RCB ಟಿಕೆಟ್ಸ್ ಸೋಲ್ಡ್ ಔಟ್ – ಐದೇ ನಿಮಿಷದ ಕರಾಮತ್ತೇನು?
BLOCK Or BLACK.. ಅಸಲಿಯತ್ತೇನು?

RCB ಟಿಕೆಟ್ಸ್ ಸೋಲ್ಡ್ ಔಟ್ – ಐದೇ ನಿಮಿಷದ ಕರಾಮತ್ತೇನು?BLOCK Or BLACK.. ಅಸಲಿಯತ್ತೇನು?

ಆರ್​ಸಿಬಿ ಮ್ಯಾಚಸ್ ಅಂದ್ರೆ ಇರೋ ಕ್ರೇಜ್ ಬಗ್ಗೆ ನಿಮ್ಗೆಲ್ಲಾ ಗೊತ್ತೇ ಇದೆ. ಅದ್ರಲ್ಲೂ ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಮ್ಯಾಚ್ ನಡೀತಿದೆ ಅಂದ್ರೆ ಫ್ಯಾನ್ಸ್ ದಂಡೇ ಸೇರುತ್ತೆ. ಸ್ಟೇಡಿಯಂ ನೋಡ್ದಾಗ ಜನ ಏನೋ ತುಂಬಿರ್ತಾರೆ. ಬಟ್ ಹೊರಗೆ ಟಿಕೆಟ್ಸ್ ತಗೊಳ್ಳೋಕೆ ಹೋದ್ರೆ ಸಿಕ್ತಾನೇ ಇಲ್ಲ. ಆನ್​ಲೈನ್​ನಲ್ಲಿ ಜಸ್ಟ್ ಐದು ನಿಮಿಷದಲ್ಲೇ ಸೋಲ್ಡ್​ಔಟ್. ದಿನವಿಡೀ ಕಾದ್ರೂ ಒಂದು ಟಿಕೆಟ್ ಬುಕ್ ಮಾಡೋಕೆ ಆಗ್ತಿಲ್ಲ.

ಇದನ್ನೂ ಓದಿ : IPLನಲ್ಲಿ ಜೋರಾಯ್ತು ಕನ್ನಡಿಗರ ಕಿಚ್ಚು – ದೇವ್, ವಿಜಿ, ಕೃಷ್ಣ ಆಯ್ತು.. ಈಗ KL!

ಮಾರ್ಚ್ 28ರಂದು ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಮ್ಯಾಚ್ ಆಡಿದ್ದ ಆರ್​​ಸಿಬಿ ಈಗ ಏಪ್ರಿಲ್ 5 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಎಸ್​ಕೆ ವಿರುದ್ಧ ಹೈವೋಲ್ಟೇಜ್ ಮ್ಯಾಚ್​​ಗೆ ಸಿದ್ಧವಾಗ್ತಿದೆ. ನಿನ್ನೆಯಷ್ಟೇ ಈ ಪಂದ್ಯದ ಟಿಕೆಟ್ಸ್ ಆನ್​ಲೈನ್​ನಲ್ಲಿ ಫ್ರಾಂಚೈಸಿ ಮಾರಾಟ ನಡೆಸಿದೆ. ಇಂಟ್ರೆಸ್ಟಿಂಗ್ ಅಂದ್ರೆ ಫ್ರಾಂಚೈಸಿಯ ಅಧಿಕೃತ ವೆಬ್​ಸೈಟ್ ಓಪನ್ ಆದ ಜಸ್ಟ್ ಐದು ನಿಮಿಷಗಳಲ್ಲೇ ಎಲ್ಲಾ ಟಿಕೆಟ್ಸ್ ಬುಕ್ಕಿಂಗ್ ಆಗಿವೆ. ಅಂದ್ರೆ ಕಂಪ್ಲೀಟ್ ಸೋಲ್ಡ್​ಔಟ್. ಹೈದ್ರಾಬಾದ್ ವಿರುದ್ಧದ ಮ್ಯಾಚಲ್ಲೂ ಕೆಲವೇ ನಿಮಿಷಗಳಲ್ಲೇ ಎಲ್ಲಾ ಟಿಕೆಟ್ಸ್ ಮಾರಾಟವಾಗಿದ್ವು. ಆದ್ರೆ ಸಾರ್ವಜನಿಕರಿಗೆ ಎಷ್ಟು ಟಿಕೆಟ್‌ಗಳನ್ನು ಲಭ್ಯ ಇರಿಸಲಾಗಿತ್ತು ಎನ್ನುವ ಮಾಹಿತಿಯನ್ನು ಆರ್‌ಸಿಬಿ ಹಂಚಿಕೊಂಡಿಲ್ಲ. ಟಿಕೆಟ್‌ನ ಆರಂಭಿಕ ಬೆಲೆ ₹3750 ಇದ್ರೆ ಗರಿಷ್ಠ ಬೆಲೆ ₹47,000. ಆದರೆ ಕೆಲವೇ ಸ್ಟ್ಯಾಂಡ್‌ಗಳ ಟಿಕೆಟ್‌ಗಳನ್ನಷ್ಟೇ ಆರ್‌ಸಿಬಿ ಆನ್‌ಲೈನ್‌ನಲ್ಲಿ ಮಾರಾಟ ಮಾಡಿದೆ. ಹಾಗಾದ್ರೆ ಉಳಿದ ಟಿಕೆಟ್ಸ್ ಏನಾದ್ವು ಅನ್ನೋ ಪ್ರಶ್ನೆಗೆ ಉತ್ತರ ಇಲ್ಲ. ಸಾಕಷ್ಟು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ನಮಗೆ ಸಿಕ್ತಿಲ್ಲ ಬೇರೆಯವ್ರಿಗೆ 10 , 15 ಟಿಕೆಟ್ಸ್ ಹೇಗೆ ಸಿಗುತ್ತೆ ಅಂತಾ ಪ್ರಶ್ನೆ ಮಾಡಿದ್ದಾರೆ.

ಟಿಕೆಟ್ಸ್ ಅಷ್ಟು ಬೇಗ ಮಾರಾಟ ನಿಜನಾ?

ಆಫ್ ಲೈನ್ ನಲ್ಲಿ ಮಾರಿದ್ರೆ ಜನಜಂಗುಳಿ ಆಗುತ್ತೆಂದು ಆನ್ ಲೈನ್ ಮಾರಾಟ

ಅಧಿಕೃತ ವೆಬ್ ಸೈಟ್ ನಲ್ಲೇ ಕೆಲವೇ ನಿಮಿಷಗಳಲ್ಲಿ ಟಿಕೆಟ್ಸ್ ಸೋಲ್ಡ್ ಔಟ್

ಟಿಕೆಟ್ಸ್ ಬುಕ್ಕಿಂಗ್ ಗೆ ಕಾದು ಕಾದು ಕೊನೆಗೆ ಬುಕ್ ಆಗದೆ ಫ್ಯಾನ್ಸ್ ಸಿಟ್ಟು

ಸೋಶಿಯಲ್ ಮೀಡಿಯಾಗಳಲ್ಲಿ ವಿಡಿಯೋ ಸಮೇತ ಶೇರ್ ಮಾಡಿ ಕಿಡಿ

ಟಿಕೆಟ್ಸ್ ಇವೆ ಡಿಎಂ ಮಾಡಿ ಅಂತಾ ಇನ್ನೂ ಕೆಲವ್ರು ಪೋಸ್ಟ್ ಗಳು

ಇಲ್ಲಿ ಕೆಲವ್ರಿಗೆ ವೆಬ್​ಸೈಟ್​ಗಳಲ್ಲೇ ಟಿಕೆಟ್ಸ್ ಸಿಗ್ತಿದೆ. ಓಕೆ. ಬಟ್ ತುಂಬಾ ಜನರಿಗೆ ಸಿಕ್ಕಿಲ್ಲ. ಅದೂ ಅಲ್ದೇ ಪಂದ್ಯಗಳ ದಿನ ಸ್ಟೇಡಿಯಂ ಸುತ್ತಮುತ್ತ ಬ್ಲಾಕ್​ನಲ್ಲಿ ಟಿಕೆಟ್ಸ್ ಮಾರಾಟ ಮಾಡ್ತಿರೋದು ಬೆಳಕಿಗೆ ಬಂದಿದೆ. ಹೈದ್ರಾಬಾದ್ ವಿರುದ್ಧದ ಮೊದಲ ಮ್ಯಾಚಲ್ಲೇ ಕೆಲವ್ರು ದುಬಾರಿ ಬೆಲೆ ಕೊಟ್ಟು ಮ್ಯಾಚ್ ನೋಡಿರೋ ಬಗ್ಗೆಯೂ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ರು. ಹಾಗಾದ್ರೆ ಬ್ಲ್ಯಾಕ್​ನಲ್ಲಿ ಮಾರೋರಿಗೆ ಅಷ್ಟೊಂದು ಟಿಕೆಟ್ಸ್ ಎಲ್ಲಿಂದ ಬರುತ್ತೆ ಅನ್ನೋ ಪ್ರಶ್ನೆಗಳೂ ಇವೆ. ಫ್ರಾಂಚೈಸಿಯೇ ಆನ್​ಲೈನ್​ನಲ್ಲಿ ಟಿಕೆಟ್ಸ್ ಬ್ಲಾಕ್ ಮಾಡಿ ಬ್ಲ್ಯಾಕ್​ನಲ್ಲಿ ಸೇಲ್ ಮಾಡ್ತಿದ್ಯಾ ಅ್ನನೋ ಆರೋಪಗಳೂ ಇವೆ. ಒಟ್ನಲ್ಲಿ ಆರ್​ಸಿಬಿ ಪಂದ್ಯಗಳಿಗೆ ಇರೋ ಕ್ರೇಜ್​ನೇ ಬಳಸಿಕೊಂಡು ಕಾನೂನುಬಾಹಿರವಾಗಿ ಕೆಲವ್ರು ದುಡ್ಡು ಮಾಡ್ತಿದ್ದಾರೆ. ಆದ್ರೂ ಕೆಲ ಫ್ಯಾನ್ಸ್ ತಂಡದ ಮೇಲಿರೋ ಪ್ರೀತಿಗೆ ಕೇಳಿದಷ್ಟು ದುಡ್ಡು ಕೊಡ್ತಿರೋದು ಕೂಡ ಇಂಥಾ ಬೆಳವಣಿಗೆಗೆ ಕಾರಣ ಆಗ್ತಿದೆ.

Shantha Kumari