ಬಲಿಷ್ಠ ಬೆಂಗಳೂರು.. ಸೊರಗಿದ ಚೆನ್ನೈ – RCB Vs CSK.. ಯಾರಿಗೆ ಸೂಪರ್ ಸಂಡೇ?
ಹೈವೋಲ್ಟೇಜ್ ಮ್ಯಾಚಲ್ಲಿ ಯಾರು ಸ್ಟ್ರಾಂಗ್?

ಬಲಿಷ್ಠ ಬೆಂಗಳೂರು.. ಸೊರಗಿದ ಚೆನ್ನೈ – RCB Vs CSK.. ಯಾರಿಗೆ ಸೂಪರ್ ಸಂಡೇ?ಹೈವೋಲ್ಟೇಜ್ ಮ್ಯಾಚಲ್ಲಿ ಯಾರು ಸ್ಟ್ರಾಂಗ್?

ಐಪಿಎಲ್​ನ ಗ್ರೇಟೆಸ್ಟ್ ರೈವಲ್ರಿ ಅಂದ್ರೆ ಆರ್​ಸಿಬಿ ವರ್ಸಸ್ ಸಿಎಸ್​ಕೆ ನಡುವಿನ ಮ್ಯಾಚ್. ಇವತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಮ್ಯಾಚ್​ ನಡೆಯಲಿದೆ. ಒಂದ್ಕಡೆ ಫಸ್ಟ್ ಫೈಟಲ್ಲೇ ಭರ್ಜರಿಯಾಗಿ ಗೆದ್ದಿರೋ ಬೆಂಗಳೂರು ಬೇಟೆಗಾರರು. ಇನ್ನೊಂದೆಡೆ ಬ್ಯಾಕ್ ಟು ಬ್ಯಾಕ್ ಸೋತಿರೋ ಚೆನ್ನೈ ಸ್ಟಾರ್ಸ್. ಈಗ ಸೂಪರ್ ಸಂಡೇ ಸಮರದಲ್ಲಿ ಯಾರಿಗೆ ವಿಕ್ಟರಿ ಅನ್ನೋದು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ : 27 ಕೋಟಿ ಕೊಟ್ಟಿದ್ದು ಸುಮ್ಮನೆ ಅಲ್ಲ – ವೈಭವ್ ಆಟ ನೋಡಿ ಕಲೀರಿ ಎಂದು ಪಂತ್‌ಗೆ ವಾರ್ನಿಂಗ್

ಐಪಿಎಲ್ ಇತಿಹಾಸವನ್ನ ಕೆದಕಿದ್ರೆ ಅಲ್ಲಿ ಚೆನ್ನೈ ತಂಡವೇ ಬೆಂಗಳೂರು ವಿರುದ್ಧ ಡಾಮಿನೇಟ್ ಮಾಡಿದೆ. ಟೋಟಲ್ಲಾಗಿ 33 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಚೆನ್ನೈ 31 ಸಲ ಗೆದ್ದಿದ್ರೆ RCB 11 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ಆದ್ರೆ ಕಳೆದೊಂದು ವರ್ಷದಿಂದ ಆರ್​ಸಿಬಿ ಸೂಪರ್ ಸ್ಟ್ರಾಂಗ್. ಕಳೆದ ಮೂರು ಪಂದ್ಯಗಳಲ್ಲೂ ಸಿಎಸ್​ಕೆ ವಿರುದ್ಧ ಬೆಂಗಳೂರು ತಂಡವೇ ವಿನ್ ಆಗಿದೆ. ಆರ್​ಸಿಬಿ ಸಾಲಿಡ್ ಟೀಮ್ ಹೊಂದಿದ್ರೆ ಚೆನ್ನೈ ಕಳೆದ ವರ್ಷದಿಂದ ವೀಕ್ ಆಗಿ ಕಾಣ್ತಿದೆ. ಈಗಾಗ್ಲೇ 2 ಪಂದ್ಯಗಳನ್ನ ಸೋತಿದ್ದಾರೆ. ಹೀಗಾಗಿ ಈ ಮ್ಯಾಚಲ್ಲೂ ಆರ್​ಸಿಬಿಯೇ ಗೆಲ್ಲುವಂಥ ಚಾನ್ಸಸ್ ಜಾಸ್ತಿ ಇದೆ.

ಬಲಿಷ್ಠ ಬೆಂಗಳೂರು ಬಾಯ್ಸ್!

ಬ್ಯಾಟಿಂಗ್, ಬೌಲಿಂಗ್ ಹಾಗೇ ಫಿನಿಶರ್ಸ್ ಸೂಪರ್ ಪರ್ಫಾಮೆನ್ಸ್

ಮೊದಲ ಪಂದ್ಯದಲ್ಲೇ 202 ರನ್ಸ್ ಟಾರ್ಗೆಟ್ 15.4 ಓವರ್ ಗಳಲ್ಲೇ ಚೇಸ್

ಚಿನ್ನಸ್ವಾಮಿ ಮೈದಾನದಲ್ಲೇ ಪಂದ್ಯ ನಡೆಯುತ್ತಿರೋದು ತಂಡಕ್ಕೆ ಪ್ಲಸ್

ಬ್ಯಾಲೆನ್ಸ್ ಟೀಂ ಆಗಿರೋದ್ರಿಂದ ಅದೇ ಮೊಮೆಂಟಮ್ ಕಂಟಿನ್ಯೂ ಮಾಡ್ಬೇಕು

ಸೋ ಸದ್ಯಕ್ಕಂತೂ ಬೆಂಗಳೂರು ತಂಡದಲ್ಲಿ ವೀಕ್​ನೆಸ್ ಅಂತಾ ಕಾಣ್ತಿಲ್ಲ. ಯಾಕಂದ್ರೆ ಎಲ್ರೂ ಚೆನ್ನಾಗೇ ಆಡ್ತಿದ್ದಾರೆ. ಫಿಲ್ ಸಾಲ್ಟ್ ಒಬ್ರು ಫಾರ್ಮ್​ಗೆ ಬಂದ್ರು ಅಂದ್ರೆ ನೆಕ್ಸ್​ಟ್ ಲೆವೆಲ್ ಪರ್ಫಾಮೆನ್ಸ್ ಗ್ಯಾರಂಟಿ. ಸೋ ಬೆಂಗಳೂರು ಏನೋ ಡೇಂಜರಸ್ ಆಗಿದೆ. ಆದ್ರೆ ಚೆನ್ನೈ ತಂಡವೇ ಯಾಕೋ ಹಳಿ ತಪ್ಪಿದಂತೆ ಕಾಣ್ತಿದೆ.

ವೀಕ್ ಆಯ್ತಾ ಚೆನ್ನೈ?

ಮೊದಲ ಮ್ಯಾಚಲ್ಲೇ ಆರ್ ಆರ್ ವಿರುದ್ಧ ಹೀನಾಯ ಸೋಲು

ಪಂಜಾಬ್ ವಿರುದ್ಧ ಎರಡನೇ ಪಂದ್ಯದಲ್ಲೂ ಸೋಲಿರುವ ಟೀಂ

ಮಹೇಂದ್ರ ಸಿಂಗ್ ಧೋನಿಯೇ ಶಕ್ತಿ, ಆದ್ರೆ ಇಂಜುರಿಯಿಂದ ಔಟ್

ಸಂಜು ಸ್ಯಾಮ್ಸನ್ ಬಂದ್ರೂ ಚೆನ್ನೈ ಪರ ಬಿಗ್ ಇನ್ನಿಂಗ್ಸ್ ಬಂದಿಲ್ಲ

ಹೊಸಬರೇ ಇರುವಂಥ ತಂಡದಲ್ಲಿ ಎಕ್ಸ್ ಪೀರಿಯನ್ಸ್ ಕೊರತೆ

ಮೂರನೇ ಪಂದ್ಯದಲ್ಲಾದ್ರೂ ಗೆದ್ದು ಖಾತೆ ತೆರೆಯೋ ಬಯಕೆ

Shantha Kumari