CSK Vs RCB ಪಂದ್ಯ ರದ್ದು!? ಪ್ಲೇ ಆಫ್ ಲೆಕ್ಕಾಚಾರ ಉಲ್ಟಾಪಲ್ಟಾ!
ಮಳೆ ಬಂದ್ರೆ ಆರ್‌ಸಿಬಿಗೆ ಎಫೆಕ್ಟ್?

ಕಳೆದ ಎರಡು ದಿನಗಳಿಂದ ಬೆಂಗಳೂರಿನ ಮಳೆ ನರ್ತನ ಮಾಡುತ್ತಿದೆ. ಹವಾಮಾನ ಇಲಾಖೆ ಮುಂದಿನ ಮೂರು ದಿನಗಳ ಕಾಲ ಮಳೆ ಎಚ್ಚರಿಕೆ ನೀಡಿದೆ. ಹೀಗಾಗಿ ಶನಿವಾರದ ಪಂದ್ಯಕ್ಕೆ ಮಳೆ ಕಾಟ ತಪ್ಪಿದ್ದಲ್ಲ. ಹವಾಮಾನ ವರದಿ ಪ್ರಕಾರ ಪಂದ್ಯದ ಆರಂಭದ ಸಮಯದಲ್ಲಿ ಶೇ.60 ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಸಿಎಸ್‌ಕೆ ಮತ್ತು ಆರ್‌ಸಿಬಿ ಮ್ಯಾಚ್ ರದ್ದಾಗುವ ಚಾನ್ಸ್ ತುಂಬಾ ಇದೆ.
ಆರ್‌ಸಿಬಿಯ ಪ್ಲೇ ಆಫ್ ಲೆಕ್ಕಾಚಾರಕ್ಕೆ ಪೆಟ್ಟು
ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಪಂದ್ಯ ರದ್ದಾದರೂ ಯಾವುದೇ ನಷ್ಟ ಸಂಭವಿಸದು. ಆದರೆ ಆರ್‌ಸಿಬಿಯ ಪ್ಲೇ ಆಫ್ ಲೆಕ್ಕಾಚಾರಕ್ಕೆ ಕೊಂಚ ಹಿನ್ನಡೆಯಾಗುವ ಸಾಧ್ಯತೆ ಇದೆ. ಹವಾಮಾನ ವರದಿ ಪ್ರಕಾರ ಪಂದ್ಯದ ಆರಂಭದ ಸಮಯದಲ್ಲಿ ಶೇ.60 ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ರಾತ್ರಿ 8 ರಿಂದ ರಾತ್ರಿ 11 ರವರೆಗೆ ಶೇ. 75ರಷ್ಟು ಗುಡುಗು ಸಹಿತ ಭಾರೀ ಮಳೆ ಮಳೆಯಾಗುವ ಸಾಧ್ಯತೆ ಎಂದು ತಿಳಿಸಿದೆ. ಅಂದ್ರೆ ಪಂದ್ಯ ರದ್ದಾಗುವ ಸಾಧ್ಯತೆ ಇದೆ.
ಪಂದ್ಯ ರದ್ದಾದರೆ ಏನಾಗುತ್ತೆ?
ಐಪಿಎಲ್ ಲೀಗ್ ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇರದ ಕಾರಣ ಒಂದೊಮ್ಮೆ ಮಳೆಯಿಂದ ಪಂದ್ಯ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಗಿತ್ತದೆ. ಆರ್‌ಸಿಬಿ ಸದ್ಯ 10 ಪಂದ್ಯಗಳಲ್ಲಿ 7 ಗೆಲುವು ಸಾಧಿಸಿ 14 ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಇನ್ನೊಂದು ಗೆಲುವು ಸಾಧಿಸಿದರೆ ಪ್ಲೇ ಆಓ ಸ್ಥಾನ ಖಚಿತಗೊಳ್ಳಲಿದೆ. ಪಂದ್ಯ ರದ್ದಾದರೆ ಒಂದು ಅಂಕ ಲಭಿಸಲಿದೆ. ಪ್ಲೇ ಆಫ್ ಪ್ರವೇಶಿಸಲು ಈ ಅಂಕ ಸಾಕಾಗಿದ್ದರೂ ಅಗ್ರ ಎರಡು ಸ್ಥಾನಗಳನ್ನು ವಶಪಡಿಸಿಕೊಳ್ಳುವಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ. ಆದ್ರೆ ಇನ್ನೂ 3 ಪಂದ್ಯಗಳು ಆರ್‌ಸಿಬಿಗೆ ಇರುತ್ತೆ ಅಂದ್ರಲ್ಲಿ ಒಂದು ಪಂದ್ಯ ಗೆದ್ದರು ಆರ್‌ಸಿಬಿ ಪ್ಲೇ ಆಫ್‌ಗೆ ಹೋಗುತ್ತೆ. ಆದ್ರೆ ಇಲ್ಲಿ ಆರ್‌ಸಿಬಿ ನಿರ್ಲಕ್ಷ್ಯ ಮಾಡೋ ಹಾಗಿಲ್ಲ.. ಯಾಕಂದ್ರೆ 8 ತಂಡಗಳು ಪ್ಲೇ ಆಫ್‌ಗೆ ಪೈಪೋಟಿ ನಡೆಸುತ್ತಿವೆ. ಹೀಗಾಗಿ ಆರ್‌ಸಿಬಿ ಗೆಲ್ಲಲೇ ಬೇಕು, ಇನ್ನೂ ಪಂದ್ಯ ಇದೆ ಗೆಲ್ಲೋಣ ಬಿಡಿ ಅಂತ ನಿರ್ಲಕ್ಷ್ಯ ಮಾಡೋಕೆ ಹೋಗಬಾರದು.. ಹೀಗಾಗಿ ಸಿಎಸ್‌ಕೆ ವಿರುದ್ಧ ಪಂದ್ಯಕ್ಕೆ ಮಳೆ ಅಡ್ಡಿಯಾಗದೇ ಆರ್‌ಸಿಬಿ ಗೆಲ್ಲಲಿ ಅನ್ನೋದು ಫ್ಯಾನ್ಸ್ ಆಶಯ. ಆದ್ರೆ ಮಳೆ ಬರ್ಲಿ ಬಿಡ್ಲಿ. ಸಿಎಸ್‌ಕೆಗೆ ಯಾವುದೇ ಟೆನ್ಷನ್ ಇಲ್ಲ. ಯಾಕಂದ್ರೆ ಅವರು ಟೂರ್ನಿಯಿಂದ ಹೊರ ಬಿದ್ದಾಗಿದೆ. ಹೀಗಾಗಿ ಆರ್‌ಸಿಬಿಗೆ ಈ ಪಂದ್ಯ ಬಹಳ ಮುಖ್ಯ ಆಗಿರಲಿದೆ.