಳ್ಳುವುದು ಮುಂದಿನ ಆವೃತ್ತಿಗಳಲ್ಲಿ ಅನುಮಾನವಾಗಿದೆ. ಈಗಾಗಲೇ ಚೆನ್ನೈ ಹಾಗೂ ಆರ್‌‌ಸಿಬಿ ಹೈವೋಲ್ಟೇಜ್‌ ಪಂದ್ಯದ ಎಲ್ಲಾ ಟಿಕೆಟ್‌‌ಗಳು ಸಂಪೂರ್ಣ ಸೋಲ್ಡ್‌‌ ಔಟ್ ಆಗಿದೆ. ದೊಡ್ಡಮಟ್ಟದಲ್ಲಿ ಜನ ಮೈದಾನಕ್ಕೆ ಆಗಮಿಸಲಿದ್ದಾರೆ. ಇದರಿಂದಾಗಿ ಲೀಗ್‌ ಪಂದ್ಯವೊಂದು ಭರ್ಜರಿ ಹೈಪ್​ನೊಂದಿಗೆ ನಡೆಯಲಿದೆ.

Shwetha M