ನಾಳೆ RCB Vs CSk ಮ್ಯಾಚ್! – ಪಂದ್ಯದ ಟಿಕೆಟ್ ಖರೀದಿಗೆ ಸ್ಪೀಕರ್ ಕಚೇರಿ ಮುಂದೆ ಶಾಸಕರ ಪಿಎಗಳ ಕ್ಯೂ

ರಾಜ್ಯದಲ್ಲಿ ನೂರಾರು ಸಮಸ್ಯೆಗಳಿವೆ. ಇರಾನ್- ಇಸ್ರೇಲ್ ನಡುವಿನ ಯುದ್ದದಿಂದಾಗಿ ಸರಿಯಾದ ಪ್ರಮಾಣದಲ್ಲಿ ಅಡುಗೆ ಅನಿಲ ಸಿಗುತ್ತಿಲ್ಲ. ಜನ ಸಾಮಾನ್ಯರು ಗ್ಯಾಸ್‌ಗಾಗಿ ರಾತ್ರಿಯಿಡೀ ಕ್ಯೂ ನಿಲ್ಲುತ್ತಿದ್ದಾರೆ. ರಾಜ್ಯದಲ್ಲಿ ಇಷ್ಟೊಂದು ಸಮಸ್ಯೆ ಇದ್ರೂ ಜನಪ್ರತಿನಿಧಿಗಳ ಮೋಜು-ಮಸ್ತಿಗೆ ಮಾತ್ರ ಬರ ಇಲ್ಲ. ಐಪಿಎಲ್ ಟಿಕೆಟ್ ಪಡೆಯೋಕೆ ತಮ್ಮ ಪಿಎಗಳನ್ನೇ ಕ್ಯೂ ನಿಲ್ಲಿಸಿದ್ದಾರೆ ಶಾಸಕರು.
ಇದನ್ನೂ ಓದಿ: ಇಲ್ಲಿವರೆಗೆ ಒಂದು ಲೆಕ್ಕ, ಇನ್ಮೇಲೆ ಒಂದು ಲೆಕ್ಕ.. ಕಾಮಿಡಿ ಕಿಂಗ್ ಗಿಲ್ಲಿ ಹೀರೋ ಆಗಿ ಬಡ್ತಿ ಪಡೆಯುತ್ತಿದ್ದಾರಾ?
ಪ್ರತಿ ಐಪಿಎಲ್ ಪಂದ್ಯಕ್ಕೆ ಶಾಸಕರಿಗೆ ಉಚಿತವಾಗಿ 3 ಟಿಕೆಟ್ ಕೊಡುವ ಮಾತುಕತೆ ಸರ್ಕಾರ- ಕೆಎಸ್‌ಸಿಎ ಮಧ್ಯೆ ಆಗಿದೆ. ನಾಳೆ ಬೆಂಗಳೂರು ಮತ್ತು ಚೆನೈ ಪಂದ್ಯವಿದೆ. ಈ ಪಂದ್ಯದ ಟಿಕೆಟ್‌ಗಾಗಿ ಶಾಸಕರ ಪಿಎಗಳು ಸ್ಪೀಕರ್ ಕಚೇರಿ ಮುಂದೆ ಕ್ಯೂ ನಿಂತು ಟಿಕೆಟ್ ಪಡೆದಿದ್ದಾರೆ.
ಸ್ಪೀಕರ್ ಕಚೇರಿಯಲ್ಲಿ ಟಿಕೆಟ್ ಸಿಗುವುದರಿಂದ ಶಾಸಕರ ಸೂಚನೆ ಮೇರೆಗೆ ಕ್ಯೂ ನಿಂತು ಟಿಕೆಟ್ ಪಡೆದಿದ್ದಾರೆ. ಜನರ ಸಮಸ್ಯೆ ಕೇಳದ ಜನಪ್ರತಿನಿಧಿಗಳು ಐಪಿಎಲ್ ಟಿಕೆಟ್‌ಗಾಗಿ ಹೀಗೆ ವರ್ತನೆ ತೋರೋದು ಮಾತ್ರ ವಿಪರ್ಯಾಸವೇ ಸರಿ.

ನೋಡಿರಿ

